ಮಕ್ಕಳಲ್ಲಿ ಈ 10 ಗುಣಗಳನ್ನು ಬೆಳೆಸಬೇಕಾಗಿರುವುದು ಪೋಷಕರ ಕರ್ತವ್ಯ ಅಂತಾರೆ ಚಾಣಕ್ಯ

ಮಕ್ಕಳು ಭವಿಷ್ಯದಲ್ಲಿ ದೊಡ್ಡವರಾಗಿ ಏನೇ ಆದರೂ ಅದರ ಹೊಣೆ ಪೋಷಕರ ಮೇಲೆ ಇರುತ್ತದೆ. ಅದೂ ಕೆಟ್ಟದಾಗಲಿ ಅಥವಾ ಒಳ್ಳೆಯದಾಗಲಿ ಎಲ್ಲವೂ ಪೋಷಕರಿಂದ ಬಳುವಳಿಯಾಗಿ ಬಂದಿರೋದೇ.

ಇದೇ ಕಾರಣಕ್ಕೆ ನಿಮ್ಮ ಮಕ್ಕಳನ್ನು ಬೆಳೆಸುವಾಗ ಚಾಣಕ್ಯ ಹೇಳಿದ ಈ ಮಾತುಗಳನ್ನು ಖಂಡಿತ ಗಮನಿಸಲೇಬೇಕು.

Chanakya Niti: Tips for making a child worthy and successful in Kannada

ಪೋಷಕರಿಗೆ ಚಾಣಕ್ಯನ 10 ಸೂತ್ರಗಳು..!

1. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ

1. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ

ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಲೇಬೇಕು. ಮನೆಯಿಂದಲೇ ಮಕ್ಕಳು ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಳ್ಳುತ್ತಾರೆ. ಸಂಸ್ಕಾರಯುತ ಮಗುವಿನಲ್ಲಿ ಖಂಡಿತ ಉತ್ತಮ ಗುಣಗಳು ಇದ್ದೇ ಇರುತ್ತದೆ. ಈಗಿನಿಂದಾನೇ ಮಕ್ಕಳಲ್ಲಿ ಒಳ್ಳೆಯ ಆಚಾರ-ವಿಚಾರಗಳನ್ನು ತುಂಬುತ್ತಾ ಬಂದರೆ ಭವಿಷ್ಯದಲ್ಲಿ ಮಹಾನ್ ವ್ಯಕ್ತಿಗಳಾಗುತ್ತಾರೆ.

2. ಶಿಸ್ತಿನ ಜೀವನಕ್ಕೆ ಪ್ರಾಶಸ್ತ್ಯ ನೀಡಿ

2. ಶಿಸ್ತಿನ ಜೀವನಕ್ಕೆ ಪ್ರಾಶಸ್ತ್ಯ ನೀಡಿ

ಚಾಣಕ್ಯನ ಪ್ರಕಾರ ಮಕ್ಕಳಿಗೆ ಚಿಕ್ಕಂದಿನಿಂದಾನೇ ಶಿಸ್ತನ್ನ ರೂಢಿಸಿ. ಅದು ಓದಿನ ವಿಷಯದಲ್ಲೇ ಆಗಲಿ ಅಥವಾ ಕೆಲಸದ ವಿಷಯದಲ್ಲೇ ಆಗಲಿ. ನಿಮ್ಮ ಮಗುವಿಗೆ ಕೆಲಸ ಹಾಗೂ ಸಮಯದ ಮಹತ್ವವನ್ನು ತಿಳಿಸಿ. ಶಿಸ್ತಿನಿಂದಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡೋದಕ್ಕೆ ಸಾಧ್ಯ ಎಂಬುವುದನ್ನ ಮನವರಿಕೆ ಮಾಡಿ.

3. ಮಕ್ಕಳಿಗೆ ಒಳ್ಳೆಯದು ಹಾಗೂ ಕೆಟ್ಟದನ್ನು ಅರ್ಥೈಸಿ

3. ಮಕ್ಕಳಿಗೆ ಒಳ್ಳೆಯದು ಹಾಗೂ ಕೆಟ್ಟದನ್ನು ಅರ್ಥೈಸಿ

ಚಿಕ್ಕವರಿರುವಾಗ ಮಕ್ಕಳಿಗೆ ಏನೇ ಹೇಳಿಕೊಟ್ಟರು ಬಹು ಬೇಗ ಗ್ರಹಿಸಿಕೊಳ್ಳುತ್ತಾರೆ. ಆದ್ದರಿಂದ ಒಳ್ಳೆಯ ವಿಚಾರ ಧಾರೆಗಳನ್ನು ಮಾತ್ರ ಮಕ್ಕಳ ಮನಸ್ಸಿಗೆ ತುಂಬಿ. ಒಂದು ವೇಳೆ ಮಕ್ಕಳೇನಾದರೂ ಕೆಟ್ಟ ವಿಚಾರಗಳತ್ತ ಆಕರ್ಷಿತರಾಗುತ್ತಿದ್ದಾರೆ ಅಂತ ಗೊತ್ತಾದರೆ ಅವರಿಗೆ ಪ್ರೋತ್ಸಾಹ ಮಾಡೋದನ್ನ ಬಿಟ್ಟು ತಪ್ಪನ್ನ ತಿದ್ದಿ, ಮುಂದೆ ಆ ತಪ್ಪು ಮಾಡದಂತೆ ತಿಳಿ ಹೇಳಿ.

4. ಉತ್ತಮ ಶಿಕ್ಷಣ ನೀಡಿ

4. ಉತ್ತಮ ಶಿಕ್ಷಣ ನೀಡಿ

ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಬೇಕಾದರೆ ಜ್ಞಾನವೆಂಬ ಬೆಳಕು ಬೇಕೆ ಬೇಕು. ಅಂದಕಾರ ಕಳೆದು ಬೆಳಕು ಮೂಡಬೇಕಾದರೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಮಾತ್ರ ಒಬ್ಬ ವ್ಯಕ್ತಿಯನ್ನ ಸದೃಢ ವ್ಯಕ್ತಿಯನ್ನಾಗಿ ಮಾಡಬಲ್ಲದು. ಆದ್ದರಿಂದ ಪೋಷಕರು ಮಗುವಿನ ಮೌಲ್ಯಯುತ ಶಿಕ್ಷಣ ನೀಡಲೇಬೇಕು.

5. ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಿ

5. ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಿ

ಮನೆಯೇ ಮೊದಲ ಪಾಠಶಾಲೆ ಎನ್ನುವ ಹಾಗೆ ಮಕ್ಕಳು ಏನೇ ಕಲಿತರೂ ಅದು ಮನೆಯಿಂದಲೇ. ಹೀಗಾಗಿ ಮನೆಯಲ್ಲಿ ಮಕ್ಕಳ ಮುಂದೆ ಜಾಗರೂಕರಾಗಿ ಇರಬೇಕು. ಪೋಷಕರ ಗುಣಗಳನ್ನೇ ಮಕ್ಕಳು ಮುಂದೆ ಅಳವಡಿಸಿಕೊಳ್ಳುತ್ತಾರೆ. ಸುಳ್ಳು ಹೇಳುವುದು, ಮೋಸ ಮಾಡುವುದು, ಮನೆಯಲ್ಲಿ ಚೀರಾಡುವುದು, ತಂದೆ-ತಾಯಿ ಜಗಳ, ಕೆಟ್ಟ ಮಾತುಗಳನ್ನ ಆಡುವುದು ಇದ್ಯಾವುದನ್ನು ಮಕ್ಕಳ ಮುಂದೆ ಆಡಬೇಡಿ. ಮನೆಯಲ್ಲಿ ಶಾಂತ ರೀತಿಯಲ್ಲಿ ವರ್ತಿಸಿ, ಮಕ್ಕಳ ಮುಂದೆ ಕೆಟ್ಟದಕ್ಕೆ ಆಸ್ಪದ ನೀಡಬೇಡಿ.

6. ಶ್ರಮಜೀವಿಯಾಗಲು ಉತ್ತೇಜಿಸಿ

6. ಶ್ರಮಜೀವಿಯಾಗಲು ಉತ್ತೇಜಿಸಿ

ಹಾಡ್೬ ವಕ್೬ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ. ಮ್ಕಕಳಿಗೆ ಶ್ರಮಜೀವಿಯಾಗಲು ಕಲಿಸಿ, ಅದರ ಮಹತ್ವ ತಿಸಿಳಿ. ಬಾಲ್ಯದಿಂದಲೇ ಮಕ್ಕಳನ್ನು ಶ್ರಮ ಜೀವಯಾಗಿರುವಂತೆ ಉತ್ತೇಜಿಸಿ.

7. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ

7. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ

ಮಕ್ಕಳಿಗೆ ಇಡೀ ದಿನ ಓದುವುದಕ್ಕೆ ಒತ್ತಡ ಹೇರಬೇಡಿ. ಬದಲಾಗಿ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಕಲೆ, ಸಂಗೀತ, ಆಟದಲ್ಲಿ ತೊಡಗಿಸುವಂತೆ ಪ್ರೋತ್ಸಾಹಿಸಿ.

8. ಧರ್ಮ ಮತ್ತು ನಂಬಿಕೆಯ ಅರಿವು ಮೂಡಿಸಿ

8. ಧರ್ಮ ಮತ್ತು ನಂಬಿಕೆಯ ಅರಿವು ಮೂಡಿಸಿ

ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಆಚಾರ ಹಾಗೂ ವಿಚಾರಗಳು ಕೂಡ ಮುಖ್ಯವಾಗುತ್ತದೆ. ಚಿಕ್ಕದಿಂನಿಂದಾನೇ ಮಕ್ಕಳಿಗೆ ಸನಾತನ ಧರ್ಮ, ನಮ್ಮ ನಂಬಿಕೆಗಳ ಬಗ್ಗೆ ತಿಳಿ ಹೇಳಿ ಮತ್ತು ಅದರ ಮಹತ್ವ ತಿಳಿಸಿ.

9. ಮಹಾನ್ ವ್ಯಕ್ತಿಗಳ ಆದರ್ಶಗಳನ್ನ ರೂಢಿಸಿ

9. ಮಹಾನ್ ವ್ಯಕ್ತಿಗಳ ಆದರ್ಶಗಳನ್ನ ರೂಢಿಸಿ

ಚಾಣಕ್ಯನ ಪ್ರಕಾರ ಮಕ್ಕಳಿಗೆ ಬಾಲ್ಯದಲ್ಲೇ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಢಿಸಿವಂತಹ ಶಿಕ್ಷಣ ನೀಡಿಬೇಕು. ಆದರ್ಶ ವ್ಯಕ್ತಿಗಳ ಕಥೆಯನ್ನ ಅವರು ದೇಶಕ್ಕೆ ನೀಡಿರೋ ಕೊಡುಗೆಯ ಬಗ್ಗೆ ತಿಳಿ ಹೇಳಬೇಕು. ಮುಂದೆ ನಿಮ್ಮ ಮಗುವು ಅಂತಹ ಗುಣಗಳನ್ನು ರೂಢಿಸಿಕೊಳ್ಳುತ್ತದೆ.

10. ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ

10. ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ

ಚಾಣಕ್ಯನ ಪ್ರಕಾರ ನಿಮ್ಮ ಮಗು ನಂಬರ್ ಒನ್ ಆಗಗಿದ್ದರೂ ಪರವಾಗಿಲ್ಲ, ಆದ್ರೆ ಮಗುವಿನಲ್ಲಿ ಸದ್ಗುಣಗಳು ಇರಲೇಬೇಕು. ಇತರರಿಗೆ ಗೌರವ ನೀಡಬೇಕು, ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಸುಳ್ಳು, ಮೋಸ, ವಂಚನೆಯಿಂದ ದೂರವಿರುವಂತೆ ನೋಡಿಕೊಳ್ಳಿ.

English summary

Chanakya Niti: Tips for making a child worthy and successful in Kannada

According to Chanakya these are the secrets can make your child worthy, every parent should pay attention. Read on.
X
Desktop Bottom Promotion