Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶನಿ ಅಮವಾಸ್ಯೆಯಂದು ಸೂರ್ಯಗ್ರಹಣ: ಶನಿ ದೋಷ, ಕುಂಡಲಿಯಲ್ಲಿ ಗ್ರಹದೋಷಕ್ಕೆ ಈ ಪರಿಹಾರ ಮಾಡಿದರೆ ಸಂಪತ್ತು ವೃದ್ಧಿಸುವುದು
ಏಪ್ರಿಲ್ 30ರಂದು ಸೂರ್ಯಗ್ರಹಣ, ಅದು ಶನಿ ಅಮವಾಸ್ಯೆಯಂದೇ ಬಂದಿರುವುದರಿಂದ ಜ್ಯೋತಿಷ್ಯ ಪ್ರಕಾರ ಕಷ್ಟಗಳನ್ನು ಹೋಗಲಾಡಿಸಲು ಕೆಲವೊಂದು ಪರಿಹಾರ ಕಾರ್ಯಗಳನ್ನು ಮಾಡಲು ಈ ದಿನ ತುಂಬಾ ಸೂಕ್ತವಾದ ದಿನವಾಗಿದೆ. ಶತ್ರುಬಾಧೆ, ಸಾಲ, ಆರೋಗ್ಯ ಸಮಸ್ಯೆ, ಶನಿ ಸಾಡೇಸಾತಿ, ಶನಿ ಧೈಯ್ಯಾ, ಕುಂಡಲಿಯಲ್ಲಿ ಗ್ರಹದೋಷ ಈ ಎಲ್ಲಾ ಸಮಸ್ಯೆ ಇರುವವರು ಈ ದಿನದಿಂದ ಕೆಲವೊಂದು ಪರಿಹಾರ ಕಾರ್ಯಗಳನ್ನು ಮಾಡುವ ಮೂಲಕ ಬದುಕಿನಲ್ಲಿ ನೆಮ್ಮದಿ ಪಡೆಯಬಹುದು ಅಲ್ಲದೆ ಸಂಪತ್ತು ವೃದ್ಧಿಸುವುದು.
ಶನಿ ಅಮವಾಸ್ಯೆ ಹಾಗೂ ಸೂರ್ಯಗ್ರಹಣ ಒಟ್ಟಿಗೆ ಬಂದಾಗ ಸೂರ್ಯದೇವ ಹಾಗೂ ಶನಿದೇವನನ್ನು ಮೆಚ್ಚಿಸುವ ಕಾರ್ಯ ಮಾಡುವುದರಿಂದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಾಣಬಹುದಾಗಿದೆ. ವೈದಿಕ ಶಾಸ್ತ್ರದ ಪ್ರಕಾರ ಈ ದಿನ ಏನು ಯಾವೆಲ್ಲಾ ಪರಿಹಾರ ಮಾಡುವುದು ಒಳ್ಳೆಯದು ಎಂದು ನೋಡೋಣ ಬನ್ನಿ:

ಶತ್ರುಗಳ ಕಾಟದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ
ಶನಿ ಅಮವಾಸ್ಯೆಯ ದಿನದಂದು ಶ್ರೀ ಹನುಮಂತನನ್ನು ಈ ರೀತಿ ಪೂಜಿಸಿ. 108 ತುಳಸಿ ಎಸಳು ತೆಗೆದುಕೊಂಡು ಅದರಲ್ಲಿ ಶ್ರೀರಾಮನ ಹೆಸರು ಬರೆದು ಅದರ ಮಾಲೆ ತಯಾರಿಸಿ ಹನುಮಂತನಿಗೆ ಅರ್ಪಿಸಿ, ಹೀಗೆ ಮಾಡುವುದರಿಂದ ಶತ್ರುಗಳು ನಿಮ್ಮನ್ನು ಏನೂ ಮಾಡದಂತೆ ಶ್ರೀ ಹನುಮಂತನ ಶ್ರೀರಕ್ಷೆ ಇರುತ್ತದೆ.

ಸಂಪತ್ತು ವೃದ್ಧಿಗಾಗಿ ಹೀಗೆ ಮಾಡಿ
ಶನಿ ಅಮವಾಸ್ಯೆಯಂದು ಸೂರ್ಯಗ್ರಹಣ ಕೂಡ ಇದೆ. ಈ ದಿನ ಬಡವರಿಗೆ ದಾನ ಮಾಡಿ. ಬಡವರಿಗೆ ಆಹಾರ, ಎಳ್ಳು, ಸಾಸಿವೆಯೆಣ್ಣೆ ದಾನ ಮಾಡಿ. ಈ ರೀತಿ ಮಾಡುವುದರಿಂದ ಶನಿದೇವನ ಕೃಪೆ ನಿಮ್ಮ ಮೇಲಿರುತ್ತದೆ. ಸೂರ್ಯಗ್ರಹಣ ಹಾಗೂ ಶನಿ ಅಮವಾಸ್ಯೆ ಒಂದೇ ದಿನ ಇರುವುದರಿಂದ ನೀವು ಮಾಡುವ ದಾನಕ್ಕೆ ವಿಶೇಷ ಫಲ ಸಿಗುವುದು. ಇದರಿಂದ ಸಂಪತ್ತು ವೃದ್ಧಿಯಾಗುವುದು.

ಧನ-ಧಾನ್ಯ ಪ್ರಾಪ್ತಿಗಾಗಿ ಹೀಗೆ ಮಾಡಿ
ಭಾರತದಲ್ಲಿ ಏಪ್ರಿಲ್ 30ರ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಆದರೆ ಅದರ ಪ್ರಭಾವ ಇರುತ್ತದೆ. ಈ ದಿನ ಶನಿ ಅಮವಾಸ್ಯೆ ಕೂಡಿ ಇದೆ. ಈ ದಿನ ನೀವು ಬಾಲಕಿಯರನ್ನು ಮನೆಗೆ ಕರೆದು ಪೂಜಿಸಿ ಅವರಿಗೆ ಸಿಹಿ ತಿಂಡಿ ಉಡುಗೆಗಳನ್ನು ನೀಡಿ. ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ, ಧನ-ಧಾನ್ಯ ಪ್ರಾಪ್ತಿಯಾಗುವುದು.

ಕುಂಡಲಿಯಲ್ಲಿ ಗ್ರಹದೋಷವಿದ್ದರೆ ಹೀಗೆ ಮಾಡಿ
ಸೂರ್ಯಗ್ರಹಣ ಭಾರತದ ಸಮಯ ಪ್ರಕಾರ ಮಧ್ಯರಾತ್ರಿ 12 ಗಂಟೆ 45 ನಿಮಿಷಕ್ಕೆ ಸಂಭವಿಸಲಿದೆ. ಈ ದಿನ ಶನಿ ಅಮವಾಸ್ಯೆಯೂ ಇದೆ. ಮಧ್ಯರಾತ್ರಿಯಲ್ಲಿ ಎಚ್ಚರವಾಗಿದ್ದು ಸೂರ್ಯ ಬೀಜ ಮಂತ್ರ 108 ಪಠಿಸಿ ಹಾಗೂ ಶನಿ ಬೀಜ ಮಂತ್ರ 108 ಬಾರಿ ಪಠಿಸಿ. ಇದರಿಂದ ಕುಂಡಲಿಯಲ್ಲಿರುವ ಗ್ರಹದೋಷ ನಿವಾರಣೆಯಾಗುವುದು.

ಶನಿ ಸಾಡೇಸಾತಿ, ಶನಿ ದೈಯ್ಯಾವಿದ್ದರೆ ಈ ಪರಿಹಾರ ಮಾಡಿ
ಯಾರಿಗೆಲ್ಲಾ ಈಗ ಶನಿ ಸಾಡೇಸಾತಿ ನಡೆಯುತ್ತಿದೆಯೋ, ಶನಿ ಧೈಯ್ಯ ಇದೆಯೋ ಅವರು ಶನಿ ಮಾವಾಸ್ಯೆಯಂದು ಬೆಳಗ್ಗೆ ಮತ್ತು ಸಂಜೆ ಶನಿ ಸ್ತೋತ್ರ ಪಠಿಸಿ, ಶನಿ ಮಂತ್ರ, ಶನಿ ಬೀಜ ಮಂತ್ರ ಪಠಿಸಿ. ನಂತರ ಕಾಡಿಗೆಯನ್ನು ನಿಮ್ಮ ತಲೆಯ ಏಳು ಸುತ್ತು ಸುತ್ತಿ ಜನ ಓಡಾಡದ ಪ್ರದೇಶದಲ್ಲಿ ಹೂತು ಹಾಕಿ.



Click it and Unblock the Notifications