Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಆಷಾಢ ಅಮಾವಾಸ್ಯೆ: ಈ ದಿನ ಏನು ಮಾಡಬೇಕು, ಏನು ಮಾಡಲೇಬಾರದು?
ಹಿಂದೂ ಧರ್ಮದಲ್ಲಿ ಆಷಾಢ ಅಮಾವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಆಷಾಢ ಅಮವಾಸ್ಯೆಯನ್ನು ಒಂದೊಂದು ಕಡೆ ಒಂದೊಂದು ರೀತಿಯಯಲ್ಲಿ ಆಚರಿಸಲಾಗುವುದು. ಈ ದಿನ ಭೀಮನ ಅಮಾವಾಸ್ಯೆಯೆಂದೂ ಆಚರಿಸಲಾಗುವುದು. ಈ ದಿನ ವ್ರತ ಆಚರಿಸುವುದರಿಂದ ಕನ್ಯೆಯರಿಗೆ ಒಳ್ಳೆಯ ಸಂಬಂಧ ಕೂಡಿ ಬರುವುದು, ವಿವಾಹಿತ ಹೆಣ್ಣು ಮಕ್ಕಳ ಮುತ್ತೈದೆ ಭಾಗ್ಯ ಬಲವಾಗುವುದು.
ಇನ್ನು ಪಿತೃದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯವಾಗಿದೆ. ಈ ದಿನದಂದು ಕೆಲವರು ಪಿತೃತರ್ಪಣ ಮಾಡುತ್ತಾರೆ, ಈ ಮೂಲಕ ತಮ್ಮ ಹಿರಿಯರಿಗೆ ಮೋಕ್ಷ ನೀಡಿ ಪುಣ್ಯದ ಫಲ ಪಡೆಯುತ್ತಾರೆ.

ಇನ್ನು ದಕ್ಷಿಣ ಕನ್ನಡ ಕಡೆ ಆಟಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಈ ದಿನ ಪಾಲೆ ಮರದ ತೊಗಟೆ ಕೆತ್ತಿ ತಂದು ಅದರಿಂದ ಕಷಾಯ ಮಾಡಿ ಸೇವಿಸುತ್ತಾರೆ. ಇ ಕಷಾಯ ಮಳೆಗಾಲದಲ್ಲಿ ಕಾಡುವ ರೋಗಗಳನ್ನು ತಡೆಗಟ್ಟಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ.
ಹೀಗೆ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದೆ, ಇನ್ನು ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡವುದರಿಂದ ಪುಣ್ಯ ಫಲ ಹೆಚ್ಚುವುದು.
ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ:

ಪಿತೃ ತರ್ಪಣ ಮಾಡಿ:
ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃ ದೋಷದಿಂದ ಮುಕ್ತರಾಗುತ್ತೀರಿ. ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ವ್ರತ ಮಾಡಬೇಕು, ಈ ದಿನ ಪಿತೃಗಳಿಗೆ ತರ್ಪಣ ನೀಡಿ.

ದಾನ ಮಾಡಿ
ಆಷಾಢ ಅಮಾವಾಸ್ಯೆಯಂದು ದಾನ ಮಾಡುವುದು ಶ್ರೇಷ್ಠ ಎಂದು ನಂಬಲಾಗಿದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡಿ, ಬಡವರಿಗೆ ಕೂಡ ಈ ದಿನ ಮಾಡುವುದರಿಂದ ಪುಣ್ಯ ಲಭಿಸುವುದು.

ಕೃಷಿ ಉಪಕರಣಗಳನ್ನು ಪೂಜಿಸಿದರೆ ಒಳ್ಳೆಯದು
ಈ ದಿನದಂದು ಕೆಲವರು ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಇಳುವರಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ.

ದೀಪ ದಾನ ಮಾಡಿ
ಈ ದಿನ ದೀಪ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಎಲೆಗಳ ಬಟ್ಟಲಿನಲ್ಲಿ ದೀಪ ಹಾಗೂ ಹೂಗಳನ್ನು ಹಾಕಿ ಅದನ್ನು ನೀರಿನಲ್ಲಿ ಹರಿಯ ಬಿಡಬೇಕು. ಈ ರೀತಿ ಮಾಡುವುದರಿಂದ ಕಷ್ಟಗಳು ದೂರಾಗಿ, ಸಂಪತ್ತು ವೃದ್ಧಿಯಾಗುವುದು.

ಈ ದಿನ ಏನು ಮಾಡಬಾರದು?
* ಈ ದಿನ ಮದ್ಯ ಸೇವನೆ ಮಾಡಬಾರದು
* ಬಡರ್ವರು, ನಿರ್ಗತಿಕರನ್ನು ಅವಮಾನಿಸಬಾರದು.
* ಈ ದಿನ ತಲೆಗೆ ಎಣ್ಣೆ ಹಚ್ಚಬಾರದು, ಇದರ ಬದಲಿಗೆ ಎಣ್ಣೆಯನ್ನು ದಾನ ಮಾಡಿ
* ಹಿರಿಯರನ್ನು ಅವಮಾನಿಸಬಾರದು
* ಈ ದಿನ ಪಿತೃ ಕರ್ಮಕ್ಕೆ ಮೀಸಲಾಗಿರುವುದರಿಂದ ದೇವರ ಪೂಜೆಗೆ ಸಂಬಂಧಿಸಿ ವಸ್ತುಗಳನ್ನು ಖರೀದಿಸಬಾರದು.
* ಈ ದಿನ ಮನೆಗೆ ಪೊರಕೆ ತರಬಾರದು.



Click it and Unblock the Notifications
