Latest Updates
-
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ
ಶುಕ್ರವಾರದ ದಿನ ಭವಿಷ್ಯ: ಮೇಷ ರಾಶಿಯವರೇ ನಿಮಗಿಂದು ಸಂತೋಷದ ದಿನ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ಬೆಳಗ್ಗೆ 06:45ರ ವರೆಗೆ ಆರ್ದ್ರ, ನಂತರ ಪುನರ್ವಸು
ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ 10:43ರಿಂದ 12:05ರವರೆಗೆ
ಗುಳಿಕಕಾಲ: ಬೆಳಗ್ಗೆ 07:59ರಿಂದ 09:21ರವರೆಗೆ
ಯಮಗಂಡಕಾಲ: ಮಧ್ಯಾಹ್ನ 02:48ರಿಂದ 04:10ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:48ರಿಂದ 09:32ರವರೆಗೆ
ಮಧ್ಯಾಹ್ನ 12:26ರಿಂದ 01:10ರವರೆಗೆ
ಸೂರ್ಯೋದಯ: ಬೆಳಗ್ಗೆ 06:37ಕ್ಕೆ
ಸೂರ್ಯಾಸ್ತ: ಸಂಜೆ 05:32ಕ್ಕೆ

ಮೇಷ ರಾಶಿ:
ನಿಮಗೆ ಇಂದು ಸಂತೋಷದ ದಿನ. ನಿಮ್ಮ ಪೂರ್ಣ ಸಾಮರ್ಥ್ಯ ಮತ್ತು ಸಕಾರಾತ್ಮಕತೆಯಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಇಂದು ಒತ್ತಡ ಕಡಿಮೆ. ಮಾನಸಿಕವಾಗಿ ಸದೃಢರಾಗಿರುತ್ತೀರಿ. ದೀರ್ಘಕಾಲದ ನಂತರ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನೀವು ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಸಂತೋಷ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಹಣದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ನೀವು ಜಾಗರೂಕರಾಗಿರಬೇಕು. ವೆಚ್ಚಗಳ ಹೆಚ್ಚಳದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿಯುವ ಸಾಧ್ಯತೆಯಿದೆ. ಈ ಹಬ್ಬದ ಸಮಯದಲ್ಲಿ ಯೋಚನೆ ಮಾಡಿ ಹಣವನ್ನು ವ್ಯಯಿಸಿ. ಸಾಲ ಮಾಡುವುದು ಒಳ್ಳೆಯದಲ್ಲ. ಆರೋಗ್ಯ ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 41
ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12:55

ವೃಷಭ ರಾಶಿ:
ಪೂಜಾ ಪಾಠದೊಂದಿಗೆ ಇಂದಿನ ದಿನವನ್ನು ಆರಂಭಿಸಿ. ನಿಮಗೆ ಉತ್ತಮ ಫಲ ಸಿಗುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಿ ಅಥವಾ ಬಡವರಿಗೆ ದಾನ ಮಾಡಿ. ನಿಮ್ಮ ಮೇಲೆ ದೇವರ ಆರ್ಶೀರ್ವಾದವಿದೆ. ನೀವು ಯಾವುದೇ ಚಿಂತೆಯಲ್ಲಿದ್ದರೆ ಇಂದು ಅದು ದೂರವಾಗುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಇಂದು ಉದ್ಯೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಬಹುದು. ಮತ್ತೊಂದೆಡೆ, ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸವು ಆಸ್ತಿಗೆ ಸಂಬಂಧಪಟ್ಟಿದ್ದರೆ ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ದೀರ್ಘಕಾಲದ ಕಾಯಿಲೆ ಉಂಟಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನೀವು ಕುಟುಂಬದೊಂದಿಗೆ ಆರಾಮವಾಗಿರುವಿರಿ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 10
ಶುಭ ಸಮಯ: ಸಂಜೆ 4 ರಿಂದ 9:15 ರವರೆಗೆ

ಮಿಥುನ ರಾಶಿ:
ಅದೃಷ್ಟ ಇಂದು ನಿಮಗೆ ಸಾಥ್ ನೀಡಲಿದೆ. ಉತ್ತಮ ಶ್ರಮ ಉತ್ತಮ ಪಲಿತಾಂಶಕ್ಕೆ ನಾಂದಿ. ನೀವು ದೀರ್ಘಕಾಲದಿಂದ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ನೀವು ಇಂದು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನೀವು ವೈದ್ಯಕೀಯ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದ್ದರೆ, ಇಂದು ನಿಮಗೆ ಬಹಳ ಮುಖ್ಯ ದಿನ. ಮತ್ತೊಂದೆಡೆ, ವ್ಯಾಪಾರಸ್ಥರು ದೊಡ್ಡ ಸರಕು ಆರ್ಡರ್ ನ್ನು ಪಡೆಯಬಹುದು. ಶೀಘ್ರದಲ್ಲೇ ದೊಡ್ಡ ಬೆಳವಣಿಗೆಯನ್ನು ಕಾಣುತ್ತೀರಿ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಮನೆಯ ವಾತಾವರಣ ಇಂದು ಸ್ವಲ್ಪ ಪ್ರಕ್ಷುಬ್ಧವಾಗಿರುತ್ತದೆ. ನಿಮ್ಮ ತಂದೆಯೊಂದಿಗೆ ಸಂಘರ್ಷ ಉಟಾಗಬಹುದು. ಅವರ ಯಾವುದೇ ನಿರ್ಧಾರಗಳನ್ನು ನಿಮಗೆ ಒಪ್ಪಲು ಸಾಧ್ಯವಾಗದಿದ್ದರೆ, ತಾಳ್ಮೆಯಿಂದ ನಿಮ್ಮ ಮಾತುಗಳನ್ನು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿ. ಆರೋಗ್ಯದಲ್ಲಿ ಮಿಶ್ರಫಲ. ಕೆಲಸದ ಜೊತೆಗೆ ವಿರಾಮದ ಕಡೆಗೂ ಗಮನ ಹರಿಸಿ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 1: 45 ರಿಂದ ಸಂಜೆ 7ರವರೆಗೆ

ಕರ್ಕಾಟಕ ರಾಶಿ:
ಮಾತಿನಲ್ಲಿ ಸಂಯಮ ಇರಲಿ. ನಿಮ್ಮ ತಪ್ಪು ಮಾತುಗಳು ನಿಮಗೇ ಹಾನಿಯನ್ನುಂಟುಮಾಡುತ್ತವೆ. ನೀವು ಸಹೋದ್ಯೋಗಿಗಳೊಂದಿಗೆ ಕೆಟ್ಟ ಮಾತುಗಳನ್ನು ಆಡಬೇಡಿ. ಇಲ್ಲದಿದ್ದರೆ ನಿಮ್ಮ ಬಗ್ಗೆ ಹಿಂದಿನಿಂದ ಆಡಿಕೊಳ್ಳುತ್ತಾರೆ. ಇಂದು ದೀರ್ಘಕಾಲದ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಆದರೂ ಇಂದು ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವಿದಿಲ್ಲ. ನಿಮ್ಮ ಜೀವನ ಸಂಗಾತಿಯೊಂದಿಗೆ ಮಾಧುರ್ಯ ಇರುತ್ತದೆ. ಪರಸ್ಪರ ಅರಿತುಕೊಂಡರೆ ಪ್ರೀತಿಯೂ ಹೆಚ್ಚಾಗುತ್ತದೆ. ಮಕ್ಕಳನ್ನು ಸಂತೋಷವಾಗಿಡಲು ಪ್ರಯತ್ನಿಸಿ. ನೀವು ಅವರಿಗೆ ಮಾರ್ಗದರ್ಶನ ನೀಡಬೇಕು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನಿಮಗೆ ಮಧುಮೇಹ ಇದ್ದರೆ, ಇಂದು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 19
ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3:30 ರವರೆಗೆ

ಸಿಂಹ ರಾಶಿ:
ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಉತ್ತಮ ದಿನ. ಕೆಲಸದಲ್ಲಿ ಚಿಕ್ಕ ಕೆಲಸ ದೊಡ್ಡ ಕೆಲಸ ಎಂದು ನೋಡದೇ ಎಲ್ಲವನ್ನೂ ಮಾಡಿ. ಮೇಲಧಿಕಾರಿಗಳು ನಿಮ್ಮ ಕಾರ್ಯಗಳನ್ನು ಪರಿಶೀಲಿಸಬಹುದು. ನೀವು ವ್ಯಾಪಾರ ಮಾಡುವವರಾಗಿದ್ದರೆ ಇಂದು ದೀರ್ಘ ಪ್ರಯಾಣ ಮಾಡುವ ಸಾಧ್ಯತೆ ಇದೆ. ಪ್ರಯಾಣದಿಂದ ಸಾಕಷ್ಟು ದಣಿವಾದರೂ ಕೂಡ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಿರಿ. ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ಪೋಷಕರ ಆಶೀರ್ವಾದ ನಿಮ್ಮಮೇಲಿದೆ. ಸಹೋದರ ಅಥವಾ ಸಹೋದರಿಯೊಂದಿಗಿನ ಮನಸ್ತಾಪ ಇಂದು ಕಡಿಮೆ ಆಗಬಹುದು. ನಿಮ್ಮ ಸರಿಯಾದ ನಡವಳಿಕೆ ಹಾಗೂ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಬಹಳ ಮುಖ್ಯ ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಗಂಟಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು.
ಉತ್ತಮ ಬಣ್ಣ: ಕಡು ಹಸಿರು
ಶುಭ ಸಂಖ್ಯೆ: 4
ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3: 45 ರವರೆಗೆ

ಕನ್ಯಾರಾಶಿ:
ಆರೋಗ್ಯದಲ್ಲಿ ಸ್ವಲ್ಪ ಕುಸಿತ ಕಾಣಿಸಿಕೊಳ್ಳಬಹುದು. ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಇದರಿಂದ ಅಡ್ಡಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿರ್ಲಕ್ಷ್ಯವಹಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ, ಇಂದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ವರ್ಗಾವಣೆಯ ಬಗ್ಗೆ ನೀವು ಕಚೇರಿಯಲ್ಲಿ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, ಇಂದು ವ್ಯಾಪಾರಿಗಳಿಗೆ ಸಾಮಾನ್ಯ ದಿನ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪೋಷಕರ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ನೀವು ಇಂದು ಅವರೊಂದಿಗೆ ಒಂದು ಪ್ರಮುಖ ಚರ್ಚೆಯನ್ನು ಸಹ ಮಾಡಬಹುದು.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 20
ಶುಭ ಸಮಯ: ಬೆಳಗ್ಗೆ 7:35 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ:
ಬಹಳ ಪ್ರಯತ್ನಪಟ್ಟ ನಂತರವೂ ನೀವು ಅಂದುಕೊಂಡ ಕೆಲಸ ಮಾಡಲು ಸಾಧ್ಯವಾಗದಿದ್ದರೆ ನಿರಾಶೆಗೊಳ್ಳುವ ಬದಲು, ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿಸಿ. ಈ ಸಮಯದಲ್ಲಿ ನೀವು ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ. ಕಚೇರಿಯಲ್ಲಿ, ನೀವು ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಪ್ರಮುಖ ಕಾರ್ಯಗಳನ್ನು ನೀವಿಂದು ಮಾಡಬೇಕಾಗುತ್ತದೆ. ಅದನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಿ. ನಿರ್ಲಕ್ಷ್ಯ ಮಾಡದೇ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ. ವ್ಯವಹಾರದಲ್ಲಿ, ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ ನೀವು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನೀವು ಮನೆಯ ಸದಸ್ಯರಿಂದ ಬೆಂಬಲ ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ ಮತ್ತು ಅವರೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶವೂ ನಿಮಗೆ ಸಿಗುತ್ತದೆ. ಆರೋಗ್ಯವಾಗಿರಲು, ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 29
ಶುಭ ಸಮಯ: ಮಧ್ಯಾಹ್ನ 2 ರಿಂದ 8:45 ರವರೆಗೆ

ವೃಶ್ಚಿಕ ರಾಶಿ:
ನೀವು ವ್ಯಾಪಾರ ಮಾಡುವವರಾಗಿದ್ದರೆ, ಇಂದು ನೀವು ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ಕೈಗೆ ಸಿಕ್ಕ ದೊಡ್ಡ ಆರ್ಡರ್ ಕೈತಪ್ಪಿ ಹೋಗಬಹುದು. ಇಂತಹ ಏರಿಳಿತಗಳು ವ್ಯವಹಾರದಲ್ಲಿ ಬರುತ್ತಲೇ ಇರುತ್ತವೆ. ಸಮಯ ಬಂದಾಗ ನೀವು ಖಂಡಿತವಾಗಿಯೂ ಸರಿಯಾದ ಅವಕಾಶವನ್ನು ಮತ್ತು ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಸಂಗಾತಿಯ ಕಟುವಾದ ಮಾತುಗಳು ನಿಮ್ಮ ನಡುವೆ ಕಹಿ ಹೆಚ್ಚಿಸಬಹುದು. ಅವರು ನಿಮ್ಮ ಮುಂದೆ ದೊಡ್ಡ ಬೇಡಿಕೆಯನ್ನು ಇಡಬಹುದು, ಅದನ್ನು ಪೂರೈಸಲು ಇದೀಗ ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ತಿಳುವಳಿಕೆಯನ್ನು ಹೇಳಿ. ದಿನದ ದ್ವಿತಿಯಾರ್ಧದಲ್ಲಿ ಕೆಲವು ಅತಿಥಿಗಳು ಇದ್ದಕ್ಕಿದ್ದಂತೆ ಮನೆಗೆ ಬರಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ನಿಮಗೆ ಆಯಾಸ, ತಲೆನೋವು ಮತ್ತು ನಿದ್ರಾಹೀನತೆಯ ಸಮಸ್ಯೆಗಳಿರಬಹುದು. ಹೆಚ್ಚುವರಿ ಒತ್ತಡ ಮತ್ತು ಕೋಪವನ್ನು ತಪ್ಪಿಸಿ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 36
ಶುಭ ಸಮಯ: ಮಧ್ಯಾಹ್ನ 1 ರಿಂದ 7 ರವರೆಗೆ

ಧನು ರಾಶಿ:
ಇಂದು ಉದ್ಯೋಗಿಗಳಿಗೆ ಬಹಳ ಶುಭ ದಿನ. ಬಹಳ ಸಮಯದಿಂದ ನಿಂತಿದ್ದ ಕೆಲಸ ಇಂದು ಯಶಸ್ವಿಯಾಗುತ್ತದೆ. ನೀವು ಭಡ್ತಿಯನ್ನೂ ಪಡೆಯುವ ಸಾಧ್ಯತೆ ಇದೆ. ನಿಮ್ಮ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಕೆಲಸವು ಫ್ಯಾಷನ್‌ಗೆ ಸಂಬಂಧಪಟ್ಟಿದ್ದರೆ ನೀವು ಅಪಾರ ಲಾಭ ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಸಿಗುವ ಲಕ್ಷಣಗಳಿವೆ. ಆಮದು-ರಫ್ತಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಆರ್ಥಿಕವಾಗಿ ಲಾಭ ಪಡೆಯಬಹುದು. ಕುಟುಂಬ ಜೀವನದಲ್ಲಿ ಶಾಂತಿ. ಮನೆಯ ಕಿರಿಯ ಸದಸ್ಯರೊಂದಿಗೆ, ನೀವು ಸಾಕಷ್ಟು ಸಂತೋಷದಿಂದ ದಿನ ಕಳೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಪಾರದರ್ಶಕವಾಗಿರಿ. ಯಾವುದೇ ಸಂದರ್ಭದಲ್ಲೂ ಸುಳ್ಳನ್ನು ಹೇಳಬೇಡಿ. ಹಣದ ಹರಿವು ಉತ್ತಮ ಸ್ಥಿತಿಯಲ್ಲಿರುತ್ತದೆ. ಇಂದು ಯಾವುದೇ ಆರ್ಥಿಕ ಸಮಸ್ಯೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ,, ಇಂದು ನೀವು ತುಂಬಾ ಆರೋಗ್ಯಕರ ಮತ್ತು ಸಂತೋಷವಾಗಿರುತ್ತೀರಿ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 4:05 ರಿಂದ ಮಧ್ಯಾಹ್ನ 12 ರವರೆಗೆ

ಮಕರ ರಾಶಿ:
ಇಂದು ನಿಮಗೆ ಮಿಶ್ರ ದಿನ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಅವರಿಗೆ ಸರಿಯಾದ ಕಾಳಜಿ ಮತ್ತು ಬೆಂಬಲ ನೀಡಬೇಕು ಎಂಬುದನ್ನು ನೆನಪಿನಲ್ಲಿಡಿ. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ನಿಮಗೆ ಉತ್ತಮ ಅವಕಾಶ ಅರಸಿಬರಬಹುದು. ಇದನ್ನು ಬಳಸಿಕೊಂಡು ಲಾಭ ಪಡೆದುಕೊಳ್ಳಿ. ನಿಮ್ಮ ವ್ಯವಹಾರವು ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದ್ದರೆ ನೀವು ನಿರೀಕ್ಷಿಸಿದಂತೆ ಲಾಭ ಗಳಿಸಬಹುದು. ಸ್ನೇಹಿತರ ಮಾತುಗಳೆಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಇಂದು ಸಣ್ಣ ವಿಷಯಗಳು ದೊಡ್ಡ ಅಸಮಾಧಾನವನ್ನು ಉಂಟುಮಾಡಬಹುದು. ಹಣದ ವಿಷಯದಲ್ಲಿ ದಿನ ಸಾಮಾನ್ಯವಾಗಿರುತ್ತದೆ. ಯೋಚಿಸಿ ಖರ್ಚು ಮಾಡಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ವಾತಾವರಣದ ಬದಲಾವಣೆಯಿಂದಾಗಿ, ನಿಮ್ಮ ಆರೋಗ್ಯವು ಕ್ಷೀಣಿಸಬಹುದು.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 12
ಶುಭ ಸಮಯ: ಬೆಳಗ್ಗೆ 8:35 ರಿಂದ ಮಧ್ಯಾಹ್ನ 2 ರವರೆಗೆ

ಕುಂಭ ರಾಶಿ:
ಇಂದು ಅಷ್ಟು ವಿಶೇಷವಾದ ದಿನ ಅಲ್ಲ. ದಿನವು ಸಾಮಾನ್ಯವಾಗಿರುತ್ತದೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರಬಹುದು. ನೀವು ಈ ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳಿ. ಯಾವುದೇ ವಿವಾದಕ್ಕೆ ಕಾರಣವಾಗುವಂತಹ ಯಾವುದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಇದರಿಂದ ತೊಂದರೆ ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಒತ್ತಡದ ಪರಿಸ್ಥಿತಿ. ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನೀವು ಪ್ರೀತಿ ಮತ್ತು ಶಾಂತಿಯಿಂದ ವರ್ತಿಸದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆರ್ಥಿಕವಾಗಿ ದಿನ ಚೆನ್ನಾಗಿರುತ್ತದೆ. ಇಂದು ನೀವು ಕೆಲವು ತುರ್ತು ಶಾಪಿಂಗ್ ಮಾಡಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಯಾವುದೇ ರೀತಿಯ ಸೋಂಕಿಗೆ ಒಳಗಾಗಬಹುದು. ಹಾಗಾಗಿ ನಿಮ್ಮ ಬಗ್ಗೆ ಕಾಳಜಿ ವಹಿಸಿ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 20
ಶುಭ ಸಮಯ: ಸಂಜೆ 5:15 ರಿಂದ 10:10 ರವರೆಗೆ

ಮೀನ ರಾಶಿ:
ಇಂದು ನೀವು ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನೀವು ಮನೆಯ ಸದಸ್ಯರೊಂದಿಗೆ ಮನಸ್ತಾಪ ಹೊಂದಿದ್ದರೆ, ಅದೆಲ್ಲವನ್ನೂ ನಿವಾರಿಸಲು ಇಂದು ಪ್ರಯತ್ನಿಸಿ. ಹಣದ ಬಗ್ಗೆ ಮಾತನಾಡುತ್ತಾ, ನೀವು ಯಾರಿಗಾದರೂ ಸಾಲ ನೀಡಿದ್ದರೆ, ಇಂದು ಅದನ್ನು ಹಿಂತಿರುಗಿ ಪಡೆಯಬಹುದು. ನಿಮ್ಮ ಪ್ರೀತಿಪಾತ್ರರಿಗೆ ನೀವು ಕೆಲವು ಉಡುಗೊರೆಗಳನ್ನು ಸಹ ಖರೀದಿಸಬಹುದು. ನೌಕರಿ ಮಾಡುವವರು ತಮ್ಮ ಬಾಸ್‌ನೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಬೇಕು. ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ ಫೋನ್ ಅಥವಾ ಇಂಟರ್ನೆಟ್ ಮೂಲಕ ನಿಮ್ಮ ಬಾಸ್‌ನೊಂದಿಗೆ ಸಂಪರ್ಕದಲ್ಲಿರಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 6
ಶುಭ ಸಮಯ: ಮಧ್ಯಾಹ್ನ 3 ರಿಂದ 8:30 ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005



Click it and Unblock the Notifications











