Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬೆಟ್ಟ ಖರೀದಿಸುವ ಇಚ್ಛೆ ಹೊಂದಿರುವ ಅಗರ್ಭ ಶ್ರೀಮಂತನ ಕಥೆ ಇದು!
ಮನುಷ್ಯನಿಗೆ ಕನಸುಗಳು ನೂರಾರು ಇರುವುದು. ಇದರಲ್ಲಿ ಕೆಲವು ಮಾತ್ರ ನನಸಾಗಬಹುದು. ಇನ್ನು ಉಳಿದವು ಹಾಗೆ ಉಳಿದುಬಿಡುತ್ತವೆ. ಆದರೆ ಶ್ರೀಮಂತರಿಗೆ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸುಲಭ ಎಂದು ನಾವು ತಿಳಿದುಕೊಂಡಿದ್ದೇವೆ. ಅದರಲ್ಲೂ ಕೆಲವು ಹಣವಿದ್ದವರ ಕನಸು ಅಥವಾ ಆಸೆಗಳು ತುಂಬಾ ವಿಚಿತ್ರವಾಗಿ ಇರುವುದು. ಹಣದಿಂದ ನೀವು ವಿಶ್ವದಲ್ಲಿ ತುಂಬಾ ಅನಿರೀಕ್ಷಿತವಾಗಿರುವಂತಹ ವಸ್ತುವನ್ನು ಖರೀದಿ ಮಾಡಿದರೆ ಆಗ ಎಲ್ಲರೂ ನಿಮ್ಮತ್ತ ನೋಡುವರು. ಇಲ್ಲೊಬ್ಬ ವ್ಯಕ್ತಿಯು ದೊಡ್ಡ ಬೆಟ್ಟವನ್ನು ಖರೀದಿ ಮಾಡಿಕೊಂಡು ಅದರಲ್ಲಿ ತಮ್ಮ ಕುಟುಂಬಿಕರ ಮುಖವನ್ನು ರಚಿಸಲು ನಿರ್ಧರಿಸಿದ್ದಾನೆ. ಇಂತಹ ಮುಖಗಳು ರಷ್ಮೋರ್ ನಲ್ಲಿ ನಾವು ಕಾಣಬಹುದಾಗಿದೆ.

ಈ ವ್ಯಕ್ತಿಯ ಇಚ್ಛೆಯ ಬಗ್ಗೆ ನಾವು ತಿಳಿದುಕೊಳ್ಳುವ..
ಆತ ತನ್ನ ಇಚ್ಛೆಯನ್ನು ಸೈಟ್ ಒಂದರಲ್ಲಿ ಪೋಸ್ಟ್ ಮಾಡಿದ…
ಭದ್ರತಾ ಕಾರಣಗಳಿಂದಾಗಿ ಹೆಸರನ್ನು ಗೌಪ್ಯವಾಗಿ ಇಟ್ಟಿರುವ ಉದ್ಯಮಿಯೊಬ್ಬರು ತನ್ನ ಅಸಾಮಾನ್ಯ ಇಚ್ಛೆಯ ಬಗ್ಗೆ ಸೈಟ್ ಒಂದರಲ್ಲಿ ಪೋಸ್ಟ್ ಮಾಡಿರುವರು. ಹಶ್ ಹಶ್ ಡಾಟ್ ಕಾಮ್ ಎಂಬ ಆನ್ ಲೈನ್ ಮಾರ್ಕೆಟ್ ಸೈಟ್ ನಲ್ಲಿ ಆತ ತನ್ನ ಇಚ್ಛೆ ಬಗ್ಗೆ ಜಾಹೀರಾತು ನೀಡುರುವನು.
ಆತ 12 ಮಿಲಿಯನ್ ಪೌಂಡ್ ಪಾವತಿ ಮಾಡಲು ತಯಾರಾಗಿದ್ದಾನೆ!
ತನ್ನ ಕುಟುಂಬಕ್ಕೆ ಒಂದು ಸಪ್ರೈಸ್ ನೀಡುವ ದೃಷ್ಟಿಯಿಂದಾಗಿ ಆತ ಈ ಬೆಟ್ಟಕ್ಕಾಗಿ 12 ಮಿಲಿಯನ್ ಪೌಂಡ್ ತೆರಳು ಸಜ್ಜಾಗಿದ್ದಾನೆ ಎಂದು ವರದಿಗಳು ಹೇಳಿವೆ. ಆತ ಈ ಬೆಟ್ಟದಲ್ಲಿ ತನ್ನ ಪತ್ನಿಯ ಮುಖ, ಮೂರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಮತ್ತು ತನ್ನ ಸಾಕು ನಾಯಿಯ ಮುಖವನ್ನು ರಚಿಸಲು ಬಯಸಿದ್ದಾನೆ.
ಸೈಟ್ ನಲ್ಲಿ ಆತನು ಹಾಕಿರುವಂತಹ ಮೆಸೇಜ್ ಈ ರೀತಿಯಾಗಿದೆ….
ನನ್ನ ಪರ ಇನ್ನೊಂದು ಕೆಲಸ ಮಾಡಬೇಕೆಂದು ಕೇಳಿಕೊಳ್ಳುವೆನು. ನಿಮಗೆ ಯಾವುದೇ ಬೆಟ್ಟ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದಿದೆಯಾ? ಬಂಡೆಯ ಮುಖ ಹೊಂದಿರುವಹದ್ದು ಆಗಿರಬೇಕು. ಇದಕ್ಕೆ ಕಾರಣವೇನೆಂದರೆ ನಾನು ಒಂದು ಖರೀದಿ ಮಾಡಬೇಕು ಮತ್ತು ನನ್ನ ಕುಟುಂಬದವರ ಮುಖವನ್ನು ಅದರಲ್ಲಿ ರಚಿಸಿ, ಸಪ್ರೈಸ್ ನೀಡಬೇಕು. ಕುಟುಂಬವನ್ನು ಅಮರವಾಗಿಸಲು ಇದು ಒಳ್ಳೆಯ ವಿಧಾನ. ಇದು ತುಂಬಾ ಮನರಂಜನೆ ಹಾಗೂ ವಿಭಿನ್ನವಾದ ವಿಧಾನ(ನಾನು ರಷ್ಮೋರ್ ಶೈಲಿಯ ಬಗ್ಗೆ ಆಲೋಚಿಸುತ್ತಿದ್ದೇನೆ).
ಆ ವ್ಯಕ್ತಿ ಯೋಜನೆ ಹಾಕಿರುವ ಅತೀ ದುಬಾರಿ ವಿಚಾರ ಇದು ಮಾತ್ರವಲ್ಲ!
ಎರಡು ವರ್ಷಕ್ಕೆ ಮೊದಲು ಆ ವ್ಯಕ್ತಿಯು ತನ್ನ ಕುಟುಂಬಕ್ಕಾಗಿ ಒಂದು ಖಾಸಗಿ ದ್ವೀಪವನ್ನೇ ಖರೀದಿ ಮಾಡಿದ್ದ. ಇಂದಿನ ಮೌಲ್ಯಕ್ಕೆ ಲೆಕ್ಕ ಹಾಕಿ ನೋಡಿದರೆ ಅದು ತುಂಬಾ ದುಬಾರಿ ಖರೀದಿ ಎಂದು ಹೇಳಬಹುದಾಗಿದೆ. ಇದರ ಹೊರತಾಗಿ ಆತ ತನ್ನ ಪತ್ನಿಗೆ ತುಂಬಾ ದುಬಾರಿಯಾಗಿರುವತಂಹ ನೆಕ್ಲೇಸ್ ಒಂದನ್ನು ಖರೀದಿ ಮಾಡಿದ್ದಾನೆ. ಈ ವಿಭಿನ್ನ ಇಚ್ಛೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
