Latest Updates
-
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ!
ಧನು ರಾಶಿಯ ಪುರುಷ ಹಾಗೂ ಕುಂಭ ರಾಶಿಯ ಮಹಿಳೆಯ ನಡುವಿನ ಹೊಂದಾಣಿಕೆ ಹೇಗಿರುವುದು ನೋಡಿ...
ಹೊಂದಾಣಿಕೆ ಎನ್ನುವುದು ವ್ಯಕ್ತಿ ತನ್ನ ಜೀವನದಲ್ಲಿ ಮಾಡಿಕೊಳ್ಳುವ ಒಂದು ತ್ಯಾಗ ಅಥವಾ ಮಹತ್ತರವಾದ ಸಂಗತಿ ಎಂದು ಹೇಳಬಹುದು. ಚಿಕ್ಕ ವಯಸ್ಸಿನಿಂದಲೂ ಬೆಳೆಸಿಕೊಂಡು ಬಂದ ಕೆಲವು ಗುಣಗಳು ಅಥವಾ ಸ್ವಭಾವಗಳನ್ನು ತ್ಯಾಗ ಮಾಡುವುದು ಎಂದರೆ ಅದು ಸಾಮಾನ್ಯವಾದ ಸಂಗತಿಯಲ್ಲ. ಒಬ್ಬರಿಗಾಗಿ ಒಬ್ಬರು ತಮ್ಮ ಸ್ವಭಾವ ಅಥವಾ ಅಭ್ಯಾಗಳಲ್ಲಿ ಬದಲಾವಣೆ ತಂದುಕೊಳ್ಳುವುದು ಪ್ರೀತಿಗೆ ನೀಡುವ ಗೌರವ ಎನಿಸಿಕೊಳ್ಳುವುದು.
ಹೊಂದಾಣಿಕೆ ಎನ್ನುವುದನ್ನು ವ್ಯಕ್ತಿ ಎಷ್ಟರ ಮಟ್ಟಿಗೆ ರೂಢಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಅವರ ಜೀವನ ನಿಂತಿರುತ್ತದೆ. ಮನೆ ಮಂದಿಯೊಂದಿಗೆ, ಮಕ್ಕಳೊಂದಿಗೆ, ಸ್ನೇಹಿತರೊಂದಿಗೆ, ಸಂಗಾತಿಯೊಂದಿಗೆ, ಬಂಧುಗಳ ನಡುವೆ, ನೆರೆಹೊರೆಯವರೊಂದಿಗೆ ಹೀಗೆ ತಾನು ಹೋದ ಸ್ಥಳಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗಬೇಕು. ಆಗಲೇ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ಜೀವನ ನಡೆಸಲು ಸಾಧ್ಯವಾಗುವುದು. ಹೊಂದಾಣಿಕೆ ಎನ್ನುವ ಸ್ವಭಾವವು ನಾವು ಬೆಳೆದು ಬಂದ ಪರಿಸರ ಹಾಗೂ ಕುಂಡಲಿಯ ಪ್ರಭಾವದಿಂದಲೂ ನಡೆಯುವುದು ಎಂದು ಹೇಳಲಾಗುವುದು.

ಪತಿ ಪತ್ನಿಗಳ ನಡುವೆ ಇರುವ ಹೊಂದಾಣಿಕೆ
ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಸಂಗತಿ ಎಂದರೆ ಪತಿ ಪತ್ನಿಗಳ ನಡುವೆ ಇರುವ ಹೊಂದಾಣಿಕೆ. ದೀರ್ಘ ಸಮಯಗಳ ಕಾಲ ಸಂಗಾತಿಯೊಂದಿಗೆ ಜೀವನ ನಡೆಸುವುದರಿಂದ ಅಲ್ಲಿ ಪರಸ್ಪರ ಹೊಂದಾಣಿಕೆ ಬಹುಮುಖ್ಯವಾಗುವುದು. ಹೊಂದಾಣಿಕೆ ಹೆಚ್ಚು ಇದ್ದಂತೆ ಜೀವನವು ಪ್ರೀತಿ ಹಾಗೂ ವಿಶ್ವಾಸದಿಂದ ಕೂಡಿರುತ್ತದೆ. ಎಲ್ಲಿ ಹೊಂದಾಣಿಕೆಯ ಸಮಸ್ಯೆ ಇರುತ್ತದೆಯೋ ಅಲ್ಲಿ ಸ್ವಾರ್ಥ ಭಾವನೆ ಹೆಚ್ಚುವುದು. ಜೊತೆಗೆ ಪ್ರೀತಿ ಎನ್ನುವುದು ಕಣ್ಮರೆಯಾಗುತ್ತಾ ಹೋಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರಿಗೂ ಪ್ರಮುಖ ರಾಶಿಚಕ್ರದವರು ಮಾತ್ರ ಉತ್ತಮ ಹೊಂದಾಣಿಕೆಯನ್ನು ನಡೆಸುತ್ತಾರೆ. ಅದು ಅವರ ರಾಶಿಚಕ್ರಗಳಿಗೆ ಇರುವ ಸ್ವಭಾವವು ಕಾರಣವಾಗಿರುತ್ತದೆ ಎಂದು ಹೇಳಲಾಗುವುದು.

ಧನು ರಾಶಿಯ ಪುರುಷ ಹಾಗೂ ಕುಂಭರಾಶಿಯ ಮಹಿಳೆ
ಈ ಹಿನ್ನೆಲೆಯಲ್ಲಿ ಧನು ರಾಶಿಯ ಪುರುಷರಿಗೆ ಹಾಗೂ ಕುಂಭರಾಶಿಯ ಮಹಿಳೆಯರ ನಡುವೆ ಯಾವ ರೀತಿಯ ಪ್ರೀತಿವಿಶ್ವಾಸ ಇರುತ್ತದೆ? ಹೊಂದಾಣಿಕೆಯ ಆಳ ಹೇಗೆ ಇರುವುದು ಎನ್ನುವುದರ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ. ಧನು ರಾಶಿಯವರು ಮತ್ತು ಕುಂಭ ರಾಶಿಯವರ ದಾಂಪತ್ಯ ಜೀವನ ವಿನೋದ, ಉತ್ಸಾಹ ಆಳವಾದ ತಿಳುವಳಿಕೆಗಳಿಂದ ಜೀವನವನ್ನು ಎದುರು ನೋಡುತ್ತಾರೆ. ಬಿಲ್ಲುಗಾರ ಹಾಗೂ ಜಲಧಾರಕ ಚಿಹ್ನೆಯನ್ನು ಹೊಂದಿರುವ ಈ ಎರಡು ರಾಶಿಚಕ್ರದವರು ಸ್ವಾತಂತ್ರ್ಯವನ್ನು ಬಯಸುವ ರಾಶಿಚಕ್ರದವರಾಗಿರುತ್ತಾರೆ. ಇವರಿಬ್ಬರ ಜೀವನ ಶೈಲಿಯಲ್ಲಿ ಸಂಘರ್ಷದ ಪ್ರಮಾಣ ಕಡಿಮೆಯಾಗಿರುತ್ತದೆ. ಉತ್ತಮವಾದ ಒಲವು ಇವರ ಜೀವನದಲ್ಲಿ ಪ್ರೀತಿಯ ದೀಪವನ್ನು ದೀರ್ಘ ಕಾಲದವರೆಗೂ ಬೆಳಗುವುದು ಎಂದು ಹೇಳಲಾಗುವುದು.

ಧನು ರಾಶಿಯವರು
ಧನು ರಾಶಿಯವರು ಉತ್ಸಾಹ ಭರಿತ, ಹರ್ಷಚಿತ್ತದಿಂದ ಕೂಡಿರುವ ಸ್ವಭಾವ ಇವರದ್ದಾಗಿರುತ್ತದೆ. ಇವರ ನಡುವೆ ಇರುವ ಏಕೈಕ ವಿಷಯದ ಕೊರತೆ ಎಂದರೆ ಬದ್ಧತೆಯನ್ನು ಕಾಯ್ದುಕೊಳ್ಳುವುದು ಎಂದು ಹೇಳಬಹುದು. ಇಬ್ಬರಲ್ಲೂ ನಿರ್ಬಂಧವಿಲ್ಲದ ಪ್ರವೃತ್ತಿ ಇರುವುದರಿಂದ ಅವರ ನಿರೀಕ್ಷೆಯಂತೆ ಸಂದರ್ಭಗಳನ್ನು ಬದಲಿಸಿಕೊಂಡು ಜೀವನದಲ್ಲಿ ಮುಂದೆ ಸಾಗುತ್ತಾರೆ. ಇಬ್ಬರ ಸ್ವಭಾವದಲ್ಲಿ ಬಹುತೇಕ ವಿಚಾರಗಳು ಒಂದೇ ರೀತಿಯಲ್ಲಿ ಇರುವುದರಿಂದ ಸಮಸ್ಯೆಗಳು ಅಷ್ಟಾಗಿ ಕಾಣಿಸಿಕೊಳ್ಳದು.

ಮೂಲಭೂತ ಹೊಂದಾಣಿಕೆ
ಧನು ಮತ್ತು ಕುಂಭ ರಾಶಿಯ ವ್ಯಕ್ತಿಗಳು ತಮ್ಮಲ್ಲಿರುವ ಸೈಸರ್ಗಿಕ ದತ್ತವಾದ ಸ್ವಭಾವವನ್ನು ಬಹಳ ಸುಲಭವಾಗಿ ಹಂಚಿಕೊಳ್ಳುತ್ತಾರೆ. ಇವರ ಆಸೆ ಹಾಗೂ ಸ್ವತಂತ್ರದ ಭಾವನೆಗೆ ಮಿತಿ ಇರುವುದಿಲ್ಲ. ಇದನ್ನು ಇಬ್ಬರೂ ಸಾಮಾನ್ಯವಾಗಿಯೇ ಪರಿಗಣಿಸುವರು. ತಮ್ಮ ಸಾಧನೆಯನ್ನು ತೀಕ್ಷ್ಣವಾಗಿ ಪರಿಗಣಿಸುವ ಸ್ವಭಾವ ಇರುವುದರಿಂದ ಪರಸ್ಪರ ಪ್ರೋತ್ಸಾಹ ಹಾಗೂ ಹುರಿದುಂಬಿಸಿಕೊಳ್ಳುವರು. ಇವರ ಉತ್ಸಾಹಗಳು ಸರಳವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಧನು ರಾಶಿಯವರ ಗುಣವು ಅತ್ಯಂತ ತಮಾಷೆಯಿಂದ ಕೂಡಿರುತ್ತದೆ. ಕೆಲವೊಮ್ಮೆ ಬಾಲಿಶದಂತೆ ವರ್ತಿಸುವರು. ಕ್ಷಣಾರ್ಧದಲ್ಲಿ ಗಂಭೀರತೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಕುಂಭ ರಾಶಿಯ ಮಹಿಳೆ
ಕುಂಭ ರಾಶಿಯ ಮಹಿಳೆಯರಲ್ಲಿ ಜೀವನದ ಬಹುತೇಕ ಸಂಗತಿಗಳಲ್ಲಿ ಗಂಭೀರತೆಯನ್ನು ಪಡೆದುಕೊಳ್ಳಲುಬಯಸುವರು. ಇದು ಇವರಿಬ್ಬರ ಸ್ವಭಾವದಲ್ಲಿ ಸ್ವಲ್ಪ ಮಟ್ಟಿಗೆ ವಿರುದ್ಧವಾದ ಸ್ವಭಾವವನ್ನು ತೋರುವುದು. ಎರಡು ರಾಶಿಯವರು ಸಾಮಾನ್ಯ ಸಂಗತಿಗಳಲ್ಲಿ ಒಂದೇ ಬಗೆಯ ಭಾವನೆಯನ್ನು ಹೊಂದುವರು. ಕುಂಭ ರಾಶಿಯವರು ನಿರಂತರವಾಗಿ ಅವಶ್ಯಕತೆಗಳಿಗೆ ಅನುಗುಣವಾಗಿ ಸಹಾನುಭೂತಿ ಹಾಘೂ ಸಹಾಯ ಮಾಡಲು ಮುಂದಾಗುತ್ತಾರೆ. ಸಹಾನುಭೂತಿಯ ಕ್ರಮಗಳು ಅವರನ್ನು ಹೆಚ್ಚು ಪ್ರೇರೇಪಿಸುವುದು.

ಇವರ ನಡುವೆ ಘರ್ಷಣೆಗಳು
ನೈಸರ್ಗಿಕವಾಗಿ ಎರಡು ರಾಶಿಯವರಲ್ಲಿ ಕೆಲವು ವಿಚಾರಕ್ಕೆ ಘರ್ಷಣೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಪ್ರತಿಯೊಂದು ಘರ್ಷಣೆಯಲ್ಲೂ ಕೆಲವು ಜೀವನದ ಸಂಗತಿಯನ್ನು ಅರಿತುಕೊಳ್ಳುತ್ತಾರೆ. ನಿಜವಾದ ಬದ್ಧತೆಗಳು ಎರಡೂ ಚಿಹ್ನೆಗಳಿಗೆ ಪ್ರಮುಖವಾದ ಘರ್ಷಣೆ ಅಥವಾ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವುದು. ಇಬ್ಬರ ನಡುವೆ ಹಿತಾಸಕ್ತಿಯ ಚಿಂತನೆಗಳು ಎದುರಾದಾಗ ಸಾಕಷ್ಟು ಸಮಸ್ಯೆಗಳು ತಲೆದೂರುವುದು. ಇವುಗಳಲ್ಲಿ ಉಂಟಾಗುವ ಬೇಸರವು ಘರ್ಷಣೆಯಾಗಿ ತಿರುಗುವುದು. ಧನು ರಾಶಿಯವರು ತಾವೇನು ಪಡೆದುಕೊಂಡಿದ್ದಾರೆ ಅದನ್ನು ಹೃತ್ಪೂರಕವಾಗಿ ಸಂಗಾತಿಗೆ ನೀಡಲು ಬಯಸುತ್ತಾರೆ. ಇವರ ದಿನಚರಿಗಳನ್ನು ಕುಂಭರಾಶಿಯವರು ಇಷ್ಟಪಡುವರು. ಈ ಎರಡು ರಾಶಿಯವರ ನಡುವಿನ ಭಿನ್ನಾಭಿಪ್ರಾಯಗಳು ಅಥವಾ ಘರ್ಷಣೆಯು ಕಡಿಮೆ ಮಟ್ಟದಲ್ಲಿ ನಡೆಯುವುದು. ಇವರ ನಡುವೆ ಘರ್ಷಣೆಗಿಂತ ಹೊಂದಾಣಿಕೆಯ ಸ್ವಭಾವವು ತುಂಬಾ ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು.

ಪ್ರೀತಿ ಮತ್ತು ಸಂಬಂಧ
ಧನು ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಮಹಿಮುಖ ಸ್ವಭಾವದಿಂದ ಕೂಡಿರುತ್ತಾರೆ. ಇವರು ಎಲ್ಲಾ ರೀತಿಯ ಜನರೊಂದಿಗೆ ಬೆರೆಯುವುದು ಹಾಗೂ ಪ್ರೀತಿಯನ್ನು ನೀಡುವರು. ಇವರು ಜೀವನ ಶೈಲಿ ಅಥವಾ ನೈತಿಕತೆಗೆ ವಿರುದ್ಧವಾಗಿ ನಡೆಯುವುದಿಲ್ಲ. ಸ್ಬೇಹದ ವಿಚಾರಕ್ಕೆ ಬಂದಾಗ ವಿಪರೀತವಾದ ಭಿನ್ನತೆಯನ್ನು ತೋರುವರು. ಇವರ ಹೃದಯವನ್ನು ಗೆದ್ದವರ ಜೊತೆಗೆ ಅತ್ಯಂತ ನಂಬಿಗಸ್ತ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿ ವರ್ತನೆಯನ್ನು ತೋರುವನು. ಇವರನ್ನು ಭೇಟಿಯಾಗುವ ಎಲ್ಲಾ ಹೃದಯಗಳು ಇವರನ್ನು ಪ್ರೀತಿಸುತ್ತದೆ ಎಂದು ಹೇಳಲಾಗುವುದು. ಇತರರ ಸೋಲು ಅಥವಾ ಅಸಮರ್ಥತೆಗೆ ಹಾಸ ಅಥವಾ ನಿಂದನೆ ಮಾಡುವ ವ್ಯಕ್ತಿಗಳಾಗಿರುವುದಿಲ್ಲ.

ಈ ಸಮಯದಲ್ಲಿ ಸಾಕಷ್ಟು ಸಂತೋಷದಿಂದ ಇರುತ್ತಾರೆ
ಕುಂಭ ರಾಶಿಯ ಮಹಿಳೆಯರು ಹೊಸ ಸ್ನೇಹಿತರನ್ನು ಹೊಂದಿರುವಾಗ ಅಥವಾ ಅವರ ಸುತ್ತ ಇರುವಾಗ ಸಾಕಷ್ಟು ಸಂತೋಷದಿಂದ ಇರುತ್ತಾರೆ. ಭಾವನಾತ್ಮಕವಾದ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅನಾಮಧೇಯ ಜೀವನ ಶೈಲಿಯನ್ನು ಬಯಸದ ವ್ಯಕ್ತಿಗಳಾಗಿರುತ್ತಾರೆ. ಬೌದ್ಧಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವರು. ಇವರಲ್ಲಿ ಇರುವ ಕಾಳಜಿ ಹಾಗೂ ಸಹಾನುಭೂತಿಯ ಸ್ವಭಾವವು ಪರಸ್ಪರ ಪ್ರೀತಿ ವಿಶ್ವಾಸದಿಂದ ಸಂಬಂಧದಲ್ಲಿ ಇರುವಂತೆ ಮಾಡುವುದು. ಜೊತೆಗೆ ಎರಡು ರಾಶಿಯ ದಂಪತಿಗಳ ನಡುವೆ ಹೆಚ್ಚಿನ ಪ್ರೀತಿ ವಿಶ್ವಾಸಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಜೊತೆಯಾಗಿ ಮಾಡುವ ಕೆಲಸಗಳು
ಕುಂಭ ರಾಶಿಯ ವ್ಯಕ್ತಿಗಳು ಅಥವಾ ಮಹಿಳೆಯರು ಮಾನವೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ವೃತ್ತಿ ಜೀವನವನ್ನು ಹುಡುಕುತ್ತಾರೆ. ತುಲನಾತ್ಮಕವಾಗಿ ಇವರು ನಿಸ್ವಾರ್ಥ ಗುಣದವರಾಗಿರುತ್ತಾರೆ. ಧನು ರಾಶಿಯವರು ಹೆಚ್ಚಿನ ಮಹತ್ವಾಕಾಂಕ್ಷೆಯ ಸ್ವಭಾವದವರಾಗಿರುತ್ತಾರೆ. ಇವರಿಬ್ಬರು ನಡೆಸುವ ಕೆಲಸ ಕಾರ್ಯಗಳಲ್ಲಿ ಪರಸ್ಪರ ಉತ್ತಮ ಸಂವಹನ ಹಾಗೂ ಆದ್ಯತೆಯನ್ನು ನೀಡುವುದರ ಮೂಲಕ ಕೆಲಸವನ್ನು ಕೈಗೊಳ್ಳುತ್ತಾರೆ. ಕೆಲಸದ ವೇಗದ ಗತಿಯು ನಿರೀಕ್ಷೆಯ ಮಟ್ಟದಲ್ಲಿಯೇ ನಡೆಯುವುದು. ಒಟ್ಟಾರೆಯಾಗಿ ಈ ಜೋಡಿಗಳ ನಡುವೆ ಕೆಲಸ ಕಾರ್ಯಗಳು ಸಹ ಯಾವುದೇ ಸಮಸ್ಯೆಗಳಿಲ್ಲದೆ ಸುಲಭವಾಗಿ ನೆರವೇರುವುದು.

ಸ್ವಾತಂತ್ರ್ಯ ಹಾಗೂ ಸಮಯವನ್ನು ಸಂಗಾತಿಗಾಗಿ ಮೀಸಲಿಡುತ್ತಾರೆ
ಧನು ರಾಶಿಯ ವ್ಯಕ್ತಿಗಳು ಸ್ವಾತಂತ್ರ್ಯ ಹಾಗೂ ಸಮಯವನ್ನು ಸಂಗಾತಿಗಾಗಿ ಮೀಸಲಿಡುತ್ತಾರೆ. ಅಗತ್ಯ ಸಂಗತಿಗಳನ್ನು ತಪ್ಪದೆ ಹಂಚಿಕೊಳ್ಳುವರು. ಇಬ್ಬರ ನಡುವೆಯೂ ಆಶಾದಾಯಕ ಮತ್ತು ಲವಲವಿಕೆಯ ಪ್ರಾಮಾಣಿಕತೆಯಲ್ಲಿ ಮುಂದುವರಿಯುವುದು. ಎಲ್ಲಾ ಸಂಗತಿಗಳಲ್ಲೂ ಸಮಾನ ಹಂಚಿಕೆ ಹಾಗೂ ಹೊಂದಾಣಿಕೆಯನ್ನು ಕಂಡುಕೊಳ್ಳುವುದರಿಂದ ಭಿನ್ನಾಭಿಪ್ರಾಯಗಳ ಸಂಗತಿ ತೀರಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಪ್ರೀತಿ ವಿಶ್ವಾಸದ ಮಟ್ಟವು ಮಹತ್ತರವಾದ ಸ್ಥಾನದಲ್ಲಿ ಕುಳಿತಿರುತ್ತದೆ ಎಂದು ಹೇಳಲಾಗುವುದು.



Click it and Unblock the Notifications











