Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
ವರ್ಷದಲ್ಲಿ 24 ಏಕಾದಶಿಗಳಿವೆ, ಪ್ರತಿಯೊಂದು ಏಕಾದಶಿಯೂ ಅದರದ್ದೇ ಆದ ಮಹತ್ವ ಹೊಂದಿದೆ. ಯಾರು ಏಕಾದಶಿ ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗುವುದು ಎಂದು ನಂಬಲಾಗಿದೆ. ಈ ದಿನ ಉಪವಾಸವಿದ್ದು ಶ್ರೀವಿಷ್ಣುವಿನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು, ನಮ್ಮ ಕಷ್ಟವೆಲ್ಲಾ ದೂರಾಗಿ ಇಷ್ಟಾರ್ಥಗಳು ನೆರವೇರುವುದು. ಫೆಬ್ರವರಿ 1ರಂದು ಜಯ ಏಕಾದಶಿ ಆಚರಿಸಲಾಗುತ್ತಿದೆ. ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಜಯ ಏಕಾದಶಿಯಂದು ಆಚರಿಸಲಾಗುವುದು.
ಜಯ ಏಕಾದಶಿಯಂದು ಉಪವಾಸ ಮಾಡುವುದರಿಂದ ಪಾಪದಿಂದ ಮುಕ್ತರಾಗುತ್ತೇವೆ. ಕಡು ಬಡತನವಿದ್ದರೆ ಈ ಏಕಾದಶಿ ವ್ರತಮಾಡಿದರೆ ದಾರಿದ್ರ್ಯ ದೂರಾಗಿ ಮನೆಯಲ್ಲಿ ಸಮೃದ್ಧಿ ಹೆಚ್ಚುವುದು. ಈ ಕಾರಣದಿಂದಲೇ ಮಾಘ ಮಾಸದ ಏಕಾದಶಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮರಣಾದನಂತರ ಮೋಕ್ಷವನ್ನುಪಡೆಯಲು ಈ ಉಪವಾಸ ಮಾಡಿದರೆ ಒಳ್ಳೆಯದು.
'ಜಯ ಏಕಾದಶಿ'ಯಂದು ಉಪವಾಸ ಮಾಡುವವನು ದಾನ ಮಾಡಬೇಕು, ಈ ಉಪವಾಸ ಮಾಡಿದರೆ ಯಾಗ ಮಾಡಿದಷ್ಟು ಪುಣ್ಯ ಸಿಗುವುದು.
ಆದ್ದರಿಂದ ಈ ಜಯ ಏಕಾದಶಿಗೆ ತುಬಾನೇ ಮಹತ್ವವಿದೆ. ಜಯ ಏಕಾದಶಿಯ ಪೂಜೆಗೆ ಶುಭ ಮುಹೂರ್ತ ಯಾವಾಗ ನೋಡೋಣ ಬನ್ನಿ:

ಜಯ ಏಕಾದಶಿ ಮುಹೂರ್ತ
ಏಕಾದಶಿ ಆರಂಭದ ಸಮಯ - ಜನವರಿ 31, 2023 (ಮಂಗಳವಾರ) ರಾತ್ರಿ 11.55 ಕ್ಕೆ
ಏಕಾದಶಿ ಮುಕ್ತಾಯ ಸಮಯ - ಫೆಬ್ರವರಿ 1, 2023 (ಬುಧವಾರ) ಮಧ್ಯಾಹ್ನ 2.01 ಕ್ಕೆ
ಸರ್ವಾರ್ಥ ಸಿದ್ಧಿ ಯೋಗ - 1 ಫೆಬ್ರವರಿ 2023 ಬೆಳಗ್ಗೆ 7.10 ರಿಂದ ಮಧ್ಯರಾತ್ರಿ 3.23 ರವರೆಗೆ
ಇಂದ್ರ ಯೋಗ - 1 ಫೆಬ್ರವರಿ 2023 ಬ್ರಹ್ಮ ಮುಹೂರ್ತದಿಂದ 11.30 ರವರೆಗೆ

ಜಯ ಏಕಾದಶಿ ಪೂಜಾ ವಿಧಿ
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವಿನ ವಿಗ್ರಹ ಸ್ವಚ್ಛ ಮಾಡಿ ದೇವರ ಪೂಜೆ ಮಾಡಬೇಕು. ಪೂಜೆ ಮಾಡುವಾಗ ‘ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸಬೇಕು. ದೇವರಿಗೆ ಹಣ್ಣು, ಹೂ, ತುಳಸಿ, ನೈವೇದ್ಯ ಅರ್ಪಿಸಿ. ಈ ದಿನ ಬಡವರಿಗೆ ಆಹಾರ ದಾನ ಮಾಡಿ, ನಿರ್ಗತಿಕರಿಗೆ ಸಹಾಯ ಮಾಡಿ, ಸಾತ್ವಿಕ ಆಹಾರವನ್ನು ಸೇವಿಸಿ. ಈ ರೀತಿ ಮಾಡುವುದರಿಂದ ತುಂಬಾನೇ ಪುಣ್ಯ ಸಿಗುತ್ತೆ.

ಜಯ ಏಕಾದಶಿ ವ್ರತ
ಇಂದ್ರನ ಸಭೆಯಲ್ಲಿ ಮಾಲ್ಯವನೆಂಬ ಗಂಧರ್ವನೂ ಪುಷ್ಪವಂತಿಯೆಂಬ ಅಪ್ಸರೆಯೂ ಹಾಡುತ್ತಿದ್ದರು. ಪರಸ್ಪರ ವಾತ್ಸಲ್ಯದಿಂದಾಗಿ ಇಬ್ಬರೂ ಆಕರ್ಷಣೆಯಿಂದ ಪ್ರಭಾವಿತರಾಗಿದ್ದರು, ಇದರಿಂದಾಗಿ ಅವರ ಮನಸ್ಸಿನಲ್ಲಿ ಗೊಂದಲವುಂಟಾಯಿತು. ಆದ್ದರಿಂದಲೇ ಅವರಿಗೆ ಶುದ್ಧ ಗೀತೆಗಳನ್ನು ಹಾಡಲಾಗಲಿಲ್ಲಇದರಿಂದ ಇಂಧ್ರ ಕೋಪಗೊಂಡು ಗಂಡ-ಹೆಂಡತಿ ಪಿಶಾಚಿಗಳಾಗುವಂತೆ ಶಾಪವನ್ನು ನೀಡುತ್ತಾನೆ. ಪಿಶಾಚಿಯ ರೂಪವನ್ನು ಪಡೆದ ಇಬ್ಬರೂ ಹಿಮಾಲಯ ಪರ್ವತಕ್ಕೆ ಹೋಗುತ್ತಾರೆ, ಅವರಿಗೆ ನಮಗೆ ಈ ಗತಿ ಬಂತಲ್ಲ ಎಂದು ತುಂಬಾ ನೋವು ಪಡುತ್ತಾರೆ. ಏಕಾದಶಿಯಂದು ಇವರು ಉಪವಾಸ ನಿಯಮಗಳನ್ನು ಪಾಲಿಸಿ, ಶ್ರೀ ವಿಷ್ಣುವನ್ನು ಪೂಜಿಸುತ್ತಾರೆ, ಆಗ ಶ್ರೀ ವಿಷ್ಣುವಿನ ಆಶೀರ್ವಾದದಿಂದ ತಮ್ಮ ನಿಜ ರೂಪ ಪಡೆದು ನಂತರ ಸ್ವರ್ಗಕ್ಕೆ ಮರಳುತ್ತಾರೆ.

ಏಕಾದಶಿಯಂದು ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು:
* ಏಕಾದಶಿಯಂದು ಉಪವಾಸ ಮಾಡಿ
* ಈ ದಿನ ಶ್ರೀವಿಷ್ಣು ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ
* ಶ್ರೀ ವಿಷ್ಣುವಿಗೆ ಹಳದಿ ಹೂ ಹಾಗೂ ಹಣ್ಣುಗಳನ್ನು ಅರ್ಪಿಸಿ
* ಈ ದಿನ ಬಡವರಿಗೆ ಆಹಾರ ನೀಡಿ
* ನಿರ್ಗತಿರಿಗೆ ನಿಮ್ಮಿಂದ ಆಗುವ ಸಹಾಯ ಮಾಡಿ
* ಈ ದಿನ ಆಲದ ಮರಕ್ಕೆ ನೀರನ್ನು ಅರ್ಪಿಸಿ. ನಂತರ ಮರಕ್ಕೆ ಪ್ರದಕ್ಷಣೆ ಬಂದು ತುಪ್ಪದ ದೀಪ ಹಚ್ಚಿ. ಏಕೆಂದರೆ ಶ್ರೀ ವಿಷ್ಣು ಆಲದ ಮರದಲ್ಲಿ ನೆಲೆಸಿರುತ್ತಾನೆ ಎಂದು ಹೇಳಲಾಗುವುದು.
* ಈ ದಿನ ಮದ್ಯ, ಮಾಂಸ ಸೇವಿಸಬಾರದು
* ಬರೀ ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ.



Click it and Unblock the Notifications
