Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಚಂದ್ರಗ್ರಹಣ 2021: ಗ್ರಹಣ ಮುಕ್ತಾಯವಾದ ಬಳಿಕ ಏನು ಮಾಡಿದರೆ ಒಳ್ಳೆಯದು?
ಇಂದು ಅಂದರೆ ನವೆಂಬರ್ 19 ರಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಖಗೋಳ ಘಟನೆಯಾಗಿದೆ. ಆದರೆ ಇದು ಧಾರ್ಮಿಕ ಮತ್ತು ಜ್ಯೋತಿಷ್ಯದಲ್ಲೂ ಮಹತ್ವವನ್ನು ಹೊಂದಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಗ್ರಹಣದ ಸಮಯ ಮತ್ತು ಅಂತ್ಯದ ನಂತರ, ಮಾಡಬೇಕಾದ ಕೆಲವು ಕಾರ್ಯಗಳನ್ನು ಹೇಳಲಾಗಿದೆ.
ಗ್ರಹಣವಾದಾಗ ಪರಿಸರದಲ್ಲಿ ಋಣಾತ್ಮಕತೆ ಹೆಚ್ಚುತ್ತದೆ ಎಂದು ಹೇಳಲಾಗುವದು, ಇದರಿಂದಾಗಿ ಜೀವನದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬಹುದು. ಗ್ರಹಣದ ಸಮಯದಲ್ಲಿ ಎಲ್ಲಾ ಮಂಗಳಕರ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಗ್ರಹಣ ಮುಗಿದ ನಂತರವೂ, ಗ್ರಹಣದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಗಾದರೆ ಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಚಂದ್ರಗ್ರಹಣ ಮುಗಿದ ನಂತರ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಗ್ರಹಣ ಮುಗಿದ ನಂತರ ಸ್ವಚ್ಛಗೊಳಿಸಿ
ಚಂದ್ರಗ್ರಹಣ ಮುಗಿದ ನಂತರ, ಇಡೀ ಮನೆ ಮತ್ತು ಪೂಜೆಯ ಮನೆಯನ್ನು ಸ್ವಚ್ಛಗೊಳಿಸಿ. ಗ್ರಹಣದ ಸಮಯದಲ್ಲಿ ನಕಾರಾತ್ಮಕತೆ ಹೆಚ್ಚಾಗುವುದರಿಂದ ಗ್ರಹಣ ಮುಗಿದ ನಂತರ ಶುಚಿಗೊಳಿಸಬೇಕು. ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೋಗಲಾಡಿಸಲು ಮನೆಯನ್ನು ಸ್ವಚ್ಛಗೊಳಿಸಿದ ನಂತರ ಗಂಗಾಜಲವನ್ನು ಸಿಂಪಡಿಸಬೇಕು.

ಸ್ನಾನ ಮಾಡಬೇಕು
ಗ್ರಹಣ ಮುಗಿದ ನಂತರ, ಮನೆ ಸ್ವಚ್ಛಗೊಳಿಸಿದ ಬಳಿಕ ಸ್ನಾನವನ್ನು ಮಾಡಬೇಕು ಏಕೆಂದರೆ ಗ್ರಹಣದ ನಕಾರಾತ್ಮಕತೆಯು ಮಾನವ ದೇಹದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಚಂದ್ರಗ್ರಹಣ ಮುಗಿದಾಗ ಸ್ನಾನ ಮಾಡಿ. ಸಾಧ್ಯವಾದರೆ, ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಬೇಕು. ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಬೇಕು.

ಗ್ರಹಣ ಮುಗಿದ ನಂತರ ದಾನ ಮಾಡಿ-
ಚಂದ್ರಗ್ರಹಣ ಮುಗಿದಾಗ ದಾನ ಮಾಡಲು ಮರೆಯದಿರಿ. ಗ್ರಹಣ ಮುಗಿದ ನಂತರ ದಾನ ಮಾಡುವುದು ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ಗ್ರಹಣ ಮುಗಿದ ನಂತರ ಆಹಾರ, ವಸ್ತ್ರ ಇತ್ಯಾದಿಗಳನ್ನು ನಿರ್ಗತಿಕರಿಗೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು.



Click it and Unblock the Notifications
