Latest Updates
-
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ!
ಧನುರ್ಮಾಸದಲ್ಲಿ ಈ ಪರಿಹಾರ ಮಾಡಿದರೆ ಅದೃಷ್ಟ ಲಭಿಸುವುದು
ವೈದಿಕ ಶಾಸ್ತ್ರದ ಪ್ರಕಾರ ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದನ್ನು ಸೂರ್ಯನ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯಲಾಗುವುದು. 16 ಡಿಸೆಂಬರ್ 2022ಕ್ಕೆ ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿರುವುದರಿಂದ ಧನು ಸಂಕ್ರಾಂತಿ ಉಂಟಾಗಿದೆ.

ಈ ಧನು ಸಂಕ್ರಾಂತಿಯು ಡಿಸೆಂಬರ್ 16ರಿಂದ ಜನವರಿ 14 ರವರೆಗೆ ಇರುತ್ತದೆ. 2023 ಜನವರಿ 14ಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಆಚರಿಸಲಾಗುವುದು. ಸೂರ್ಯನು ಧನು ರಾಶಿಯಲ್ಲಿರುವಾಗ ಈ ತಿಂಗಳನ್ನು ಶೂನ್ಯ ಮಾಸವೆಂದು ಹೇಳಲಾಗುವುದು.
ಧನು ಸಂಕ್ರಾಂತಿಯ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶ, ನಾಮಕರಣ ಮಾಡುವುದಿಲ್ಲ, ಆದರೆ ಪೂಜ್ಯ ಕಾರ್ಯಗಳಿಗೆ ತುಂಬಾನ ಶ್ರೇಷ್ಠವಾಗಿದೆ. ಇನ್ನು ಸೂರ್ಯನು ಧನು ರಾಶಿಯಲ್ಲಿ ಇರುವಾಗ ಕೆಲವೊಂದು ಪರಿಹಾರಗಳನ್ನು ಮಾಡುವುದರಿಂದ ತುಂಬಾ ಉತ್ತಮವಾದ ಪ್ರಯೋಜ ಪಡೆಯುತ್ತೀರಿ.
ಧನುರ್ಮಾಸದಲ್ಲಿ ಏನು ಮಾಡಬೇಕು?
* ಧನುರ್ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಮತ್ತು ದಾನ ಮಾಡಬೇಕು. ಈ ತಿಂಗಳಿನಲ್ಲಿ ಬಡವರಿಗೆ ಅನ್ನದಾನ, ಅನ್ನದಾನ, ವಸ್ತ್ರದಾನ ಮಾಡುವುದರಿಂದ ಪುಣ್ಯ ಲಭಿಸುವುದು ಎಂದು ಹೇಳಲಾಗುವುದು.
* ಧನುರ್ಮಾಸದಲ್ಲಿ ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ಶಿವನಿಗೆ ಅಭಿಷೇಕ ಮಾಡಿ. ಮಹಾಮೃತ್ಯುಜಯ ಮಂತ್ರವನ್ನೂ ಪಠಿಸಿ. ಈ ರೀತಿ ಮಾಡುವುದರಿಂದ ಅಹಿತಕರ ಘಟನೆಗಳನ್ನು ತಡೆಯಬಹುದು, ನಮ್ಮ ಕಾರ್ಯದಲ್ಲಿ ಇರುವ ವಿಘ್ನಗಳನ್ನು ದೂರ ಮಾಡಬಹುದು.
* ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸಿದರೆ ಒಳ್ಳೆಯದು.ತಾಯಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ. ನೀವು ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯುತ್ತೀರಿ.
* ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸಿ.
ಧನು ಸಂಕ್ರಾಂತಿ ಮಹತ್ವ
ಸೂರ್ಯನು ಧನು ರಾಶಿಗೆ ಪ್ರವೇಶಿಸಿದ ದಿನದಿಂದ ನಮ್ಮ ಕರ್ಮಗಳು ಪ್ರಾರಂಭವಾಗುತ್ತವೆ ಎಂದು ಹೇಳಲಾಗುವುದು. ಅದಕ್ಕಾಗಿಯೇ ಎಲ್ಲಾ ಶುಭ ಕಾರ್ಯಕ್ರಮಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗುವುದು, ಈ ಅವಧಿಯಲ್ಲಿ ದೇವರ ಕಾರ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗುವುದು.
ಸೂರ್ಯನನ್ನು ಆರಾಧಿಸಿ
ಧಾರ್ಮಿಕ ಗ್ರಂಥಗಳ ಪ್ರಕಾರ, ಧನು ಸಂಕ್ರಾಂತಿಯಂದು ಭಗವಾನ್ ಸೂರ್ಯನನ್ನು ಪೂಜಿಸಲು ವಿಶೇಷ ಪ್ರಾಮುಖ್ಯತೆ ಇದೆ. ಸೂರ್ಯ ದೇವರನ್ನು ಪೂಜಿಸುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಈ ದಿನ ಸೂರ್ಯ ದೇವರೊಂದಿಗೆ ಭಗವಾನ್ ವಿಷ್ಣು, ಜಗನ್ನಾಥ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದು.
ಭಗವಾನ್ ಸೂರ್ಯ ಮತ್ತು ಶ್ರೀ ಕೃಷ್ಣನನ್ನು ಪ್ರತಿ ದಿನ ಪೂಜಿಸಿ.
ಸೂರ್ಯನನ್ನು ಆರಾಧಿಸುವುದರಿಂದ ಸಿಗುವ ಫಲ
ಧನು ಸಂಕ್ರಾಂತಿ ಅವಧಿಯನ್ನು ಸಮೃದ್ಧಿಗೆ ಮಂಗಳಕರವೆಂದು ಪರಿಗಣಿಸದಿದ್ದರೂ, ಈ ಅವಧಿಯಲ್ಲಿ ಸೂರ್ಯ ದೇವರು ಮತ್ತು ವಿಷ್ಣುವನ್ನು ಪೂಜಿಸುವ ಜೊತೆಗೆ ದಾನ ಮಾಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವೈದಿಕ ಶಾಸ್ತ್ರಗಳ ಪ್ರಕಾರ, ಧನು ಸಂಕ್ರಾಂತಿಯ ಅವಧಿಯಲ್ಲಿ ಭಗವಂತ ಸೂರ್ಯ ಮತ್ತು ಭಗವಂತ ವಿಷ್ಣುವನ್ನು ಪೂಜಿಸಿದರೆ ಒಳ್ಳೆಯದು. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ಅವಧಿಯಲ್ಲಿ ಸತ್ಯನಾರಾಯಣ ಕಥೆಯನ್ನು ಕೇಳುವುದು, ಓದುವುದು ಒಳ್ಳೆಯದು. ಶಿವ ಚಾಲೀಸವನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ.



Click it and Unblock the Notifications
