Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಮಕರದಲ್ಲಿ ಶನಿ ಮಾರ್ಗಿ: ಆರ್ಥಿಕ ಸಂಕಷ್ಟ, ಕಷ್ಟಗಳು ನೀಗಲು ಶನಿಗೆ ಈ ಪರಿಹಾರ ಮಾಡಿ
ಯಾರೇ ಆಗಲಿ ಶನಿದೇವನ ಭಯ ಪಡುತ್ತಾರೆ, ಏಕೆಂದರೆ ಶನಿಯ ಕೋಪಕ್ಕೆ ಗುರಿಯಾದರೆ ತುಂಬಾ ಕಷ್ಟಗಳನ್ನು ಸಹಿಸಬೇಕಾಗುತ್ತದೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಪ್ರಕಾರ ಶನಿಯು ತುಂಬಾ ಶನಿಯು ರಾಶಿಯಿಂದ ರಾಶಿಗೆ ತುಂಬಾ ನಿಧಾನಗತಿಯಲ್ಲಿ ಸಾಗುವ ಗ್ರಹವಾಗಿದೆ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ.

ಈ ವರ್ಷದಲ್ಲಿ ಜೂನ್ 5ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿ ಜುಲೈ 12, 2022ರಲ್ಲಿ ಮಕರ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಾರಂಭಿಸಿತ್ತು. ಅಕ್ಟೋಬರ್ 23ರಿಂದ ಶನಿಯು ಮಕರ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದೆ. ಮಕರ ರಾಶಿಯಿಂದ ಕುಂಭ ರಾಶಿಗೆ ಶನಿಯು ಜನವರಿ 17, 2023ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಲಿದೆ.
ಶನಿಯು ಮಕರ ರಾಶಿಯಲ್ಲಿ ನೇರ ಸಂಚಾರದಲ್ಲಿ ಇರುವ ಈ ಸಮಯ ನಿಮ್ಮ ಕಾರ್ಯಗಳಿಗೆ ಯಾವುದೆ ವಿಘ್ನ ಉಂಟಾಗದಿರಲು, ಶನಿಯ ಕೃಪೆಗೆ ಪಾತ್ರರಾಗಿ ಕಷ್ಟವನ್ನು ನೀಗಿಸಲು ಈ ಪರಿಹಾರಗಳನ್ನು ಮಾಡಿ:

ಶನಿ ದೋಷ ನಿವಾರಣೆಗೆ ಪರಿಹಾರಗಳು-
* ಶನಿಯ ಅಶುಭ ಪರಿಣಾಮಗಳನ್ನು ತಪ್ಪಿಸಲು ಹನುಮಂತನನ್ನು ಪೂಜಿಸಬೇಕು. ಹನುಮಂತನನ್ನು ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಶನಿದೇವನೂ ಶಿವನ ಆರಾಧನೆಯಿಂದ ಸಂತುಷ್ಟನಾಗುತ್ತಾನೆ. ಇದು ಕಾರ್ತಿಕ ಮಾಸ, ಶಿವನಿಗೆ ಪೂಜೆ ಮಾಡಿ, ಶನಿ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿ. ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಎಳ್ಳೆಣ್ಣೆ, ಕಪ್ಪು ಕಂಬಳಿ, ಇಂಥ ವಸ್ತುಗಳನ್ನು ದಾನ ಮಾಡಿ.

ಆರ್ಥಿಕ ಸಂಕಷ್ಟ ನಿವಾರಣೆಗೆ
* ತುಂಬಾ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರೆ ಅದನ್ನು ನೀಗಿಸಲು ಶಕರನಿಗೆ ಹಾಲು ಹಾಗೂ ಕಪ್ಪು ಎಳ್ಳನ್ನು ಅರ್ಪಿಸಿ, ಇದರಿಂದ ಆರ್ಥಿಕ ಸಂಕಟಗಳು ಕಡಿಮೆಯಾಗುವುದು.
* ಮಾತೆ ಕಾಳಿಯನ್ನು ಆರಾಧಿಸಿ.

ಶನಿವಾರ ಹೀಗೆ ಮಾಡಿ
* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.
* ಈ ದಿನ ಆಲದ ಮರಕ್ಕೆ ಸುತ್ತು ಬಂದು ದೀಪವನ್ನು ಹಚ್ಚಿ.
* ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ.

ಈ ಶನಿ ಮಂತ್ರ ಪ್ರತಿದಿನ ಪಠಿಸಿ
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications
