Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಜೇಷ್ಠ ಅಮಾವಾಸ್ಯೆ 2021: ಮಹತ್ವ, ಪೂಜಾ ವಿಧಾನ ಮತ್ತು ಈ ದಿನ ಮಾಡಬಾರದ ಕೆಲಸಗಳು
ಹಿಂದೂ ಪಂಚಾಂಗದ ಪ್ರಕಾರ ಜೇಷ್ಠ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಜೇಷ್ಠ ಅಮಾವಾಸ್ಯೆ ಎನ್ನುತ್ತಾರೆ. ಜೇಷ್ಠ ಅಮಾವಾಸ್ಯೆಯಂದು ಸೂರ್ಯ ಪುತ್ರ ಶನಿ ಜನಿಸಿದ ದಿನ ಆದ್ದರಿಂದ ಇಂದು ಶನಿಜಯಂತಿಯನ್ನು ಆಚರಿಸುತ್ತೇವೆ.
ಆದರೆ ಇತರೆ ಅಮಾವಾಸ್ಯೆಗಳಿಗಿಂತ ಇದು ವಿಶೇಷ ಕಾರಣ, ಈ ಮಾಸದಲ್ಲಿ ಬರುವ ಅಮಾವಾಸ್ಯೆಯು ನಕಾರಾತ್ಮಕ ಶಕ್ತಿಗಳು ಹಾಗೂ ಅಗೋಚರ ಚೇತನಗಳ ಶಕ್ತಿ ಪ್ರಬಲವಾಗಿರುತ್ತದೆ ಎನ್ನಲಾಗುತ್ತದೆ. ಆದ್ದರಿಂದ ಇಂದು ಹಿಂದೂಗಳು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.

ಜೇಷ್ಠ ಅಮಾವಾಸ್ಯೆಯ ಸಮಯ
2021ನೇ ಸಾಲಿನಲ್ಲಿ ಜೂನ್ 10ರಂದು ಜೇಷ್ಠ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಈ ವರ್ಷದ ಮತ್ತೊಂದು ವಿಶೇಷ ಎಂದರೆ ಇದೇ ದಿನ, 148 ವರ್ಷಗಳ ಬಳಿಕ ಒಂದೇ ದಿನ ವರ್ಷದ ಮೊದಲ ಸೂರ್ಯಗ್ರಹಣ ಹಾಗೂ ಶನಿಜಯಂತಿ ಘಟಿಸುತ್ತಿದೆ. ಜತೆಗೆ ಅಂದು ವಟಸಾವಿತ್ರಿ ವ್ರತ ಮತ್ತು ರೋಹಿನಿ ವ್ರತವನ್ನು ಆಚರಿಸಲಾಗುತ್ತಿದೆ.
ಜೂನ್ 10ರಂದು ಜೇಷ್ಠ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯು ಜೂನ್ 09 ರಂದು ಮಧ್ಯಾಹ್ನ 01:57ಕ್ಕೆ ಪ್ರಾರಂಭವಾಗಲಿದ್ದು, ಜೂನ್ 10ರಂದು ಸಂಜೆ 04:22ಕ್ಕೆ ಕೊನೆಗೊಳ್ಳಲಿದೆ.

ಜೇಷ್ಠ ಅಮಾವಾಸ್ಯೆಯ ಶುಭವೋ-ಅಶುಭವೋ?
ಹಿಂದೂ ಸಂಪ್ರದಾಯದಲ್ಲಿ ಕೆಲವರ ಪ್ರಕಾರ ಜೇಷ್ಠ ಅಮಾವಾಸ್ಯೆಯನ್ನು ಶುಭವಲ್ಲದ ದಿನ ಎಂದೂ ಹೇಳಲಾಗುತ್ತದೆ. ಈ ದಿನ ದುಷ್ಟ, ಹಾನಿಕಾರಕ, ನಕಾರಾತ್ಮಕ ಶಕ್ತಿಗಳು, ದುಷ್ಟ ಕಣ್ಣುಗಳು ಮತ್ತು ಮಾಟಮಂತ್ರಗಳನ್ನು ಮುಕ್ತಗೊಳಿಸಲಾಗಿರುವುದರಿಂದ ಈ ಅಮಾವಾಸ್ಯೆಯ ದಿನವನ್ನು ದುರದೃಷ್ಟಕರ ದಿನವೆಂದು ಪರಿಗಣಿಸಲಾಗಿದೆ. ಜೇಷ್ಠ ಅಮಾವಾಸ್ಯೆಯ ದಿನದಂದು ಪ್ರಾರಂಭವಾದ ಯಾವುದೇ ಕಾರ್ಯ ಅಥವಾ ಹೊಸ ಕೆಲಸವು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಆದ್ದರಿಂದ ಹಿಂದೂಗಳು ಈ ದಿನ ಯಾವುದೇ ಶುಭ ಕಾರ್ಯವನ್ನು ಮಾಡುವುದನ್ನು ತಪ್ಪಿಸುತ್ತಾರೆ.
ಇನ್ನು ಕೆಲವರು ಈ ದಿನ ಶುಭವಾದ ದಿನ. ಇಂದು ಶನಿಜನಿಸಿದ ದಿನ ಎಂದು ಶನಿ ಆಮಾವಾಸ್ಯೆ ಎಂದು ಪೂಜಿಸುತ್ತಾರೆ. ಕಾಳ ಸರ್ಪ ದೋಷ ಪೂಜೆ ಮುಂತಾದ ಕಾರ್ಯಗಳಿಗೆ ಜೇಷ್ಠ ಅಮಾವಾಸ್ಯೆಯ ದಿನವು ಶುಭವಾಗಿದೆ. ಈ ದಿನದಂದು ಹಿರಿಯರಿಗೆ ಶ್ರಾದ್ಧಾ ಮಾಡಿದರೆ ಶ್ರೇಷ್ಠ ಎನ್ನಲಾಗುತ್ತದೆ.

ಜೇಷ್ಠ ಅಮಾವಾಸ್ಯೆ ಪೂಜಾ ವಿಧಾನ
ಅಮಾವಾಸ್ಯೆಯ ದಿನ ಬೆಳಿಗ್ಗೆ ಸ್ನಾನ ಮಾಡಿ, ಮೊದಲು ಸೂರ್ಯ ದೇವರಿಗೆ ಪೂಜೆಯನ್ನು ಅರ್ಪಿಸಿದ ನಂತರ, ಪೂರ್ವಜರನ್ನು ಸ್ಮರಿಸಿ ಪೂಜಿಸಬೇಕು. ತಾಮ್ರದ ಪಾತ್ರೆಯಲ್ಲಿ ನೀರು, ಶ್ರೀಗಂಧ ಮತ್ತು ಕೆಂಪು ಬಣ್ಣದ ಹೂವುಗಳನ್ನು ಸುರಿಯುವುದರ ಮೂಲಕ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ಪೂರ್ವಜರ ಆತ್ಮಗಳ ಶಾಂತಿಗಾಗಿ, ಉಪವಾಸ ಮಾಡಬೇಕು ಮತ್ತು ಬಡವರಿಗೆ ದಾನ ಮಾಡುವ ವಾಡಿಕೆ ಇದೆ.

ಜೇಷ್ಠ ಅಮಾವಾಸ್ಯೆಯಂದು ಏನನ್ನು ಮಾಡಬೇಕು?
ಸೂರ್ಯೋದಯಕ್ಕೂ ಮುನ್ನ ಸ್ನಾನ ನೀರಿಗೆ ಕಪ್ಪು ಎಳ್ಳು ಹಾಕಿ ಶುದ್ಧ ಸ್ನಾನ ಮಾಡಿ.
ಸೂರ್ಯ ಮತ್ತು ಅರಳೀಮರಕ್ಕೆ ಮರಕ್ಕೆ ನೀರನ್ನು ಅರ್ಪಿಸಬೇಕು.
ಬ್ರಾಹ್ಮಣರು ಅಥವಾ ಬಡವರಿಗೆ ಆಹಾರವನ್ನು ನೀಡಿ.

ಜೇಷ್ಠ ಅಮಾವಾಸ್ಯೆಯಂದು ಏನನ್ನು ಮಾಡಬಾರದು?
ಜೇಷ್ಠ ಅಮಾವಾಸ್ಯೆಯಂದು ಸೂರ್ಯೋದಯದ ನಂತರ ಮಲಗಬಾರದು.
ಈ ದಿನ ಎಣ್ಣೆ ಮಸಾಜ್ ಮಾಡಬಾರದು.
ಗಡ್ಡ, ಉಗುರುಗಳು ಮತ್ತು ಕೂದಲನ್ನು ಸಹ ಕತ್ತರಿಸಬಾರದು.
ಯಾವುದೇ ರೀತಿಯ ಮಾದಕ ದ್ರವ್ಯವನ್ನು ತೆಗೆದುಕೊಳ್ಳಬಾರದು.
ಶಾಖಾಹಾರಿ ಆಹಾರಗಳನ್ನು ತಿನ್ನಬಾರದು.
ಸುಳ್ಳು ಹೇಳಬಾರದು.
ಗಂಡ ಹೆಂಡತಿ ಪರಸ್ಪರ ದೂರವಿರಬೇಕು.
ಮಧ್ಯಾಹ್ನ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು.



Click it and Unblock the Notifications