Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ದೃಷ್ಟಿದೋಷ: ಕಣ್‌ದೃಷ್ಟಿ ತೆಗೆಯುವುದು ಹೇಗೆ?
ದೃಷ್ಟಿದೋಷ ಅಥವಾ ಕಣ್‌ದೃಷ್ಟಿ ಇದೆಯಲ್ಲಾ ಅದು ತುಂಬಾನೇ ಅಪಾಯಕಾರಿ. ನಮ್ಮ ಬೆಳವಣಿಗೆಯನ್ನು ನೊಡಿ ಯಾರಾದರೂ ಹೊಟ್ಟೆಕಿಚ್ಚು ಪಟ್ಟರೆ ಅದರ ಪರಿಣಾಮ ನಮ್ಮ ಮೇಲೆ ಬೀರುವುದು.

ನಮ್ಮ ದೇಹವು 7 ಚಕ್ರವನ್ನು ಅವಲಂಬಿಸಿರುತ್ತದೆ, ಅದು ದೇಹದ ಮಧ್ಯಭಾಗದಲ್ಲಿ ಇರುವುದು. ಈ ಚಕ್ರ ನಮ್ಮ ದೈಹಿಕ, ಮಾನಸಿಕ, ಭಾವನಾತ್ಮ ಹಾಗೂ ದೈವಿಕ ಭಾವನೆಗಳ ಮೇಲೆ ಪರಿಣಾಮ ಬೀರುವುದು. ಯಾವಾಗ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದೋ ಆಗ ಈ ಚಕ್ರದ ಚಟುವಟಿಕೆ ನಿಧಾನವಾಗುವುದು, ಇದರಿಂದ ದೈಹಿಕ ಹಾಗೂ ಮಾನಸಿಕ ತೊಂದರೆ ಉಂಟಾಗುವುದು.
ಕಣ್‌ದೃಷ್ಟಿ ಬೀಳಬಾರದೆಂದು ಈ ರೀತಿಯೆಲ್ಲಾ ಮಾಡುವ ವಾಡಿಕೆ ಇದೆ:

ದೃಷ್ಟಿ ತೆಗೆಯುವ ಕಪ್ಪು ಬೊಟ್ಟು
ಮಕ್ಕಳ ಮೇಲೆ ಜನರ ಕೆಟ್ಟ ದೃಷ್ಟಿ ಬೀಳಬಾರದೆಂದು ಕಪ್ಪು ಬೊಟ್ಟು ಹಾಕಿ ಕೊಡುತ್ತಾರೆ. ಇನ್ನು ಕೆಲವರು ಚೆನ್ನಾಗಿ ಡ್ರೆಸ್ಸಿಂಗ್ ಮಾಡಿದಾಗ ದೃಷ್ಟಿ ಬೀಳಬಾರದೆಂದು ಗಲ್ಲಕ್ಕೆ ಕಪ್ಪು ಚುಕ್ಕಿ ಇಡಲಾಗುವುದು. ಮದು-ಮಗಳನ್ನು ಅಲಂಕಾರ ಮಾಡಿದ ಮೇಲೆ ದೃಷ್ಟಿ ಬೊಟ್ಟು ಇಡಲಾಗುವುದು.

ಗಾಡಿಯ ದೃಷ್ಟಿ ತೆಗೆಯುವುದು
ಇನ್ನು ಹೊಸ ಗಾಡಿ ಖರೀದಿಸಿದಾಗ ಅದಕ್ಕೆ ಯಾರ ಕೆಟ್ಟ ದೃಷ್ಟಿ ಬೀಳಬಾರದೆಂದು ಪೂಜೆ ಮಾಡಿಸಿ ನಿಂಬೆಹಣ್ಣು, ಹಸಿ ಮೆಣಸನ್ನು ದಾರದಲ್ಲಿ ಪೋಣಿಸಿ ಕಟ್ಟಲಾಗುವುದು. ಇನ್ನು ಕೆಲವರು ಕಪ್ಪು ದಾರ ಕಟ್ಟುತ್ತಾರೆ.

ಹೊಸ ಮನೆ ಕಟ್ಟುವಾಗ
ಹೊಸ ಮನೆ ಕಟ್ಟುತ್ತಿರುವಾಗ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಬೆದರು ಗೊಂಬೆ ಅಥವಾ ಬಯ ಪಡಿಸುವ ಮುಖದ ಮುಖವಾಡವನ್ನು ಇಡಲಾಗುವುದು. ಗೃಹ ಪ್ರವೇಶ ಮಾಡುವಾಗ ಮನೆಗೆ ಯಾವ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಕುಂಬಳಕಾಯಿ ನೇತುಹಾಕಲಾಗುವುದು. ಇನ್ನು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆ ಮುಂದೆ ನೇತು ಹಾಕಲಾಗುವುದು, ಇವೆಲ್ಲಾ ಮನೆಗೆ ಎಟ್ಟ ದೃಷ್ಟಿ ಬೀಳುವುದನ್ನು ತಡೆಗಟ್ಟುತ್ತದೆ.

ಯಾವ ರೀತಿಯೆಲ್ಲಾ ದೃಷ್ಟಿ ತೆಗೆಯಲಾಗುವುದು?
* ಮನೆಯಲ್ಲಿ ಅಜ್ಜಿಅಥವಾ ಅಮ್ಮ ಒಣ ಮೆಣಸು, ಸಾಸಿವೆ, ಸ್ವಲ್ಪ ಉಪ್ಪು, ಸ್ವಲ್ಪ ಪೊರಕೆ ತುಂಡು ತೆಗೆದು ಎಡಗೈಯಲ್ಲಿ ಹಿಡಿದು 3 ಅಥವಾ 7 ಬಾರಿ ಸುತ್ತಿಒಲೆಗೆ ಹಾಕಲಾಗುವುದು ಅಥವಾ ಮೂರು ದಾರಿ ಸೇರುವಲ್ಲಿ ತೆಗೆದುಕೊಂಡು ಹಾಕಲಾಗುವುದು.
* ನಿಂಬೆ ಹಣ್ಣು ಅಥವಾ ತೆಂಗಿನಕಾಯಿ ಅಥವಾ ಕುಂಬಳಕಾಯಿಗೆ ಕುಂಕುಮ ಹಾಕಿ ಸುತ್ತಿ ಒಡೆಯಲಾಗುವುದು.
* ಮದುವೆಯಾಗಿ ಮನೆಗೆ ಬರುವಾಗ ಅಥವಾ ಮಗುವನ್ನು ಮನೆ ತುಂಬಿ ಕೊಳ್ಳುವಾಗ ತಟ್ಟೆಯಲ್ಲಿ ಅರಿಶಿಣ ನೀರು ಮಾಡಿ, ದೀಪ ಹಚ್ಚಿ ಆರತಿ ಎತ್ತಿ ಕೆಟ್ಟ ದೃಷ್ಟಿ ತೆಗೆಯಲಾಗುವುದು.
* ವೀಳ್ಯೆದೆಲೆಯಲ್ಲಿ ಕರ್ಪೂರ ಹಚ್ಚಿ ಪ್ರದಕ್ಷಿಣೆ -ಅಪ್ರದಕ್ಷಿಣೆ ಸುತ್ತಿ ಕೆಟ್ಟ ದರಷ್ಟಿ ತೆಗೆಯಲಾಗುವುದು.
* ಕರ್ಪೂರವನ್ನು ವ್ಯಕ್ತಿಯ ತಲೆಗೆ ಮೂರು ಸುತ್ತ ಸುತ್ತಿ ನಂತರ ಅದನ್ನು ಹೊರಗಡೆ ತಂದು ಹಚ್ಚಲಾಗುವುದು.

ಮನೆಯಲ್ಲಿ ಕಣ್‌ದೃಷ್ಟಿ ಉಂಟಾಗುವುದನ್ನು ತಡೆಯುವುದು ಹೇಗೆ?
* ಕಣ್‌ದೃಷ್ಟಿ ಗಣಪತಿ ಅಥವಾ ನರಸಿಂಹ ಮೂರ್ತಿಯನ್ನು ಮನೆಯ ಮುಂದುಗಡೆ ನೇತು ಹಾಕಿ.
* ಮನೆಯ ಹಾಲ್‌ನಲ್ಲಿ ಒಂದು ಲೋಟ ತುಂಬಾ ನೀರು, ಒಂದು ಲೋಟ ತುಂಬಾ ಕಲ್ಲುಪ್ಪು ತುಂಬಿ ಇಡಿ, ಇದು ಕೂಡ ಕಣ್‌ದೃಷ್ಟಿ ಹೋಗಲಾಡಿಸುವುದು.

ಆಹಾರ ತಿನ್ನುವಾಗ ಕಣ್‌ದೃಷ್ಟಿ ತಡೆಗಟ್ಟಲು ಏನು ಮಾಡಬೇಕು?
* ಆಹಾರ ತಿನ್ನುವ ಮುನ್ನ ಸ್ವಲ್ಪ ಊಟ ತೆಗೆದು ತಲೆಗೆ ಮೂರು ಸುತ್ತು ಸುತ್ತಿ ಬಿಸಾಡಬೇಕು. ಅದನ್ನು ನಾಯಿ, ಬೆಕ್ಕು, ಕಾಗೆ ಇವುಗಳಿಗೆ ಹಾಕಿ.
* ಆಹಾರ ಬೇಯಿಸುವಾಗ ಕಬ್ಬಿಣವನ್ನು ಕಾಯಿಸಿ ಆಹಾರದಲ್ಲಿ ಒಮ್ಮೆ ಇಡಲಾಗುವುದು.



Click it and Unblock the Notifications
