Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶ ಚತುರ್ಥಿ ಭವಿಷ್ಯ 2022: ಈ 3 ರಾಶಿಯವರ ಮೇಲೆ ಗಣೇಶನ ವಿಶೇಷ ಅನುಗ್ರಹವಿರುವುದರಿಂದ ಅದೃಷ್ಟವೋ ಅದೃಷ್ಟ
ಹಿಂದೂ ಧರ್ಮದಲ್ಲಿ ಯಾವುದೇ ದೇವರನ್ನು ಪೂಜಿಸುವ ಮುನ್ನ ಶ್ರೀ ಗಣೇಶನನ್ನು ಪೂಜಿಸಲೇಬೇಕೆಂಬ ನಿಯಮವಿದೆ. ಶ್ರೀ ಯಾವುದೇ ಶುಭ ಕಾರ್ಯವಿರಲಿ ಗಣಪತಿ ಪೂಜೆ ಮಾಡಿದರೆ ಮಾತ್ರ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಸಾಧ್ಯ ಎಂಬುವುದು ನಂಬಿಕೆ. ಶ್ರೀ ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಅವನು ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲಿಲ್ಲ. ಅವರ ಬದುಕಿನಲ್ಲಿರುವ ವಿಘ್ನಗಳನ್ನು ನಿವಾರಿಸಿ ಅವರ ಬದುಕಿನಲ್ಲಿ ಸಂತೋಷ ತುಂಬುತ್ತಾನೆ.

ಭಾರತದಲ್ಲಿ ಗಣೇಶನ ಹಬ್ಬವನ್ನು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಈ ವರ್ಷ ಆಗಸ್ಟ್ 31 ರಂದು ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಶ್ರೀ ವಿನಾಯಕನು ತನ್ನ ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಭೂ ಲೋಕಕ್ಕೆ ಬರುತ್ತಾನೆ, ಆಗ ತನ್ನ ಭಕ್ತರು ತನಗಾಗಿ ಅರ್ಪಿಸಿರುವ ಮೋದಕ, ಕರ್ಜಿಕಾಯಿ, ಲಡ್ಡು ಇವುಗಳನ್ನು ಸ್ವೀಕರಿಸಿ ಅವರನ್ನು ಹರಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.
ಗಣಪತಿಯು ತುಂಬಾ ಬುದ್ಧಿವಂತ ದೇವರು. ಗಣೇಶ ಕಷ್ಟಗಳನ್ನು ನೀಗುವುದು ಮಾತ್ರವಲ್ಲ ಬುದ್ಧಿವಂತಿಕೆ, ಜ್ಞಾನ, ಸಮೃದ್ಧಿಯನ್ನು ನೀಡುತ್ತಾನೆ. ವೈದಿಕ ಶಾಸ್ತ್ರದಲ್ಲಿ ಈ ವರ್ಷ ಕೆಲ ರಾಶಿಗಳ ಮೇಲೆ ಗಣೇಶನ ವಿಶೇಷ ಕೃಪೆ ಇರುವುದರಿಂದ ಆ ರಾಶಿಯವರು ಈ ವರ್ಷ ತುಂಬಾ ಅದೃಷ್ಟವಂತರು. ಅವರು ಆಸೆಗಳು ನೆರವೇರುವುದು, ಕಷ್ಟಗಳು ದೂರಾಗಿ ಸಮೃದ್ಧಿ ಹೆಚ್ಚುವುದು. ಗಣೇಶನ ವಿಶೇಷ ಅನುಗ್ರಹವಿರುವ ಆ ಮೂರು ರಾಶಿಗಳಾವುವು ಎಂದು ನೋಡೋಣ:

ಮೇಷ ರಾಶಿ:
ಮೇಷ ರಾಶಿಯವರಿಗೆ ಗಣೇಶನ ವಿಶೇಷ ಅನುಗ್ರಹವಿದೆ. ಈ ವರ್ಷ ಚುರುಕು ಬುದ್ಧಿಯಿಂದ ತಮ್ಮ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ, ಜೀವನದಲ್ಲಿ ಎದುರಾಗಿರುವ ಸವಾಲುಗಳನ್ನು ಸುಲಭವಾಗಿ ಬಗೆ ಹರಿಸಲು ಸಾಧ್ಯವಾಗುವುದು. ಗಣೇಶನ ವಿಶೇಷ ಅನುಗ್ರಹವಾಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ವಿಘ್ನವಿರಲ್ಲ, ನೀವು ಸಮೃದ್ಧಿಯನ್ನು ಕಾಣುವಿರಿ.

ಮಿಥುನ ರಾಶಿ:
ಮಿಥುನ ರಾಶಿಯವರ ಅಧಪತಿ ಬುಧ. ಬುಧ ದೇವನನ್ನು ಬುದ್ಧಿಶಕ್ತಿ, ಮಾತು ಮತ್ತು ಜ್ಞಾನದ ಅಂಶವೆಂದು ಪರಿಗಣಿಸಲಾಗಿದೆ. ಅಲ್ಲದೆ ವಿಘ್ನ ನಿವಾರಕನ ವಿಶೇಷ ಅನುಗ್ರಹವೂ ಇದೆ. ಆದ್ದರಿಂದಲೇ ಮಿಥುನ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯಾಗುತ್ತದೆ. ಉದ್ಯೋಗಿಗಳು ಬಡ್ತಿ ಪಡೆಯುವಿರಿ, ವ್ಯಾಪಾರಿಗಳು ಒಳ್ಳೆಯ ಲಾಭ ಪಡೆಯುವಿರಿ.

ಮಕರ ರಾಶಿ:
ಮಕರ ರಾಶಿಯ ಅಧಿಪತಿ ಶನಿ, ಆದ್ದರಿಂದ ಶ್ರೀ ಗಣೇಶ ಮಕರ ರಾಶಿಯವರ ಮೇಲೆ ವಿಶೇಷ ಅನುಗ್ರಹ ತೋರಿಸುತ್ತಾನೆ. ಮಕರ ರಾಶಿಯವರಿಗೆ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗಲು ಇದೇ ಕಾರಣ. ಅವರು ಯಾವುದೇ ಕಷ್ಟಕರವಾದ ಸವಾಲನ್ನು ಸುಲಭವಾಗಿ ನಿವಾರಿಸುತ್ತಾರೆ. ಇವರಿಗೆ ಅದೃಷ್ಟ ಬೇಗನೆ ಒಲಿಯುತ್ತದೆ, ಇವರು ಸ್ವಲ್ಪ ಶ್ರಮ ಪಟ್ಟರೂ ಹೆಚ್ಚಿನ ಅದೃಷ್ಟವನ್ನು ಪಡೆಯುವ ರಾಶಿಯವರಾಗಿದ್ದಾರೆ.
ಶನಿದೇವ ಹಾಗೂ ಗಣೇಶನ ಅನುಗ್ರಹದಿಂದ ನಿಮ್ಮ ಕಾರ್ಯದಲ್ಲಿ ಒಳ್ಳೆಯ ಫಲ ಕಾಣುವಿರಿ.

ದಿನಾ ಈ ಮಂತ್ರ ಪಠಿಸಿ
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications