Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಧನು ಸಂಕ್ರಾಂತಿ 2022: ಸೂರ್ಯನ ಸಂಚಾರ ಈ 4 ರಾಶಿಯವರಿಗೆ ಅದೃಷ್ಟ ತರಲಿದೆ
ಹಿಂದೂ ಆಚರಣೆಯಲ್ಲಿ ಧನು ಸಂಕ್ರಾತಿಗೆ ವಿಶೇಷ ಮಹತ್ವವಿದೆ. 2022ರಲ್ಲಿ ಪೌಷ ಮಾಸದ ಡಿಸೆಂಬರ್ 16ರಂದು ಸೂರ್ಯ ದೇವರು ಧನು ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಸಂಕ್ರಮಣವು 12 ರಾಶಿಚಕ್ರದ ಮೇಲೂ ಪ್ರಭಾವ ಬೀರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಧನು ಸಂಕ್ರಾಂತಿಯ ಪ್ರಭಾವದಿಂದ ಕೆಲವು ರಾಶಿಗಳಿಗೆ ಅಶುಭವಾದರೆ ಇನ್ನು ಕೆಲವು ರಾಶಿಚಕ್ರದವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಧನು ಸಂಕ್ರಾಂತಿಯ ಪರಿಣಾಮ ಜ್ಯೋತಿಶಾಸ್ತ್ರದ ಪ್ರಕಾರ ಸಿಂಹ, ಧನು, ಕುಂಭ, ಮೀನ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ರಾಶಿಯವರ ಜೀವನದಲ್ಲಿ ಸಕಾರಾತ್ಮಕವಾಗಿ ಬರುವ ಸೂಚನೆಗಳೇನು ಮುಂದೆ ನೋಡೋಣ:

ಧನು ಸಂಕ್ರಾಂತಿಯ ಮುಹೂರ್ತ
ಧನು ಸಂಕ್ರಾಂತಿಯ ಆರಂಭವಾಗುವ ಮುಹೂರ್ತ: 2022 ಡಿಸೆಂಬರ್ 16 ಬೆಳಗ್ಗೆ 10:02ಕ್ಕೆ
ಸೂರ್ಯೋದಯ: 2022 ಡಿಸೆಂಬರ್ 16 ಬೆಳಗ್ಗೆ 7:05ಕ್ಕೆ
ಸೂರ್ಯಾಸ್ತ: 2022 ಡಿಸೆಂಬರ್ 16 ಸಂಜೆ 5:39ಕ್ಕೆ
ಪುಣ್ಯ ಕಾಲ ಮುಹೂರ್ತ: 2022 ಡಿಸೆಂಬರ್ 16, ಬೆಳಗ್ಗೆ 10:02 ರಿಂದ ಡಿಸೆಂಬರ್ 16 ಸಂಜೆ 5:39 ರವರೆಗೆ
ಮಹಾ ಪುಣ್ಯ ಕಾಲ ಮುಹೂರ್ತ: ಡಿಸೆಂಬರ್ 16, ಬೆಳಗ್ಗೆ 10:02 ರಿಂದ ಡಿಸೆಂಬರ್ 16 ಬೆಳಗ್ಗೆ 10:26 ರವರೆಗೆ

ಸಿಂಹ ರಾಶಿ
ಸೂರ್ಯ ದೇವರು ಧನು ರಾಶಿಯಲ್ಲಿ ಸಂಕ್ರಮಿಸಿದಾಗ, ಅದು ಸಿಂಹ ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ವಿದ್ಯಾರ್ಥಿಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಅವರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ ಸಿಂಹ ರಾಶಿಯ ಜನರು ಈ ಅವಧಿಯಲ್ಲಿ ಆರ್ಥಿಕ ಲಾಭವನ್ನೂ ಪಡೆಯಬಹುದು.

ಧನು ರಾಶಿ
ಸೂರ್ಯ ದೇವನು ಈ ಅವಧಿಯಲ್ಲಿ ಧನು ರಾಶಿಯಲ್ಲಿಯೇ ಸಾಗುವುದರಿಂದ ಈ ರಾಶಿಯ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಈ ಸಮಯದಲ್ಲಿ ಧನು ರಾಶಿಯವರ ಎಲ್ಲಾ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು. ಇದರಿಂದ ಸಮಾಜದಲ್ಲಿ ಗೌರವ ಸಹ ಲಭಿಸುತ್ತದೆ.

ಕುಂಭ ರಾಶಿ
ಧನು ಸಂಕ್ರಾಂತಿಯ ಪ್ರಭಾವವು ಕುಂಭ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ತರುತ್ತವೆ. ಈ ಅವಧಿಯಲ್ಲಿ ಅವರು ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಈ ಸಮಯದಲ್ಲಿ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಮೀನ ರಾಶಿ
ಧನು ಸಂಕ್ರಾಂತಿಯ ಪರಿಣಾಮದಿಂದ ಮೀನ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಅವರು ತಮ್ಮ ಕೆಲಸದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ ಮತ್ತು ಈ ಅವಧಿಯಲ್ಲಿ ಉದ್ಯೋಗಿಗಳು ಬಡ್ತಿ ಪಡೆಯಬಹುದು. ಉದ್ಯೋಗ ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಯಶಸ್ಸನ್ನು ಪಡೆಯಬಹುದು.



Click it and Unblock the Notifications
