Latest Updates
-
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ!
2019ರಲ್ಲಿ ಈ ನಾಲ್ಕು ರಾಶಿಯವರು ತುಂಬಾನೇ ಅದೃಷ್ಟವಂತರಂತೆ
ಜೀವನ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಕ್ಷಣವು ಸಹ ಜೀವನಕ್ಕೆ ಅತ್ಯಗತ್ಯವಾಗಿರುತ್ತದೆ. ಒಂದು ಕ್ಷಣದಲ್ಲಿ ಆದ ಬದಲಾವಣೆಯು ಜೀವನದ ಪಥವನ್ನೇ ಬದಲಿಸಿ ಬಿಡಬಹುದು. ಅನಿರೀಕ್ಷಿತವಾಗಿ ಎದುರಾಗುವ ಸನ್ನಿವೇಶಗಳು ಜೀವನಕ್ಕೆ ಅನುಚಿತವಾಗಿಯೂ ಇರಬಹುದು ಇಲ್ಲವೇ ಉಚಿತವಾದ ಪಾಠವನ್ನೇ ಕಲಿಸಬಹುದು. ಅವುಗಳೆಲ್ಲವನ್ನೂ ಸ್ವೀಕರಿಸುತ್ತಾ ಸಾಗುವುದು ನಮ್ಮ ಕರ್ತವ್ಯವಾಗಿ ಇರುತ್ತದೆ. ನಮ್ಮ ಪಾಲಿಗೆ ಎಂದು ಬಂದಿರುವುದು ಕಷ್ಟವಾಗಿರಲಿ ಅಥವಾ ಸುಖವಾಗಿಯೇ ಇರಲಿ. ಎಲ್ಲವನ್ನೂ ಅನುಭವಿಸಬೇಕು.
ಸುಖ ಎನ್ನುವುದು ಸಂತೋಷವನ್ನು ನೀಡುತ್ತದೆ. ಆದರೆ ಉತ್ಸಾಹ, ತೃಪ್ತ ಭಾವನೆಯಿಂದ ತಪ್ಪುಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಕಷ್ಟಗಳು ಎದುರಾದರೆ ವ್ಯಕ್ತಿಯು ಜೀವನದ ಪಾಠವನ್ನು ಕಲಿಯುತ್ತಾನೆ. ನಮ್ಮ ಜೀವನದ ಹಿಂದಿನ ದಿನಗಳಲ್ಲಿ ಅನುಭವಿಸಿದ ಕಷ್ಟಗಳು ಹಾಗೂ ತೊಂದರೆಗಳಿಂದಾಗಿ ಯಾವರೀತಿಯ ಬದಲಾವಣೆಯನ್ನು ಮುಂದಿನ ಜೀವನದಲ್ಲಿ ಹೇಗೆ ಎಚ್ಚರಿಕೆ ಹಾಗೂ ನಿರ್ಧರಿತ ಯೋಜನೆಯನ್ನು ಕೈಗೊಳ್ಳಬೇಕು ಎನ್ನುವುದನ್ನು ಕಲಿತಿರುತ್ತಾರೆ.

2019ರಲ್ಲಿ ಕೆಲವು ರಾಶಿಚಕ್ರದವರು ಅದ್ಭುತವಾದ ಅದೃಷ್ಟಗಳನ್ನು ಪಡೆದುಕೊಳ್ಳುವರು
ಕಳೆದ ವರ್ಷದ ಎಲ್ಲಾ ಮೌಲ್ಯಮಾಪನ ಮತ್ತು ವಿಶ್ಲೇಷಣೆಯ ನಂತರ ನಮ್ಮ ನ್ಯೂನತೆಗಳು ಯಾವವು? ಎಲ್ಲಿ ಎಡವಿದೆವು? ಅದರಿಂದ ಯಾವ ಅಹಿತಕರ ಘಟನೆಗಳು ಸಂಭವಿಸಿತು ಎನ್ನುವುದರ ಅರಿವನ್ನು ಹೊಂದಿರುತ್ತಾರೆ. ಆ ಹಿನ್ನೆಲೆಯಲ್ಲಿಯೇ ಮುಂದಿನ ವರ್ಷದಲ್ಲಿ ಯಾವ ಸುಧಾರಣೆಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎನ್ನುವ ಯೋಚನೆಯನ್ನು ಕೈಗೊಳ್ಳುವುದು ಸಹಜ. ಅಂತಹ ಯೋಜನೆಯನ್ನು ಹೊಂದಿರುವಾಗ ಅವುಗಳ ಜೊತೆಗೆ ಗ್ರಹಗತಿಗಳ ಸಹಕಾರ ಹಾಗೂ ದೈವಾನುಗ್ರಹವಿದ್ದರೆ ಅದ್ಭುತವಾದ ಜೀವನ ಅಥವಾ ಸಂತೋಷವನ್ನು ಪಡೆಯಬಹುದು. ದೈವಾನುಗ್ರಹ, ಗ್ರಹಗತಿಗಳ ಧನಾತ್ಮಕ ಪ್ರಭಾವದಿಂದ 2019ರಲ್ಲಿ ಕೆಲವು ರಾಶಿಚಕ್ರದವರು ಅದ್ಭುತವಾದ ಅದೃಷ್ಟಗಳನ್ನು ಪಡೆದುಕೊಳ್ಳುವರು. ಅದು ಅವರ ಜೀವನದ ಪಥವನ್ನು ಬದಲಿಸುವುದು. ಜೊತೆಗೆ ಸಾಕಷ್ಟು ಸಂತೋಷ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವರು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಅಂತಹ ಒಂದು ಅದ್ಭುತ ಅದೃಷ್ಟ ಪಡೆಯುವ ರಾಶಿಚಕ್ರಗಳು ಯಾವವು? ಅವರ ಜೀವನ ಹೇಗೆ ಬದಲಾವಣೆಯ ತಿರುವನ್ನು ಪಡೆದುಕೊಳ್ಳುವುದು? ಆ ರಾಶಿಚಕ್ರಗಳ ಪಟ್ಟಿಯಲ್ಲಿ ನಿಮ್ಮ ರಾಶಿಚಕ್ರವಿದೆಯೇ? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ
ಧೈರ್ಯವಂತರು ಹಾಗೂ ಉತ್ಸಾಹಿಗಳು ಆದ ಇವರಿಗೆ 2019ರ ವರ್ಷ ಹೆಚ್ಚು ಅನುಕೂಲವನ್ನು ಸೃಷ್ಟಿಸಿಕೊಡುವುದು. ನಿಮ್ಮಲ್ಲಿರುವ ಉತ್ಸಾಹಕ್ಕೆ ಸಾಕಷ್ಟು ಅವಕಾಶಗಳು ದೊರೆಯುವುದು. ಜೀವನ ಹಾಗೂ ಉತ್ಸಾಹದಿಂದ ಹೊಸ ಅವಕಾಶಗಳನ್ನು ಪಡೆದುಕೊಂಡು ಯಶಸ್ಸನ್ನು ಪಡೆಯುವಿರಿ.
Most Read:2019ರಲ್ಲಿ ಯಾವ್ಯಾವ ರಾಶಿಯವರಿಗೆ ಯಾವ ತಿಂಗಳು ಅದೃಷ್ಟ ತರಲಿದೆ? ಇಲ್ಲಿದೆ ಡಿಟೇಲ್ಸ್

ಮೇಷ
ನಿಮ್ಮಲ್ಲಿರುವ ಧನಾತ್ಮಕ ಧೋರಣೆಯು ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುವುದು. ಅವಕಾಶಗಳಿಗಾಗಿ ಉತ್ತಮ ಪ್ರಯತ್ನ ಹಾಗೂ ಸಮಯವನ್ನು ವಿನಿಯೋಗಿಸುವುದರಿಂದ ಈ ವರ್ಷದಲ್ಲಿ ಸಾಕಷ್ಟು ಅದೃಷ್ಟವನ್ನು ಪಡೆದುಕೊಳ್ಳುವಿರಿ ಎಂದು ಹೇಳಲಾಗುವುದು. ಗ್ರಹಗಳ ಸಂಚಾರ ಹಾಗೂ ಪ್ರಭಾವವು ಉತ್ತಮವಾಗಿರುವುದರಿಂದ ಸಾಕಷ್ಟು ಒಳ್ಳೆಯ ಜೀವನವನ್ನು ವರ್ಷ ಪೂರ್ತಿ ಅನುಭವಿಸುವಿರಿ.

ಸಿಂಹ
ಈ ರಾಶಿಯ ವ್ಯಕ್ತಿಗಳು 2019ರಲ್ಲಿ ಸಾಕಷ್ಟು ಅದೃಷ್ಟವನ್ನು ಅನುಭವಿಸಲಿದ್ದಾರೆ ಅಥವಾ ನೋಡಲಿದ್ದಾರೆ. ಇವರ ವ್ಯಕ್ತಿತ್ವ ಹಾಗೂ ಕೆಲಸ ಕಾರ್ಯಗಳಲ್ಲಿ ಅಡಗಿರುವ ಗುಣಮಟ್ಟವು ಇವರ ಶಕ್ತಿಯಾಗಿ ನಿಲ್ಲುವುದು. ಹಾಗಾಗಿ ಯೋಗ್ಯವಾದ ಯೋಜನೆಯೊಂದಿಗೆ ಸೂಕ್ತ ವೇಳಾಪಟ್ಟಿಯನ್ನು ಅನುಸರಿಸಿ ಕೆಲಸವನ್ನು ಕೈಗೊಳ್ಳಬೇಕು. ಆಗ ಅದೃಷ್ಟದ ಬಾಗಿಲು ತೆರೆಯುವುದು.

ಸಿಂಹ
ಸಮಯವು ಎಂತಹದ್ದೇ ಆಗಿರಲಿ ಚಳಿಗಾಲ ಅಥವಾ ಬೇಸಿಗೆ ಕಾಲ ಎನ್ನುವ ತಾರತಮ್ಯವಿಲ್ಲದೆ ಕೆಲಸ ಕೈಗೊಂಡು ನಿರ್ಣಯವು ನಿಮ್ಮ ಅಸ್ತಿತ್ವದಲ್ಲಿದ್ದರೆ ಎಲ್ಲಾ ಕೆಲಸಗಳು ನಿಮ್ಮ ಬಯಕೆಯಂತೆ ನೆರವೇರುವುದು. ಸಾಕಷ್ಟು ವಿರ್ಶರಾಂತಿ ಹಾಗೂ ಅಗತ್ಯ ಕೆಲಸಗಳನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳುವುದರಿಂದ 2019ರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವರು.

ಕನ್ಯಾ
ಕನ್ಯಾ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರು. ಅದು ಅವರ ಸಾಮಥ್ರ್ಯ ಎಂದು ಸಹ ಹೇಳಬಹುದು. ಇವರು ತಾವು ಅಂದುಕೊಂಡಂತೆಯೇ ಅವಕಾಶಗಳನ್ನು ಪಡೆದುಕೊಳ್ಳುವರು. ಆದರೆ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಅಥವಾ ಗ್ರಹಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ಸ್ಪಷ್ಟನೆಯನ್ನು ಹೊಂದ ಬೇಕಾಗುವುದು. ಘಟನೆಗಳು ಸಂಭವಿಸುವ ಪೂರ್ವದಲ್ಲಿ ಸರಿಯಾದ ಊಹೆಯನ್ನು ಹೊಂದುವ ಮೂಲಕವೇ ಎಚ್ಚೆತ್ತುಕೊಳ್ಳುವರು.
Most Read:ಹುಟ್ಟಿದ ದಿನಾಂಕ ಗೊತ್ತಿದ್ದರೆ ಸಾಕು, ವೈವಾಹಿಕ ಜೀವನದ ಬಗ್ಗೆ ತಿಳಿಯಬಹುದು!

ಕನ್ಯಾ
ಹೆಚ್ಚು ಚಟುವಟಿಕಾಶೀಲರಾಗಿ ಕೆಲಸ ನಿರ್ವಹಿಸುವರು. ಅಲ್ಲದೆ ಶ್ರೇಷ್ಠವಾದ ಆಲೋಚನೆಯನ್ನು ಹೊಂದವುದರಿಂದ ಅವರಿಗೆ ಸಾಕಷ್ಟು ಯಶಸ್ಸು ಹಾಗೂ ನೆಮ್ಮದಿ ದೊರೆಯುವುದು. ಉತ್ತಮ ಚಿಂತನೆ ಹಾಗೂ ಕೆಲಸಗಳು ಇವರಿಗೆ ಈ ವರ್ಷ ಹೆಚ್ಚಿನ ಅದೃಷ್ಟವನ್ನು ಲಲ್ಪಿಸಿಕೊಡುವುದು. ಇವರು ಕೇವಲ ಆಲೋಚನೆಗಳ ಮೇಲಷ್ಟೇ ಗಮನಹರಿಸುವುದಿಲ್ಲ ಎಂದು ಹೇಳಲಾಗುವುದು.

ಕುಂಭ
ಕೆಲವೊಮ್ಮೆ ಕುಂಭ ರಾಶಿಯವರಲ್ಲಿ ಛಲ ಇಲ್ಲದಂತೆ ತೋರುವರು. ಏಕೆಂದರೆ ಇವರು ತಮ್ಮ ಸ್ವಂತ ಗ್ರಹಿಕೆಯಲ್ಲಿ ಬಲವನ್ನು ಹೊಂದಿರುತ್ತಾರೆ. ಅಂತೆಯೇ ಅದನ್ನೇ ನಂಬುತ್ತಾರೆ ಸಹ. ಇತರರು ಏನು ಹೇಳುತ್ತಾರೆ? ಏನನ್ನು ಅನುಭವಿಸುತ್ತಾರೆ ಎನ್ನುವುದರ ಬಗ್ಗೆ ಕಡಿಮೆ ಪ್ರಾಶಸ್ತ್ಯವನ್ನು ನೀಡುತ್ತಾರೆ.

ಕುಂಭ
ತಾವು ಹೊಂದಿರುವ ಗುರಿ ಮತ್ತು ಯೋಜನೆಗೆ ಸೂಕ್ತ ರೀತಿಯಲ್ಲಿ ಶ್ರಮವನ್ನು ವಿನಿಯೋಗಿಸುತ್ತಾರೆ. ಇದೇ ಸಮಯದಲ್ಲಿ ಗ್ರಹಗಳ ಉತ್ತಮ ಪ್ರಭಾವವು ದೃಷ್ಟವನ್ನು ಕಲ್ಪಿಸಿಕೊಡುವುದು. ಹಾಗಾಗಿ ತಮ್ಮ ಸ್ವ ಪ್ರಯತ್ನ, ದೈವಾನುಗ್ರಹ ಹಾಗೂ ಗ್ರಹಗಳ ಉತ್ತಮ ಪ್ರಭಾವವು ವರ್ಷ ಪೂರ್ತಿ ಅತ್ಯುತ್ತಮವಾದ ಅದೃಷ್ಟವನ್ನು ಪಡೆದುಕೊಳ್ಳುವಂತೆ ಮಾಡುವುದು.



Click it and Unblock the Notifications











