Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ನ.24ರಿಂದ ಮೀನದಲ್ಲಿ ಮಾರ್ಗಿಯಾದ ಗುರು: ಈ 5 ರಾಶಿಯವರಿಗೆ ಅದೃಷ್ಟದ ಸಮಯವಿದು
ವೈದಿಕ ಶಾಸ್ತ್ರದಲ್ಲಿಗುರುವಿಗೆ ದೇವ ಗುರುವಿನ ಸ್ಥಾನವಿದೆ. ಗುರು ದೆಸೆ ಚೆನ್ನಾಗಿದ್ದರೆ ಎಲ್ಲವೂ ಮಂಗಳಕರವಾಗಿರುತ್ತದೆ ಎಂಬುವುದು ನಂಬಿಕೆ. ಅದಕ್ಕೆ ಗುರು ಗ್ರಹದ ಅನುಗ್ರಹವಿರಬೇಕೆಂದು ಹೇಳಲಾಗುವುದು. ಗುರುವಿನ ಕೃಪೆಯಿದ್ದರೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ನೀವು ಬಹಳಷ್ಟು ಸಂಪತ್ತು ಮತ್ತು ವೈವಾಹಿಕ ಸಂತೋಷವನ್ನು ಪಡೆಯುತ್ತೀರಿ.

ಇದುವರೆಗೆ ವಕ್ರೀಯವಾಗಿ ಚಲಿಸುತ್ತಿದ್ದ ಗುರು ಇಂದು ಅಂದ್ರೆ ನವೆಂಬರ್ 24ರಿಂದ ನೇರವಾಗಿ ಚಲಿಸಲಾರಂಭಿಸಿದೆ. ಈ ಸಂಚಾರ ಕೆಲವು ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ. ಯಾವ ರಾಶಿಗಳ ಅದೃಷ್ಟ ಬದಲಾಗಲಿದೆ ಯಾವ ರಾಶಿಯವರು ಜಾಗ್ರತೆಯಿಂದಿರಬೇಕು ನೋಡೋಣ ಬನ್ನಿ:

ವೃಷಭ ರಾಶಿ:
ನಿಮ್ಮ ವೃತ್ತಿ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದಿಂದ ಸಂತೋಷವನ್ನು ಅನುಭವಿಸುವಿರಿ. ಆದಾಯ ಹೆಚ್ಚಲಿದೆ. ಹಠಾತ್ ವಿತ್ತೀಯ ಲಾಭದ ಸಾಧ್ಯತೆಗಳಿವೆ. ಹೊಸ ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಮದುವೆಗೆ ಸಂಬಂಧದ ಹುಡುಕುತ್ತಿದ್ದರೆ ಗುರುಬಲ ಕೂಡಿ ಬರಲಿದೆ.

ಕರ್ಕ ರಾಶಿ :
ಗುರು ಮಾರ್ಗಿಯಾಗಿರುವ ಈ ಸಮಯದಲ್ಲಿ ಗುರು ನಿಮಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತಾನೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೆ ಕಂಗಾಲಾಗಿದ್ದವರು ಈ ಅವಧಿಯಲ್ಲಿ ನಿರಾಳರಾಗುತ್ತಾರೆ. ಸ್ಥಗಿತಗೊಂಡ ಹಣ ಕೈ ಸೇರಲಿದೆ. ಅದೃಷ್ಟ ಮತ್ತು ಆತ್ಮೀಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ:
ಗುರುವಿನ ನೇರ ಸಂಚಾರವು ಉದ್ಯೋಗಸ್ಥರಿಗೆ ಮತ್ತು ಉದ್ಯಮಿಗಳಿಗೆ ಭಾರಿ ಲಾಭವನ್ನು ನೀಡುತ್ತದೆ. ನಿಮ್ಮ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ, ಇದರಿಂದ ಲಾಭವಾಗುತ್ತದೆ. ನೀವು ಸ್ಥಾನ, ಹಣ, ಪ್ರತಿಷ್ಠೆ ಪಡೆಯುತ್ತೀರಿ. ಹಳೆಯ ವಿವಾದಗಳು ಬಗೆಹರಿಯಲಿವೆ.

ವೃಶ್ಚಿಕ ರಾಶಿ:
ಗುರುವಿನ ಈ ಸಂಚಾರದಲ್ಲಿ ಬದಲಾವಣೆ ಶುಭ ಫಲ ಅನುಭವಿಸುವಿರಿ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ವ್ಯಾಪಾರಕ್ಕೂ ಈ ಸಮಯ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲು ಸಂತೋಷವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಕುಂಭ ರಾಶಿ:
ದೇವಗುರು ಬೃಹಸ್ಪತಿಯ ನೇರ ಸಂಚಾರವು ಆರ್ಥಿಕವಾಗಿ ನೋಡಿದರೆ ನಿಮಗೆ ಬಹಳಷ್ಟು ಹಣವನ್ನು ಗಳಿಸುವಂತೆ ಮಾಡುತ್ತದೆ. ಏಪ್ರಿಲ್ 2023 ರ ಸಮಯವು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಿಗಳಿಗೆ ಸಾಕಷ್ಟು ಪ್ರಯೋಜನಗಳನ್ನು ತರುತ್ತದೆ. ದೊಡ್ಡ ಯಶಸ್ಸನ್ನು ಸಾಧಿಸಬಹುದು. ಬಯಸಿದ ವರ್ಗಾವಣೆ ಪಡೆಯುತ್ತೀರಿ.

ಗುರು ಮೀನ ರಾಶಿಯಲ್ಲಿರುವಾಗ ಈ ರಾಶಿಯವರು ಜಾಗರೂಕರಾಗಿರಬೇಕು
ದೇವಗುರು ಗುರುವಿನ ಈ ಸಂಚಾರವು ತುಲಾ, ಧನು ರಾಶಿ, ಮೀನ ಮತ್ತು ಮಿಥುನ ರಾಶಿಯ ಜನರ ಮೇಲೆ ಸಾಮಾನ್ಯ ಪರಿಣಾಮವನ್ನು ಬೀರುತ್ತದೆ. ಆದರೆ , ಮೇಷ, ಸಿಂಹ ಮತ್ತು ಮಕರ ರಾಶಿಯವರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಹೂಡಿಕೆಯಲ್ಲಿ ನಷ್ಟವಾಗಬಹುದು. ಬೇರೆ ರೀತಿಯಲ್ಲಿಯೂ ಹಣ ನಷ್ಟವಾಗುವ ಸಾಧ್ಯತೆಗಳಿವೆ.



Click it and Unblock the Notifications