Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರದ ಯಾವ ದಿನ ಯಾವ ಕೆಲಸಕ್ಕೆ ಶುಭ ಗೊತ್ತಾ?
ವಾರದ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿದೆ, ಭಾನುವಾರದಿಂದ ಆರಂಭವಾಗುವ ವಾರ ಶನಿವಾರದ ಮೂಲಕ ಅಂತ್ಯವಾಗುತ್ತದೆ. ವಾರದ ಕೆಲವು ದಿನವನ್ನು ಕೆಲವರು ತಮ್ಮ ಅದೃಷ್ಟದ ದಿನ ಎಂದು ನಂಬಿದ್ದರೆ, ಕೆಲವು ದಿನಗಳು ಈ ದಿನ ಏನೇ ಕೆಲಸ ಮಾಡಿದರೂ ಶುಭ ಫಲಿತಾಂಶ ಲಭಿಸುವುದಿಲ್ಲ ಎಂದು ನಂಬಿರುವುದು ಉಂಟು.

ಇಷ್ಟಕ್ಕೆ ಸೀಮಿತವಾಗದೆ, ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗಲೂ ನಾವು ಶುಭ ದಿನ, ಮುಹೂರ್ತ ಎಲ್ಲವನ್ನು ನೋಡುತ್ತೇವೆ. ಪ್ರತಿ ದಿನವೂ ಒಂದೊಂದು ಕಾರ್ಯಗಳಿಗೆ ಶುಭ, ಕೆಲವೊಂದು ಕಾರ್ಯಗಳಿಗೆ ಅಶುಭ ಎಂದು ಪರಿಗಣಿಸಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿನ, ಯಾವ ಕಾರ್ಯಗಳಿಗೆ ಶುಭ ಎಂದು ಇಲ್ಲಿ ತಿಳಿಸಿಕೊಡಲಿದ್ದೇವೆ:

ಭಾನುವಾರ
ಕಲೆಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭಿಸಲು ಬಯಸುವವರಿಗೆ ಭಾನುವಾರವು ಶುಭ ದಿನವಾಗಿದೆ. ಕಲಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವವರು ಭಾನುವಾರದಂದು ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆ ಅದೃಷ್ಟ ಎನ್ನಲಾಗುತ್ತದೆ. ಚಿತ್ರಕಲೆ, ಕರಕುಶಲ, ನೃತ್ಯ, ಸಂಗೀತ, ವಾದ್ಯಸಂಗೀತ ಹೀಗೆ ಯಾವುದೇ ಕಲಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಅಥವಾ ಕಲಿಕೆ ಆರಂಭಿಸಲು ನೀವು ಈ ದಿನವನ್ನು ಪರಿಗಣಿಸಬಹುದು. ಅಲ್ಲದೆ, ಕಲಾ ಶಾಲೆಯನ್ನು ಸಹ ಪ್ರಾರಂಭಿಸಲು ಇದೇ ಶುಭ ದಿನ.

ಸೋಮವಾರ
ಸೋಮವಾರವನ್ನು ಶಿವ ಮತ್ತು ಚಂದ್ರ ದೇವನಿಗೆ ಅರ್ಪಿಸಲಾಗಿದೆ. ಬಹುತೇಕ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಸೋಮವಾರ ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಸೋಮವಾರದಂದು ನೀವು ರತ್ನದ ಕಲ್ಲುಗಳನ್ನು ಖರೀದಿಸಿದರೆ ಅಥವಾ ಧರಿಸಿದರೆ ಶುಭ ಎನ್ನಲಾಗುತ್ತದೆ. ಜ್ಯೋತಿಷ್ಯದಲ್ಲಿ ಹೇಳುವಂತೆ ರತ್ನಗಳನ್ನು ಮೊದಲು ಧರಿಸುವಾಗ ಶುಭ ದಿನ ಹಾಗೂ ಮುಹೂರ್ತದಲ್ಲೇ ಧರಿಸಬೇಕು. ಆದ್ದರಿಂದ ನೀವು ಮೊದಲ ಬಾರಿಗೆ ರತ್ನದ ಕಲ್ಲು ಧರಿಸಿದರೆ ಸೋಮವಾರವನ್ನು ಆಯ್ಕೆ ಮಾಡಬಹುದು.

ಮಂಗಳವಾರ
ಮಂಗಳವಾರ ಹನುಮಾನ್ ಭಗವಂತನಿಗೆ ಸಮರ್ಪಿಸಲಾಗಿದೆ. ದೈಹಿಕ ಶ್ರಮ ಇರುವ ಅಥವಾ ಸ್ವಲ್ಪ ಅಪಾಯ ಎನ್ನಬಹುದಾದ ಕಾರ್ಯಗಳನ್ನು ಈ ದಿನ ಮಾಡಲು ಸೂಕ್ತ ಎನ್ನುತ್ತದೆ ವಾಸ್ತುಶಾಸ್ತ್ರ. ಅಲ್ಲದೆ, ಮಂಗಳವಾರ ಹಣಕಾಸಿನ ವ್ಯವಹಾರಗಳಿಗೂ ಶುಭ ದಿನವಾಗಿದೆ. ಆದ್ದರಿಂದ ಈ ದಿನದಂದು ಷೇರು ಮಾರುಕಟ್ಟೆ, ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವುದು ಅಥವಾ ವ್ಯವಹರಿಸುವುದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇನ್ನೂ ಮುಖ್ಯವಾಗಿ, ಮಂಗಳವಾರದಂದು ಸಾಲ ಮಾಡಬಾರದು ಹಾಗೂ ಮಾಡಿದರೆ ಅವರಿಗೆ ಆ ಹಣವನ್ನು ಮರುಪಾವತಿಸಲು ಕಷ್ಟಸಾಧ್ಯ ಎನ್ನಲಾಗುತ್ತದೆ.

ಬುಧವಾರ
ಬುಧವಾರ ಯಾವುದೇ ಹೊಸತುಗಳನ್ನು ಆರಂಭಿಸಲು ಶುಭ ದಿನ. ಹೊಸ ವ್ಯವಹಾರ, ಹೊಸ ಉದ್ಯೋಗ, ವ್ಯಾಪಾರ, ವಾಹನ ಖರೀದಿ ಎಲ್ಲದಕ್ಕೂ ಇದು ಶುಭ ದಿನ. ಅದರಲ್ಲೂ, ಹೊಸ ಉದ್ಯೋಗದೊಂದಿಗೆ ಪ್ರಾರಂಭಿಸಲು ಬುಧವಾರ ಅದೃಷ್ಟದ ದಿನ ಎನ್ನುತ್ತಾರೆ. ಈ ಹಿಂದಿನ ಕೆಲಸವು ನಿಮಗೆ ಹೆಚ್ಚಿನ ಪ್ರಗತಿಯನ್ನು ನೀಡದಿದ್ದರೆ, ನೀವು ಬುಧವಾರ ಹೊಸದನ್ನು ಪ್ರಾರಂಭಿಸಿ ನೋಡಿ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ. ಈ ದಿನದ ಆರಂಭವು ನಿಮಗೆ ಹೆಚ್ಚಿನ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ ಎಂಬುದು ವಾಸ್ತುಶಾಸ್ತ್ರದ ಲೆಕ್ಕಾಚಾರ.

ಗುರುವಾರ
ಗುರು ರಾಘವೇಂದ್ರ ಸ್ವಾಮಿಗೆ ಅರ್ಪಿತವಾದ ಗುರುವಾರ, ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಈ ದಿನ ಪ್ರಾರಂಭಿಸಬಹುದು. ಗುರುವಾರದಂದು ನೀವು ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಕೆಲಸಗಳನ್ನು ಪ್ರಾರಂಭಿಸಿದರೆ ಯಶಸ್ವಿಯಾಗುವ ಹೆಚ್ಚಿನ ಅವಕಾಶಗಳಿವೆ. ಅಲ್ಲದೆ, ವಾಸ್ತುಶಾಸ್ತ್ರದ ಪ್ರಕಾರ, ಗುರುವಾರದಂದು ಹಣ ನೀಡುವುದು ಹಾಗೂ ಸಾಲ ಪಡೆಯುವುದನ್ನು ತಪ್ಪಿಸಿ, ಇಲ್ಲವಾದಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಶುಕ್ರವಾರ
ಶುಕ್ರವಾರ ಲಕ್ಷ್ಮಿಯ ವಾರ ಎಂದು ಹಿಂದೂಗಳಲ್ಲಿ ನಂಬಿಕೆ ಇದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಸರ್ವಶುಭ ಲಭಿಸುತ್ತದೆ ಎನ್ನಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಾಕರ, ಕಾನೂನು ರೀತಿಯ ವ್ಯವಹಾರಗಳಿಗೆ ಶುಕ್ರವಾರ ಶುಭ ದಿನ. ಈ ದಿನ ಕಾನೂನು ವ್ಯವಹಾರಗಳನ್ನು ಪ್ರಾರಂಭಿಸಿದರೆ ಸಕಾರಾತ್ಮಕ ಪ್ರತಿಫಲ ಸಿಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗೂ ಶುಕ್ರವಾರ ಶುಭ ಎಂದು ಪರಿಗಣಿಸಬಹುದು. ಕೃಷಿಗೆ ಸಂಬಂಧಿಸಿದ ವಿಷಯಗಳಾದ ಬಿತ್ತನೆ, ಕೊಯ್ಲು ಇತ್ಯಾದಿಗಳನ್ನು ಶುಕ್ರವಾರದಿಂದ ಪ್ರಾರಂಭಿಸಿದರೆ ಒಳಿತು.

ಶನಿವಾರ
ಶನಿವಾರ ಶನಿ ದೇವನಿಗೆ ಅರ್ಪಿತವಾದ ದಿನ. ಯಾವುದೇ ಪರಿಹಾರ ಕಾರ್ಯಗಳನ್ನು ಮಾಡಲು ಈ ದಿನ ಉತ್ತಮ. ಅಲ್ಲದೇ, ಔಷಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಈ ದಿನದಂದು ನೀವು ಉತ್ತಮವಾಗಿ ನಿಭಾಯಿಸಬಹುದು.



Click it and Unblock the Notifications











