Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಯಲ್ಲಿ ವಕ್ರಿಯಾಗುವ ಕುಜ ಗ್ರಹ: 48 ದಿನಗಳವರೆಗೆ ನಿಮ್ಮ ರಾಶಿಗಳ ಮೇಲಾಗುವ ಪರಿಣಾಮಗಳು
ಮೇಷ ರಾಶಿಯಲ್ಲಿ ವಕ್ರಿಯಾಗಿ ಸಂಚರಿಸುತ್ತಿದ್ದ ಕುಜಗ್ರಹ ಅಕ್ಟೋಬರ್ ನಾಲ್ಕರಿಂದ ಮೀನ ರಾಶಿಯಲ್ಲಿ ವಕ್ರಿಯಾಗಿ ಸಂಚಾರ ಪ್ರಾರಂಭಿಸಿದ್ದಾನೆ. 48 ದಿನಗಳವರೆಗೆ ವಕ್ರಿಯಾಗುವ ಮಂಗಳನು ದ್ವಾದಶಗಳ ಮೇಲೆ ಪರಿಣಾಮ ಬೀರಲಿದ್ದಾನೆ.

ಈ ಗ್ರಹವು ವ್ಯಕ್ತಿಯ ಧೈರ್ಯ, ಶೌರ್ಯಕ್ಕೆ ಸಂಬಂಧಿಸಿದ್ದು ಕುಜಗ್ರಹ ಮೀನ ರಾಶಿಯಲ್ಲಿ ವಕ್ರಿಯಾಗಿ ಸಂಚರಿಸುವುದರಿಂದ ದ್ವಾದಶಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ನೋಡೋಣ:

ಮೇಷ:
ಮೇಷ ರಾಶಿಯಲ್ಲಿ ಕುಜನ ಹಿಮ್ಮೆಟುವಿಕೆಯಿಂದ 12ನೇ ಮನೆಯಲ್ಲಿರುತ್ತಾನೆ. ಇದನ್ನು ಖರ್ಚು ಹಾಗೂ ವಿದೇಶ ಪ್ರಯಾಣದ ಮನೆಯೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಎದುರಾಗಬಹುದು. ಅತ್ಯಧಿಕ ಖರ್ಚು, ಅತಿಯಾದ ಮಾನಸಿಕ ಒತ್ತಡ ಈ ಕಾರಣಗಳಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಈ ಸಮಯದಲ್ಲಿ ಒಡ ಹುಟ್ಟಿದವರ ಜೊತೆಗೆ ಹಾಗೂ ಸಂಗಾತಿ ಜೊತೆಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗದಂತೆ ಎಚ್ಚರವಹಿಸಿ.
ವೃತ್ತಿ ಜೀವನದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು. ನೀವಿಲಲ್ಇ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಈ ಸಮಯದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ಒಳ್ಳೆಯದು, ತಪ್ಪುಗಳನ್ನು ತಿದ್ದಿಕೊಂಡರೆ ಒಳ್ಳೆಯದಾಗುವುದು.
ಪರಿಹಾರ: ಹನುಮಾನ್ ಚಾಲೀಸ ಪಠಣೆ ಮಾಡಿ.

ವೃಷಭ:
ವೃಷಭ ರಾಶಿಯವರಲ್ಲಿ ಕುಜನು ಹನ್ನೊಂದನೇ ಸ್ಥಾನದಲ್ಲಿರುತ್ತಾನೆ. ಇದನ್ನು ಅದೃಷ್ಟದ ಮನೆಯೆಂದು ಪರಿಗಣಿಸಲಾಗಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಿ ನಿಧಾನಕ್ಕೆ ಲಾಭ ಹೆಚ್ಚುವುದು. ಸಂಬಂಧಗಳು ಕೂಡ ಖುಷಿಯಾಗಿರುತ್ತದೆ. ಮನಸ್ಸಿನಲ್ಲಿ ಶಾಂತಿ ನೆಲೆಸಿರುವುದರಿಂದ ಉದ್ಯೋಗದ ಕಡೆ ಗಮನ ನೀಡಲು ಸಾಧ್ಯವಾಗುವುದು. ಅಗ್ಯತಕ್ಕಿಂತ ಹೆಚ್ಚಿನ ಕೆಲಸ ಮೈಮೇಲೆ ಎಳೆದು ಹಾಕುವುದರಿಂದ ಒತ್ತಡಕ್ಕೆ ಒಳಗಾಗುವಿರಿ, ನೀವು ನಿಮ್ಮ ಗುರಿಯೇನು ಅದರತ್ತ ಮಾತ್ರ ಗಮನ ನೀಡುವುದು ಒಳ್ಳೆಯದು.

ಮಿಥುನ ರಾಶಿ
ಮಿಥುನ ರಾಶಯವರಲ್ಲಿ ಕುಜನು 10ನೇ ಸ್ಥಾನದಲ್ಲಿದ್ದು ಇದನ್ನು ವೃತ್ತಿಯ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ನಿಮ್ಮ ಪ್ರಮುಖ ಗುರಿ ಕೆಲಸವನ್ನು ಯಾವುದೇ ಚ್ಯುತಿ ಬರದಂತೆ ಮಾಡಿ ಮುಗಿಸುವುದು ಹೇಗೆ ಎಂಬುವುದಾಗಿರುತ್ತದೆ. ನಿಮ್ಮ ಶತ್ರುಗಳು ನಿಮ್ಮ ಕೆಲಸಗಳಲ್ಲಿ ತಪ್ಪು ಕಂಡು ಹಿಡಿಯಲು ಕಾಯುತ್ತಿರುತ್ತಾರೆ, ಇದರಿಂದ ನಿಮಗೆ ಕೆಲವೊಂದು ಸವಾಲುಗಳು ಬರುವುದು. ಇದರಿಂದ ಕೆಲಸದಲ್ಲಿ ಅಭದ್ರತೆ ಕಾಡಬಹುದು. ಈ ಸಮಯದಲ್ಲಿ ಯಾವುದೇ ವಿವಾದಗಳನ್ನು ಮೈಮೇಲೆ ಎಳೆಯಬೇಡಿ, ಯಾರ ಮೇಲೆ ಜಗಳ ಮಾಡಲು ಹೀಗಬೇಡಿ. ಈ ಅವಧಿಯಲ್ಲಿ ನೀವೇನು ಎಂದು ಸಾಬೀತು ಮಾಡಬೇಕಾಗುತ್ತದೆ. ನಿಮ್ಮ ಪ್ರಮುಖ ಗುರಿ ವೃತ್ತಿ ಬದುಕಿನಲ್ಲಿ ಯಶಸ್ವಿ ಕಾಣುವುದು ಆಗಿರುತ್ತದೆ. ನೀವು ವೃತ್ತಿ ಬದುಕಿನಿಂದ ಉಂಟಾದ ಮಾನಸಿಕ ಒತ್ತಡದ ಬಗ್ಗೆ ಸಂಗಾತಿ ಬಳಿ ಹೇಳಿಕೊಳ್ಳುವುದರಿಂದ ಅವರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವುದನ್ನು ತಪ್ಪಿಸಬಹುದು ಹಾಗೂ ಅವರ ಬೆಂಬಲವೂ ಸಿಗಬಹುದು.
ಪರಿಹಾರ: ಮಂಗಳವಾರ ಉಪವಾಸ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಕರ್ಕ:
ಕರ್ಕರಾಶಿಯವರಲ್ಲಿ ಕುಜನು ಒಂಭತ್ತನೇ ಮನೆಯ ಸ್ಥಾನದಲ್ಲಿರುತ್ತಾನೆ. ಇದನ್ನು ಅದೃಷ್ಟ ಹಾಗೂ ಶಿಕ್ಷಣದ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿಮಗೆ ತಾಳ್ಮೆ ತುಂಬಾ ಮುಖ್ಯ. ನಿಮ್ಮ ಕೌಶಲ್ಯ ವೃದ್ಧಿಸಲು ಇದು ಸರಿಯಾದ ಸಮಯ. ಅನುಭವಿಗಳ ಸಲಹೆ ಪಡೆಯುವುದು ಒಳ್ಳೆಯದು. ನಿಮ್ಮ Ego ಬದಿಗಿಟ್ಟರೆ ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ಅನಗ್ಯತ ಪ್ರಯಾಣವನ್ನು ತಪ್ಪಿಸಿ, ಇಲ್ಲದಿದ್ದರೆ ಖರ್ಚು ಹೆಚ್ಚುವುದು. ನಿಮ್ಮ ಸಂಗಾತಿ ಅವರನ್ನು ನೀವು ಅವರಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಭಾವಿಸದಿರಲು ನೀವು ಅವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಇಲ್ಲದಿದ್ದರೆ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗುವುದು.
ವಿದ್ಯಾರ್ಥಿಗಳು ಹೆಚ್ಚಿನ ಕಠಿಣ ಶ್ರಮದಿಂದ ಅಧ್ಯಯನ ಮಾಡಬೇಕು. ಇನ್ನು ಆರೋಗ್ಯದ ದೃಷ್ಟಿಯಿಂದ ಯಾವುದೇ ತೊಂದರೆಯಿಲ್ಲ.
ಪರಿಹಾರ: ಬುಧವಾರ ಕೆಂಪು ಹರಳಿನ ಚಿನ್ನದ ಉಂಗುರ ಧರಿಸಿ.

ಸಿಂಹ:
ಸಿಂಹ ರಾಶಿಯವರೇ, ವೃತ್ತಿ ಬದುಕಿನಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು, ಇದು ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸಬಹುದು. ಈ ಅವಧಿಯಲ್ಲಿ ನಿಮ್ಮ ಪ್ರಯಾಣವನ್ನು ಎಲ್ಲಿಂದ ಪ್ರಾರಂಭಿಸಿದ್ದೀರಿ, ಎಲ್ಲಿ ಬಂದು ತಲುಪಿದ್ದೀರಿ ಎಂದು ಯೋಚಿಸುವಂತೆ ಮಾಡುವುದು. ಭವಿಷ್ಯದಲ್ಲಿ ಲಾಭಕ್ಕಾಗಿ ಹೊಂದಾಣಿಕೆ ಮಾಡುವ ಬದಲಿಗೆ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು.
ಇನ್ನು ಆರೋಗ್ಯ ಹಾಗೂ ಪೋಷಕರ ವಿಷಯದಲ್ಲೂ ಚಿಂತೆಗೊಳಗಾಗುವಿರಿ. ನಿಮ್ಮ ಸಂಗಾತಿಗೂ ಸಮಯವನ್ನು ನೀಡಲು ಮರೆಯದಿರಿ. ಇನ್ನೂ ಆರೋಗ್ಯದಲ್ಲೂ ಸ್ವಲ್ಪ ತೊಂದರೆಗಳು ಎದುರಾಗಬಹುದು. ಯೋಗ, ಧ್ಯಾನ, ಸರಿಯಾದ ನಿದ್ದೆ ಇವುಗಳನ್ನು ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು.
ಪರಿಹಾರ: ಹನುಮಂತನಿಗೆ ಮಂಗಳವಾರ ಸಿಂಧೂರವನ್ನು ಅರ್ಪಿಸಿ.

ಕನ್ಯಾ
ಕನ್ಯಾ ರಾಶಿಯವರೇ ಉತ್ತಮ ಫಲಿತಾಂಶಕ್ಕಾಗಿ ಸರಿಯಾದ ನಿಟ್ಟಿನಲ್ಲಿ ಗಮನ ಹರಿಸಿ, ಕನ್ಯಾದಲ್ಲಿ ಕುಜನು ಏಳನೇ ಮನೆಯಲ್ಲಿದ್ದು ಇದನ್ನು ಪ್ರವಾಸ,ಸಂಗಾತಿ ಇವುಗಳನ್ನು ಪರಿಗಣಿಸಲಾಗಿದೆ.
ಈ ಅವಧಿಯಲ್ಲಿ ಕೆಲವೊಂದು ಏರಳಿತ ಕಾಣಬಹುದು. ಕೋಪದಲ್ಲಿ ಕೆಲಸವನ್ನು ಬಿಡುವ ಕೆಟ್ಟ ನಿರ್ಧಾರಕ್ಕೂ ಮುಂದಾಗುತ್ತೀರಿ, ಹೀಗೆ ಮಾಡಿದ್ದೇ ಆದರೆ ವೃತ್ತಿ ಬದುಕಿನಲ್ಲಿ ತೊಂದರೆಗಳು ಎದುರಾಗುವುದು. ನಿಮ್ಮ ಸಂಗಾತಿಯನ್ನು ಗೌರವಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿ, ಇಲ್ಲದಿದ್ದರೆ ತೊಂದರೆಗೆ ಸಿಲುಕಿ ಕೊಳ್ಳುವಿರಿ. ಸಂಬಂಧದಲ್ಲೂ ತೊಂದರೆಗಳನ್ನು ಅನುಭವಿಸುವಿರಿ. ನಿಮಗೆ ಅಭದ್ರತೆ ಕಾಡಬಹುದು, ಇದರಿಂದಾಗಿ ಸಂಗಾತಿ ಮೇಲೆ ಅಧಿಕಾರ ಹೇರಲು ಹೋಗುತ್ತೀರಿ, ಇದರಿಂದ ಕುಟುಂಬದಲ್ಲಿ ಸಮಸ್ಯೆ ಉಂಟಾಗುವುದು. ಸಂಗಾತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರಬೇಡಿ, ಇದರಿಂದ ನಿಮ್ಮಬ್ಬರಲ್ಲಿ ಸಾಮರಸ್ಯವಿರುವುದು.
ಪರಿಹಾರ: ಮಂಗಳವಾರ ತಾಮ್ರವನ್ನು ದಾನ ಮಾಡಿ.

ತುಲಾ
ಕುಜನು ಆರನೇ ಮನೆಯಲ್ಲಿರುವುದರಿಂದ ನಿಮ್ಮ ಸ್ಪರ್ಧಾತ್ಮಕ ಶಕ್ತಿ ಅಧಿಕವಿರುತ್ತದೆ. ಇದರಿಂದಾಗಿ ವೃತ್ತಿ ಬದುಕಿನಲ್ಲಿರುವ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ.ಕೆಲವೊಮ್ಮೆ ನಿಮ್ಮ ಪ್ರಯತ್ನಗಳಿಗೆ ನಿರೀಕ್ಷಿತ ಫಲ ಸಿಗದೇ ಹೋದಾಗ ನಿರಾಸೆ ಉಂಟಾಗುವುದು, ಆದ್ದರಿಂದ ನಿಮ್ಮ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ. ನೀವು ನಿಮ್ಮ ಸಾಲ ತೀರಿಸಬೇಕೆಂದು ಯೋಚಿಸುತ್ತಿದ್ದರೆ ಅತ್ಯುತ್ತಮವಾದ ಆಲೋಚನೆ. ಇನ್ನು ಸಂಗಾತಿಯ ಆರೋಗ್ಯದಲ್ಲಿ ಕೆಲವೊಂದು ತೊಂದರೆಗಳು ಕಾಣಿಸಬಹುದು. ನೀವು ದೀರ್ಘ ಕಾಲದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಅವಧಿಯಲ್ಲಿ ಅದರಿಂದ ಸಂಪೂರ್ಣವಾಗಿ ಹೊರಬರಬಹುದು.
ಪರಿಹಾರ: ಮಂಗಳವಾರ ನರಸಿಂಹನನ್ನು ಪೂಜಿಸಿ.

ವೃಶ್ಚಿಕ
ವೃಶ್ಚಿಕ ರಾಶಿಯವರೇ ವೃತ್ತಿ ಬದುಕಿನಲ್ಲಿ ಅವಕಾಶವನ್ನು ಒಂದು ಆಟದಂತೆ ಪರಿಗಣಿಸಿ. ನಿಮಗೆ ಬೇಕಾಗಿರುವುದಕ್ಕೆ ಪ್ರಯತ್ನಿಸುತ್ತಲೇ ಇರಿ. ಒಂದು ಮಾವಿನ ಹಣ್ಣಿಗೆ 10 ಬಾರಿ ಕಲ್ಲೆಸಿದಾಗ ಒಮ್ಮೆಯಾದರೂ ತಾಗುತ್ತೆ ಅಲ್ವೇ? ಅದೇ ರೀತಿ ಪ್ರಯತ್ನ ಮಾಡುತ್ತಲೇ ಇರಿ. ಇನ್ನು ಆರ್ಥಿಕವಾಗಿ ನೋಡುವುದಾದರೆ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವುದು ಅಷ್ಟು ಸಮಂಜಸವಲ್ಲ. ಬೇರೆ-ಬೇರೆ ರೀತಿಯಲ್ಲಿ ಹೂಡಿಕೆ ಮಾಡಿ.
ನಿಮಗೆ ಮಕ್ಕಳಿದ್ದರೆ ಅವರ ನಡುವಳಿಕೆ ಸ್ವಲ್ಪ ಚಿಂತೆ ತರಬಹುದು, ಅವರೊಂದಿಗೆ ಸಮಧಾನದಿಂದ ಮಾತನಾಡಿ ಅವರಿಗೆ ಅವರ ತಪ್ಪುಗಳನ್ನು ತಿಳಿಸಿ ಹೇಳಿ.
ಪರಿಹಾರ: ಬಲಭಾಗದ ಕೈಯ ಬೆರಳಿನಲ್ಲಿ ಕೆಂಪು ಹರಳಿನ ಉಂಗುರ ಧರಿಸಿ.

ಧನು ರಾಶಿ:
ನಿಮ್ಮಲ್ಲಿ ಕುಜನು ನಾಲ್ಕನೇ ಮನೆಯಲ್ಲಿ ಇರುವುದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವಿರಿ. ಎಲ್ಲವನ್ನು ಬಿಟ್ಟು ದೂರ ಹೋಗಿ ಬಿಡಬೇಕು ಎಂದೆನಿಸಬಹುದು. ಆದರೆ ಈ ಆಲೋಚನೆಯಿಂದ ನಷ್ಟವೇ ಹೊರತು ಮತ್ತೇನು ಪ್ರಯೋಜನವಿಲ್ಲ. ತಾಳ್ಮೆಯಿಮದ ಇರಿ. ತಪ್ಪು-ಸರಿಗಳ ತುಲನೆ ಮಾಡಿ ನಿರ್ಧಾರ ಕೈಗೊಳ್ಳಿ.
ಇನ್ನು ಮನೆ ರಿಪೇರಿ ಅಥವಾನಿವೇಶನ ಕೊಳ್ಳುವುದರ ಬಗ್ಗೆ ಚಿಂತಿಸುತ್ತಿದ್ದರೆ ನೀವು ಊಹಿಸಿರುವುದಕ್ಕಿಂತಲೂ ಅಧಿಕ ಹಣ ಬೇಕಾಗುವುದು. ಇನ್ನು ಸಂಬಂಧದಲ್ಲಿಯೂ ಕೆಲವೊಂದು ಭಿನ್ನಾಭಿಪ್ರಾಯ ಮೂಡಬಹುದು. ಇನ್ನು ಬಿಪಿ, ಶುಗರ್ ಸಮಸ್ಯೆ ಇದ್ದರೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.
ಪರಿಹಾರ: ಹನುಮಾನ್ ಚಾಲೀಸ್ ಪಠಣೆ ಮಾಡಿ.

ಮಕರ
ಮಕರ ರಾಶಿಯವರೇ ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುವಿರಿ. ಸವಾಲುಗಳು ಬರಬಹುದು, ಅವುಗಳನ್ನು ಎದುರಿಸಲು ಸಿದ್ಧರಾಗಿ. ಕುಜನು ನಿಮಗೆ ಅನುಕೂಲಕರವಾದ ಸ್ಥಾನದಲ್ಲಿಯೇ ಇದ್ದಾನೆ. ಈ ಸಮಯದಲ್ಲಿ ನೀವು ಹಾಕಿದ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಅಲ್ಪ ದೂರ ಪ್ರಯಾಣದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಭಾವನಾತ್ಮಕ ವಿಚಾರಗಳು ಬಲವಾಗಿರುತ್ತದೆ.
ಪರಿಹಾರ:ಅಂಗಾರಕ ಸ್ತೋತ್ರ ಪಠಿಸಿ

ಕುಂಭ
ಕುಂಭ ರಾಶಿಯವರೇ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಮಾತುಗಳ ಮೇಲೆ ನಿಗಾ ಇರಲಿ. ಹಣವನ್ನು ಖರ್ಚು ಮಾಡುವಾಗ ಅಳೆದು ತೂಗಿ ಮಾಡುವುದು ಒಳ್ಳೆಯದು. ಅನಗ್ಯತವಾಗಿ ಶಾಪಿಂಗ್‌ಗೆ ಖರ್ಚು ಮಾಡಬೇಡಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸುಲಭವಾಗಿ ಜೀರ್ಣವಾಗುವ ಆಹಾರವನ್ನಷ್ಟೇ ತಿನ್ನಿ.
ಪರಿಹಾರ: ಮಂಗಳ ಸ್ತೋತ್ರ ಪಠಿಸಿ.

ಮೀನ:
ಮೀನ ರಾಶಿಯವರಲ್ಲಿ ಕುಜನು ಮೊದಲನೇ ಮನೆಯ ಸ್ಥಾನದಲ್ಲಿ ಇರುವುದರಿಂದ ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. ನೀವು ನಿಮ್ಮ ಸಂಪೂರ್ಣ ಶಕ್ತಿ ಹಾಕಿದರೂ ಬಯಸಿದ ಫಲಿತಾಂಶ ಸಿಗದೇ ಹೋಗಬಹುದು ಇದರಿಂದ ನಿಮ್ಮ ಕೆಲಸದಲ್ಲಿ ವಿಳಂಬವಾಗಬಹುದು. ಇದರಿಂದ ಅಸಮಧಾನಗೊಳ್ಳುವಿರಿ. ಈ ಅಸಮಧಾನ ನಿಮ್ಮ ಪ್ರೀತಿಪಾತ್ರರ ಮೇಲೆ ತೋರುವಿರಿ, ಇದರಿಂದಾಗಿ ಕುಟುಂಬದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಈ ಸಮಯದಲ್ಲಿ ತಾಳ್ಮೆಯಿಂದ ಇರಿ.
ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ತ್ವಚೆ ಡ್ರೈಯಾಗುವ ಸಮಸ್ಯೆ ಎದುರಾಗಬಹುದು. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.
ಪರಿಹಾರ: ಚಂದನವನ್ನು ಹಣೆಗೆ ಹಚ್ಚಿಕೊಳ್ಳಿ.



Click it and Unblock the Notifications











