For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ (07-11-2019)

|

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ.

ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಮೇಷ ರಾಶಿ: 21 ಮಾರ್ಚ್ - 19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ - 19 ಏಪ್ರಿಲ್

ಇಂದು ನಿಮಗೆ ತೊಂದರೆಗಳನ್ನು ಉಂಟುಮಾಡದಂತೆ ನಿಮ್ಮ ಪದಗಳನ್ನು ಚಿಂತನಶೀಲವಾಗಿ ಬಳಸಿ. ಹಣಕಾಸಿನ ಪರಿಸ್ಥಿತಿ ಇಂದು ಉತ್ತಮವಾಗಿರುವುದಿಲ್ಲ ಮತ್ತು ಖರ್ಚಿನಲ್ಲಿ ಹಠಾತ್ ಹೆಚ್ಚಳದಿಂದ ನಿಮ್ಮ ಬಜೆಟ್ ನಲ್ಲಿ ಅಸಮತೋಲನ ಉಂಟಾಗಬಹುದು. ಕೌಟುಂಬಿಕ ಜೀವನ ಸಾಮಾನ್ಯವಾಗಿರಲಿದೆ. ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಕಚೇರಿಯಲ್ಲಿ ಜಾಗರೂಕರಾಗಿರಿ. ಸಹೋದ್ಯೋಗಿಗಳನ್ನು ಟೀಕಿಸುವುದನ್ನು ತಪ್ಪಿಸಿ, ಇಲ್ಲವಾದಲ್ಲಿ ನೀವು ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ತೀಕ್ಷ್ಣ ವಸ್ತುಗಳನ್ನು ಬಳಸುವಾಗ ಜಾಗರೂಕರಾಗಿರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 7:00 ರವರೆಗೆ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ಇಂದು ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಪ್ರೀತಿಪಾತ್ರರಿಗೆ ನೀಡಿದ ಕೆಲವು ಭರವಸೆಗಳನ್ನು ನೀವು ಈಡೇರಿಸದ ಕಾರಣ ಅವರ ಮನಸ್ಥಿತಿ ಸರಿಯಾಗುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವುದರಿಂದ ಪ್ರೀತಿಯ ವಿಷಯದಲ್ಲಿ ಬಹಳ ವಿಶೇಷವಾದ ದಿನವಾಗಿರಲಿದೆ. ನೀವು ಅವರಿಂದ ಉಡುಗೊರೆಯನ್ನು ಸಹ ನಿರೀಕ್ಷಿಸಬಹುದು. ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ನೀವು ವಾಗ್ವಾದಕ್ಕೆ ಇಳಿಯಬಹುದು. ಅಂತಹ ಸಂದರ್ಭಗಳನ್ನು ತಪ್ಪಿಸಲು ಚುರುಕಾದ ರೀತಿಯಲ್ಲಿ ವರ್ತಿಸಿ. ಮಗುವಿನಿಂದ ಕೆಲವು ಸಮಸ್ಯೆಗಳು ಬರುವ ಸಾಧ್ಯತೆ ಇದೆ, ಆದ್ದರಿಂದ ತುರ್ತು ಇಲ್ಲದ ಯಾವುದೇ ಇತರ ಕೆಲಸಗಳನ್ನು ಹಚ್ಚಿಕೊಳ್ಳಬೇಡಿ. ಹಣದ ವಿಷಯದಲ್ಲಿ ಸಾಲ ನೀಡುವುದು ಮತ್ತು ಪಡೆಯುವುದನ್ನು ತಪ್ಪಿಸಿ. ಸಮಯ ಹೂಡಿಕೆಗೆ ಅನುಕೂಲಕರವಾಗಿಲ್ಲ.

ಅದೃಷ್ಟ ಬಣ್ಣ: ಗಾಢ ಹಸಿರು

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ರಾತ್ರಿ 8:20 ರವರೆಗೆ

ಮಿಥುನ ರಾಶಿ: 21 ಮೇ - 20 ಜೂನ್

ಮಿಥುನ ರಾಶಿ: 21 ಮೇ - 20 ಜೂನ್

ನಿಮ್ಮ ಎಲ್ಲಾ ಅಪೂರ್ಣ ಕಾರ್ಯಗಳು ಇಂದು ಪೂರ್ಣಗೊಳ್ಳುವುದರಿಂದ ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಉನ್ನತ ಸ್ಥಾನದಲ್ಲಿರುವ ಜನರನ್ನು ನೀವು ಭೇಟಿ ಮಾಡಿ ಚರ್ಚಿಸುವ ಮೂಲಕ ನೀವು ನಿಮ್ಮ ಸೀಮಿತ ವಲಯದಿಂದ ಹೊರಬರಲು ಸಾಧ್ಯವಾಗುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ಇಂದು ಹೊಸ ಆರ್ಡರ್ ಅನ್ನು ಪಡೆಯಬಹುದು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಮತ್ತು ಸಂಗಾತಿಯ ಪ್ರೀತಿ ಮತ್ತು ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮ್ಮನ್ನು ಮೋಸ ಮಾಡಬಹುದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರದಿಂದಿರಿ. ಇದ್ದಕ್ಕಿದ್ದಂತೆ ದೀರ್ಘ ಪ್ರಯಾಣಕ್ಕೆ ಹೋಗಬಹುದು, ಈ ವೇಳೆ ಆರೋಗ್ಯದ ಬಗ್ಗೆ ಗಮನಹರಿಸಿ. ನಿಮ್ಮ ಖ್ಯಾತಿಯನ್ನು ಹಾಳುಮಾಡುವ ಜನರೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 8:00 ರವರೆಗೆ

ಕರ್ಕ ರಾಶಿ: 21 ಜೂನ್ - 22 ಜುಲೈ

ಕರ್ಕ ರಾಶಿ: 21 ಜೂನ್ - 22 ಜುಲೈ

ಹಣಕಾಸಿನ ಇಳಿಕೆಯಿಂದಾಗಿ ಕೆಲವು ಪ್ರಮುಖ ಕಾರ್ಯಗಳನ್ನು ತಡೆಹಿಡಿಯಬೇಕಾಗಬಹುದು. ಪರಿಸ್ಥಿತಿಯು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲು ಪ್ರಯತ್ನಿಸಿ. ಇಂದು ವಿಷಯಗಳು ನಿಮ್ಮ ಪರವಾಗಿರುವುದಿಲ್ಲ, ಆದರೆ, ನಾಳೆ ಉತ್ತಮ ದಿನ ನಿಮಗಾಗಿ ಕಾಯುತ್ತಿದೆ. ಅನಾರೋಗ್ಯದಿಂದಾಗಿ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ, ಅದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ವಾದದ ಸಾಧ್ಯತೆಗಳಿವೆ. ವೈವಾಹಿಕ ಜೀವನ ಸಾಮಾನ್ಯವಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 3:30 ರವರೆಗೆ

ಸಿಂಹ ರಾಶಿ: 23 ಜುಲೈ - 22 ಆಗಸ್ಟ್

ಸಿಂಹ ರಾಶಿ: 23 ಜುಲೈ - 22 ಆಗಸ್ಟ್

ಪ್ರೀತಿಯ ವಿಷಯಗಳಲ್ಲಿ ಈ ದಿನ ಅದ್ಭುತವಾಗಿದೆ. ನಿಮ್ಮ ಪ್ರೇಮವನ್ನು ಕುಟುಂಬ ಸದಸ್ಯರು ಒಪ್ಪಿಕೊಳ್ಳುವಂಥ ಕೆಲವು ಸಕಾರಾತ್ಮಕ ವಿಷಯಗಳು ಇಂದು ಸಂಭವಿಸಬಹುದು. ಮಧ್ಯಾಹ್ನದ ನಂತರ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು ಅದು ನಿಮಗೆ ದಣಿವುಂಟು ಮಾಡುತ್ತದೆ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಹುರಿದ ಆಹಾರ ಸೇವಿಸುವುದನ್ನು ತಪ್ಪಿಸಿ. ಆರ್ಥಿಕ ವಿಷಯದಲ್ಲಿ ದಿನ ಉತ್ತಮವಾಗಿದೆ. ಸಂಗಾತಿಯ ಬೆಂಬಲದ ಕೊರತೆಯಿಂದಾಗಿ ಸ್ವಲ್ಪ ಗೊಂದಲವನ್ನು ಎದುರಿಸಬೇಕಾಗುತ್ತದೆ. ಅವರೊಂದಿಗಿನ ವಾಗ್ವಾದವನ್ನು ತಪ್ಪಿಸಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 6:00 ರವರೆಗೆ

ಕನ್ಯಾರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ದಿನವು ಬಹುತೇಕ ಉತ್ತಮವಾಗಿರುತ್ತದೆ. ಇಂದು ನಿಮ್ಮಲ್ಲಿ ಉತ್ಸಾಹ ಹೆಚ್ಚಾಗುತ್ತದೆ ಮತ್ತು ಸಕಾರಾತ್ಮಕ ವಿಷಯಗಳು ಅಥವಾ ಕಂಪನಗಳಿಂದ ಸುತ್ತುವರಿದಿರುತ್ತೀರಿ. ಉದ್ಯೋಗದಲ್ಲಿರುವವರು ಇಷ್ಟು ದಿನದ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಸಾಮರ್ಥ್ಯವನ್ನು ನೋಡಿ ನಿಮ್ಮ ಹಿರಿಯರು ನಿಮಗೆ ಕೆಲವು ಪ್ರಮುಖ ಕೆಲಸಗಳನ್ನು ವಹಿಸಬಹುದು. ದಾಂಪತ್ಯ ಜೀವನವು ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ ಮತ್ತು ಪರಸ್ಪರ ಉತ್ತಮ ಸಂಬಂಧ ಹೊಂದಿರುತ್ತೀರಿ. ಇಂದು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಬಹುದು. ಕೆಲವು ದಿನಗಳಿಂದ ನಿಮ್ಮ ಕೆಲಸದಲ್ಲಿ ಸಾಕಷ್ಟು ಕಾರ್ಯನಿರತರಾಗಿದ್ದೀರಿ, ಆದರೆ ಇಂದು ನಿಮಗಾಗಿ ಎಲ್ಲಾ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಶಾಪಿಂಗ್ ಮತ್ತು ವಿನೋದಕ್ಕಾಗಿ ಹೆಚ್ಚು ಖರ್ಚು ಮಾಡಬಹುದು. ಹೆಚ್ಚಿನ ಖರ್ಚನ್ನು ನಿಯಂತ್ರಿಸಿ, ಅದು ನಂತರ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯ ಇಂದು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಸಂಜೆ 4:00 ರಿಂದ 9:20 ರವರೆಗೆ

ತುಲಾ ರಾಶಿ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ ರಾಶಿ: 23 ಸೆಪ್ಟೆಂಬರ್ - 22 ಅಕ್ಟೋಬರ್

ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದಾಗಿ ಕೆಲವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ. ನೀವು ಹೆಚ್ಚು ಬಯಸುವ ಮೆಚ್ಚುಗೆಯ ಪದಗಳನ್ನು ಇಂದು ಕೇಳುವಿರಿ. ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಉದ್ಯಮಿಗಳು ಇದ್ದಕ್ಕಿದ್ದಂತೆ ಕೆಲವು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ಶೀಘ್ರದಲ್ಲೇ ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಈಡೇರುತ್ತದೆ. ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಲು ದಿನವು ಉತ್ತಮವಾಗಿದೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಇಬ್ಬರ ನಡುವೆ ಹೆಚ್ಚುವ ಪ್ರೀತಿ ಮತ್ತು ಪರಸ್ಪರ ಸಂಬಂಧವನ್ನು ಅನುಭವಿಸುತ್ತೀರಿ. ಪ್ರೇಮಿಗಳ ನಡುವೆ ಕೆಲವು ವಾದಗಳು ಉದ್ಭವಿಸಬಹುದು. ಪ್ರೀತಿ ಮತ್ತು ಕಾಳಜಿಯಿಂದ ವಿಷಯವನ್ನು ನಿರ್ವಹಿಸಲು ಪ್ರಯತ್ನಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 30

ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ ಸಂಜೆ 6:30 ರವರೆಗೆ

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ಇಂದು ಇತರರ ವಿಷಯದಲ್ಲಿ ಮಾತನಾಡುವ ಮೊದಲು ನೀವು ತೊಂದರೆಗೆ ಸಿಲುಕಬಹುದು, ಆದ್ದರಿಂದ ನಿಮ್ಮ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ವಿವಾಹಿತ ಜೀವನ ಸಾಮರಸ್ಯದಿಂದ ಇರುತ್ತದೆ. ಸಂಗಾತಿಯು ಎಲ್ಲಾ ಹಳೆಯ ಜಗಳಗಳನ್ನು ಮರೆತು ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುತ್ತಾರೆ. ಕೆಲಸದಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯಲು ನಿಮ್ಮ ಎಲ್ಲಾ ಕಾರ್ಯಗಳನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಿ. ಅಪೂರ್ಣ ಕಾರ್ಯಗಳನ್ನು ದೀರ್ಘಕಾಲದವರೆಗೆ ಮುಂದೂಡುತ್ತಲೇ ಇರುವುದರಿಂದ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಸಂಜೆ ನಂತರ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 32

ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 8:00 ರವರೆಗೆ

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ನೀವು ಇಂದು ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬಹುದು, ಇದರಿಂದಾಗಿ ನಿಮ್ಮ ಮನಸ್ಸು ಅಸಮಾಧಾನಗೊಳ್ಳುತ್ತದೆ. ಆದರೆ, ನಿಮ್ಮ ಬೇಜವಾಬ್ದಾರಿ ಸ್ವಭಾವವೇ ಸಮಸ್ಯೆಗೆ ಮುಖ್ಯ ಕಾರಣವಾಗಿರಬಹುದು. ನಿಮ್ಮ ಮನೋಭಾವದಲ್ಲಿ ಕೆಲವು ಬದಲಾವಣೆಗಳನ್ನು ತರಲು ಇದು ಸುಸಮಯ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಿಸಬೇಕು. ಮಧ್ಯಾಹ್ನದ ನಂತರ ಮೋಜು ಮಾಡಲು ಕೆಲವು ಅವಕಾಶಗಳನ್ನು ಪಡೆಯಬಹುದು. ನಿಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗಬಹುದು ಅದು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ನಿಮ್ಮ ಮನಸ್ಸು ಮತ್ತು ಕಣ್ಣುಗಳನ್ನು ತೆರೆದಿಡಿ, ಇದು ಹಣಕಾಸಿನ ದೃಷ್ಟಿಯಿಂದ ಪ್ರಮುಖ ಅವಕಾಶ ನಿಮ್ಮದಾಗಬಹುದು. ಅದು ನಿಮಗೆ ಆರ್ಥಿಕವಾಗಿ ಲಾಭದಾಯಕವೂ ಆಹಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 2:15 ರವರೆಗೆ

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಂದು ಅತ್ಯುತ್ತಮ ದಿನ. ಸಂಗಾತಿಯು ನಿಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಬುದ್ಧಿವಂತಿಕೆಯನ್ನು ಬಳಸಿ, ಇದರಿಂದ ನಿಮ್ಮಿಬ್ಬರ ನಡುವಿನ ಎಲ್ಲಾ ತಪ್ಪುಗ್ರಹಿಕೆಯನ್ನು ನಿವಾರಿಸಬಹುದು. ಒಬ್ಬಂಟಿಯಾಗಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಬಿಡುವಿಲ್ಲದ ದಿನಚರಿಯ ಹೊರತಾಗಿಯೂ ಸಂಗಾತಿಯ ಜತೆ ಕೆಲವು ಉತ್ತಮ ಕ್ಷಣಗಳನ್ನು ಒಟ್ಟಿಗೆ ಕಳೆಯುತ್ತೀರಿ. ಅಲ್ಲದೆ, ಸಂಗಾತಿಯ ನಡುವಿನ ವಾದವು ಇಂದು ಕೊನೆಗೊಳ್ಳುತ್ತದೆ.

ಅದೃಷ್ಟ ಬಣ್ಣ: ಬೂದು

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 7:00 ರವರೆಗೆ

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಹಣಕಾಸಿನ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಿ, ವಿಶೇಷವಾಗಿ ನೀವು ಹೂಡಿಕೆ ಮಾಡುವಾಗ ಅನುಭವಿ ವ್ಯಕ್ತಿಯ ಸಲಹೆಯನ್ನು ತೆಗೆದುಕೊಳ್ಳಲು ಮರೆಯಬೇಡಿ. ನಿಮ್ಮ ಎಲ್ಲಾ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುವುದರಿಂದ ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಿ,ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇಂದು, ನೀವು ಶಾಂತ ಮನಸ್ಥಿತಿಯಲ್ಲಿರುತ್ತೀರಿ ಮತ್ತು ಜೀವನವನ್ನು ಆನಂದಿಸುವಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಹಿರಿಯರ ಸಲಹೆಯಂತೆ ಮಾಡಿದರೆ, ನಿಮ್ಮ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರವನ್ನು ಪಡೆಯುತ್ತೀರಿ. ತೊಂದರೆಯಾಗುವುದರಿಂದ ಅಪಾಯಕಾರಿ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಿ. ಹಣದ ಹಠಾತ್ ಆಗಮನದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ಹಳೆಯ ಸಾಲವನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ.

ಅದೃಷ್ಟ ಬಣ್ಣ: ತಿಳಿ ಬಣ್ಣ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 6:30 ರಿಂದ ಸಂಜೆ 4:00 ರವರೆಗೆ

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

ನಿಮ್ಮ ಹಲವಾರು ಪ್ರಯತ್ನಗಳ ನಡುವೆಯೂ ಯಶಸ್ಸಿನ ಕೊರತೆಯಿಂದಾಗಿ ಆತಂಕ ಹೆಚ್ಚಾಗುತ್ತದೆ. ಯಾವುದೇ ಕೆಲಸದಲ್ಲಿ ಹೆಚ್ಚು ಗಮನಹರಿಸುವುದಿಲ್ಲ. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗುತ್ತೀರಿ. ಆರ್ಥಿಕವಾಗಿ ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಖರ್ಚು ಮಾಡುವ ಮೊದಲು ಬುದ್ಧಿವಂತಿಕೆಯಿಂದ ಯೋಚಿಸಿ. ನಿಮ್ಮ ಸಮಸ್ಯೆಗಳಿಂದ ಓಡಿಹೋಗಬೇಡಿ, ಬದಲಿಗೆ ಅವರನ್ನು ಆತ್ಮವಿಶ್ವಾಸದಿಂದ ಎದುರಿಸಿ. ವೈವಾಹಿಕ ಜೀವನ ಸಾಮರಸ್ಯದಿಂದ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ ಅದು ನಿಮ್ಮ ಹಿರಿಯರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ದಿನ ಪ್ರಯಾಣಕ್ಕೆ ಒಳ್ಳೆಯದಲ್ಲ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಮಧ್ಯಾಹ್ನ 2:15 ರಿಂದ 7:20 ರವರೆಗೆ

English summary

Daily Horoscope 07 Nov 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X