Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಈ 5 ರಾಶಿಚಕ್ರದವರು ದ್ವೇಷ ಕಟ್ಟಿಕೊಳ್ಳುವುದಿಲ್ಲ-ಇತರರ ತಪ್ಪನ್ನು ಬೇಗನೇ ಕ್ಷಮಿಸಿ ಬಿಡುವರು
ಮನೆಯಲ್ಲಿ ಸೋದರ ಸೋದರಿಯರ ಜತೆಗೆ, ಬಾಳಸಂಗಾತಿ ಜತೆ ಅಥವಾ ಹೊರಗಡೆ ಸ್ನೇಹಿತರೊಂದಿಗೆ ಅಥವಾ ಯಾವುದೋ ಪರಿಚಯಸ್ಥರೊಂದಿಗೆ ಜಗಳವಾಗಿಬಿಡಬಹುದು. ಇದು ಸಾಮಾನ್ಯ ಜಗಳವಾಗಿರಬಹುದು. ಆದರೆ ಕೆಲವೊಂದು ಸಲ ಇಂತಹ ಜಗಳಗಳಿಂದಾಗಿ ಇಬ್ಬರ ನಡುವಿನ ಸಂಬಂಧವು ಕೆಡಬಹುದು. ಹೀಗಾದರೆ ಮನಸ್ಸಿನಲ್ಲೇ ಕೊರಗುತ್ತಾ ಇರಬೇಕಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರು ಯಾವಾಗಲೂ ದ್ವೇಷ ಕಟ್ಟಿಕೊಂಡು ಇರುವರು. ಇನ್ನು ಕೆಲವರು ಬೇಗನೆ ಕ್ಷಮಿಸಿ ಬಿಡುವರು. ರಾಶಿ ಚಕ್ರಗಳ ಪ್ರಕಾರ ಯಾವ ರಾಶಿಗಳ ಜನರು ಬೇಗನೆ ತಪ್ಪನ್ನು ಕ್ಷಮಿಸಿ ಬಿಡುವರು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಯಾಕೆಂದರೆ ಅವರ ರಾಶಿಯಲ್ಲಿಯೇ ಕ್ಷಮಿಸುವಂತಹ ಗುಣವು ಇರುವುದು. ಇದೇ ಕಾರಣದಿಂದಾಗಿ ಬೇರೆ ರಾಶಿಗಳಿಂತ ಈ ರಾಶಿಯವರು ಯಾವುದೇ ತಪ್ಪು ಅಥವಾ ಮುನಿಸನ್ನು ಕ್ಷಮಿಸುವರು.

ಮೇಷ
ಈ ಪಟ್ಟಿಯಲ್ಲಿ ಬೇಗನೆ ಸಿಟ್ಟಾಗುವಂತಹ ಮೇಷ ರಾಶಿಯವರನ್ನು ನೋಡಿ ಅಚ್ಚರಿಪಟ್ಟಿದ್ದೀರಾ? ಹೌದು, ಮೇಷ ರಾಶಿಯವರಲ್ಲಿ ಕ್ಷಮಿಸುವ ಗುಣವು ಇದೆ. ಇವರು ಬೇಗನೆ ಸಿಟ್ಟಿಗೊಳಗಾದರೂ ಕ್ಷಮೆ ನೀಡುವರು. ಸಣ್ಣ ತಪ್ಪುಗಳಿಗೆ ಇವರು ಅಷ್ಟು ಬೇಗನೆ ಕ್ರೋಧಗೊಳ್ಳುವುದಿಲ್ಲ. ಇವರು ಒರಟು ಜೋಕ್ ನ್ನು ಯಾವಾಗಲೂ ಸ್ವೀಕರಿಸಲ್ಲ ಮತ್ತು ಇದರಿಂದ ಸಿಟ್ಟಾಗುವರು. ಇವರ ಹೃದಯವು ಬೇಗನೆ ಕರಗುವುದು ಮತ್ತು ಇದರಿಂದ ತಪ್ಪು ಮಾಡಿದ ವ್ಯಕ್ತಿಯನ್ನು ಕ್ಷಮಿಸಿ ಬಿಡುವರು. ಇದರಿಂದ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡುವರು. ಆದರೆ ಎರಡನೇ ಅವಕಾಶ ಸಿಗುವುದು. ಮೂರನೇ ಅವಕಾಶ ಇವರು ಖಂಡಿತವಾಗಿಯೂ ನೀಡಲಾರರು.
Most Read: ಧನು ರಾಶಿಯ ಪುರುಷ ಹಾಗೂ ಕುಂಭ ರಾಶಿಯ ಮಹಿಳೆಯ ನಡುವಿನ ಹೊಂದಾಣಿಕೆ ಹೇಗಿರುವುದು ನೋಡಿ...

ಕರ್ಕಾಟಕ
ಹೌದು, ಇವರು ಕರಣಾಮಯಿಯಾಗಿದ್ದರೆ ಖಂಡಿತವಾಗಿಯೂ ನಿಮಗೆ ಮತ್ತೊಂದು ಅವಕಾಶ ನೀಡುವರು. ಅದಾಗ್ಯೂ, ತಮಗೆ ಮೋಸ ಮಾಡಿದ ವ್ಯಕ್ತಿಯ ಬಗ್ಗೆ ಇವರು ತುಂಬಾ ಜಾಗರೂಕರಾಗಿ ಇರುವರು. ಅನ್ಯೋನ್ಯತೆಯ ಸೆಳೆತವು ನಿಮ್ಮತ್ತ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು. ಆದರೆ ಇದರ ಬಳಿಕ ನಿಮ್ಮ ಬಗ್ಗೆ ಸಂಶಯ ಹೊಂದಿರುವರು.

ತುಲಾ
ದಯಾಮಯಿಗಳಾಗಿರುವಂತಹ ತುಲಾ ರಾಶಿಯವರು ನಿಮ್ಮನ್ನು ಖಂಡಿತವಾಗಿಯೂ ಕ್ಷಮಿಸಿ ಬಿಡುವರು. ಆದರೆ ಅದೇ ವಿಚಾರದಲ್ಲಿ ಮತ್ತೆ ನಿಮ್ಮನ್ನು ಅವರು ನಂಬುವುದಿಲ್ಲ. ಅವರು ಮತ್ತೆ ನಿಮ್ಮೊಂದಿಗೆ ಒಳ್ಳೆಯ ಸಂಬಂಧ, ಮಾತು ಮತ್ತು ಆಹಾರವನ್ನು ಹಂಚಿಕೊಳ್ಳಬಹುದು. ಆದರೆ ನಿಮ್ಮನ್ನು ನಂಬುವುದರಿಂದ ದೂರ ಉಳಿಯುವರು. ಇಬ್ಬರ ನಡುವೆ ನಡೆದಿರುವಂತಹ ಜಗಳಕ್ಕೆ ತಾವೇ ಕಾರಣವೆಂದು ಕೆಲವೊಂದು ಸಲ ತುಲಾ ರಾಶಿಯವರು ಭಾವಿಸುವರು. ಇವರು ಪ್ರಾಮಾಣಿಕತೆಯನ್ನು ಹೊಗಳುವರು ಮತ್ತು ನೀವು ತಪ್ಪು ಮಾಡಿರುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರೆ ಆಗ ಕ್ಷಮಿಸಿ ಬಿಡುವರು.
Most Read: ಒಟ್ಟು 12 ರಾಶಿಗಳಲ್ಲಿ, ಈ 5 ರಾಶಿಯವರು ತುಂಬಾನೇ ಸ್ಪರ್ಧಾತ್ಮಕವಾದ ರಾಶಿಚಕ್ರಗಳು

ಧನು
ಧನು ರಾಶಿಯವರು ಆಶಾವಾದಿಗಳು ಮತ್ತು ನಿಮ್ಮಲ್ಲಿರುವ ಒಳ್ಳೆಯದನ್ನು ಹುಡುಕುವರು. ನೀವು ಅವರನ್ನು ಕೆಟ್ಟ ಪರಿಸ್ಥಿತಿಗೆ ದೂಡಿದರೂ ಅವರು ಅದರಲ್ಲಿ ಧನಾತ್ಮಕತೆ ಹುಡುಕುವರು. ಆಕೆ ನಿಮ್ಮನ್ನು ಟ್ರೋಲ್ ಮಾಡುವರು ಮತ್ತು ಈ ವೇಳೆ ಜಗಳವು ಕೊನೆಗೊಳ್ಳಬಹುದು. ಅದಾಗ್ಯೂ, ಜಗಳವು ನಿಮಗೆ ತುಂಬಾ ಬೇಸರ ಮೂಡಿಸಿದರೆ, ಕ್ಷಮೆ ನೀಡಿದರೆ ಅದರಿಂದ ನಿಮಗಿಬ್ಬರಿಗೂ ಬೆಳೆಯಲು ನೆರವಾಗಲಿದೆಯಾ ಎಂದು ನೋಡುವಳು.

ಮೀನ
ಮೀನ ರಾಶಿಯವರನ್ನು ನೋಡಿದರೆ ಅವರು ಆಳವಾಗಿ ಚಿಂತಿಸುವವರು, ಪ್ರತಿಯೊಂದು ವಿಚಾರದಲ್ಲೂ ತುಂಬಾ ಗಂಭೀರವಾಗಿರುವರು. ಇವರು ಬೇರೆಯವರನ್ನು ಕ್ಷಮಿಸಿ ಬಿಡುವ ಗುಣ ಹೊಂದಿರುವರು. ಇವರು ಜನರನ್ನು ಸಂಪೂರ್ಣವಾಗಿ ನಂಬಿ ಬಿಡುವರು. ಇದನ್ನು ನಾವು ಕಣ್ಣುಮುಚ್ಚಿಕೊಂಡು ನಂಬುವುದು ಎಂದರೆ ತಪ್ಪಾಗದು. ಇವರು ಭಾವನಾತ್ಮಕವಾಗಿಯೂ ತುಂಬಾ ಗಾಢವಾದ ಸಂಬಂಧ ಹೊಂದುವರು. ಇವರು ಕೇವಲ ಒಂದು ಸಲ ಕ್ಷಮಿಸಿ ಬಿಡುವುದಲ್ಲ. ನೀವು ತಪ್ಪು ಮಾಡಿದರೆ ಇವರು ಮತ್ತೆ ಮತ್ತೆ ನಿಮ್ಮನ್ನು ಕ್ಷಮಿಸಿ ಬಿಡುವರು.



Click it and Unblock the Notifications