Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಮಾರ್ಚ್ 3ಕ್ಕೆ ಅಮಲಕಿ ಏಕಾದಶಿ: ಏಕಾದಶಿಯಂದು ಹೀಗೆ ಮಾಡಿದರೆ ಸಂಪತ್ತು ಹೆಚ್ಚುವುದು
ವರ್ಷದಲ್ಲಿ 24 ಏಕಾದಶಿಗಳು ಬರುತ್ತದೆ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಮಾರ್ಚ್ 3ಕ್ಕೆ ಅಮಲಕ್ಕಿ ಏಕಾದಶಿ ಆಚರಿಸಲಾಗುವುದು.

ಈ ಅಮಲಕಿ ಏಕಾದಶಿಯನ್ನು ಶುಕ್ರವಾರ, ಮಾರ್ಚ್ 3, 2023 ರಂದು ಆಚರಿಸಲಾಗುತ್ತದೆ. ಈ ಅಮಲಕಿ ಏಕಾದಶಿಯ ಮಹತ್ವವೇನು, ಅಮಲಕಿ ಏಕಾದಶಿಗೆ ಪೂಜಾ ಮುಹೂರ್ತ ಹಾಗೂ ಪಾರಣ ಸಮಯ ಯಾವಾಗ, ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಏಕಾದಶಿ ತಿಥಿ
ಏಕಾದಶಿ ತಿಥಿ ಆರಂಭ - ಮಾರ್ಚ್ 02, 2023 ಬೆಳಗ್ಗೆ 06:39ರಿಂದ
ಏಕಾದಶಿ ತಿಥಿ ಮುಕ್ತಾಯ - ಮಾರ್ಚ್ 03, ಬೆಳಗ್ಗೆ 09:11ಕ್ಕೆ
ಪಾರಣ ಸಮಯ: ಮಾರ್ಚ್ 4 ಬೆಳಗ್ಗೆ 06:34ರಿಂದ 08:57ರವರೆಗೆ

ಅಮಲಕಿ ಏಕಾದಶಿ ಮಹತ್ವ
ಅಮಲಕಿ ಏಕಾದಶಿಯನ್ನು ಯಾರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೋ ಅವರಿಗೆ ಸಂತೋಷ, ನೆಮ್ಮದಿ ಸಿಗುವುದು, ಮನೆಯಲ್ಲಿ ಸಮೃದ್ಧಿ ಹೆಚ್ಚುವುದು, ಅದೃಷ್ಟ ಕೈ ಹಿಡಿಯುವುದು. ಈ ಏಕಾದಶಿಯನ್ನು ಮಾಡಿದರೆ ಪಾಪ ಕಳೆದು ಮೋಕ್ಷ ಸಿಗುವುದು, ಇವರಿಗೆ ಶ್ರೀ ವಿಷ್ಣುವಿನ ಆಶೀರ್ವಾದ ಇರುತ್ತದೆ.
ಆಮ್ಲ ಎಂದರೆ ನೆಲ್ಲಿಕಾಯಿ, ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನ ಮಾಡಲಾಗುವುದು. ನೆಲ್ಲಿಕಾಯಿ ಗಿಡವನ್ನು ಪೂಜಿಸುವುದರಿಂದ ಭಕ್ತರ ಬಯಕೆ ಈಡೇರುವುದು, ಸಕ್ಲಪ ನೆರವೇರುವುದು.

ಅಮಲಕಿ ಏಕಾದಶಿ ಉಪವಾಸದ ಪೂಜಾ ವಿಧಾನ
ಏಕಾದಶಿಯ ದಿನ ಬೇಗನೆ ಏಳಬೇಕು. ಎದ್ದು ಸ್ನಾನ ಮಾಡಿ ವಿಷ್ಣು ಮೂರ್ತಿಯನ್ನು ಶುಚಿಗೊಳಿಸಿ, ಪೂಜೆಯ ಸ್ಥಳವನ್ನು ಸ್ವಚ್ಛ ಮಾಡಬೇಕು. ನಂತರ ಉಪವಾಸ ಸಂಕಲ್ಪ ಮಾಡಿ.
* ನೆಲ್ಲಿಕಾಯಿ ಮರಕ್ಕೆ ಅಲಂಕರಿಸಿ ಪೂಜೆ ಮಾಡಬೇಕು.
* ಶ್ರೀ ವಿಷ್ಣುವಿಗೆ ಹೂ ಹಣ್ಣುಗಳನ್ನು ಅರ್ಪಿಸಿ.
* ದೇವರಿಗೆ ಪ್ರಸಾದವನ್ನಾಗಿ ನೆಲ್ಲಿಕಾಯಿ ಅರ್ಪಿಸಿ.
ದಾನ ಮಾಡಿ
* ಈ ದಿನ ಬಡವರಿಗೆ ದಾನ ಮಾಡಿ.
* ಆಹಾರ, ಬಟ್ಟೆಗಳ ದಾನ ಮಾಡಿ

ಅಮಲಕಿ ಏಕಾದಶಿ ವ್ರತ ಕತೆ
ಪೌರಾಣಿಕ ಕತೆಯ ಪ್ರಕಾರ ರಾಜ ಮಂಧಾತನು ಒಮ್ಮೆ ದಧಿಚಿ ಎಂಬ ಋಷಿಯನ್ನು ಭೇಟಿಯಾಗಿ ತನ್ನ ರಾಜ್ಯದ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳುತ್ತಾನೆ. ಆಗ ಋಷಿಯು ಅಮಲಕಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ರಾಜ ಭಕ್ತಿಯಿಂದ ಅಮಲಕಿ ಏಕಾದಶಿ ವ್ರತವನ್ನು ಆಚರಿಸಿದಾಗ ಅವನ ರಾಜ್ಯದ ಕಷ್ಟಗಳು ದೂರಾಗುವುದು, ತನ್ನ ಶತ್ರುಗಳ ಮೇಲೆ ಕೂಡ ಜಯ ಸಾಧಿಸುತ್ತಾನೆ.



Click it and Unblock the Notifications