Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ರಾಶಿಯ ಹುಡುಗರ ಕಡೆ ಹುಡುಗಿಯರಿಗೆ ಆಕರ್ಷಣೆ ಹೆಚ್ಚು..!
ಜ್ಯೋತಿಷ್ಯದ ಪ್ರಕಾರ, ಈ ರಾಶಿಯ ಹುಡುಗರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುವುದಂತೆ. ಅವರೊಳಗೆ ಒಂದು ದೊಡ್ಡ ಆಕರ್ಷಣೆಯಿದ್ದು, ಇದರಿಂದಾಗಿ ಯಾರೂ ಬೇಕಾದರೂ, ಸುಲಭವಾಗಿ ಅವರ ಕಡೆಗೆ ಸೆಳೆತ ಅನುಭವಿಸುತ್ತಾರಂತೆ. ಅವರು ತುಂಬಾ ಕಾಳಜಿಯುಳ್ಳ ಮತ್ತು ರೋಮ್ಯಾಂಟಿಕ್ ಸ್ವಭಾವವನ್ನು ಹೊಂದಿದ್ದು, ಹುಡುಗಿಯರು ತುಂಬಾ ಇಷ್ಟಪಡುತ್ತಾರೆ. ಬಹಳ ಬೇಗನೇ ಅವರತ್ತ ವಾಲುತ್ತಾರೆ. ಹಾಗಾದರೆ, ಆ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಯಾವ ರಾಶಿಯ ಹುಡುಗರ ಕಡೆಗೆ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಿಥುನ ರಾಶಿ:
ಈ ರಾಶಿಯ ಹುಡುಗರ ಸ್ವಭಾವ ತುಂಬಾ ಸ್ನೇಹಮಯವಾಗಿರುತ್ತದೆ. ಅವರು ಲವಲವಿಕೆ ಸ್ವಭಾವದವರು. ಇವರ ಇದೇ ಗುಣವೇ ಹುಡುಗಿಯರ ಗಮನವನ್ನು ಸೆಳೆಯುವುದು. ಕ್ಷಣಾರ್ಧದಲ್ಲಿ, ಯಾರನ್ನಾದರೂ ತಮ್ಮ ಕಡೆ ಸೆಳೆದುಕೊಂಡು ಬಿಡುತ್ತಾರೆ. ಅವರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿದೆ. ಅವರಿಗೆ ಪ್ರತಿಯೊಂದು ವಿಷಯದ ಜ್ಞಾನವಿದ್ದು, ತುಂಬಾ ಮಾತನಾಡುವವರು. ಕೆಲವೇ ಮಾತುಗಳಲ್ಲಿ ಹುಡುಗಿಯರ ಹೃದಯವನ್ನು ಗೆಲ್ಲುತ್ತಾರೆ.

ಸಿಂಹ ರಾಶಿ:
ಈ ರಾಶಿಯ ಹುಡುಗರು ಸಮಾಜಮುಖಿಯಾಗಿರುತ್ತಾರೆ. ಅವರು ಸಮಾಜದಲ್ಲಿ ವಿಭಿನ್ನವಾದ ಗುರುತನ್ನು ಹೊಂದಿದ್ದಾರೆ. ಇವರನ್ನು ಭೇಟಿಯಾದ ವ್ಯಕ್ತಿಯ ಮೇಲೆ ವಿಭಿನ್ನ ಅನಿಸಿಕೆಗಳನ್ನು ಹುಟ್ಟಿಕೊಳ್ಳುವಂತೆ ನಡೆದುಕೊಳ್ಳುತ್ತಾರೆ. ಅಂದರೆ, ಇವರು ಬೋರಿಂಗ್ ಎಂದು ಯಾರಿಗೂ ಅನಿಸದು, ಅಷ್ಟು ಚಟುವಟಿಕೆಯಿಂದ ಕೂಡಿರುತ್ತಾರೆ. ಅವರು ತಮ್ಮ ಮಾತುಗಳಿಂದ ಯಾರನ್ನಾದರೂ ಮೆಚ್ಚಿಸುತ್ತಾರೆ. ಅವರ ವ್ಯಕ್ತಿತ್ವವು ತುಂಬಾ ಪ್ರಬಲವಾಗಿದ್ದು, ಹುಡುಗಿಯರು ಅವನ ಶೈಲಿಯನ್ನು ಪ್ರೀತಿಸುತ್ತಾರೆ.

ತುಲಾ ರಾಶಿ:
ಈ ರಾಶಿಯ ಹುಡುಗರು ತುಂಬಾ ಆಕರ್ಷಕವಾಗಿರುತ್ತಾರೆ. ಕ್ಷಣಾರ್ಧದಲ್ಲಿ, ಯಾರನ್ನೂ ಬೇಕಾದರೂ ಸೆಳೆದುಬಿಡುತ್ತಾರೆ. ಅದಕ್ಕೆ ಅವರ ಆಕರ್ಷಕ ವ್ಯಕ್ತಿತ್ವವೇ ಕಾರಣ. ಒಬ್ಬರ ಹೃದಯವನ್ನು ಹೇಗೆ ಗೆಲ್ಲಬೇಕು ಎಂಬುದರ ಕುರಿತು ಅವರಿಗೆ ಸಾಕಷ್ಟು ಜ್ಞಾನವಿದೆ. ಅವರ ಸ್ಟೈಲ್ ಇತರರಿಗಿಂತ ಭಿನ್ನವಾಗಿದೆ. ಈ ರಾಶಿಯವರ ನೋಟದಲ್ಲಿ ಬಹಳಷ್ಟು ಪ್ರೀತಿ ಇದೆ, ಇದರಿಂದಾಗಿ ಹುಡುಗಿಯರು ತಕ್ಷಣವೇ ಅವರ ಕಡೆಗೆ ಸೆಳೆಯಲ್ಪಡುತ್ತಾರೆ.

ಮಕರ ರಾಶಿ:
ಈ ರಾಶಿಯ ಹುಡುಗರು ಲವಲವಿಕೆಯಿಂದ ಕೂಡಿರುತ್ತಾರೆ ಮತ್ತು ತುಂಬಾ ಬುದ್ಧಿವಂತರು. ಮಕರ ರಾಶಿಯವರು ಕಾಳಜಿಯುಳ್ಳ ಮತ್ತು ರೋಮ್ಯಾಂಟಿಕ್ ಸ್ವಭಾವವನ್ನು ಹೊಂದಿರುತ್ತಾರೆ. ಅವರ ಮನಸ್ಸು ತುಂಬಾ ವೇಗವಾಗಿ ಓಡುತ್ತದೆ. ಇವರ ಬುದ್ಧಿಮತ್ತೆಯನ್ನು ಕಂಡು ಹುಡುಗಿಯರು ಬೆಚ್ಚಿ ಬೀಳುತ್ತಾರೆ. ತದನಂತರ ಆ ಬುದ್ಧಿವಂತಿಕೆಗೆ ಹಾಗೂ ಅವರ ನಡವಳಿಕಗೆ ಸೋತು, ಅವರತ್ತ ಆಕರ್ಷತರಾಗುತ್ತಾರೆ.



Click it and Unblock the Notifications
