Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ನೀವು ಇಷ್ಟಪಟ್ಟವರು ನಿಮಗೆ ಸಿಗಲು ಶಿವನ ಈ ಪವರ್‌ಫುಲ್ ಮಂತ್ರ ಪಠಿಸಿ
"ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕ್ಕೆ ಸಾಟಿ ಬೇರೆಯಿಲ್ಲ". ಎಂಬ ಮಾತಿನಂತೆ ಪ್ರತಿನಿತ್ಯ ಶಿವನನ್ನು ಭಕ್ತಿಯಿಂದ ನೆನೆದರೆ ನಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುತ್ತದೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಉತ್ತಮ ಬಾಳ ಸಂಗಾತಿಗಾಗಿ ಹಂಬಲಿಸೋದು ಸಾಮಾನ್ಯ. ಶಿವನ ಮಂತ್ರಗಳನ್ನು ಭಕ್ತಿಯಿಂದ ಭಜಿಸಿದರೆ ನಿಮ್ಮಿಷ್ಟದ ಹಾಗೂ ನಿಮಗೆ ಸರಿಹೊಂದುವ ಬಾಳಸಂಗಾತಿಯನ್ನು ಖಂಡಿತ ಪಡೆಯಬಹುದು.

ಶಿವನಿಗೆ ಪ್ರೀಯವಾದ ಮಂತ್ರಗಳು ಯಾವುದು ಅಂತ ತಿಳಿಸಿ ಕೊಡ್ತೀವಿ ಅದಕ್ಕೂ ಮೊದಲು ಶಿವನ ಪೂಜಾ-ವಿಧಿವಿಧಾನದ ಬಗ್ಗೆ ತಿಳಿದುಕೊಳ್ಳೋಣ.ಈ ದಿನ ಶಿವನನ್ನು ಭಜಿಸಿದರೆ ನಮ್ಮಿಷ್ಟದ ಸಂಗಾತಿ ಪ್ರಾಪ್ತಿ
ಸೋಮವಾರ ಶಿವನಿಗೆ ಪ್ರೀಯವಾದ ದಿನ.
ಆ ದಿನ ಶುದ್ಧ ಮನಸ್ಸಿನಿಂದ ಮಹಾದೇವನನ್ನು ಭಜಿಸಿದರೆ ನಿಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಸೋಮವಾರ ಬೆಳಗ್ಗೆ ಬೇಗ ಎದ್ದು ಶಿವನನ್ನು ಭಜಿಸಬೇಕು. ಸೋಮವಾರ ಪೂಜ್ಯವಾದ ದಿನವಾದ್ದರಿಂದ ಆ ದಿನ ಶಿವನ ಆರಾಧನೆಯಿಂದ ಭಕ್ತರು ಪುನೀತರಾಗುತ್ತಾರೆ. ಸಾಮಾನ್ಯವಾಗಿ ಮದುವೆಯಾಗದ ಕನ್ಯೆಯರು ಸೋಮವಾರದ ದಿನದಂದು ನೀಲಕಂಠೇಶ್ವರನಿಗೆ ಉಪವಾಸ ವೃತ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಇಚ್ಚೆಪಟ್ಟ ಬಾಳಸಂಗಾತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಇದನ್ನು ಪಾಲಿಸಬಹುದು. ಹೌದು, ಸೋಮವಾರ ಶಿವನನ್ನು ಆರಾಧಿಸುವಾಗ ಕೆಲವೊಂದು ಪೂಜಾ ವಿಧಾನಗಳನ್ನು ಪಾಲಿಸಿದರೆ ಖಂಡಿತ ನಿಮ್ಮ ಹಣೆಬರಹ ಬದಲಾಗಲಿದೆ ಮತ್ತು ನಿಮಗೆ ಯೋಗ್ಯವಾದ ಸಂಗಾತಿಯೇ ನಿಮ್ಮ ಬಾಳ ಸಂಗಾತಿಯಾಗುತ್ತಾರೆ.
ಪೂಜಾ ವಿಧಾನ ಹೇಗಿರಬೇಕು?
ಸೋಮವಾರದ ದಿನವನ್ನು ಶಿವನ ದಿನವೆಂದೇ ಆರಾಧಿಸಲಾಗುತ್ತದೆ. ನಾವು ಇಷ್ಟಪಟ್ಟಂತೆ ಸಂಗಾತಿ ಸಿಗಬೇಕೆಂದರೆ ಕೆಲವೊಂದು ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸೋಮವಾರ ರಾತ್ರಿ ಉಪವಾಸವಿದ್ದು, ಸಂಜೆಯ ವೇಳೆ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ನೀರಿನ ಅಭಿಷೇಕ ಮಾಡುವ ವೇಳೆ ಓಂ ನಮಃ ಶಿವಾಯ ಮಂತ್ರ ಜಪಿಸಬೇಕು. ಇದಾದ ಬಳಿಕ ದನದ ಹಾಲಿನ ಜೊತೆಗೆ ಜೇನುತುಪ್ಪದ ಅಭಿಷೇಕ ಮಾಡಬೇಕು. ನಂತರ ಕೆಂಪು ಶ್ರೀಗಂಧವನ್ನು ಅರ್ಪಣೆ ಮಾಡಬೇಕು.
ಎಲ್ಲಾ ಪೂಜಾವಿಧಾನಗಳನ್ನು ಕಟ್ಟು ನಿಟ್ಟಾಗಿ ನೆರವೇರಿಸಿದ ಮೇಲೆ ಶಿವನಿಗೆ ಆರತಿ ಬೆಳಗಬೇಕು. ಹೀಗೆ ಮಾಡುವುದರಿಂದ ನಿಮ್ಮೆಲ್ಲಾ ಇಷ್ಟಾರ್ಧಗಳು ಈಡೇರುತ್ತದೆ. ಇದನ್ನು ನೀವು ನಿರಂತರವಾಗಿ ಪಾಲಿಸುತ್ತಾ ಬಂದರೆ ನಿಮಗೆ ದುಡ್ಡಿನ ಸಮಸ್ಯೆ ಎದುರಾಗುವುದಿಲ್ಲ. ಇದರ ಜೊತೆಗೆ ನೀವೇನಾದರೂ ಕೆಲಸ ಹುಡುಕುತ್ತಿದ್ದರೆ ಅಥವಾ ವ್ಯಾಪಾರದಲ್ಲಿ ಸಮಸ್ಯೆಯಿದ್ದರೆ ಎಲ್ಲವೂ ಬಗೆಹರಿಯುತ್ತದೆ.
ಮಹಾದೇವನನ್ನು ನಾವು ಉಗ್ರರೂಪಿ ಅಂತಲೂ ಕರೆಯುತ್ತೇವೆ. ಇದರ ಜೊತೆಗೆ ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲಾ ಆಸೆ, ಆಕಾಂಕ್ಷೆಗಳನ್ನು ಈತ ನೆರವೇರಿಸುತ್ತಾನೆ. ಆದ್ರೆ ಶಿವನ ಆರಾಧನೆಯು ಮಂತ್ರಗಳನ್ನ ಹೊರತಾಗಿ ಪೂರ್ಣಗೊಳ್ಳುವುದಿಲ್ಲ. ಹಾಗಾದ್ರೆ ಮಹಾದೇವನ್ನು ಒಲಿಸಿಕೊಳ್ಳುವ ಆ ಮಂತ್ರಗಳ ಬಗ್ಗೆ ನಿಮಗೆ ತಿಳಿಸಿಕೊಡ್ತೀವಿ.
ಶಿವ ಮಂತ್ರ
ಓಂ ನಮಃ ಶಿವಾಯ
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವ ದೀಮಹಿ
ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯಾ
ಶಿವ ಪಂಚಾಕ್ಷರ ಸೋತ್ರ
ನಾಗೇಂದ್ರಹರಾಯ ತ್ರಿಲೋಚನಾಯ
ಬಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯಾ ಶುದ್ಧಾಯ ದಿಗಂಬರಾಯಾ
ತಸ್ಮಯ್ ನ ಕರಯಾ ನಮಃ ಶಿವಾಯ
ಮಂದಾಕಿನಿ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ್ ಪ್ರಮಾಥನಾಥ ಮಹೇಶ್ವರಾಯ
ಮಂದಾರ ಪುಷ್ಟ ಬಹು ಪುಷ್ಟ ಸುಪೂಜಿತಾಯ
ತಸ್ಮಯ್ ಮ ಕರಾಯ ನಮಃ ಶಿವಾಯ
ಶಿವಾಯ ಗೌರಿವದನಾಬ್ಜಾ ವೃಂದ
ಸೂರ್ಯಾಯ ದಕ್ಷದ್ವಾರ ನಶಕಾಯ
ಶ್ರೀ ನೀಲಕಂಠಾಯ ವೃಷದ್ವಜಾಯ
ತಸ್ಮಯ್ ಶ್ರೀ ಕರಾಯ ನಮಃ ಶಿವಾಯ
ವಶಿಷ್ಠ ಕುಂಬೋಧವ ಗೌತಮಾರ್ಯ
ಮುನೀಂದ್ರ ದೇವರ್ಚಿತ ಶೇಖರಾಯ
ಚಂದಾರ್ಕ ವೈಶನಾರಾ ಲೋಚನ್ಯ
ತಸ್ಮಯ್ ವ ಕರಾಯ ನಮಃ ಶಿವಾಯ
ಯಗ್ಯ ಸ್ವರೂಪಾಯ ಜತ ದಾರಯ
ಪಿನಾಕ ಹಸ್ತಾಯ ಸನಾತನಾಯ
ದಿವ್ಯಯ ದೇವಯ ದಿಗಂಬರಾಯ
ತಸ್ಮಯ್ ಯ ಕಾರಾಯಾ ನಮಃ ಶಿವಾಯ
ಪಂಚಾಕ್ಷರಮಿಂದಂ ಪುಣ್ಯಂ ಯಹ ಪತೇಚ್ಚಿವಸಾನ್ನಿದೋ
ಶಿವಲೋಕಂ ಅವಪ್ನೋಪ್ತಿ ಶಿವೇನ್ ಸಹ ಮೋದತೆ
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರಯಂಭಕಂ ಯಜಮಾಹೇ ಸುಗಂಧಿಮ್ ಪುಷ್ಠಿ ವರ್ಧನಂ
ಉರ್ವರುಕಮಿವ ಬಂಧನಮ್ ಮೃತ್ಯೋಮೃಕ್ಷಿ ಮರ್ಮಿತಾತ್



Click it and Unblock the Notifications



