Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜ್ಯೋತಿಶಾಸ್ತ್ರದ ಪ್ರಕಾರ ಹೀಗೆ ಮಾಡಿದರೆ ನಮ್ಮ ಆಕರ್ಷಣೆ ಹೆಚ್ಚುತ್ತದೆ ಅಂತೆ!
ತಮ್ಮ ಸೌಂದರ್ಯದಿಂದ ಇತರ ಗಮನ ಸೆಳೆಯಲು ಯಾರಿಗೆ ತಾನೇ ಇಷ್ಟವಿಲ್ಲ. ದೇವರು ನೀಡಿರುವ ಅಂದಕ್ಕೆ ಇನ್ನಷ್ಟು ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಜ್ಞಾನದ ಜತೆಗೆ ಸೌಂದರ್ಯ ಹಲವಾರು ಸಂದರ್ಭಗಳಲ್ಲಿ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಹೀಗೆ ಜೀವನದ ಹಲವಾರು ಹಂತದಲ್ಲಿ ನಮ್ಮ ಸಾಧನೆ, ಗೆಲುವನ್ನು ನಿರ್ಧರಿಸುವ ಹಾಗೂ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಜ್ಯೋತಿಶಾಸ್ತ್ರ ಸಹ ಹೇಳುತ್ತದೆ.
ಜ್ಯೋತಿಶಾಸ್ತ್ರದ ಪ್ರಕಾರ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಸೌಂದರ್ಯ ಹಾಗೂ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಬಹುದು, ಹೇಗೆ ಮುಂದೆ ನೋಡೋಣ:

1. ಲಕ್ಷ್ಮಿ ದೇವಿ ಪೂಜಿಸಿ
ವೇದ ಜ್ಯೋತಿಷ್ಯದ ಪ್ರಕಾರ ಲಕ್ಷ್ಮಿ ದೇವಿಯು ಶುಕ್ರ ಗ್ರಹದ ಆಡಳಿತ ದೇವತೆ ಎಂದು ಹೇಳುತ್ತದೆ. ಅವಳನ್ನು ಪೂಜಿಸುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಶುಕ್ರನ ಗುಣಗಳು ಬರುತ್ತದೆ. ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯುತ್ತಾರೆ. ಆದ್ದರಿಂದ, ಇದು ಹಣಕಾಸಿನ ಲಾಭವನ್ನು ಸಹ ನಿಮಗೆ ತರುತ್ತದೆ.

2. ಬೀಜ ಮಂತ್ರ ಪಠಿಸಿ
ಬೀಜ ಮಂತ್ರವು ನಿಮ್ಮಲ್ಲಿ ನಿರ್ದಿಷ್ಟ ತರಂಗಾಂತರದ ಕಾಸ್ಮಿಕ್ ಶಕ್ತಿಯನ್ನು ತುಂಬಲು ಅತ್ಯಂತ ಶಕ್ತಿಯುತ ಸಾಧನವಾಗಿದೆ. ಶುಕ್ರ ಗ್ರಹದ ಬೀಜ್ ಮಂತ್ರವನ್ನು ಸರಿಯಾಗಿ ಜಪಿಸಿದಾಗ, ನಿಮ್ಮನ್ನು ಆಕರ್ಷಕವಾಗಿಸುತ್ತದೆ ಮತ್ತು ಜನರು ನಿಮ್ಮನ್ನು ಸಕಾರಾತ್ಮಕವಾಗಿ ನೋಡಲು ಪ್ರಾರಂಭಿಸುತ್ತಾರೆ. ಇದರ ಸಂಪೂರ್ಣ ಲಾಭ ಪಡೆಯಲು, ಈ ಮಂತ್ರವನ್ನು "ಓಂ ದ್ರಂ ದ್ರಂ ದ್ರೌಂ ಸ ಶುಕ್ರಾಯ ನಮಃ" ಅನ್ನು 40 ದಿನಗಳಲ್ಲಿ 20,000 ಬಾರಿ ಪಠಿಸಿ.

3. ಶುಕ್ರವಾರ ಉಪವಾಸ ಮಾಡಿ
ಶುಕ್ರವಾರವನ್ನು ಶುಕ್ರ ಗ್ರಹ ಆಳುತ್ತದೆ, ಆದ್ದರಿಂದ ಶುಕ್ರವಾರದಂದು ಉಪವಾಸ ಮಾಡಿ. ಈ ದಿನ ಉಪವಾಸ ಮಾಡುವುದರಿಂದ ಶುಕ್ರನ ಧನಾತ್ಮಕ ಶಕ್ತಿ ಬರುತ್ತದೆ.

4. ಶ್ರೀ ಸೂಕ್ತಂ
ಶ್ರೀ ಸೂಕ್ತಂ ಋಗ್ವೇದದ ಅನುಬಂಧಗಳ ಭಾಗವಾಗಿದೆ. ಇದು ಪುರಾತನ ಪಠ್ಯವಾಗಿದ್ದು, ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಇದು ನಿಮ್ಮ ಶುಕ್ರ ಗ್ರಹ ವರ್ಧನೆಯ ಮೇಲೆ ಅತ್ಯಂತ ಪ್ರಭಾವಶಾಲಿ ಪರಿಣಾಮವನ್ನು ಹೊಂದಿದೆ. ಇದು ನಿಮ್ಮ ವ್ಯಕ್ತಿತ್ವ, ನೋಟದಿಂದ ಇತರರ ಮೇಲೆ ನೀವು ಪ್ರಭಾವ ಬೀರುವಂತೆ ಮಾಡುತ್ತದೆ.

5. ಆರು ಮುಖದ ರುದ್ರಾಕ್ಷಿ ಧರಿಸಿ
ಪುರಾಣವು ರುದ್ರಾಕ್ಷಿಯನ್ನು ಶಿವನ ಕಣ್ಣೀರು ಎಂದು ಕರೆಯುತ್ತದೆ. ಆರು ಮುಖಿ ರುದ್ರಾಕ್ಷವನ್ನು ಧರಿಸುವುದರಿಂದ ಶುಕ್ರನಿಗೆ ಬಲವನ್ನು ನೀಡುತ್ತದೆ ಮತ್ತು ಅದರ ದೌರ್ಬಲ್ಯದಿಂದ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸೂಚನೆ: ಮೇಲಿನ ಸಲಹೆಗಳು ಜ್ಯೋತಿಶಾಸ್ತ್ರದ ಪ್ರಕಾರ ಹೇಳಲಾಗಿರುವ ನಂಬಿಕೆಗಳು. ಇದನ್ನು ನಂಬುವುದು ಹಾಗೂ ಪಾಲಿಸುವುದು ಅವರ ಸ್ವಂತ ಇಚ್ಛೆಗೆ ಅನುಗುಣವಾಗಿದೆ.



Click it and Unblock the Notifications
