Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ನವೆಂಬರ್ 2020: ಈ ತಿಂಗಳ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
ಅಕ್ಟೋಬರ್ ಮುಗೀತಾ ಬಂದಿದೆ, ಇನ್ನೇನು ನವೆಂಬರ್ ಶುರುವಾಗಲಿದೆ. ನವೆಂಬರ್‌ನಲ್ಲಿ ಬರುವ ವಿಶೇಷ ದಿನಗಳು ಹಾಗೂ ಪಂಚಾಂಗದ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಬರುವ ಹಬ್ಬ-ಹರಿದಿನಗಳು, ವ್ರತ, ಏಕಾದಶಿ ಇವುಗಳ ಕುರಿತು ಹೆಚ್ಚಿನ ಮಾಹಿತಿ ಲೇಖನದಲ್ಲಿದೆ ನೋಡಿ.

ನವೆಂಬರ್ 1
ನವೆಂಬರ್ 1 ಎಂದ ಮೇಲೆ ಹೇಳಬೇಕೇ, ಆ ದಿನ ನಮ್ಮ ಕನ್ನಡದ ಹಬ್ಬವಲ್ಲವೇ? ಕನ್ನಡಿಗರು ನಾವೆಂದು ಹೆಮ್ಮೆಯಿಂದ ಹೇಳುತ್ತಾ ಹಬ್ಬವನ್ನು ಆಚರಿಸುವ ಸಡಗರ. ಐಶ್ವರ್ಯ, ಸಂಸ್ಕೃತಿ, ಕಲೆಯ ಬೀಡಾಗಿರುವ ಕರ್ನಾಟಕದಲ್ಲಿ ಆಡುವ ಭಾಷೆ ಕನ್ನಡ. ನಾವು ಕನ್ನಡಿಗರು ಎಂದು ಹೆಮ್ಮೆ ಪಡೋಣ,
ಕನ್ನಡದ ಕಂಪು ಸೂಸಲು ಅಲ್ಲಲ್ಲಿ... ... ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೊರೇವು... ಎಂಬ ಕವಿವಾಣಿಯಂತೆ ಬಾಳೋಣ.

ಪಂಚಾಂಗದ ಪ್ರಕಾರ ಬರುವ ಹಬ್ಬ ವ್ರತಗಳು
ನವೆಂಬರ್ 4, ಬುಧವಾರ: ಸಂಕಷ್ಟಿ
ನವೆಂಬರ್ 11, ಬುಧವಾರ: ರಾಮ ಏಕಾದಶಿ
ನವೆಂಬರ್ 13, ಶುಕ್ರವಾರ: ಮಾಸಿಕ್ ಶಿವರಾತ್ರಿ, ಧಾಂತೆರಸ್, ಪ್ರದೋಷ್ ವ್ರತ
ನವೆಂಬರ್ 14, ಶನಿವಾರ: ದೀಪಾವಳಿ, ನರಕ ಚತುರ್ದಶಿ
ನವೆಂಬರ್ 15, ಭಾನುವಾರ: ಗೋವರ್ಧನ್ ಪೂಜೆ
ನವೆಂಬರ್ 16, ಸೋಮವಾರ: ವೃಶ್ಚಿಕ ಸಂಕ್ರಾಂತಿ
ನವೆಂಬರ್ 20, ಶುಕ್ರವಾರ: ಚ್ಚಾತ್ ಪೂಜೆ
ನವೆಂಬರ್ 25, ಶುಕ್ರವಾರ: ಪ್ರದೋಷ ವ್ರತ
ನವೆಂಬರ್ 26, ಶನಿವಾರ: ತುಳಸಿ ವಿವಾಹ
ನವೆಂಬರ್ 30, ಸೋಮವಾರ: ಕಾರ್ತಿಕ ಪೂರ್ಣಿಮಾ ವ್ರತ, ಗುರು ನಾಯಕ್ ಜಯಂತಿ

ದೀಪಾವಳಿ
ನವೆಂಬರ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಡಗರ.
ದೀಪಾವಳಿಯ ಹಬ್ಬದ ಸಂಭ್ರಮ ಶುರುವಾಗುವುದು ನೀರು ತುಂಬುವ ಹಬ್ಬದೊಂದಿಗೆ, ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆಯನ್ನು ಶುಚಿಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಿ ಬೆಂಕಿ ಹಚ್ಚಿ ನೀರು ಕುದಿಸುತ್ತಾರೆ. ಮರುದಿನ ಮನೆಯವರು ಮೈಗೆ ಎಣ್ಣೆ ಹಚ್ಚಿ ಅಭ್ಯಂಜನ ಸ್ನಾನ ಮಾಡುತ್ತರೆ. ಮರುದಿನ ಅಮಾವಾಸ್ಯೆ ಆ ದಿನ ಲಕ್ಷ್ಮೀಪೂಜೆ ಮಾಡಲಾಗುವುದು, ಅದಾದ ಬಳಿಕ ಬಲಿಪಾಡ್ಯಮಿ. ಈ ದಿನ ಬಲೀಂದ್ರನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಕೆಲವೆಡೆ ರಾತ್ರಿ ಬಲೀಂದ್ರನನ್ನು ದೀಪವಿಟ್ಟು ಕೂಗಿ ಕರೆಯುವ ಪದ್ಧತಿ ಕೂಡ ಇದೆ.

ಕಾರ್ತಿಕ ಪೂರ್ಣಿಮಾ ವ್ರತ, ಗುರು ನಾಯಕ್ ಜಯಂತಿ
ಕಾರ್ತಿಕ ಪೂರ್ಣಿಮಾ (ಕಾರ್ತಿಕ ಪೂರ್ಣಿಮೆ ) ಎನ್ನುವುದು ಹುಣ್ಣಿಮೆಯ ದಿನ ಅಥವಾ ಕಾರ್ತಿಕ ಮಾಸದ 15 ನೇ ದಿನದಂದು (ನವೆಂಬರ್14-ಡಿಸೆಂಬರ್14ರವರೆಗೆ ಕಾರ್ತಿಕ ಮಾಸ) ಆಚರಿಸುವ ಹಿಂದೂಗಳ ಪವಿತ್ರ ದಿನವಾಗಿದೆ. ಇದನ್ನು ತ್ರಿಪುರಿ ಹುಣ್ಣಿಮೆ ಮತ್ತು ತ್ರಿಪುರರಿ ಹುಣ್ಣಿಮೆ ಎಂದು ಕೂಡಾ ಕರೆಯಲಾಗುತ್ತದೆ ಇದನ್ನು ಕೆಲವೊಮ್ಮೆ ದೇವ-ದಿವಾಲಿ ಅಥವಾ ದೇವ-ದೀಪಾವಳಿ -ದೇವರ ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಕಾರ್ತಿಕ ಹುಣ್ಣಿಮೆ ಹಬ್ಬವು ಸಿಖ್ಖರ ಹಬ್ಬವಾದ ಗುರುನಾನಕ್ ಜಯಂತಿಯೊಂದಿಗೆ ಏಕಕಾಲಕ್ಕೆ ನಡೆಯುತ್ತದೆ.



Click it and Unblock the Notifications
