Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಕಾರ್ಮಿಕರು ತಿಳಿದುಕೊಳ್ಳಲೇಬೇಕಾದ 'ಕಾರ್ಮಿಕ ಹಕ್ಕುಗಳು'
ಕಾರ್ಮಿಕರ ದಿನಾಚರಣೆ, ಇದನ್ನು ಕಾರ್ಮಿಕರ ಹಬ್ಬ ಎಂದೇ ಹೇಳಬಹುದು. ತಮ್ಮ ಸ್ವಂತ ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ' ದುಡಿಮೆಯೇ ದೇವರು ' ಎಂದು ತಿಳಿದುಕೊಂಡು ಬೆವರು ಹರಿಸುವ ವರ್ಗಕ್ಕೆ ಗೌರವ ಸಲ್ಲಿಸುವ ದಿನ ಇದು.
ಜವಾನನಿಂದ ಹಿಡಿದು ದಿವಾನನವರೆಗೂ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಕಾರ್ಮಿಕರೇ.......ಕೆಲಸದ ವಿಷಯವಾಗಿ ಅವರದೇ ಆದ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಂಸ್ಥೆ ತಮ್ಮ ಸ್ವಂತ ಕುಟುಂಬವೇನೋ ಎಂಬಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಾರೆ.

ತಮ್ಮ ಸ್ವಂತ ಖಾಸಗಿ ಜೀವನವನ್ನು ತ್ಯಜಿಸಿ ನಮಗಾಗಿ ಕಾಶ್ಮೀರ ಕಣಿವೆಯಲ್ಲಿ ವೈರಿಗಳ ವಿರುದ್ಧ ಹೋರಾಡಿ ತಮ್ಮ ಪ್ರಾಣ ಕೊಡಲೂ ಸಿದ್ಧವಿರುವ ದೇಶ ಕಾಯುವ ಯೋಧರು ಈ ಸಂದರ್ಭಕ್ಕೆ ಒಳ್ಳೆಯ ಉದಾಹರಣೆ. ಖಾಸಗಿಯಾಗಿ ಸಹ ಪ್ರಪಂಚದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಸಂಸ್ಥೆಗಳು ಕೋಟ್ಯಾಂತರ ಕಾರ್ಮಿಕರ ನಿಸ್ವಾರ್ಥ ಸೇವೆಯಿಂದ ಯಶಸ್ವಿಯಾಗಿ ತಲೆಯೆತ್ತಿ ನಿಂತಿವೆ.
ಹಾಗಾಗಿ ಕಾರ್ಮಿಕರ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮೇ 1 ರಂದು ಆಚರಿಸಲಾಗುತ್ತದೆ. ಈ ದಿನದಂದು ಕಷ್ಟ ಪಟ್ಟು ದುಡಿಯುವ ಕಾರ್ಮಿಕರಿಗೆ ರಜೆ ನೀಡಿ ಎಲ್ಲಾ ಸರ್ಕಾರಿ ಹಾಗು ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಅಮೆರಿಕ ದೇಶದಲ್ಲಿ 1886 ರಿಂದ ಇದು ಆಚರಿಸಲ್ಪಟ್ಟರೆ ನಮ್ಮ ಭಾರತದಲ್ಲಿ 1923 ನೇ ಇಸವಿಯಿಂದ ಪ್ರಾಮುಖ್ಯತೆ ಪಡೆಯಿತು.

ಭಾರತದ ಕಾರ್ಮಿಕರ ದಿನಾಚರಣೆಯ ಮಹತ್ವ : -
ಸಂಸ್ಥೆಗೆ, ಸಮಾಜಕ್ಕೆ ಹಾಗೂ ದೇಶದ ಆರ್ಥಿಕ ಏಳಿಗೆಗೆ ಕಾರ್ಮಿಕರ ಸೇವೆ ಮತ್ತು ತ್ಯಾಗವನ್ನು ಗಮನದಲ್ಲಿಟ್ಟುಕೊಂಡು ವರ್ಷದಲ್ಲಿ ಅವರಿಗಾಗಿ ಒಂದು ದಿನ ಮೀಸಲಿಡಬೇಕು ಎಂದು ತೀರ್ಮಾನಿಸಿ ಪ್ರಾರಂಭ ಮಾಡಿದ ಈ ಆಚರಣೆ ಇಂದಿಗೂ ಕೂಡ ಪ್ರತಿ ವರ್ಷ ನಡೆಯುತ್ತಲೇ ಸಾಗಿದೆ. ಅಮೇರಿಕ ದೇಶದಲ್ಲಿ ಅಂದಿನ ಕಾಲದಲ್ಲಿ ಕೆಲಸಗಾರರ ವಿರುದ್ಧ ನಡೆಯುತ್ತಿದ್ದ ಶೋಷಣೆಗಳು, ಕಾರ್ಮಿಕರ ಹಿತ ಕಾಪಾಡದಂತಹ ಕಾನೂನುಗಳು, ಕಳಪೆ ಕೆಲಸದ ಪರಿಸ್ಥಿತಿಗಳು ಮತ್ತು ಅನಿಯಮಿತ ಕೆಲಸದ ಸಮಯಗಳ ವಿರುದ್ಧ ಕಾರ್ಮಿಕರು ಸಿಡಿದೆದ್ದಿದ್ದರು.
ಇವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮತ್ತು ಇವರ ಕಷ್ಟಗಳಿಗೆ ಪರಿಹಾರಗಳನ್ನು ಒದಗಿಸಿ ಕೊಡುವ ದಿನವಾಗಿ 19 ನೇ ಶತಮಾನದ ಅಂತ್ಯದಲ್ಲಿ ಮೇ 1 ರ ಕಾರ್ಮಿಕರ ದಿನ ಬದಲಾಯಿತು ಎಂಬ ಮಾತಿದೆ
ಈ ದಿನ ಆಘಾತಕಾರಿ ಘಟನೆಯೊಂದು ನಡೆದು ಹೋಯಿತು. ಕಾರ್ಮಿಕರು 16 ಗಂಟೆಗಳ ಕೆಲಸದ ಸಮಯವನ್ನು 8 ಗಂಟೆಗಳಿಗೆ ತಗ್ಗಿಸಬೇಕೆಂದು ಅಲ್ಲಿನ ಕಾರ್ಮಿಕ ನೀತಿಯನ್ನು ವಿರೋಧಿಸುತ್ತಾ ತಮ್ಮ ಪಾಡಿಗೆ ತಾವು ಮುಷ್ಕರದಲ್ಲಿ ಭಾಗಿಯಾಗಿದ್ದರು. ಸರ್ಕಾರದ ಆದೇಶದ ಮೇರೆಗೆ ಪೊಲೀಸರು ಇವರ ಮೇಲೆ ಗುಂಡಿನ ಮಳೆಗರೆದರು. ಆ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದರಿಂದ ಕುಪಿತಗೊಂಡ ಸಾವಿರಾರು ಕೆಲಸಗಾರರು ಮುಷ್ಕರದಲ್ಲಿ ಭಾಗಿಯಾದರು. ಮುಷ್ಕರ ಇನ್ನೂ ತೀವ್ರ ಸ್ವರೂಪ ಪಡೆದುಕೊಂಡಿತು.
ಆಗ ಅಂದರೆ 1916 ರ ಇಸವಿಯಲ್ಲಿ ಅಮೆರಿಕ ಸರ್ಕಾರ 8 ಗಂಟೆಗಳ ಕೆಲಸದ ಸಮಯವನ್ನು ಆದೇಶ ಮಾಡಿತು.
ಆದರೆ ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು " ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ " ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಕಾರ್ಮಿಕರ ದಿನಾಚರಣೆಯ ದಿನದಂದು ರಾಷ್ಟ್ರೀಯ ರಜಾ ದಿನವಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಅಂದಿನ ದಿನ ಕೆಲಸದಿಂದ ಬಿಡುವು ನೀಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು.
ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕೆಲವೊಂದು ರಾಷ್ಟ್ರಗಳಲ್ಲಿ ಬೇರೆ ಬೇರೆ ದಿನಗಳಲ್ಲಿಯೂ ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಾರೆ.
ಈ ದಿನದಂದು ಸಂಸ್ಥೆಯ ಉದ್ಯೋಗಿಗಳು, ಒಕ್ಕೂಟದ ನಾಯಕರುಗಳು ಭಾಷಣ

ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಇತಿಹಾಸ : -
ಅಮೇರಿಕಾ ದೇಶದ ಚಿಕಾಗೋದಲ್ಲಿ 1886 ರ ಇಸವಿಯಲ್ಲಿ ಕಾರ್ಮಿಕರ ಒಕ್ಕೂಟ ದಿನಕ್ಕೆ ಎಂಟು ಗಂಟೆಗಳ ಕೆಲಸದ ವೇಳಾಪಟ್ಟಿಯನ್ನು ನಿಗದಿ ಮಾಡಬೇಕೆಂದು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ದಿನ ಕಳೆದಂತೆ ಈ ಮುಷ್ಕರ ಹಿಂಸಾತ್ಮಕ ರೂಪವನ್ನು ಪಡೆಯಿತು. ದಂಗೆ ಎದ್ದ ಸಾವಿರಾರು ಕಾರ್ಮಿಕರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಾಂಬ್ ಗಳನ್ನು ಜನರ ಮೇಲೆ ಎಸೆಯಲು ಪ್ರಾರಂಭ ಮಾಡಿದರು.
ಈ ಸಂದರ್ಭದಲ್ಲಿ ಬಹಳಷ್ಟು ಮುಗ್ಧ ಜನರು, ಕಾರ್ಮಿಕರು ತಮ್ಮ ಪ್ರಾಣ ತ್ಯಾಗ ಮಾಡಿದರು. ಹಲವಾರು ಜನ ಗಾಯಗೊಂಡರು. ಇದನ್ನು ಖಂಡಿಸಿ ವಿಶ್ವದ ನಾನಾ ಭಾಗಗಳಲ್ಲಿ ಪ್ರತಿಭಟನೆ ಪ್ರಾರಂಭವಾಯಿತು. ಇದರ ನೆನಪಿಗಾಗಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ.
ನಮ್ಮ ಭಾರತದಲ್ಲಿ ತಮಿಳುನಾಡಿನ ರಾಜಧಾನಿಯಾದ ಮದ್ರಾಸ್ ( ಈಗಿನ ಚೆನ್ನೈ ) ನಲ್ಲಿ 1923 ರಲ್ಲಿ ಪ್ರಪ್ರಥಮ ಬಾರಿಗೆ ಆಚರಿಸಲಾಯಿತು. ಈ ದಿನ ಇಡೀ ದೇಶಾದ್ಯಂತ ವ್ಯಾಪಾರ ಸಂಘಗಳಿಂದ ಮೆರವಣಿಗೆ ನಡೆಸಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ದುಡಿಮೆಯ ವರ್ಗದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಆಂದೋಲನಗಳನ್ನು, ಬೀದಿ ನಾಟಕಗಳನ್ನು ಆಯೋಜಿಸಲಾಗುತ್ತದೆ. ರಾಜಕಾರಣಿಗಳನ್ನು ಆಹ್ವಾನಿಸಿ ಭಾಷಣ ಮಾಡಿಸಲಾಗುತ್ತದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ತಿಳಿಸಿ ಹೇಳಲಾಗುತ್ತದೆ. ಅಂತರಾಷ್ಟ್ರೀಯ ಕಾರ್ಮಿಕರ ಒಕ್ಕೂಟವು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಕಾರ್ಮಿಕರ ದಿನಾಚರಣೆ ಇಡೀ ವಿಶ್ವಕ್ಕೆ ಸಂಬಂಧಿಸಿದ್ದು : -
ಮೊದಲೇ ಹೇಳಿದಂತೆ ಕಾರ್ಮಿಕರ ದಿನಾಚರಣೆ ಕೇವಲ ಭಾರತದಲ್ಲಿ ಆಚರಣೆ ಮಾಡುವ ಪದ್ಧತಿಯಲ್ಲ.
ಹಲವಾರು ಯುರೋಪಿಯನ್ ರಾಷ್ಟ್ರಗಳಾದ ಸ್ವೀಡನ್, ಫ್ರಾನ್ಸ್, ಪೋಲ್ಯಾಂಡ್, ಫಿನ್ಲ್ಯಾಂಡ್, ನಾರ್ವೆ, ಸ್ಪೇನ್, ಇಟಲಿ, ಜರ್ಮನಿ, ಪನಾಮ, ಕ್ಯೂಬಾ, ಮೆಕ್ಸಿಕೋ, ಗುಯಾನ, ಪೆರು,ಉರುಗ್ವೆ, ಬ್ರೆಜಿಲ್, ಅರ್ಜೆಂಟೈನಾ, ಚೈಲ್, ಕೆನಡಾ, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಇತ್ಯಾದಿ ದೇಶಗಳಲ್ಲಿ ಸಂತೋಷ ಸಡಗರಗಳಿಂದ ಆಚರಣೆ ಮಾಡಿ ಸಂಭ್ರಮ ವ್ಯಕ್ತಪಡಿಸುತ್ತಾರೆ. ಕೆಲವೊಂದು ರಾಷ್ಟ್ರಗಳಲ್ಲಿ ಇದೊಂದು ಸಾಂಪ್ರದಾಯಿಕ ಆಚರಣೆಯಾಗಿ ಬದಲಾಗಿ ಆಚರಿಸಲ್ಪಡುತ್ತಿದೆ.
ಈ ದಿನ ಬ್ಯಾಂಕುಗಳಿಗೆ ರಜೆ ಇಲ್ಲದಿದ್ದರೂ ಮೇ ತಿಂಗಳ ಮೊದಲ ಸೋಮವಾರದಂದು ಅವರಿಗೆ ಕಾರ್ಮಿಕರ ದಿನವಾಗಿ ಬದಲಾಗಿರುತ್ತದೆ. ಇಂಗ್ಲೆಂಡ್ ದೇಶದಲ್ಲಿ ಈ ದಿನ ಮೋರಿಸ್ ನೃತ್ಯ ಮತ್ತು ಮೇ ಪೋಲ್ ಸುತ್ತಲು ನಡೆಯುವ ನೃತ್ಯ ನೋಡಲು ನಯನ ಮನೋಹರ.
ಸೋವಿಯತ್ ಒಕ್ಕೂಟದ ಅಧಿಕೃತ ಪ್ರಶಂಸೆಯನ್ನು 20 ನೇ ಶತಮಾನದಲ್ಲಿ ಮೇ ದಿನಕ್ಕೆ ನೀಡಲಾಯಿತು. ಜರ್ಮನಿಯಲ್ಲಿ 1933 ರಲ್ಲಿ ಕಾರ್ಮಿಕರ ದಿನವನ್ನು ರಜಾ ದಿನವನ್ನಾಗಿ ಘೋಷಣೆ ಮಾಡಲಾಯಿತು.
ನಮ್ಮ ಭಾರತದಲ್ಲಿ ಹಲವಾರು ರಾಜ್ಯಗಳಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲ್ಪಡುತ್ತದೆ. ಆಯಾ ರಾಜ್ಯದ ಜನರು ಅವರವರ ಭಾಷೆಯಲ್ಲಿ ಈ ದಿನವನ್ನು ಕರೆಯುತ್ತಾರೆ.
ಉದಾಹರಣೆಗೆ ಹಿಂದಿಯಲ್ಲಿ ' ಕಾಮ್ಗರ್ ದಿನ ' ಎಂದು, ಮರಾಠಿಯಲ್ಲಿ ' ಕಾಮ್ಗರ್ ದಿನ್ ' ಎಂದು ಮತ್ತು ತಮಿಳು ಭಾಷೆಯಲ್ಲಿ ' ಉಜೈಪಾಲರ್ ಧಿನಂ ' ಎಂದು ಕರೆಯುತ್ತಾರೆ.

ಕಾರ್ಮಿಕರ ದಿನಾಚರಣೆ ಮತ್ತು ಕಾರ್ಮಿಕರ ಹಕ್ಕುಗಳು : -
ಕಾರ್ಮಿಕ ದಿನಾಚರಣೆ ಆಚರಣೆ ಮಾಡುವ ಉದ್ದೇಶವೇ ಕಷ್ಟ ಪಟ್ಟು ದುಡಿಯುವ ಕಾರ್ಮಿಕರಿಗೆ ಗೌರವ ಸಲ್ಲಿಸಬೇಕೆಂದು. ಇಡೀ ವಿಶ್ವದಾದ್ಯಂತ ಎಲ್ಲಿಯೂ ಸಹ ಯಾವುದೇ ಸಂಸ್ಥೆಯಲ್ಲಿ ಯಾವೊಬ್ಬ ಕಾರ್ಮಿಕನನ್ನು 8 ಗಂಟೆಗಳಿಗಿಂತ ಅಧಿಕವಾಗಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ.
ಹಾಗೂ ಕೆಲಸ ಮಾಡಿಸಿಕೊಂಡರೆ ಅದಕ್ಕೆ ಸರಿಯಾದ ವೇತನವನ್ನು ನಿಗದಿ ಮಾಡಿ ಸಂಬಳದ ಜೊತೆಗೆ ಆತನಿಗೆ ಪಾವತಿಸಬೇಕು. ಇದರ ಬಗ್ಗೆ ಪ್ರತಿಯೊಬ್ಬ ಕಾರ್ಮಿಕರಿಗೂ ಅರಿವಿರಬೇಕು. ಕೇವಲ ಸಂಭ್ರಮಾಚರಣೆಯಿಂದ ಮುಕ್ತಾಯ ಆಗದೆ ಎಲ್ಲಾ ಕಾರ್ಮಿಕರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು.



Click it and Unblock the Notifications











