Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕ್ಯಾರೆಟ್‌ನಲ್ಲಿ ಪತ್ತೆಯಾಯಿತು ಕಳೆದುಹೋದ ಉಂಗುರ!
ತುಂಬಾ ಅಮೂಲ್ಯವಾಗಿರುವಂತಹ ಯಾವುದಾದರೂ ವಸ್ತುವನ್ನು ಕಳೆದುಕೊಂಡರೆ ಆಗ ನಮಗೆ ನಿದ್ರೆ ಕೂಡ ಬರುವುದಿಲ್ಲ. ಯಾವಾಗಲೂ ಅದರ ನೆನಪಿನಲ್ಲೇ ಯಾವಾಗ ಸಿಗುತ್ತದೆಯಾ ಎಂದು ಕಾಯುತ್ತಾ ಕುಳಿತ್ತಿರುತ್ತೇವೆ. ಕಳೆದ ಹೋದ ವಸ್ತುವು ನೀವು ನಿರೀಕ್ಷಿಸದ ರೀತಿಯಲ್ಲಿ ಮರಳಿ ಸಿಕ್ಕರೆ ಆಗ ನಿಮಗೆ ಆಗುವಂತಹ ಸಂತೋಷ ಅಷ್ಟಿಷ್ಟಲ್ಲ. ಇದನ್ನು ನೀವು ಪವಾಡವೆಂದು ಕರೆಯಬಹುದು.
ಜರ್ಮನಿಯ ಯುಸ್ಕಿರ್ಚೆನ್‌ನಲ್ಲಿನ ಮನ್‌ಸ್ಟೆರಿಫೆಲ್ ನಲ್ಲಿ ಇರುವ 82ರ ಹರೆಯದ ವ್ಯಕ್ತಿಗೆ ಇದೇ ರೀತಿ ಆಗಿದೆ. ಈ ವ್ಯಕ್ತಿ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ಯಾರೆಟ್ ನ್ನು ಕೀಳುತ್ತಿದ್ದ ವೇಳೆ ಅದರಲ್ಲಿ ಒಂದು ಕ್ಯಾರೆಟ್ ಮಾತ್ರ ಬೇರೆ ಕ್ಯಾರೆಟ್‌ಗಳಿಂಗಿಂತ ತುಂಬಾ ಭಿನ್ನವಾಗಿ ಕಾಣುತ್ತಲಿತ್ತು. ಇದನ್ನು ತುಂಬಾ ಹತ್ತಿರದಿಂದ ಗಮನಿಸಿದ ವೇಳೆ ಆತನಿಗೆ ಪ್ರಕಾಶಿಸುತ್ತಿರುವ ಒಂದಕ್ಕೆ ಸುತ್ತಿರುವುದು ಕಾಣಿಸಿದೆ. ಇದರಿಂದಾಗಿ ಕ್ಯಾರೆಟ್ ನ ಸೊಂಟವು ತುಂಬಾ ಸಣ್ಣದಾಗಿತ್ತು.

ಕ್ಯಾರೆಟ್ ನ್ನು ಮಣ್ಣಿನಿಂದ ತೆಗೆದು ನೋಡಿದ ವೇಳೆಗೆ ಆತನ ಜೀವನದ ಅತೀ ದೊಡ್ಡ ಅಚ್ಚರಿಯು ಎದುರಾಯಿತು! ಇದರಲ್ಲಿ ಸುತ್ತಿಕೊಂಡಿದ್ದು ತನ್ನಿಂದ ಕೆಲವು ವರ್ಷಗಳ ಮೊದಲು ಕಳೆದು ಹೋಗಿರುವಂತಹ ಉಂಗುರ ಎಂದು ಆತನಿಗೆ ತಿಳಿಯಿರಿ. ಮೂರು ವರ್ಷಗಳ ಮೊದಲು ಕಳೆದುಕೊಂಡಿದ್ದ ಮದುವೆಯ ಉಂಗುರ ಇದಾಗಿತ್ತು. ಆ ವ್ಯಕ್ತಿ ಮತ್ತು ಅವರ ಪತ್ನಿ ತೋಟದಲ್ಲಿ ತಮ್ಮ ಮದುವೆಯ ಸುವರ್ಣ ಮಹೋತ್ಸವದ ಆಚರಣೆ ಮಾಡುತ್ತಲಿದ್ದರು. ಆದರೆ ದುರಾದೃಷ್ಟದಿಂದ ಉಂಗುರವು ಕಳೆದುಹೋಗಿತ್ತು.
ಇದನ್ನು ಎಲ್ಲಿ ಕಳೆದುಕೊಂಡೆ ಎಂದು ಜ್ಞಾಪಿಸಿಕೊಳ್ಳಲು ಆ ವ್ಯಕ್ತಿಗೆ ಸಾಧ್ಯವಾಗಿರಲಿಲ್ಲ ಮತ್ತು ಎಲ್ಲಾ ಸ್ಥಳಗಳಲ್ಲೂ ಅವರು ಹುಡುಕಾಟ ನಡೆಸಿದ್ದರು ಮತ್ತು ಅದು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಎಷ್ಟೇ ಹುಡುಕಿದರೂ ಅದು ಸಿಗಲೇ ಇಲ್ಲ ಮತ್ತು ಆ ವ್ಯಕ್ತಿ ಇದರ ಆಸೆ ಬಿಟ್ಟುಬಿಟ್ಟಿದ್ದರು. ಮದುವೆಯ ಉಂಗುರವು ಮರಳಿ ಬರಲಿದೆ ಎಂದು ಆ ವ್ಯಕ್ತಿಯು ಯಾವಾಗಲೂ ಹೇಳುತ್ತಲಿದ್ದರು.
ತನ್ನ ತೋಟದಲ್ಲಿ ಬೆಳೆದಿದ್ದ ಕ್ಯಾರೆಟ್ ನಲ್ಲಿ ಆ ವ್ಯಕ್ತಿಗೆ ಉಂಗುರವು ಸಿಕ್ಕಿದೆ. ಇಲ್ಲಿ ಸಿಗಬಹುದು ಎಂದು ಆ ವ್ಯಕ್ತಿ ಯಾವತ್ತೂ ಊಹೆ ಕೂಡ ಮಾಡಿರಲಿಲ್ಲ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉಂಗುರವು ಬಿದ್ದು ಮಣ್ಣಿನಲ್ಲಿ ಊತು ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ ಈ ಉಂಗುರವು ಕ್ಯಾರೆಟ್ ನ ಬೆಳೆಯಲ್ಲಿ ಮತ್ತೆ ಸಿಕ್ಕಿದೆ.
ಈ ವರ್ಷಗಳ ಅವಧಿಯಲ್ಲಿ ಆ ವ್ಯಕ್ತಿಯ ಪತ್ನಿಯು ಮೃತಪಟ್ಟಿದ್ದರು ಮತ್ತು ತನ್ನ ಪತ್ನಿ ಹಾಕಿದ್ದ ಉಂಗುರವು ಸಿಗಲೇಬೇಕು ಎಂದು ಅವರು ಬಯಸಿದ್ದರು. ಪತ್ನಿ ಸಾಯುವ ಮೊದಲು ಇದು ಸಿಗಬೇಕು ಎಂದು ಆ ವ್ಯಕ್ತಿ ಬಯಸಿದ್ದರು. ಆದರೆ ಉಂಗುರ ಮಾತ್ರ ಸಿಕ್ಕಿರಲಿಲ್ಲ. ಆದರೂ ಪತ್ನಿಯ ನೆನಪಿಗೆ ಈ ಉಂಗುರ ಸಿಕ್ಕಿದೆ. ಇದು ತುಂಬಾ ಸುಂದರ ಘಟನೆಯಲ್ಲವೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.



Click it and Unblock the Notifications

