Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರಾಶಿಚಕ್ರದ ಪ್ರಕಾರ ಸಂಗಾತಿಯನ್ನು ಓಲೈಸುವುದು ಹೇಗೆ?
ದೈಹಿಕ ಅನ್ಯೋನ್ಯತೆಯು ಸಂಬಂಧದ ಒಂದು ಪ್ರಮುಖ ಅಂಶವಾಗಿದೆ ಮತ್ತು ನಿಮ್ಮ ಸಂಗಾತಿ ಎಲ್ಲಿ ಸ್ಪರ್ಶಿಸಲು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಬಹುಶಃ ಅವರನ್ನು ತೃಪ್ತಿಪಡಿಸುವುದಕ್ಕೆ ಸಾಧ್ಯವಾಗುತ್ತದೆ.ನಿಮಗೆ ಆಶ್ಚರ್ಯ ಅನ್ನಿಸಬಹುದು.

ಅವರ ರಾಶಿಚಕ್ರದ ಚಿಹ್ನೆಗಳನ್ನು ಮಾರ್ಗಸೂಚಿಯಾಗಿ ಬಳಸುವುದರಿಂದ, ಅವರ ದೈಹಿಕ ಅನ್ಯೋನ್ಯತೆಯ ಆದ್ಯತೆಗಳ ಬಗ್ಗೆ ನೀವು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಹಾಗಾದ್ರೆ ನಿಮ್ಮ ಸಂಗಾತಿಯದ್ದು ಯಾವ ರಾಶಿ, ಅವರ ದೈಹಿಕ ಅನ್ಯೋನ್ಯತೆಯ ಭಾಗ ಯಾವುದು ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಮೇಷ
ಅಗ್ನಿಯ ಚಿಹ್ನೆಯವರಾಗಿರುವ ಮೇಷ ರಾಶಿಯ ಪುರುಷರು ಅಥವಾ ಮಹಿಳೆಯರು ನಿಮ್ಮ ಗಮನವನ್ನು ಅವರ ತಲೆ ಅಥವಾ ಮುಖದ ಮೇಲೆ ಕೇಂದ್ರೀಕರಿಸಿದಾಗ ಆಕರ್ಷಣೆಗೆ ಒಳಗಾಗುತ್ತಾರೆ. ನಿಮ್ಮ ಹುಡುಗನ ಕೂದಲು ಅಥವಾ ಹಣೆಯನ್ನು ಚುಂಬಿಸಿ ತುಂಟತನ ಶುರು ಮಾಡಬಹುದು. ಇನ್ನು ನಿಮ್ಮ ಹುಡುಗಿಯ ಕಿವಿ ಹಾಗೂ ಮೂಗಿನ ಮೇಲೆ ಮುತ್ತಿಡುವ ಮೂಲಕ ಅವಳನ್ನು ಸೆಳೆದುಕೊಳ್ಳಲು ಸಾಧ್ಯ. ತಲೆಗೆ ಮಸಾಜ್ ಮಾಡುವುದು, ಕಿವಿಗೆ ಚುಂಬಿಅಉವ ತಂತ್ರವನ್ನು ನೀವು ಮೇಷ ರಾಶಿಯವರಿಗೆ ಮಾಡಬಹುದು.

ವೃಷಭ
ವೃಷಭ ರಾಶಿಯವರಿಗೆ ಕುತ್ತಿಗೆ ಬಹಳ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಹಾಗಾಗಿ ವೃಷಭ ರಾಶಿಯವರೊಂದಿಗೆ ರೊಮ್ಯಾಂಟಿಕ್ ಆಗಲು ಕುತ್ತಿಗೆಯನ್ನು ಉಜ್ಜಬಹುದು ಅಥವಾ ಕುತ್ತಿಗೆಗೆ ಲಘು ಚುಂಬನದ ಮೂಲಕ ಪ್ರಾರಂಭಿಸಬಹುದು. ಅಲ್ಲದೆ ಅವರ ಬೆನ್ನನ್ನ ಉಜ್ಜಿದರೂ ಕೂಡ ಅವರು ಮೂಡಿಗೆ ಬರುತ್ತಾರೆ. ಶಾಂತವಾದ ಮಸಾಜ್ ಗಳನ್ನು ಇವರು ಇಷ್ಟ ಪಡುತ್ತಾರೆ.

ಮಿಥುನ
ಕೈ, ತೋಳು ಮತ್ತು ಭುಜಗಳು ಮಿಥುನ ರಾಶಿಯವರದ್ದಿರುವಷ್ಟು ಇತರರದ್ದು ಸೂಕ್ಷ್ಮವಾಗಿ ಇರುವುದಿಲ್ಲ. ಮಿಥುನ ರಾಶಿಯವರ ದೇಹದ ಈ ಭಾಗಗಳನ್ನ ಸ್ಪರ್ಷಿಸಿದರೆ ಖಂಡಿತ ನೀವು ಅವರೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯ. ನಿಮ್ಮ ಗೆಳೆಯ ಕಠಿಣವಾದ ದಿನವನ್ನು ಕಳೆದು ಬಂದಿದ್ದರೆ ಅವರ ತೋಳುಗಳಿಗೆ ಮಸಾಜ್ ಮಾಡಿ. ಆಗ ಖಂಡಿತ ಅವ್ರು ಉತ್ತಮ ಮೂಡ್ ಗೆ ಬರುತ್ತಾರೆ. ನಿಮ್ಮ ಹುಡುಗಿಯ ತೋಳುಗಳಿಗೆ ಗರಿಗಳಿಂದ ಸ್ಪರ್ಷ ನೀಡಿ. ಅವಳು ಕೂಡಲೇ ನಿಮ್ಮಳಾಗಿ ಸಮಯ ಕಳೆಯುತ್ತಾರೆ.

ಕರ್ಕ
ಕರ್ಕಾಟಕ ರಾಶಿಯ ಮಹಿಳೆಯರ ಸ್ತನಗಳು ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಆಕೆಯನ್ನು ಮುದ್ದಿಸುವುದಾದರೆ ಇದುವೇ ಕೀಲಿಕೈ. ಹುಡುಗರಲ್ಲಿ ಎದೆ ಮತ್ತು ಹೊಟ್ಟೆಯ ಭಾಗವು ಹೆಚ್ಚು ಪ್ರಶಸ್ತ. ಹಾಗಾಗಿ ಇವರನ್ನು ಆಕರ್ಷಿಸುವುದಕ್ಕೆ ಲಘು ಚುಂಬನದ ಮೂಲಕ ನೀವು ನಿಮ್ಮವರನ್ನು ವಶಕ್ಕೆ ಪಡೆಯಬಹುದು.

ಸಿಂಹ
ಸಿಂಹ ರಾಶಿಯವರ ಹೃದಯ ಬಡಿತವನ್ನು ಹೆಚ್ಚಿಸಬೇಕು ಎಂದರೆ ನೀವು ಅವರ ಬೆನ್ನಿನ ಭಾಗವನ್ನು ಸ್ಪರ್ಷಿಸಬೇಕು. ಪ್ರಾಣಿಗಳ ಮುದ್ದಿಸುವಿಕೆ ಇವರಲ್ಲಿ ನಡೆಯುತ್ತದೆ. ಬೆನ್ನಿನ ನೆಕ್ಕುವಿಕೆ, ಕಚ್ಚುವಿಕೆ, ಸವರುವಿಕೆ, ಇತ್ಯಾದಿಗಳು ಇವರ ನೆಚ್ಚಿನ ಅನ್ಯೋನ್ಯತೆಯ ಭಾಗ. ಹೀಗೆ ಮಾಡುವುದರಿಂದ ನೀವು ಉತ್ತಮ ಪ್ರತಿಕ್ರಿಯೆಯನ್ನು ಅವರಿಂದ ಪಡೆಯುತ್ತೀರಿ ಮತ್ತು ಅವರು ಬಿಸಿ ರಕ್ತದ ಪ್ರೇಮಿಗಳು. ನಿಮ್ಮ ಬೆರಳುಗಳಿಂದಅವರ ಹೃದಯವನ್ನು ಸ್ಪರ್ಷಿಸುವ ಕೆಲಸವನ್ನು ಸುಲಭವಾಗಿ ಮಾಡಬಹುದು.

ಕನ್ಯಾ
ನಿಖರತೆ ಮತ್ತು ಪರಿಪೂರ್ಣತೆಗೆ ಹೆಸರುವಾಸಿ ಕನ್ಯಾ ರಾಶಿಯವರು. ಹಾಗಾಗಿ ಅವರನ್ನು ಪ್ರಚೋದಿಸುವುದು ಸುಲಭದ ಕೆಲಸವಲ್ಲ. ನಿಮ್ಮ ಚಲನೆಯಲ್ಲಿ ನೀವು ಜಾಗರೂಕರಾಗಿರಬೇಕು. ಅವರನ್ನು ನೀವು ಹೆದರಿಸುವಂತಿಲ್ಲ. ಅವರ ಹೊಟ್ಟೆಯ ಭಾಗವು ಅವರ ಸೂಕ್ಷ್ಮ ಪ್ರದೇಶಗಳಲ್ಲೊಂದು. ನಿಧಾನವಾಗಿ ಅವರನ್ನು ಸೆಳೆಯುವ ಪ್ರಯತ್ನ ಮಾಡಬೇಕಾಗುತ್ತದೆ.

ತುಲಾ
ತುಲಾ ರಾಶಿಯವರ ಸೊಂಟದೊಂದಿಗೆ ತಮಾಷೆಯಿಂದಿರಿ. ಅವರ ಕೆಳ ಬೆನ್ನಿನೊಂದಿಗೆ ಉತ್ಸಾಹದಿಂದಿರಿ. ಅಧ್ಬುತ ಭಾವನೆಗಳೊಂದಿಗೆ ಇವುಗಳನ್ನು ಪ್ರಚೋದಿಸಿ. ನಿಮ್ಮ ಸಂಗಾತಿಯ ಕೆಳ ಬೆನ್ನಿನ ಅಂಕುಡೊಂಕುಗಳ ನಡುವೆ ನಿಮ್ಮ ಕೈಯಾಡಿಸಿ. ಅವರ ಭಾವನೆಗಳನ್ನು ಹೆಚ್ಚಿಸಲು ಚುಂಬಿಸಿ. ಕೆಳಬೆನ್ನನ್ನು ಸವರುವ ಮೂಲ ನಿಮ್ಮ ಸಂಗಾತಿಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ.

ವೃಶ್ಚಿಕ
ನಿಮ್ಮ ಉತ್ಸಾಹ, ನಿಮ್ಮ ಪ್ಯಾಷನ್ ವೃಶ್ಚಿಕ ರಾಶಿಯವರನ್ನು ಸೆಳೆಯುವುದಕ್ಕೆ ಸಾಕಾಗುತ್ತದೆ. ಸಯಮವನ್ನು ವ್ಯರ್ಥ ಮಾಡದೆ ನಿಮ್ಮ ಮೃದುತನದಿಂದ ಅವರನ್ನು ಬರಸೆಳೆಯಲು ಪ್ರಯತ್ನಿಸಬಹುದು. ನಿಮ್ಮ ನೋಟವೇ ಸಾಕು ಇವರನ್ನು ಸೆಳೆಯಲು. ಹಾಗಾಗಿ ನಿಮ್ಮ ನೋಟದ ನಾಟಕವನ್ನು ಮುಂದುವರಿಸಿ ಉತ್ತಮ ಸಮಯವನ್ನು ಕಳೆಯಿರಿ..

ಧನು
ಇವರ ಹಾಟ್ ಸ್ಪಾಟ್ ಇವರ ಆಂತರಿಕ ತೊಡೆಗಳು.ಇವರ ಇಂದ್ರಿಯಗಳನ್ನು ಪ್ರಚೋದಿಸುವಾಗ ಗರಿಷ್ಟ ಆನಂದವನ್ನು ಇವುಗಳು ನೀಡುತ್ತದೆ. ಈ ಪ್ರದೇಶದ ಅಲ್ಪ ಸ್ಪರ್ಷವೂ ಅತ್ಯಧಿಕ ಸಂತೋಷವನ್ನು ನೀಡುತ್ತದೆ. ಇವರನ್ನು ಇಲ್ಲಿ ಚುಂಬಿಸಿದಾಗ, ಸ್ಪರ್ಷಿಸಿದಾಗ,ಮುದ್ದಿಸಿದಾಗ ಅವರ ದೇಹ ನಿಮಿರುವುದನ್ನ ನೀವು ಗಮನಿಸಬಹುದು. ಪರಸ್ಪರ ಕೀಟಲೆಯಿಂದ ನೀವು ಉತ್ತಮ ರಾತ್ರಿ ಕಳೆಯಲು ಸಾಧ್ಯ.

ಮಕರ
ಮಕರ ರಾಶಿಯವರ ದುರ್ಬಲ ತಾಣವೆಂದರೆ ಅವರ ಮೊಣಕಾಲುಗಳು. ಇವರ ಮೊಣಕಾಲಿನ ಚರ್ಮ ಮತ್ತು ಮೊಣಕಾಲಿನ ಹಿಂಭಾಗದ ಸ್ಪರ್ಷದಿಂದಾಗಿ ಇವರ ಮೆದುಳಿನಲ್ಲಿ ಕರೆಂಟ್ ಹೊಡೆದಂತಾಗುತ್ತದೆ. ಅವರ ಮೊಣಕಾಲಿನ ಹಿಂಭಾಗ ಏನು ಮಾಡಬೇಕು ಎಂಬುದು ನಿಮಗೆ ತಿಳಿದಿದ್ದರೆ ನೀವು ಸಂತೋಷದ ಪರಮಾವಧಿಗೆ ತಲುಪಬಹುದು.

ಕುಂಭ
ಕುಂಭ ರಾಶಿಯವರನ್ನು ಸೆಳೆಯಲು ಅವರ ಪಾದದ ಉಜ್ಜುವಿಕೆ ನೆರವು ನೀಡುತ್ತದೆ. ಪಾದವೇ ಅವರ ಒಲವಿನ ತಾಣ. ಅವರ ಪಾದದಲ್ಲಿ ನೀವು ಮಾಡುವ ಪ್ರತಿ ನಡೆಯೂ ಕೂಡ ಅವರ ಪ್ರೀತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಟ್ರಿಕ್ ಗಳನ್ನು ಹೊರತುಪಡಿಸಿ, ಪಾದಕ್ಕೆ ಪರಿಮಳಯುಕ್ತವಾದ ಎಣ್ಣೆಯಿಂದ ಸವರಿ ಅವರನ್ನು ಇನ್ನಷ್ಟು ಸೆಳೆಯಬಹುದು. ,

ಮೀನ
ಮೀನ ರಾಶಿಯವರನ್ನು ಬಹಳ ಬೇಗನೆ ಸೆಳೆಯುವುದಕ್ಕೆ ಅವರ ಕಾಲುಗಳೆ ಸೂಕ್ಷ್ಮ ಪ್ರದೇಶ. ಆಕೆಯ ಅಥವಾ ಆತನ ಕಾಲುಗಳಿಗೆ ನೀಡುವ ಸಣ್ಣ ಸ್ಪರ್ಷ ಅಥವಾ ಮಸಾಜ್ ನಿಂದಾಗಿ ಅವರ ಹೃದಯ ಬಡಿತ ಹೆಚ್ಚಿಸಬಹುದು. ಲೈಂಗಿಕ ಸಂಪರ್ಕಕ್ಕಾಗಿ ನೀವು ಅವರ ಮನಸ್ಸನ್ನು ಸೆಳೆಯಲು ಇಂತಹ ಟ್ರಿಕ್ಸ್ ಗಳನ್ನು ಬಳಸಬಹುದು.



Click it and Unblock the Notifications











