Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶಿವ ಪುರಾಣದ ಪ್ರಕಾರ ಇಂತಹ ಕೆಟ್ಟ ಕೆಲಸಗಳನ್ನು ಮಾಡಿದ್ರೆ ಖಂಡಿತ ನರಕ ಪ್ರಾಪ್ತಿಯಾಗುತ್ತೆ
ಒಬ್ಬ ವ್ಯಕ್ತಿ ಭೂಮಿಯ ಮೇಲೆ ಎಷ್ಟು ದಿನ ಬದುಕಿರುತ್ತಾನೋ ಗೊತ್ತಿಲ್ಲ. ಆದರೆ ಬದುಕಿರುವ ಅಷ್ಟು ದಿನವು ಆದಷ್ಟು ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ಇಲ್ಲವಾದರೆ ಯಮ ನಮ್ಮ ಪಾಪಗಳ ಪಟ್ಟಿ ತುಂಬಿದ ಮೇಲೆ ನಮ್ಮನ್ನ ಯಮಲೋಕಕ್ಕೆ ಕರೆಸಿಕೊಳ್ಳುತ್ತಾನೆ.

ಶಿವ ಪುರಾಣದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಶಿವ ಪುರಾಣದಲ್ಲಿ ಮೋಕ್ಷದ ಬಗ್ಗೆ ಉಲ್ಲೇಖವಾಗಿದೆ. ಅದೇ ರೀತಿ ಶಿವ ಪುರಾಣದ ಪ್ರಕಾರ ನಾವು ಮಾಡುವ ಎಂತಹ ಕೆಲಸಗಳು ಪಾಪಗಳ ಪಟ್ಟಿಗೆ ಸೇರ್ಪಡೆಯಾಗುತ್ತವೆ ಅನ್ನುವುದರ ಬಗ್ಗೆಯೂ ಇಲ್ಲಿ ವಿವರಿಸಲಾಗಿದೆ. ಅಷ್ಟಕ್ಕು ಶಿವ ಪುರಾಣದ ಪ್ರಕಾರ ಎಂಥಹ ಕೆಲಸಗಳನ್ನು ಮಾಡಿದ್ರೆ ಪಾಪ ಎಂದು ಪರಿಗಣಿಸಲಾಗುತ್ತದೆ? ಶಿವ ಪುರಾಣದ ಪ್ರಕಾರ ಪಾಪಿಗಳು ಯಾರು? ಎಂಥಹ ಜನಗಳಿಗೆ ನರಕ ಪ್ರಾಪ್ತಿಯಾಗುತ್ತೆ ಅನ್ನೋದನ್ನ ಹೇಳ್ತೀವಿ.

1. ಪರರ ಸಂಗಾತಿಯ ಮೇಲೆ ಕಣ್ಣಿಡಬೇಡಿ
ಪರರ ಪತಿ ಅಥವಾ ಪತ್ನಿಯ ಮೇಲೆ ಕಣ್ಣಿಡಬೇಡಿ. ಹಾಗೂ ಅವರನ್ನು ತಮ್ಮವರನ್ನಾಗಿಸುವ ಕ್ರೂರ ಮನಸ್ಥಿತಿಯೂ ಬೇಡ. ಯಾಕೆಂದರೆ ಶಿವ ಪುರಾಣದ ಪ್ರಕಾರ ಹೀಗೆ ಮಾಡುವುದು ಮಹಾ ಪಾಪ. ಕನಿಷ್ಠ ಪಕ್ಷ ಈ ರೀತಿ ನೀವು ಯೋಚಿಸಿದರೂ ಅದು ಕೂಡ ಪಾಪವೇ. ಹೀಗಾಗಿ ಯಾವಾಗಲೂ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳೇ ಇರಲಿ.

2. ಗೌರವ ಕೊಡದಿರುವುದು
ಒರ್ವ ವ್ಯಕ್ತಿಯು ಒಬ್ಬರಿಗೆ ಗೌರವ ಕೊಡುವುದು ಮತ್ತು ಅವರಿಂದ ಗೌರವ ಪಡೆದುಕೊಳ್ಳುವುದನ್ನು ಕಲಿತುಕೊಂಡಿರಬೇಕು. ಮುಖ್ಯವಾಗಿ ಪೋಷಕರು, ಗುರುಗಳು, ಹಿರಿಯರು ಹಾಗೂ ನಿಮ್ಮ ಪತ್ನಿಗೆ ಅಗೌರವ ತೋರಲೇಬಾರದು. ಒಂದು ವೇಳೆ ನೀವು ಅಗೌರವ ತೋರಿದ್ದಾದರೆ ಶಿವಪುರಾಣದ ಪ್ರಕಾರ ಹೀಗೆ ಮಾಡುವುದರಿಂದ ಪಾಪ ಪ್ರಾಪ್ತಿಯಾಗುತ್ತಂತೆ.

3. ಇಂಥವರನ್ನು ಶಿವ ಕ್ಷಮಿಸೋದಿಲ್ಲ
ಶಿವ ಪುರಾಣದ ಪ್ರಕಾರ ಕುಡಿಯೋದು, ಗುರುಗಳ ಪತ್ನಿಯ ಮೇಲೆ ಕೆಟ್ಟ ಕಣ್ಣಿಡುವುದು, ದಾನದ ಹಣವನ್ನು ವಿನಿಯೋಗಿಸುವುದು ಇಂಥಹ ಕೆಲಸಗಳನ್ನು ಮಾಡಿದರೆ ಖಂಡಿತ ಶಿವ ಕ್ಷಮಿಸೋದಿಲ್ಲ. ಈ ಕೆಲಸಗಳು ನಿಮ್ಮ ಪಾಪಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ.

4. ಪರರ ಆಸ್ತಿಯ ಮೇಲಿನ ದುರಾಸೆ
ಮನುಷ್ಯ ತಾನು ಕಷ್ಟಪಟ್ಟು ದುಡಿಯಬೇಕೇ ವಿನಹಃ ಮತ್ತೊಬ್ಬರ ಆಸ್ತಿಯ ಮೇಲೆ ಆಸೆಪಟ್ಟು ಅದನ್ನು ಕಬಳಿಸಲು ಪ್ರಯತ್ನಿಸೋದು ಸರಿಯಲ್ಲ. ಒಂದು ವೇಳೆ ನೀವು ಬೇರೆಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದೇ ಆದರೆ ನಿಮಗೆ ಪಾಪ ಪ್ರಾಪ್ತಿಯಾಗಲಿದೆ ಅಂತ ಹೇಳುತ್ತೆ ಶಿವ ಪುರಾಣ.

5. ದೇವಸ್ಥಾನದಲ್ಲಿ ಕಳ್ಳತನ ಮಾಡುವುದು
ಚಿಕ್ಕದಾಗಲಿ ದೊಡ್ಡದಾಗಲಿ ಕಳ್ಳತನ ಮಾಡಲೇಬಾರದು. ಅದ್ರಲ್ಲೂ ಮುಖ್ಯವಾಗಿ ದೇವಸ್ಥಾನ ಹಾಗೂ ಬ್ರಾಹ್ಮಣನ ಮನೆಯಲ್ಲಿ ಕಳ್ಳತನ ಮಾಡಿದರೆ ಅದು ಮಹಾ ಪಾಪ ಎಂದು ಶಿವ ಪುರಾಣ ಹೇಳುತ್ತದೆ. ನಿಮ್ಮ ತಲೆಯಲ್ಲಿ ಅಂಥಹ ಆಲೋಚನೆಗಳು ಬಂದರೂ ಕೂಡ ಅದು ತಪ್ಪು.

6. ಈ ತಪ್ಪುಗಳಿಗೆ ಮೋಕ್ಷ ಲಭಿಸೋದೇ ಇಲ್ಲ
ಮುಗ್ಧ ಜನರಿಗೆ ಹಿಂಸೆ ನೀಡುವುದು, ನೆಮ್ಮದಿಯಿಂದಿರುವ ಅವರ ಬದುಕನ್ನು ಹಾಳು ಮಾಡುವುದು ಹಾಗೂ ಅಂಥವರಿಂದ ಕೊಳ್ಳೆ ಹೊಡೆಯುವುದನ್ನು ದೇವರು ಕ್ಷಮಿಸುವುದಿಲ್ಲವಂತೆ. ಅಂಥವರಿಗೆ ಖಂಡಿತ ಮೋಕ್ಷ ಲಭಿಸೋದಿಲ್ಲ ಎಂದು ಶಿವ ಪುರಾಣ ಹೇಳುತ್ತದೆ.

7. ಕಟು ಮಾತಿನಿಂದ ಮತ್ತೊಬ್ಬರಿಗೆ ನೋವು ಮಾಡುವುದು
ನೀವು ಒಬ್ಬರಿಗೆ ಹೊಡೆದರಷ್ಟೇ ಹಿಂಸೆಯಾವುದಿಲ್ಲ. ಕಟು ಮಾತುಗಳಿಂದ ಅವರನ್ನು ನಿಂದಿಸಿದರೂ ಅದು ಹಿಂಸೆಯಾಗುತ್ತದೆ. ಅಂಥಹ ಕೆಲಸಗಳು ಪಾಪಕ್ಕೆ ಸಮವಂತೆ. ಬೇರೆಯವರ ಮರ್ಯಾದೆ ತೆಗೆಯುವಂತಹ ಮಾತುಗಳನ್ನು ಖಂಡಿತ ಆಡಬೇಡಿ. ನಿಮ್ಮ ಮಾತುಗಳಿಂದ ಒಬ್ಬರಿಗೆ ಮಾನಸಿಕ ಒತ್ತಡವಾಗುವಂತೆ ನಡೆದುಕೊಳ್ಳಲೇಬೇಡಿ.

8. ಗರ್ಭಿಣಿ ಮಹಿಳೆಯರನ್ನು ನಿಂದಿಸಬೇಡಿ
ಮಹಿಳೆಯರು ಮುಖ್ಯವಾಗಿ ಅವರು ಋತುಮತಿಯಾಗಿರುವಾಗ ಅಥವಾ ಗರ್ಭಿಣಿಯಾಗಿರುವಾಗ ಅವರನ್ನು ನಿಂದಿಸಿದರೆ ಅದು ಪಾಪಕ್ಕೆ ಸಮವಂತೆ. ಶಿವಪುರಾಣದಲ್ಲಿ ಅಂಥಹ ಪಾಪಕ್ಕೆ ಪರಿಹಾರವಿಲ್ಲ. ಸಾಮಾನ್ಯವಾಗಿ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಹೃದಯ ತುಂಬಾ ಮೃದುವಾಗಿರುತ್ತದೆ. ಹೀಗಾಗಿ ಅಂಥಹ ಸಮಯದಲ್ಲಿ ಅವರಿಗೆ ನೋವಾಗುವ ರೀತಿ ನಡೆದುಕೊಳ್ಳಬಾರದು. ಇದು ಆಕೆಯ ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮಹಿಳೆಯೊಂದಿಗೆ ಕೆಟ್ಟದಾಗಿ ನಡೆದುಕೊಂಡರೆ ಅದು ಮಹಾ ಪಾಪವಂತೆ.
ಬದುಕಿರುವಷ್ಟು ದಿನ ಚೆನ್ನಾಗಿ ಬದುಕಬೇಕು. ನಾವು ಯಾವಾಗ ಒಬ್ಬರಿಗೆ ಒಳ್ಳೆಯದನ್ನು ಬಯಸುತ್ತೇವೆ. ಆಗ ಖಂಡಿತ ನಮಗೂ ಕೂಡ ಒಳ್ಳೆಯದೇ ಆಗುತ್ತದೆ ಅನ್ನುವುದನ್ನು ನೆನಪಿಡಿ.



Click it and Unblock the Notifications
