Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Raksha Bandhan : ರಕ್ಷಾ ಬಂಧನ 2021: ದಿನಾಂಕ, ಪೂಜೆಗೆ ಮುಹೂರ್ತ, ರಾಖಿ ಮಂತ್ರ ಹಾಗೂ ಮಹತ್ವ
ಸಹೋದರ-ಸಹೋಧರಿಯ ಬಂಧವನ್ನು ಸಾರುವ ಆಚರಣೆಯೇ ರಕ್ಷಾ ಬಂಧನ. ನನ್ನನ್ನು ಎಲ್ಲಾ ಸಂದರ್ಭದಲ್ಲೂ ರಕ್ಷಿಸಲು ನನ್ನ ಸಹೋದರ ಇರುತ್ತಾನೆ ಎಂಬ ನಂಬಿಕೆಯಲ್ಲಿ ಸಹೋದರಿ ಅಣ್ಣನಿಗೆ ರಾಖಿ ಕಟ್ಟುತ್ತಾಳೆ. ನಾನು ಇರುವರೆಗೆ ನಿನ್ನ ರಕ್ಷಣೆ ಹೊಣೆ ಎಂಬ ಪ್ರತಿಜ್ಞೆ ತೆಗೆದು ಸಹೋದರ-ಸಹೋದರಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಈ ರಾಖಿ ಹಬ್ಬ ಸಹೋದರ-ಸಹೋದರಿ ಸಂಬಂಧದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಹಾಗೂ ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಬಲ ಪಡಿಸುತ್ತದೆ.
2021ರಲ್ಲಿ ರಕ್ಷಾ ಬಂಧನವನ್ನು ಆಗಸ್ಟ್ 22ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಪೌರ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಆ ದಿನ ಪೂರ್ತಿ ಆಚರಿಸಲಾಗುವುದು. ರಕ್ಷಾ ಬಂಧನ ತಿಥಿ ಸಮಯ ಯಾವಾಗ, ಪೂಜೆಗೆ ಶುಭ ಮುಹೂರ್ತ ಎಷ್ಟೊತ್ತಿಗೆ, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ರಕ್ಷಾ ಬಂಧನ ದಿನಾಂಕ ಮತ್ತು ತಿಥಿ
ದಿನಾಂಕ: 22 ಆಗಸ್ಟ್ 2021, ಭಾನುವಾರ
ಪೌರ್ಣಿಮೆ ತಿಥಿ ಪ್ರಾರಂಭ: 21 ಆಗಸ್ಟ್ 2021, ಸಂಜೆ 7 ಗಂಟೆಗೆ
ಪೌರ್ಣಿಮೆ ತಿಥಿ ಮುಕ್ತಾಯ:22 ಆಗಸ್ಟ್ 2021 ಸಂಜೆ 03:30ಕ್ಕೆ

ರಕ್ಷಾ ಬಂಧನದಂದು ಪೂಜೆ ಮಾಡಿ ರಾಖಿ ಕಟ್ಟಲು ಶುಭ ಮುಹೂರ್ತ
ರಕ್ಷಾ ಬಂಧನ ಸಮಯ ಆಗಸ್ಟ್ ಬೆಳಗ್ಗೆ 0:21ರಿಂದ ಪ್ರಾರಂಭವಾಗಿ 05:31ರವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಹುದು, ಆದರೆ ತುಂಬಾ
ಶುಭ ಮುಹೂರ್ತ: ಮಧ್ಯಾಹ್ನ 01:57ರಿಂದ 04:29ರವರೆಗೆ
ಒಟ್ಟು ಸಮಯ: 2 ಗಂಟೆ: 32 ನಿಮಿಷ

ರಾಖಿಯ ಮಹತ್ವ
ಉತ್ತರ ಭಾರತದಲ್ಲಿ ಶ್ರಾವಣ ಕೊನೆಯ ದಿನದಂದು ರಕ್ಷಾ ಬಂಧನ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಿಮೆಯಂದು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 22ಕ್ಕೆ ಪೌರ್ಣಿಮೆ. ಅಣ್ಣ-ತಂಗಿಯ ಬಂಧವನ್ನು ಸಾರುವ ಈ ಹಬ್ಬವನ್ನು ದೇಶದೆಲ್ಲಡೆ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.

ರಾಖಿ ಮಂತ್ರ
'ಯೇನ್ ಬದ್ದೋ ಬಲಿ ರಾಜ, ದಾನ್‌ವೇಂದ್ರೋ ಮಹಾಬಲ್: ತೇನ್ ತ್ವಾಂ ಪ್ರತಿ ಬಂಧನ್'
ಅರ್ಥ: ನಾನು ನಿನಗೆ ಕಟ್ಟಿರುವ ಈ ರಕ್ಷಾ ಬಲಿ ರಾಜನಿಗೆ ಕಟ್ಟಿದ ರಕ್ಷಾಗೆ ಸಮ, ಓ ರಕ್ಷಾವೇ ಬಲವಾಗಿರು, ಎಂದಿಗೂ ಅಲುಗಾಡಬೇಡ..



Click it and Unblock the Notifications
