For Quick Alerts
ALLOW NOTIFICATIONS  
For Daily Alerts

ಹನುಮಾನ್ ಮಂತ್ರಗಳು: ಕಾರ್ಯ ಸಿದ್ಧಿಗೆ ಯಾರು ಯಾವ ಮಂತ್ರಗಳನ್ನು ಪಠಿಸಬೇಕು

|

ರಾಮನ ಭಕ್ತ ಹನುಮಂತನನ್ನು ನಂಬಿದರೆ ಅವನು ಎಂದಿಗೂ ಕೈ ಬಿಡಲ್ಲ ಎಂಬುವುದು ಅವನ ನಂಬಿದ ಭಕ್ತರ ಅಚಲ ನಂಬಿಕೆ. ಶ್ರೀ ಆಂಜನೇಯ ಪುತ್ರನ ಪೂಜೆಯನ್ನು ಮಂಗಳವಾರ ಹಾಗೂ ಶನಿವಾರ ಮಾಡಲಾಗುವುದು.

 Karyasiddhi Hanuman Mantra Meaning, Lyrics, Benefits and How to chant in Kannada

ಹನುಮಂತನ ಭಕ್ತಿಯಿಂದ ಪೂಜಿಸಿದರೆ ಎಂಥ ಸವಾಲುಗಳನ್ನು ಗೆಲ್ಲುವ ಶಕ್ತಿ ಅವನು ನೀಡುತ್ತಾನೆ ಎಂಬುವುದುಅವನನ್ನು ನಂಬಿದ ಭಕ್ತರ ಅಚಲ ನಂಬಿಕೆ. ಎಂಥದ್ದೇ ಕಷ್ಟ ಬಂದರೂ ಹನುಮಂತನನ್ನು ಭಕ್ತಿಯಿಂದ ನೆನೆದರೆ ಸಾಕು ನಮ್ಮ ಆ ಸಮಸ್ಯೆಗಳು ದೂರಾಗುವುದು.

ಶನಿ ಸಾಡೇಸಾತಿ ಹಾಗೂ ಶನಿ ದೋಷವಿದ್ದವರು ಹನುಮಂತನ ಮೊರೆ ಹೋದರೆ ಸಾಕಷ್ಟು ಸಮಸ್ಯೆಗಳು ಕಡಿಮೆಯಾಗುವುದು. ದಿನ ಹನುಮಾನ್‌ ಚಾಲೀಸ ಪಠಿಸಿದರೆ ತುಂಬಾ ಒಳ್ಳೆಯದು. ಇನ್ನು ನಾವು ದೇವರನ್ನು ಪ್ರಾರ್ಥಿಸುವಾಗ ನಮ್ಮದೊಂದು ಕೋರಿಕೆಯನ್ನು ದೇವರ ಮುಂದೆ ಹೇಳಿ ನೆರವೇರಿಸು ಎಂದು ಬೇಡಿಕೊಳ್ಳುತ್ತೇವೆ. ಕೆಲವರು ಒಂದು ಒಳ್ಳೆಯ ಉದ್ಯೋಗ ಕೊಡು ದೇವರೇ ಎಂದು ಬೇಡಿಕೊಳ್ಳುತ್ತಾರೆ, ಇನ್ನು ಕೆಲವರಿಗೆ ಮದುವೆ ವಿಳಂಬವಾಗುತ್ತಿರುತ್ತದೆ, ಒಳ್ಳೆಯ ಸಂಬಂಧ ಕೂಡಿ ಬರುವಂತಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ. ಇನ್ನು ವ್ಯಾಪಾರಸ್ಥರು ಈ ದಿನ ನನಗೆ ಒಳ್ಳೆಯ ವ್ಯಾಪಾರವಾಗಲಿ ಎಂದು ಪ್ರಾರ್ಥಿಸುತ್ತೇವೆ, ಹೀಗೆ ಒಬ್ಬೊಬ್ಬರಿಗೆ ದೇವರ ಬಳಿ ಕೇಳಿಕೊಳ್ಳಲು ಒಂದೊಂದು ಕೋರಿಕೆ ಇರುತ್ತದೆ.

ನೀವು ಹನುಮಂತನ ಬಳಿ ನಿಮ್ಮ ಕಾರ್ಯಸಿದ್ಧಿಗಾಗಿ ಪ್ರಾರ್ಥಿಸುವಾಗ ಕಾರ್ಯಸಿದ್ಧಿ ಮಂತ್ರಗಳನ್ನು ಪಠಿಸಿದರೆ ನೀವು ಬಯಸಿದ್ದು ನೆರವೇರುವುದು. ಯಾರು ಯಾವ ಶ್ಲೋಕಗಳನ್ನು ಪಠಿಸಿದರೆ ಒಳ್ಳೆಯದು ಎಂದು ನೋಡೋಣ:

1. ವಿದ್ಯಾ ಪ್ರಾಪ್ತಿಗೆ

ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |
ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||

ವಿದ್ಯಾರ್ಥಿಗಳು ಪ್ರತಿದಿನ ಈ ಮಂತ್ರ ಪಠಿಸಿದರೆ ಕಲಿಕೆ ಕಡೆ ಗಮನ ಹೆಚ್ಚುವುದು, ಏಕಾಗ್ರತೆ ಹೆಚ್ಚಾಗುವುದರಿಂದ ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದು.

2. ಉದೋಗ ಪ್ರಾಪ್ತಿಗೆ

ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |
ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ ||

ಉದ್ಯೋಗದಲ್ಲಿ ಪ್ರಗತಿ ಹೊಂದಲು, ಒಂದು ಒಳ್ಳೆಯ ಉದ್ಯೋಗ ಸಿಗಲು ನೀವು ಪ್ರತಿದಿನ ಈ ಮಂತ್ರ ಪಠಿಸುವುದರಿಂದ ಬೇಗನೆ ಫಲ ಸಾಗುವುದು.

3. ಕಾರ್ಯ ಸಾಧನೆಗೆ

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||

ಕಾರ್ಯಸಾಧನೆಗೆ ನೀವು ಈ ಮಂತ್ರಗಳನ್ನು ದಿನಾ ಪಠಿಸಿ, ನೀವು ಈ ಮಂತ್ರ ಪಠಿಸುವುದರಿಂದ ನೀವು ಬಯಸಿದ್ದು ನೆರವೇರಲಿದೆ.

4. ಗ್ರಹದೋಷ ನಿವಾರಣೆ

ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||

ಕೆಲವರಿಗೆ ಗ್ರಹದೋಷವಿರುತ್ತದೆ. ಕುಂಡಲಿಯಲ್ಲಿ ಗ್ರಹ ದೋಷವಿದ್ದರೆ ತುಂಬಾ ತೊಂದರೆಗಳು ಉಂಟಾಗುವುದು.

5. ಆರೋಗ್ಯಮುನಕು

ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||

ಅನಾರೋಗ್ಯ ಸಮಸ್ಯೆ ಇದ್ದರೆ ಅದರ ನಿವಾರಣೆಗೆ ದಿನಾ ಇದೇ ಈ ಮಂತ್ರ ಪಠಿಸಿ

6. ಸಂತಾನ ಪ್ರಾಪ್ತಿಗೆ

ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||

ಮಕ್ಕಳ ಅಪೇಕ್ಷಿತ ದಂಪತಿ ದಿನಾ ಈ ಮಂತ್ರ ಪಠಿಸಿದರೆ ದೈವ ಕೃಪೆಯಿಂದ ನಿಮ್ಮ ಬಯಕೆ ನೆರವೇರುವುದು

7. ವ್ಯಾಪಾರಾಭಿವೃದ್ಧಿಗೆ

ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|
ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||

ವ್ಯವಹಾರದಲ್ಲಿ ಒಳ್ಳೆಯ ಲಾಭಕ್ಕಾಗಿ ಈ ಮಂತ್ರ ಪಠಿಸಿ

8. ವಿವಾಹ ಪ್ರಾಪ್ತಿಗೆ

ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |
ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||

ವಿವಾಹ ತಡವಾಗುತ್ತಿದ್ದರೆ ಈ ಮಂತ್ರ ಪಠಿಸಿ

ಈ ಶ್ಲೋಕಗಳನ್ನು ಆಯಾ ಕಾರ್ಯಸಿದ್ಧಿಗೆ ಅನುಗುಣವಾಗಿ ಕೋರಿಗೆಗಳು ಇರುವವರು 48 ದಿನಗಳು ನಿಷ್ಟೆಯಿಂದ ಪಠಣೆ ಮಾಡಿದರೆ ನೀವು ಬಯಸಿದ್ದು ಬೇಗನೆ ನೆರವೇರುವುದು. ಸಾಧ್ಯವಾದರೆ ಪ್ರತಿದಿನ ಆಂಜನೇಯ ಗುಡಿಗೆ ಹೋಗಿ, ಮಂಗಳವಾರ ಹಾಗೂ ಶನಿವಾರ ತಪ್ಪದೆ ಭೇಟಿ ಹನುಮಂತನಿಗೆ ಕುಂಕುಮ ಅರ್ಪಿಸಿ.

English summary

Karyasiddhi Hanuman Mantra Meaning, Lyrics, Benefits and How to chant in Kannada

Karyasiddhi Hanuman Mantra: If you chant these mantra your wish fullfill soon, read on...
X
Desktop Bottom Promotion