Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
Makar Sankranti Mantras :ಕಷ್ಟಗಳು ದೂರಾಗಿ, ಆತ್ಮವಿಶ್ವಾಸ, ಸಂಪತ್ತು ವೃದ್ಧಿಗೆ ಮಕರ ಸಂಕ್ರಾಂತಿಯಂದು ಈ ಮಂತ್ರಗಳನ್ನು ಪಠಿಸಿ
ಸೂರ್ಯನ ರಾಶಿ ಬದಲಾವಣೆ ನಮ್ಮ ರಾಶಿಗಳ ಮೇಲೆ ತುಂಬಾನೇ ಪ್ರಭಾವ ಬೀರುವುದು ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಜನವರಿ 14ಕ್ಕೆ ಸೂರ್ಯ ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸಲಿದೆ. ಈ ದಿನ ಪೂಜೆ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠವಾಗಿದೆ.
ಈ ದಿನ ಪವಿತ್ರ ನದಿಗಳನ್ನು ಪುಣ್ಯ ಸ್ನಾನ ಮಾಡಿ ಸೂರ್ಯ ಭಗವಾನ್‌ಗೆ ಆರ್ಘ್ಯ ಅರ್ಪಿಸಲಾಗುವುದು. ಈ ದಿನ ಸೂರ್ಯನ ಆರಾಧನೆ ಮಾಡಿದರೆ ಕಷ್ಟಗಳು ದೂರಾಗಿ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗುವುದು.
ಸೂರ್ಯನಿಗೆ ಆರ್ಘ್ಯ ನೀಡುವಾಗ ಸೂರ್ಯ ಮಂತ್ರಗಳನ್ನು ಪಠಿಸಬೇಕು. ಈ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಆರೋಗ್ಯ, ಐಶ್ವರ್ಯ ಹೆಚ್ಚಾಗಲಿದೆ.
ಮಕರ ಸಂಕ್ರಾಂತಿಗೆ ಈ ಮಂತ್ರಗಳನ್ನು ಪಠಿಸಿ:

ಸೂರ್ಯ ಮಂತ್ರಗಳು
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಅರ್ಥ: ಬ್ರಹ್ಮಾಂಡದ ಅಧಿಪತಿಯಾಗಿರುವ ಸೂರ್ಯದೇವ, ನೀನು ಎಲ್ಲಾ ರೋಗಗಳನ್ನು ತೊಡೆದುಹಾಕುವ ಶಕ್ತಿಯುಳ್ಳವನು, ನೀನು ಭಕ್ತರಿಗೆ ಆರೋಗ್ಯ, ದೀರ್ಘಾಯುಸ್ಸು ನೀಡು ಎಂದು ಪ್ರಾರ್ಥಿಸುತ್ತೇನೆ.
ಇದರ ಪ್ರಯೋಜನಗಳು
* ಸಂಕ್ರಾಂತಿಯಂದು ಮಾತ್ರವಲ್ಲ ಪ್ರತಿದಿನ ಈ ಮಂತ್ರ ಪಠಿಸಿದರೆ ಜೀವನದಲ್ಲಿ ಎದುರಾಗಿರುವ ತಡೆತಡೆಗಳು, ಸಮಸ್ಯೆಗಳು ದೂರಾಗುವುದು.
* ಆಧ್ಯಾತ್ಮದ ಕಡೆ ಒಲವು ಹೆಚ್ಚುವುದು
* ನಿಮ್ಮ ಆಲೋಚನೆ ಸಕಾತಾರ್ಮಕವಾಗುವುದು, ಆತ್ಮವಿಶ್ವಾಸ ಹೆಚ್ಚುವುದು.
ಸೂರ್ಯ ಮಂತ್ರ ಹೇಗೆ ಪಠಿಸಬೇಕು?
ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಸೂರ್ಯ ಉದುಯಿಸುವಾಗ ಪೂರ್ವಕ್ಕೆ ಮುಖ ಮಾಡಿ ಈ ಮಂತ್ರ 3 ಬಾರಿ ಅಥವಾ 9, 9, 108 ಅಥವಾ 1008 ಬಾರಿ ಪಠಿಸಬೇಕು.

ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ
ಅರ್ಥ: ತೇಜಸ್ಸಿನಿಂದ ಕೂಡಿರುವ ಮಹಾನ್ ಸೂರ್ಯ ದೇವನ ಕೃಪೆ ಬೇಡುತ್ತಿದ್ದೇನೆ.
ಈ ಮಂತ್ರ ದಿನಾ ಪಠಿಸಿದರೆ ಈ ಪ್ರಯೋಜನಗಳಿವೆ
* ನಿಮ್ಮ ಜೀವನದಲ್ಲಿನ ಕಷ್ಟಗಳು, ಗೊಂದಲಗಳು ದೂರಾಗುವುದು
* ಸೂರ್ಯನ ಕೃಪೆಯಿಂದ ನೀವು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗುತ್ತೀರಿ.
ಉತ್ತಮ ಫಲಿತಾಂಶಕ್ಕಾಗಿ ಈ ಮಂತ್ರವನ್ನು 40 ದಿನಗಳಲ್ಲಿ 700 ಬಾರಿ ಪಠಿಸಬೇಕು. ಈ ಮಂತ್ರವನ್ನು ಯಾರು ಬೇಕಾದರೂ ಪಠಿಸಬಹುದಾಗಿದ್ದು ಸೂರ್ಯ ಯಂತ್ರದ ಮುಂದೆ ಪಠಿಸಿ.

ಸೂರ್ಯ ಗಾಯತ್ರಿ ಮಂತ್ರ:
।। ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾಥಿಕರಾಯಾ ಧೀಮಹಿ ತನಮೋ ಆದಿತ್ಯ ಪ್ರಚೋದಯಾತ ।।
।। ಓಂ ಆದಿತ್ಯಾಯ ವಿದ್ಮಹೇ ಮಾರ್ತ್ತಣ್ಡಾಯ ಧೀಮಹಿ ತನ್ನಃ ಸೂರ್ಯಃ ಪ್ರಚೋದಯಾತ್ ।।
।। ಓಂ ಸಪ್ತ-ತುರಂಗಾಯ ವಿದ್ಮಹೇ ಸಹಸ್ರ-ಕಿರಣಾಯ ಧೀಮಹಿ ತನ್ನೋ ರವಿಃ ಪ್ರಚೋದಯಾತ್ ।।
ಅರ್ಥ: ದಿನಕರ್ತನಾದ ಸೂರ್ಯನಿಗೆ ನಮ್ಮ ಪ್ರಾರ್ಥನೆ, ನನ್ನ ಬುದ್ಧಿ ಹಾಗೂ ಮನಸು ಬೆಳಗು
ನಿನ್ನ ಸಹಸ್ರಾರು ಕಿರಣಗಳ ತೇಜಸ್ಸಿನಿಂದ ನನ್ನ ಮಂಕು ಕವಿದ ಬುದ್ಧಿಯನ್ನು ಹೋಗಲಾಡಿಸಿ, ನನಗೆ ಒಳ್ಳೆಯ ಆಲೋಚನೆ ನೀಡು
ಏಳು ಕುದುರೆಗಳ ರಥಗಳನ್ನು ಹೊಂದಿರುವ ಸೂರ್ಯ ದೇವನೇ ನಿನ್ನ ಕಿರಣಗಳಿಂದ ನಮ್ಮನ್ನು ತಲುಪುತ್ತಿರುವೆ, ನಿನಗೆ ನಮ್ಮ ಪ್ರಣಾಮಗಳು
ಸೂರ್ಯ ಗಾಯತ್ರಿ ಮಂತ್ರ ಪಠಿಸುವುದರಿಂದ ದೊರೆಯುವ ಪ್ರಯೋಜನಗಳು
* ಈ ಮಂತ್ರ ಪಠಿಸುವುದರಿಂದ ಮನಸ್ಸಿನಲ್ಲಿರುವ ಗೊಂದಲ ದೂರಾಗುವುದು
* ಏಕಾಗ್ರತೆ ಹೆಚ್ಚುವುದು
* ಕೆಟ್ಟ ಆಲೋಚನೆಗಳು ದೂರಾಗುವುದು
* ಮನಸ್ಸು ಶಾಂತವಾಗುವುದು
ಈ ಗಾಯತ್ರಿ ಮಂತ್ರವನ್ನು ಬೆಳಗ್ಗೆ ಪೂರ್ವ ದಿಕ್ಕಿಗೆ ಮುಖ ಮಾಡಿ 108 ಬಾರಿ ಪಠಿಸಿ.

ಸೂರ್ಯ ಆದಿತ್ಯ ಮಂತ್ರ
।। ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್
ಜಯಾವಹಂ ಜಪಂ ನಿತ್ಯಮಕ್ಷಯಂ ಪರಮಂ ಶಿವಮ್ ।।
ಆದಿತ್ಯ ಹೃದಯಂ ಸ್ತೋತ್ರ ಪಠಿಸುವುದರಿಂದ ನಮ್ಮ ಶತ್ರುಗಳನ್ನು ಮಣಿಸಲು ಸಾಧ್ಯವಾಗುವುದು.
* ಈ ಮಂತ್ರ ಪಠಿಸುವುದರಿಂದ ಅಹಂಕಾರ, ಕೋಪ ಹೋಗಲಾಡಿಸಬಹುದು.
ಉತ್ತಮ ಫಲಕ್ಕಾಗಿ ಗಾಯತ್ರಿ ಮಂತ್ರ 60 ದಿನಗಳವರೆಗೆ ದಿನದಲ್ಲಿ 6 ಬಾರಿ ಪಠಿಸಿ.



Click it and Unblock the Notifications
