Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Maha Shivaratri 2022 Horoscope: ಶಿವರಾತ್ರಿ ಬಳಿಕ ಈ 5 ರಾಶಿಗಳಿಗೆ ಒಳ್ಳೆಯದು
ಹಿಂದೂಗಳಿಗೆ ಮಹಾ ಶಿವರಾತ್ರಿ ಎಂದರೆ ದೊಡ್ಡ ಸಂಭ್ರಮದ ಆಚರಣೆ. ಈ ವರ್ಷ ಮಾರ್ಚ್ 1ರಂದು ಮಹಾಶಿವರಾತ್ರಿ ಆಚರಿಸಲಾಗುವುದು. ಈ ದಿನ ಯಾರು ಭಕ್ತಿಯಿಂದ ಉಪವಾಸವಿದ್ದು ವ್ರತ ನಿಯಮಗಳನ್ನು ಪಾಲಿಸಿ ಜಾಗರಣೆ ಇದ್ದು ಶಿವನ ಆರಾಧನೆ ಮಾಡುತ್ತಾರೋ ಅವರ ಕಷ್ಟಗಳು ದೂರಾಗುವುದು ಎಂಬುವುದು ಭಕ್ತರ ಅಚಲ ನಂಬಿಕೆ.

ಪರಶಿವ ತನ್ನ ಭಕ್ತರನ್ನು ಎಂದಿಗೂ ನಿರಾಸೆ ಮಾಡಲ್ಲ. ಯಾರು ಭಕ್ತಿಯಿಂದ ಶಿವನ ಧ್ಯಾನ ಮಾಡುತ್ತಾರೋ ಅವರ ಸಂಕಲ್ಪ ಖಂಡಿತ ನೆರವೇರುವುದು. ಜ್ಯೋತಿಷ್ಯವು ಈ ಶಿವರಾತ್ರಿ ಬಳಿಕ ಕೆಲವೊಂದು ರಾಶಿಯವರಿಗೆ ತುಂಬಾ ಒಳ್ಳೆಯದು ಎಂದು ಹೇಳಿದೆ. ಆ ರಾಶಿಗಳು ಯಾವುದೆಂದರೆ:

ಮೇಷ ರಾಶಿ
ಈ ಶಿವರಾತ್ರಿ ಹಬ್ಬ ಕಳೆದ ಬಳಿಕ ಮೇಷ ರಾಶಿಯವರ ಜೀವನದಲ್ಲಿ ತುಂಬಾ ದೊಡ್ಡ ಬದಲಾವಣೆಯಾಗಲಿದೆ. ಆಗಿದ್ದರ ಬಗ್ಗೆ ಚಿಂತಿಸಿ ಕೋಪಗೊಂಡು ಅಥವಾ ದುಃಖಗೊಂಡು ಕೂರುವ ಸಮಯವಲ್ಲ. ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಿ , ಒಳ್ಳೆಯದಾಗುತ್ತದೆ. ಶಿವನ ಪ್ರತಿದಿನ ಧ್ಯಾನಿಸಿ ನಿಮ್ಮ ಎಲ್ಲಾ ಕಷ್ಟಗಳು ದೂರಾಗುವುದು.

ಮಿಥುನ ರಾಶಿ
ನಿಮಗೆ ಖುಷಿ ತರುವ ಸುದ್ದಿಯೊಂದನ್ನು ಕೇಳುವಿರಿ. ಶಿವನ ವಿಶೇಷ ಅನುಗ್ರಹ ನಿಮ್ಮ ಮೇಲಿರುತ್ತೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುವುದು. ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ
ಈ ರಾಶಿಯವರು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಒಳ್ಳೆಯ ಫಲ ಸಿಗುವುದು. ನಿಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣುವಿರಿ.

ಮಕರ ರಾಶಿ
ಈ ರಾಶಿಯವರ ಮೇಲೂ ಮಹಾದೇವನ ವಿಶೇಷ ಕೃಪೆ ಇರುತ್ತದೆ. ಶಿವನಿಗೆ ಬಿಲ್ವೆಪತ್ರೆ ಅರ್ಪಿಸಿ ಪೂಜಿಸಿ. ಇದರಿಂದ ಒಳ್ಳೆಯದಾಗುವುದು.

ಕುಂಭ ರಾಶಿ
ಕುಂಭ ರಾಶಿಯವರಿಗೆ ಮಹಾದೇವ ಹಾಗೂ ಶನಿದೇವನಕೃಪೆ ಇರುತ್ತದೆ. ನಿಮ್ಮ ವೃತ್ತಿ ಬದುಕಿನಲ್ಲಿ ಬೆಳವಣಿಗೆಯನ್ನು ಕಾಣುವಿರಿ. ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ. ಮಹಾಶಿವರಾತ್ರಿ ಹಾಗೂ ಪ್ರತಿ ತಿಂಗಳು ಶಿವರಾತ್ರಿಯಂದು ಉಪವಾಸವಿದ್ದು ಪೂಜೆ ಮಾಡಿ.



Click it and Unblock the Notifications