Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಮತ್ತು ಟ್ರಾಫಿಕ್ ಸಮಸ್ಯೆಗೆ ಸೈಕ್ಲಿಂಗ್ಗಿಂತ ಉತ್ತಮ ಪರಿಹಾರವಿದೆಯೇ? -
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು!
Guru Purnima 2021: ಗುರು ಪೂರ್ಣಿಮಾ ಯಾವಾಗ? ಈ ದಿನದ ಮಹತ್ವ ಹಾಗೂ ಪೂಜಾ ವಿಧಿಗಳೇನು?
ಗುರುವಿಲ್ಲದ ಬದುಕಿಗೆ ಗೊತ್ತು ಗುರಿಯೇ ಇರಲ್ಲ, ಮುಂದೆ ಗುರಿ ಹಿಂದೆ ಗುರು ಇರುವ ವ್ಯಕ್ತಿ ಮಹಾ ಸಾಧಕನಾಗುತ್ತಾನೆ. ಯಾವುದೇ ಕ್ಷೇತ್ರವಿರಲಿ ಒಬ್ಬ ಗುರು ಇದ್ದೇ ಇರುತ್ತಾರೆ, ನಮ್ಮ ಬದುಕಿನಲ್ಲಿ ಅವರಿಗೆ ಮಹತ್ವದ ಸ್ಥಾನವಿರುತ್ತದೆ. ಆ ಗುರುವಿಗೆ ಗೌರವ ಸಮರ್ಪಿಸುವ ದಿನವೇ ಗುರು ಪೂರ್ಣಿಮಾ.
ಹಿಂದೂ ಧರ್ಮದಲ್ಲಿ , ಬೌದ್ಧ ಧರ್ಮದಲ್ಲಿ ಹಾಗೂ ಜೈನಧರ್ಮದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ವಿಶೇಷ ಪೂಜಾವಿಧಿಗಳನ್ನು ಸಲ್ಲಿಸಲಾಗುವುದು. ಗುರು ಪೂರ್ಣಿಮಾ ಎಂಬುವುದು ಗುರು ವ್ಯಾಸರಾಯರನ್ನು ಸ್ಮರಿಸುವ ದಿನವಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ವೇದ ವ್ಯಾಸರು ವೇದಗಳನ್ನು4 ಭಾಗಗಳಾಗಿ ವಿಂಗಡಿಸಿ ಋಗ್ವೇದ,ಯಜುರ್ವೇದ, ಸಾಮವೇದ ಮತ್ತು ಅಥರ್ವೇದ ಎಂದು ಹೆಸರಿಸಿ ಬೋಧಿಸಿದವರು. ವೇದ ವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುವುದು. ಪ್ರತೀವರ್ಷ ಆಷಾಢ ಮಾಸದ ಪೂರ್ಣಿಮೆಯೆಂದು ಗುರು ಪೂರ್ಣಿಮಾ ಆಚರಿಸಲಾಗುವುದು.
ಈ ವರ್ಷ ಗುರು ಪೂರ್ಣಿಮಾ ಆಚರಣೆ ಯಾವಾಗ ಬಂದಿದೆ, ಗುರು ಪೂಜೆ ಮಾಡುವ ವಿಧಿ ವಿಧಾನಗಳೇನು, ಮಹತ್ವವೇನು ಎಂದು ನೋಡೋಣ ಬನ್ನಿ:

ಗುರು ಪೂರ್ಣಿಮಾ 2021
ಜುಲೈ 24, 2021ರಂದು ಗುರು ಪೂರ್ಣಿಮಾ ಆಚರಿಸಲಾಗುವುದು
ಗುರು ಪೂರ್ಣಿಮಾ ತಿಥಿ ಪ್ರಾರಂಭ ಜುಲೈ 23 ಬೆಳಗ್ಗೆ 10:43ಕ್ಕೆ
ಗುರು ಪೂರ್ಣಿಮಾ ತಿಥಿ ಮುಕ್ತಾಯ: ಜುಲೈ 24 ಬೆಳಗ್ಗೆ 08:06ಕ್ಕೆ

ಪೂಜಾ ವಿಧಿ
* ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಗಳನ್ನು ಧರಿಸಬೇಕು.
* ಅದಾದ ಬಳಿಕ ಹಿಂದೂಗಳು ವ್ಯಾಸ ಮಹರ್ಷಿಗಳ ಫೋಟೋಗೆ ಹೂಗಳಿಂದ ಅಲಂಕರಿಸುತ್ತಾರೆ. ಬೌದ್ಧರು ಬುದ್ಧನನ್ನು ಆರಾಧಿಸಿದರೆ, ಜೈನರು ಜೈನ ಮಹರ್ಷಿಳನ್ನು ಆರಾಧಿಸುತ್ತಾರೆ.
* ಪ್ರತಿಯೊಬ್ಬನ ಬದುಕಿನಲ್ಲಿ ತಾಯಿಯೇ ಮೊದಲ ಗುರು, ಆದ್ದರಿಂದ ತಾಯಿಯ ಆಶೀರ್ವಾದ ಪಡೆಯಿರಿ. ಬದುಕಿನ ದಾರಿ ತೋರಿಸುವವರು ತಂದೆ ಅವರ ಆಶೀರ್ವಾದ ಪಡೆಯಿರಿ.
* ಅದಾದ ಬಳಿಕ ನಿಮ್ಮ ಬದುಕಿನ ಗುರುಗಳನ್ನು ಭೇಟಿಯಾಗಬೇಕು. ಅವರನ್ನು ಒಂದು ಕುರ್ಚಿಯಲ್ಲಿ ಕೂರಿಸಿ ಹೂ, ಹಣ್ಣುಗಳನ್ನು ಅರ್ಪಿಸಿ ಅವರ ಪಾದಕ್ಕೆ ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆಯಿರಿ.
* ನಿಮ್ಮ ಹಿರಿಯರು, ಹಿರಿಯ ಸಹೋದರ, ಸಹೋದರಿಯ ಆಶೀರ್ವಾದ ಕೂಡ ಪಡೆಯಿರಿ.

ಕಲಿಕೆ ಪ್ರಾರಂಭಕ್ಕೆ ಸೂಕ್ತವಾದ ದಿನ
ಗುರುಗಳಿಂದ ಮಂತ್ರಗಳನ್ನು ವಿದ್ಯೆಗಳನ್ನು ಕಲಿಯಲು ಆರಂಭಿಸಲು ಗುರು ಪೂರ್ಣಿಮಾ ಸೂಕ್ತವಾದ ದಿನವಾಗಿದೆ. ಕೆಲವು ಕಡೆ ಈ ದಿನದಂದು ಧರ್ಮೋಪದೇಶವನ್ನು ನೀಡುತ್ತಾರೆ. ಗೀತ, ನೃತ್ಯ, ಭಾರತೀಯ ಶಾಸ್ತ್ರೀಯ ಪ್ರಕಾರಗಳನ್ನು ಕಲಿಯುತ್ತಿರುವವರಲ್ಲಿ ಈ ಆಚರಣೆ ಪ್ರಾಮುಖ್ಯತೆಯನ್ನು ಪಡೆದಿದೆ.

ಗುರು ಪೂರ್ಣಿಮಾ ಇತಿಹಾಸ ಹಾಗೂ ಮಹತ್ವ
* ಬುದ್ಧನು ಜ್ಞಾನೋದಯವಾದ ಬಳಿಕ ಉತ್ತರ ಪ್ರದೇಶದ ಸಾರನಾಥದಲ್ಲಿ ತಮ್ಮ ಮೊದಲ ಧರ್ಮೋಪದೇಶ (ಧರ್ಮಚಕ್ರ ಪ್ರವರ್ತನ ಸೂತ್ರ) ಮಾಡಿದರು. ಇದು ಆಷಾಢ ಪೂರ್ಣಿಮೆಯ ದಿನವಾಗಿತ್ತು.
* ವ್ಯಾಸ ಮಹರ್ಷಿಗಳ ಜನ್ಮದಿನ ಹಾಗೂ ಶಿವನು ಆಷಾಢ ಪೂರ್ಣಿಮೆಯಮದು ಸಪ್ತ ಋಷಿಗಳಿಗೆ ತನ್ನ ಯೋಗ ಜ್ಞಾನವನ್ನು ರವಾನಿಸಿ ಜಗತ್ತಿಗೆ ಬೋಧಿಸಲು ಹೇಳಿದನು ಎಂದು ಹೇಳಲಾಗುವುದು.
* ಜೈನ ಧರ್ಮದಲ್ಲಿ 24 ನೇ ತೀರ್ಥಂಕರರಾದ ಮಹಾವೀರನನ್ನು ಗೌರವಿಸಲು ಗುರು ಪೂರ್ಣಿಮಾ ಆಚರಿಸಲಾಗುವುದು. ಇದನು ತ್ರಿನೋಕ್ ಗುಹಾ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ದಿನ ಮಹಾವೀರನು ತನ್ನ ಮೊದಲ ಅನುಯಾಯಿ ಗೌತಮ್ ಸ್ವಾಮಿಯನ್ನು ಪಡೆದನೆಂದು ಜೈನ ಧರ್ಮದ ಅನುಯಾಯಿಗಳು ನಂಬುತ್ತಾರೆ.



Click it and Unblock the Notifications