Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ಲವ ನಾಮ ಸಂವತ್ಸರದಲ್ಲಿ ಈ ರಾಶಿಗಳಿಗೆ ತುಂಬಾನೇ ಅದೃಷ್ಟ
ಯುಗಾದಿ ಎಂದರೆ ಏನೋ ಸಂಭ್ರಮ, ಸಡಗರ. ವಸಂತ ಕಾಲದಲ್ಲಿ ಗಿಡಗಳು ಚಿಗುರಿ ಪ್ರಕೃತ್ತಿಯಲ್ಲಿ ಏನೋ ನವೀನತೆ, ಅದೇ ಸಮಯಕ್ಕೆ ಹೊಸತ್ತನ್ನು ಹೊತ್ತು ಯುಗಾದಿ ಬರುತ್ತದೆ.

ಈ ವರ್ಷ ಏಪ್ರಿಲ್ 13ಕ್ಕೆ ನಾವೆಲ್ಲಾ ಶ್ರೀ ಶಾರ್ವರಿ ಸಂವತ್ಸರ ಮುಗಿಸಿ, ಶ್ರೀ ಫ್ಲವ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ನಮಗೆ ಹೊಸ ವರ್ಷ. ಈ ಹೊಸ ವರ್ಷದ ಪ್ರಭಾವ ರಾಶಿಗಳ ಮೇಲೆ ಹೇಗಿರಲಿದೆ ಎಂದು ರಾಶಿ ನೋಡಿ ಹೇಳಲಾಗುವುದು. ಈ ವರ್ಷದ ಯುಗಾದಿ ರಾಶಿಫಲ ನೀಡಿದ್ದೇವೆ. ಇಲ್ಲಿ ಈ ವರ್ಷ ಅದೃಷ್ಟದ ರಾಶಿಗಳು ಯಾವುವು ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ:

ಮೇಷ ರಾಶಿ
ನಿಮಗೆ ಚಂದ್ರ-ಬುಧ ಯೋಗವಿದೆ, ಇದರಿಂದ ಈ ವರ್ಷ ನಿಮ್ಮ ಎಲ್ಲಾ ಕಾರ್ಯಗಳಿಗೆ ತುಂಬಾನೇ ಅನುಕೂಲಕರವಾಗಿದೆ. ನವೆಂಬರ್ 23ರ ಬಳಿಕ ನಿಮಗೆ ಬೃಹಸ್ಪತಿ ಯೋಗ ಇರುವುದರಿಂದ ರಾಜಕೀಯ, ಉದ್ಯೋಗ, ವ್ಯಾಪಾರ , ವಿದ್ಯಾಭ್ಯಾಸ ಹೀಗೆ ಎಲ್ಲವುದಕ್ಕೂ ಈ ವರ್ಷ ಒಳ್ಳೆಯದಿದೆ.

ಮಿಥುನ ರಾಶಿ
ಈ ವರ್ಷ ನಿಮಗೆ ಆದಿತ್ಯ-ಬುಧ ಯೋಗವಿದೆ. ಅಲ್ಲದೆ ಚಂದ್ರ ಹಾಗೂ ಶುಕ್ರ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಆಸ್ತಿ, ಹಣ ಗಳಿಸುವಿರಿ. ಇನ್ನು ವಿದೇಶಕ್ಕೆ ಹೋಗುವುದಕ್ಕೆ ಇಚ್ಚಿಸುವುದಾದರೆ ವರ್ಷದ ಎರಡನೇ ಭಾಗದಲ್ಲಿ ಪ್ರಯತ್ನಿಸಿದರೆ ಫಲ ಸಿಗುವುದು. ಒಟ್ಟಿನಲ್ಲಿ ಮಿಥುನ ರಾಶಿಯವರು ಎಲ್ಲಾ ರಂಗದಲ್ಲೂ ಯಶಸ್ಸು ಪಡೆಯಬಹುದು.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಚಂದ್ರ-ಶುಕ್ರ ಫಲ ಇದೆ, ಜೊತೆಗೆ ಆದಿತ್ಯ ಬಲ ಯೋಗ ಕೂಡ ಇರುವುದರಿಂದ ಆರ್ಥಿಕವಾಗಿ ಲಾಭ ಗಳಿಸುವಿರಿ.ನಾಲ್ಕು ಗ್ರಹಗಳೂ ಉತ್ತಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ ಅನುಭವಿಸುವಿರಿ. ಅವಾಹಿತರಿಗೆ ಒಳ್ಳೆಯ ಬಾಳ ಸಂಗಾತಿ ಸಿಗುವರು. ಒಟ್ಟಿನಲ್ಲಿ ಈ ವರ್ಷ ಸಾಕಷ್ಟು ಒಳ್ಳೆಯದಿದೆ.

ಸಿಂಹ ರಾಶಿ
ಮೀನ ರಾಶಿಯವರಿಗೈ ಆದಿತ್ಯ ಬಲ ಯೋಗವಿದೆ. ಹತ್ತನೇಯ ಮನೆಯಲ್ಲಿ ರಾಹು ಇರುವುದರಿಂದ ಎಲ್ಲಾ ಕ್ಷೇತ್ರದಲ್ಲಿ ಉನ್ನತ್ತಿಯನ್ನು ಅನುಭವಿಸುವಿರಿ. ಮೊದಲ 5 ತಿಂಗಳು ಸಾಕಷ್ಟು ಉನ್ನತ್ತಿಯನ್ನು ನೀಡುತ್ತದೆ. ಉನ್ನತ ಸ್ಥಾನ ಸಿಗುವುದು. ಸಿಂಹ ರಾಶಿಯ ರಾಜಕಾರಣಿಗಳಿಗೂ ಒಳ್ಳೆಯದಿದೆ. ಸ್ವಲ್ಪ ಅಡೆತಡೆಗಳ ನಿವಾರಣೆಗೆ ಗಣಪತಿ ಹೋಮ ಮಾಡಿಸಿದರೆ ನಿಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು.

ಮೀನ ರಾಶಿ
ಮೀನ ರಾಶಿಯವರಿಗೆ ಬೃಹಸ್ಪತಿ ಏಕಾದಶಿ ಸ್ಥಾನದಲ್ಲಿ ಇರುವುದರಿಂದ ಎಲ್ಲಾ ವಿಧದಲ್ಲೂ ಒಳಿತಾಗುವುದು.ಎಲ್ಲಾ ರಂಗದಲ್ಲೂ ಜಯ ಪಡೆಯುವಿರಿ. ಈ ವರ್ಷ ನಿಮಗೆ ಆದಾಯ ತುಂಬಾನೇ ಚೆನ್ನಾಗಿದ್ದು, ವ್ಯಯ ಕಡಿಮೆ ಇರುತ್ತದೆ.



Click it and Unblock the Notifications
