Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಎಲ್ಲಾ 82 ರೋಗಿಗಳಿಗೂ ಒಂದೇ ಕ್ಯಾತಿಟರ್ ಬಳಸುತ್ತಿದ್ದ ವೈದ್ಯರು!
ನಾವು ವೈದ್ಯರ ಬಳಿಗೆ ಹೋಗುವುದು ಯಾಕೆ ಎಂದು ಹೇಳಿ? ನಮಗೆ ಉಂಟಾಗಿರುವ ಅನಾರೋಗ್ಯವನ್ನು ದೂರ ಮಾಡಬೇಕೆಂದು ವೈದ್ಯರ ಬಳಿಗೆ ತೆರಳುತ್ತೇವೆ. ಆದರೆ ವೈದ್ಯರಿಂದಲೇ ನಮಗೆ ಕಾಯಿಲೆಗಳು ಬಂದರೆ ಆಗ ಅದು ದೊಡ್ಡ ಮಟ್ಟದ ಸಮಸ್ಯೆ. ವೈದ್ಯರು ಯಾವಾಗಲೂ ಸ್ವಚ್ಛವಾಗಿರುವರು ಮತ್ತು ಅವರಿಂದ ಯಾವುದೇ ರೀತಿಯ ವೈರಸ್ ಗಳು ನಮಗೆ ತಗಲುವುದಿಲ್ಲವೆಂದು ನಾವು ಭಾವಿಸಿರುತ್ತೇವೆ. ಆದರೆ ಈ ಘಟನೆಯನ್ನು ಓದಿದ ಬಳಿಕ ನಿಮ್ಮ ಆಲೋಚನೆಗಳೆಲ್ಲವೂ ಬುಡಮೇಲು ಆಗಲಿದೆ. ತುಂಬಾ ರೇಜಿಗೆ ಹುಟ್ಟಿಸುವಂತಹ ವೈದ್ಯರ ನಡವಳಿಕೆಯಿಂದ ರೋಗಿಗಳಿಗೆ ಅಪಾಯವು ಎದುರಾಗಿದೆ. ಈ ಬಗ್ಗೆ ಓದುತ್ತಾ ಸಾಗಿ...

ವೈದ್ಯರು ಕರುಳು ಮತ್ತು ಗುದನಾಳ ಸರ್ಜನ್
ಆರೋಪ ಹೊರಿಸಲಾಗಿರುವ ವೈದ್ಯರು ಕರುಳು ಮತ್ತು ಗುದನಾಳದ ಸರ್ಜನ್. ಈ ವೈದ್ಯರು ನ್ಯೂಜೆರ್ಸಿಯಲ್ಲಿರುವ ರಾಬರ್ಟ್ ವುಡ್ ಜಾನ್ಸನ್ ಯೂನಿವರ್ಸಿಟಿ ಹಾಸ್ಪಿಟಲ್ ನಲ್ಲಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೈದ್ಯರು ವರ್ಷದಲ್ಲಿ ಕೇವಲ ಐದು ಕ್ಯಾತಿಟರ್(ತೂರುನಾಳ) ನ್ನು ಮಾತ್ರ ಬಳಸುತ್ತಿದ್ದರು. ಇದನ್ನು ಅವರು ಸುಮಾರು 82 ರೋಗಿಗಳಿಗೆ ಬಳಸುತ್ತಿದ್ದರು.

ಈ ಸಾಧನವನ್ನು ತೊಳೆದು ಮತ್ತೆ ಬಳಸಿಕೊಳ್ಳುತ್ತಿದ್ದರು
ವರದಿಗಳ ಪ್ರಕಾರ ವೈದ್ಯರು ಈ ಸಾಧನವನ್ನು ತೊಳೆದು, ಮತ್ತೆ ಕ್ಯಾತಿಟರ್ ನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದರು. ಒಬ್ಬ ರೋಗಿಯ ವೈದ್ಯಕೀಯ ಪರೀಕ್ಷೆಯ ಬಳಿಕ ಇದನ್ನು ಮತ್ತೊಬ್ಬರಿಗೆ ಬಳಸಲಾಗುತ್ತದೆ. ವೈದ್ಯರು ಇದನ್ನು ಸೋಪ್ ಮತ್ತು ನೀರಿನಲ್ಲಿ ತೊಳೆದ ಬಳಿಕ ಅರ್ಧ ಗಂಟೆ ಕಾಲ ಬ್ಲೀಚ್ ಸೊಲ್ಯೂಷನ್ ನಲ್ಲಿ ಹಾಕಿಡುತ್ತಿದ್ದರು. ಇದರ ಬಳಿಕ ಒಣಗಿಸಿ ಬಳಸಿಕೊಳ್ಳುತ್ತಿದ್ದರು. ರೋಗಿಗಳನ್ನು ವಂಚಿಸಲು ಈ ವೈದ್ಯರ ಸಿಬ್ಬಂದಿಯು ಅದನ್ನು ಮರು ಪ್ಯಾಕ್ ಮಾಡಿ ಹೊಸದರಂತೆ ಕಾಣುವಂತೆ ಮಾಡುತ್ತಿದ್ದರು.

ಈ ಸಾಧನದ ಬಗ್ಗೆ
ಕರುಳನ್ನು ಪರೀಕ್ಷೆ ಮಾಡಲು ಬಳಸುವಂತಹ ಗುದ ಕ್ಯಾತಿಟರ್ ಒಮ್ಮೆ ಮಾತ್ರ ಬಳಸಬಹುದಾದ ಸಾಧನವಾಗಿದೆ. ಇದು ಒಂದು ರೀತಿಯ ಪ್ಲಾಸ್ಟಿಕ್ ಬ್ಯೂಬ್ ಗಳಾಗಿದ್ದು, ಇದನ್ನು ಗುದನಾಳದೊಳಗೆ ಹಾಖಿಕೊಂಡು ಅಲ್ಲಿಂದ ಮಲ ತೆಗೆಯಲಾಗುತ್ತದೆ ಅಥವಾ ಗುದಕುಳಿ ಮತ್ತು ಕರುಳಿಗೆ ದ್ರವ ಹಾಕಲಾಗುವುದು. ಈ ಸಾಧನವನ್ನು ರೋಗಿಯ ಕರುಳಿನಲ್ಲಿ ಲವಣಯುಕ್ತ ದ್ರಾವಣ ಸಿಂಪಡಿಕೆಗೆ ಕೂಡ ಬಳಸಿಕೊಳ್ಳಲಾಗುತ್ತದೆ.

ಆ ವೈದ್ಯರನ್ನು ಅಮಾನತು ಮಾಡಲಾಯಿತು!
ಈ ಸರ್ಜನ್ ವೈದ್ಯಕೀಯ ಲೈಸನ್ಸ್ ನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಮತ್ತು ಇದರ ಬಗ್ಗೆ ಹೆಚ್ಚಿನ ತನಿಖೆಗೂ ಆದೇಶಿಸಲಾಗಿದೆ. ಆತ ವೈದ್ಯರನ್ನು ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳಿರುವುದೇ ಇದಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
