Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾ.13ಕ್ಕೆ ಶನಿ ಅಮವಾಸ್ಯೆ: ಶನಿ ದೋಷ ನಿವಾರಣೆಗೆ ಈ ದಿನ ಸೇವಿಸಬಾರದ ಆಹಾರಗಳು
ಶನಿಯ ಕೃಪೆಯಿದ್ದರೆ ಯಾವ ತೊಂದರೆ ಇರಲ್ಲ, ಆದರೆ ಶನಿಯ ವಕ್ರ ದೃಷ್ಟಿ ಬಿದ್ದರೆ ಆ ಮನುಷ್ಯನಿಗೆ ಕಷ್ಟಕಾಲ ತಪ್ಪಿದ್ದಲ್ಲ.
ಅದರಲ್ಲೂ ಸಾಡೇಸಾತಿ ಶನಿದೋಷ ಇದ್ದರಂತೂ ಅದು ಮುಗಿಯುವವರೆಗೂ ಕಷ್ಟಗಳು ಹಿಂಬಾಲಿಸುತ್ತಲೇ ಇರುತ್ತದೆ. ಶನಿದೋಷವಿದ್ದರೆ ಅಥವಾ ಜೀವನದಲ್ಲಿ ಅನೇಕ ಕಷ್ಟಗಳಿದ್ದರೆ ಶನಿವಾರ ಶನಿಯನ್ನು ಪೂಜಿಸುವುದರಿಂದ ಅವನ ಕೃಪೆಗೆ ಪಾತ್ರರಾಗಬಹುದು. ಇದರಿಂದ ಕಷ್ಟಗಳು ದೂರವಾಗುವುದು.

ಶನಿ ದೋಷವಿದ್ದರೆ ಅದರಿಂದ ಮುಕ್ತರಾಗಲು ಶನಿವಾರ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸಿ ಪೂಜೆ ಸಲ್ಲಿಸಬೇಕು. ಅದರಲ್ಲೂ ಮಾರ್ಚ್ 13ಕ್ಕೆ ಶನಿ ಅಮವಾಸ್ಯೆ ಇದೆ. ಈ ದಿನ ಕೆಲವೊಂದು ಆಹಾರಗಳನ್ನು ಆ ದಿನ ಸೇವಿಸದಿರುವುದು ಒಳ್ಳೆಯದು, ಬನ್ನಿ ಆ ಆಹಾರಗಳಾವುವು ಎಂದು ನೋಡೋಣ:

ಹಾಲು ಅಥವಾ ಮೊಸರು
ಈ ದಿನ ಹಾಲು ಅಥವಾ ಮೊಸರು ಸೇವಿಸದಿರುವುದು ಒಳ್ಳೆಯದಿರುವುದು ಒಳ್ಳೆಯದು, ಆದರೆ ನಿಮಗೆ ಸೇವಿಸದೇ ಇರಲು ಸಾಧ್ಯವೇ ಇಲ್ಲ ಎಂದಾದರೆ ಹಾಲಿಗೆ ಹಳದಿ, ಮೊಸರಿಗೆ ಬೆಲ್ಲ ಹಾಕಿ ಸೇವಿಸಿ.

ಉಪ್ಪಿನಕಾಯಿ
ಶನಿವಾರ ಉಪ್ಪಿನಕಾಯಿ ಹಾಗೂ ಇತರ ಹುಳಿ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.

ಕೆಂಪು ಮೆಣಸು
ಮತ್ತೊಂದು ನಂಬಿಕೆಯೆಂದರೆ ಶನಿ ಅಮವಾಸ್ಯೆ ದಿನ ಕೆಂಪು ಮೆಣಸು ಹಾಕಿ ಆಹಾರ ಪದಾರ್ಥಗಳನ್ನು ತಯಾರಿಸಬಾರದು. ಇದರಿಂದ ಬದುಕಿನಲ್ಲಿ ಒಳಿತಾಗುವುದು.

ಮಸೂರ್ ದಾಲ್
ಶನಿ ಅಮವಾಸ್ಯೆ ದಿನ ಮಸೂರ್ ದಾಲ್ ತಿನ್ನಬೇಡಿ. ಇದನ್ನು ತಿನ್ನುವುದರಿಂದ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಆದ್ದರಿಂದ ಈ ದಿನ ಮಸೂರ್ ದಾಲ್ ತಿನ್ನಬಾರದು.

ಮದ್ಯ ಹಾಗೂ ಮಾಂಸಾಹಾರ
ಶನಿದೋಷ ಇರುವವರು ಶನಿ ಅಮವಾಸ್ಯೆ ದಿನ ಯಾವುದೇ ಮದ್ಯ ಹಾಗೂ ಮಾಂಸಾಹಾರ ಸೇವನೆ ಮಾಡಬಾರದು. ಈ ಆಹಾರಗಳ ಸೇವನೆಯಿಂದ ಜೀವನದಲ್ಲಿ ಕಷ್ಟಗಳು ಅಧಿಕವಾಗುವುದು.
ಆದ್ದರಿಂದ ಯಾರಿಗೆಲ್ಲಾ ಶನಿ ದೋಷ ಇದೆಯೋ ಅವರು ಈ ಆಹಾರಗಳಿಂದ ದೂರವಿದ್ದರೆ ಕಷ್ಟಗಳು ಕಡಿಮೆಯಾಗುವುದು.



Click it and Unblock the Notifications
