Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಆಯುಧ ಪೂಜೆ: ಎಷ್ಟು ಹೊತ್ತಿಗೆ ಪೂಜೆ ಮಾಡಬೇಕು? ಆಯುಧ ಪೂಜೆಯ ಮಹತ್ವವೇನು?
ನವರಾತ್ರಿಯ 9ನೇ ದಿನ ಮಾಡುವ ಆಯುಧ ಪೂಜೆಯನ್ನು ಆಚರಿಸಲಾಗುವುದು.ಈ ದಿನ ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೃಷಿ ಉಪಕರಣಗಳು, ಗಾಡಿಗಳು, ಯಂತ್ರಗಳನ್ನು ಪೂಜಿಸಲಾಗುವುದು.
ಆಯುಧ ಪೂಜೆಯಂದು ನಾವು ಮಾಡುವ ವೃತ್ತಿಗೆ ಅನುಗುಣವಾಗಿ ಆಯುಧಗಳನ್ನು ಪೂಜಿಸುತ್ತೇವೆ. ಕೃಷಿಕನಿಗೆ ಕತ್ತಿ, ಗುದ್ದಲಿ, ಪಿಕಾಸು ಇವುಗಳು ಪೂಜಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುವವನಿಗೆ ಲ್ಯಾಪ್‌ಟಾಪ್ ಅವಶ್ಯಕ ಅದನ್ನು ಪೂಜಿಸುತ್ತಾರೆ, ಇನ್ನು ಡ್ರೈವರ್‌ಗಳು ಗಾಡಿಯನ್ನು, ಟೈಲರಿಂಗ್ ಮಾಡುವವರು ಹೊಲಿಗೆ ಯಂತ್ರಗಳನ್ನು ಹೀಗೆ ತಮ್ಮ ವೃತ್ತಗೆ ಸಹಾಯವಾಗುವ ಉಪಕರಣಗಳನ್ನು ಪೂಜಿಸಲಾಗುವುದು.

ಹೀಗಾಗಿ ನಮ್ಮ ಬದುಕು ನಡೆಸಲು ಅನಕೂಲಕರವಾಗಿರುವ ಉಪಕರಣಗಳನ್ನುಪೂಜಿಸಲಾಗುವುದು. ಈ ವರ್ಷ ಅಕ್ಟೋಬರ್ 4ರಂದು ಆಯುಧ ಪೂಜೆ ಮಾಡಲಾಗುವುದು, ಪೂಜೆಗೆ ಶುಭ ಮುಹೂರ್ತ ಯಾವಾಗ, ಪೂಜಾ ವಿಧಿ-ವಿಧಾನಗಳೇನು ಎಂದು ನೋಡೋಣ:

ಆಯುಧ ಪೂಜಾ ಮುಹೂರ್ತ
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 3 ಸಂಜೆ 4:35ರಿಂದ
ನವಮಿ ತಿಥಿ ಮುಕ್ತಾಯ: ಅಕ್ಟೋಬರ್ 4 ಮಧ್ಯಾಹ್ನ 2:20ರವರೆಗೆ

ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ
ದುರ್ಗೆಯು ಚಾಮುಂಡಿಯ ಅವತಾರ ತಾಳಿ ರಾಕ್ಷಸ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.

ಆಯುಧ ಪೂಜೆ ಬರೀ ಪೂಜೆಯಲ್ಲ, ನಮ್ಮ ಭಾವನೆಯೊಂದಿಗೂ ಸಂಬಂಧವಿದೆ
ಆಯುಧ ಪೂಜೆ ಯಾವುದೋ ಆಯುಧವಿಟ್ಟು ಪೂಜೆ ಮಾಡುವುದಲ್ಲ, ನಾವು ನಮ್ಮ ವೃತ್ತಿ ಬದುಕಿಗೆ ಬಳಸುವ ಆಯುಧ-ಉಪಕರಣಗಳನ್ನು ಪೂಜಿಸಲಾಗುವುದು, ಆದ್ದರಿಂದ ಈ ಪೂಜೆಗೂ ನಮ್ಮ ಭಾವನೆಗಳಿಗೂ ತುಂಬಾನೇ ಸಂಬಂಧವಿದೆ. ನಮಗೆ ಅನ್ನ ಹಾಕುತ್ತಿರುವ, ನಮ್ಮ ಬದುಕನ್ನು ಮತ್ತಷ್ಟು ಸರಳವಾಗಿಸಿರುವ ಉಪಕರಣಗಳನ್ನು ಪೂಜಿಸಲಾಗುವುದು.

ಆಯುಧ ಪೂಜೆಯನ್ನು ಹೇಗೆ ಆಚರಿಸಬೇಕು?
ಆಯುಧ ಪೂಜೆಯ ಹಿಂದಿನ ದಿನವೇ ಮನೆಯನ್ನು ಶುದ್ಧ ಮಾಡಬೇಕು. ಎಲ್ಲಾ ಉಪಕರಣಗಳನ್ನು ಶುದ್ಧ ಮಾಡಬೇಕು. ನಂತರ ಅವುಗಳಿಗೆ ಕುಂಕುಮ ಹಚ್ಚಿ, ಆರತಿ ಎತ್ತಬೇಕು. ಗಾಡಿಯ ಮುಂದೆ ಕುಂಬಳಕಾಯಿಗೆ ಕುಂಕುಮ, ನಾಣ್ಯ ಹಾಕಿ ಅದನ್ನು ಗಾಡಿ ಮುಂದೆ ಒಡೆಯಲಾಗುವುದು. ಈ ದಿನ ಕಬ್ಬು, ಬಾಳೆಹಣ್ಣು, ಅವಲಕ್ಕಿ, ಸಿಹಿ ತಿನಿಸುಗಳನ್ನು ಬಳಸಿ ಪ್ರಸಾದ ತಯಾರಿಸಲಾಗುವುದು.



Click it and Unblock the Notifications
