Latest Updates
-
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು?
ಪಾಪ ವಿಮೋಚನೆ ಏಕಾದಶಿ 2023: ಈ ಏಕಾದಶಿ ಪಾಲಿಸಿದರೆ ಕಷ್ಟ-ಕಾರ್ಪಣ್ಯ ದೂರಾಗುವುದು
ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ನಮ್ಮ ಬದುಕಿನಲ್ಲಿರುವ ಕಷ್ಟ-ಕಾರ್ಪಣ್ಯಗಳು ದೂರಾಗಿ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಈ ಮಾರ್ಚ್ 18ಕ್ಕೆ ಪಾಪ ವಿಮೋಚನೆ ಏಕಾದಶಿ ಆಚರಿಸಲಾಗುವುದು.
ಈ ಪಾಪವಿಮೋಚನೆ(ಪಾಪವಿಮೋಚನಿ) ಏಕಾದಶಿ ಆಚರಿಸುವುದರಿಂದ ಸಿಗುವ ಫಲವೇನು, ಈ ದಿನ ಪೂಜೆಗೆ ಶುಭ ಮುಹೂರ್ತ ಯಾವಾಗ, ಶ್ರೀ ವಿಷ್ಣುವನ್ನು ಹೇಗೆ ಆರಾಧಿಸಬೇಕು, ಇದರ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ:

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಪಾಪವಿಮೋಚನೆ ಏಕಾದಶಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪಾರಣ ಸಮಯ
ಮಾರ್ಚ್ 18ಕ್ಕೆ ಪಾಪವಿಮೋಚನೆ ಏಕಾದಶಿ ಆಚರಿಸಲಾಗುವುದು.
ಏಕಾದಶಿ ತಿಥಿ ಮುಹೂರ್ತ: ಮಾರ್ಚ್ 17, ಮಧ್ಯಾಹ್ನ 02:6ರಿಂದ ಪ್ರಾರಂಭ
ಮಾರ್ಚ್ 18 ಬೆಳಗ್ಗೆ 11:13ಕ್ಕೆ ಮುಕ್ತಾಯ
ಪಾರಣ ಸಮಯ: ಮಾರ್ಚ್ 19 ಮುಂಜಾನೆ 06:25ರಿಂದ 08:07ರವರೆಗೆ

ಶ್ರೀವಿಷ್ಣುವಿನ ಪೂಜಾ ವಿಧಾನ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ನಂತರ ಪೂಜಾ ಸ್ಥಳವನ್ನು ಸ್ವಚ್ಛ ಮಾಡಿ, ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛ ಮಾಡಿ.
* ಶ್ರೀ ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ ಪೂಜಿಸಿ. ಹೀಗೆ ವಿಷ್ಣುವನ್ನು ಪೂಜಿಸುವಾಗ ಹಳದಿ ವಸ್ತ್ರ, 11 ಹಳದಿ ಹೂಗಳು ಹಾಗೂ 11 ಹಳದಿ ಹೂಗಳು, 11 ಹಳದಿ ಹಣ್ಣುಗಳು ಹಾಗೂ 11 ಬಗೆಯ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು ಪೂಜಿಸಿಬೇಕು. ಈ ದಿನ ಉಪವಾಸ ನಿಯಮಗಳನ್ನು ಪಾಲಿಸಿ ಈ ಏಕಾದಶಿ ಪಾಲಿಸಿದರೆ ತುಂಬಾ ಒಳ್ಳೆಯದು.

ಪಾಪವಿಮೋಚನೆ ಏಕಾದಶಿ ಪ್ರಯೋಜನಗಳು
ಪಾಪವಿಮೋಚನೆ ಏಕಾದಶಿ ಆಚರಿಸುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುವುದು. ಬದುಕಿನಲ್ಲಿ ಎದುರಾಗುತ್ತಿರುವ ಕಷ್ಟಗಳು, ಸವಾಲುಗಳು ದೂರಾಗುವುದು. ಈ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ನಿಮ್ಮ ಆಸೆ ಈಡೇರಲಿದೆ, ಜೀವನದಲ್ಲಿ ನೆಮ್ಮದಿ, ಸಂಪತ್ತು, ಸಮೃದ್ಧಿ ಹೆಚ್ಚಲಿದೆ.
ಪೌರಾಣಿಕ ಹಿನ್ನೆಲೆ
ಧರ್ಮರಾಯ ಶ್ರೀ ಕೃಷ್ಣ ನ ಪಾಪ ಕಳೆದು ಮೋಕ್ಷ ಪಡೆಯುವುದು ಹೇಗೆ ಎಂದು ಕೇಳಿದಾಗ ಶ್ರೀ ಕೃಷ್ಣ ಪಾಪವಿಮೋಚನಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ಯಾರು ಈ ಏಕಾದಶಿ ಆಚಾರಿಸುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಎಂಬುವುದಾಗಿಯೂ ಹೇಳುತ್ತಾನೆ.
ಯಾರು ಈ ವ್ರತ ಆಚರಿಸುತ್ತಾರೋ ಅವರ ಎಲ್ಲಾ ಪಾಪಗಳಿಂದ ಮುಕ್ತಿ ಪಡೆದು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಕೂಡ ಹೇಳಲಾಗುವುದು



Click it and Unblock the Notifications

