Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
Guru Asta 2022: ಗುರು ಅಸ್ತಮಿಸುವುದರಿಂದ ಈ 3 ರಾಶಿಯವರಿಗೆ ಬಾರಿ ಅದೃಷ್ಟ
ಜ್ಯೋತಿಷ್ಯ ಪ್ರಕಾರ ಗ್ರಹಗಳು ಅಸ್ತಮಿಸುವುದು ಕೂಡ ಒಂದು ಪ್ರಮುಖವಾದ ಘಟನೆಯಾಗಿದ್ದು, ಇದು ರಾಶಿಗಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಅದರಲ್ಲೂ ಗುರು ಗ್ರಹ ಅಸ್ತಮಿಸುವುದರಿಂದ ಯಾರ ರಾಶಿಯಲ್ಲಿ ಈ ಗ್ರಹ ಬಲವಾಗಿರುತ್ತದೋ ಅವರಿಗೆ ತುಂಬಾ ಒಳ್ಳೆಯದಾಗಲಿದೆ ಎಂದು ಹೇಳಲಾಗುವುದು.

ಸಂಪತ್ತಿನ ದೃಷ್ಟಿಯಿಂದಲೂ ಗುರು ಅಸ್ತ ಪ್ರಮುಖವಾಗಿದೆ. ಇದು ಧನು ಹಾಗೂ ಮೀನ ರಾಶಿಯ ಅಧಿಪತಿಯಾಗಿದೆ. ಗುರು ಗ್ರಹ ಫೆಬ್ರವರಿ 19ಕ್ಕೆ ಅಸ್ತಮಿಸುವುದು. ಯಾವ ಗ್ರಹ ಸೂರ್ಯನ ಸಮೀಪ ಬರುವುದೋ ಆಗ ಆ ಗ್ರಹ ಅಸ್ತಮಿಸುವುದು. ಗುರು ಗ್ರಹ ಮಾರ್ಚ್ 20ರವರೆಗೆ ಅಸ್ತಮಿಸಲಿದೆ, ಇದರಿಂದ ಈ 3 ರಾಶಿಗಳಿಗೆ ಆರ್ಥಿಕವಾಗಿ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ:

ತುಲಾ ರಾಶಿ:
ಫೆಬ್ರವರಿ 19ರಿಂದ-ಮಾರ್ಚ್ 20ರವರೆಗಿನ ಸಮಯ ತುಲಾ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಯಾರು ಸ್ವಂತ ವ್ಯವಹಾರ ಮಾಡುತ್ತಿದ್ದಾರೋ ಅವರಿಗೆ ಒಳ್ಳೆಯ ಲಾಭ ಸಿಗುವುದು, ಆರ್ಥಿಕ ಸ್ಥಿತಿ ಉತ್ತಮವಾಗಿರುತತದೆ, ಆದರೆ ಹಣದ ಉಳಿತಾಯ ಸ್ವಲ್ಪ ಕಷ್ಟವಾಗುವುದು, ಈ ಸಮಯ ಇತರ ಉದ್ಯೋಗದಲ್ಲಿರುವವರಿಗೆ ಒಳ್ಳೆಯದಿದೆ, ಈ ಸಮಯದಲ್ಲಿ ಹಣದ ತೊಂದರೆ ಇರಲ್ಲ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಕೆಲಸಗಳನ್ನು ಪೂರ್ತಿ ಮಾಡಲು ಸಾಧ್ಯವಾಗುವುದು, ಪ್ರಯಾಣ ಖುಷಿಯನ್ನು ತರುತ್ತದೆ. ಯಾವುದೋ ಒಂದು ಮೂಲದಿಂದ ಹಣ ದೊರೆಯಲಿದೆ. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ, ನಿಮ್ಮ ಪ್ರತಿಭೆ ಪ್ರದರ್ಶಿಸಲು ಅನೇಕ ಅವಕಾಶಗಳು ದೊರೆಯುವುದು.

ಮೀನ ರಾಶಿ
ಮೀನ ರಾಶಿಗೂ ಗುರು ಅಧಿಪತಿ. ಈ ಸಮಯದಲ್ಲಿ ತುಂಬಾ ಸಮಯದಿಂದ ಅಪೂರ್ಣವಾಗಿ ಉಳಿದುಕೊಂಡಿದ್ದ ಕೆಲಸ ಪೂರ್ಣಗೊಳ್ಳುವುದು. ಫ್ರೆಂಡ್ಸ್ ಜೊತೆ ಸೇರಿ ಹೊಸ ಕೆಲಸಕ್ಕೆ ಕೈ ಹಾಕಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ವೃತ್ತಿ ಜೀವನದಲ್ಲೂ ಒಳ್ಳೆಯ ಸಾಧನೆ ಮಾಡುವಿರಿ, ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭ ದೊರೆಯಲಿದೆ.



Click it and Unblock the Notifications
