For Quick Alerts
ALLOW NOTIFICATIONS  
For Daily Alerts

2019ರಲ್ಲಿ ಯಾವ್ಯಾವ ರಾಶಿಯವರಿಗೆ ಯಾವ ತಿಂಗಳು ಅದೃಷ್ಟ ತರಲಿದೆ? ಇಲ್ಲಿದೆ ಡಿಟೇಲ್ಸ್

|

ಅದೃಷ್ಟ ಎನ್ನುವುದು ಹೇಗೆ ಎದುರಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ಬರುವ ಅದೃಷ್ಟಗಳು ಕೆಲವೊಮ್ಮೆ ಅಲ್ಪಾವಧಿಯ ಕಾಲ ಉಳಿದುಕೊಳ್ಳಬಹುದು. ಇಲ್ಲವೇ ಜೀವನದ ಉದ್ದಕ್ಕೂ ಸಂತೋಷವನ್ನು ನೀಡುವುದರ ಮೂಲಕ ಜೀವನದಲ್ಲಿ ನೆನಪಾಗಿ ಉಳಿದುಕೊಳ್ಳುವುದು. ಅಂತಹ ಅದೃಷ್ಟಗಳು ನಮ್ಮ ಜೀವನದಲ್ಲಿ ಸದಾ ಉಳಿದುಕೊಳ್ಳಲಿ ಎಂದು ಬಯಸುತ್ತೇವೆ. ಆ ಬಯಕೆಗಳು ಕೆಲವೊಮ್ಮೆ ವಾಸ್ತವ ರೂಪದಲ್ಲಿ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಕನಸಾಗಿಯೇ ಉಳಿದುಕೊಳ್ಳುವುದು. ಹಾಗಾಗಿಯೇ ಎಲ್ಲರೂ ಹೊಸ ವರ್ಷದ ಹೊಸ ಆರಂಭಕ್ಕಾಗಿ ಎದುರು ನೋಡುತ್ತಿರುತ್ತಾರೆ. ಹೊಸ ವರ್ಷದಲ್ಲಾದರೂ ಹೊಸ ಬದಲಾವಣೆಯನ್ನು ಕಾಣಬಹುದೇ ಎನ್ನುವ ಆಸೆಯ ಕೌತುಕ ಹೆಚ್ಚಾಗಿರುತ್ತದೆ.

ಜೀವನದಲ್ಲಿ ನಾವು ಹಾಗೂ ನಮ್ಮವರು ಎಲ್ಲರೂ ಸಂತೋಷದಿಂದ ಇರಬೇಕು, ನಮ್ಮನ್ನು ನಂಬಿದವರ ಜೀವನ ಚೆನ್ನಾಗಿ ಇರಿಸಲು ನಮ್ಮ ಅದೃಷ್ಟವು ಮೊದಲು ಬದಲಾಗಬೇಕು. ಅದಕ್ಕಾಗಿ ನಾವು ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ಹಾಗೂ ಯೋಜನೆಗಳಲ್ಲಿ ಸಾಕಷ್ಟು ಯಶಸ್ಸು ದೊರೆಯಲಿ, ಅದೃಷ್ಟವು ಫಲಿಸಲಿ ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಅಂತಹ ಅದೃಷ್ಟವು ನಮ್ಮ ರಾಶಿಚಕ್ರಗಳಿಗೆ ಅನುಸಾರವಾಗಿ ಒಂದು ವಿಶೇಷ ತಿಂಗಳಲ್ಲಿ ದೊರೆಯುವುದು ಎಂದರೆ ಅತ್ಯಂತ ಸಂತೋಷದ ಸಂಗತಿ. ಅಂತಹ ಸಮಯದಲ್ಲಿ ನಾವು ನಮ್ಮ ಯೋಜನೆಗಳ ಆರಂಭ ಅಥವಾ ಹಣದ ಹೂಡಿಕೆ ಮಾಡುವುದರ ಮೂಲಕ ಗುರಿಯನ್ನು ಸಾಧಿಸಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೂ ಅವರ ಕುಂಡಲಿ ಹಾಗೂ ಗ್ರಹಗತಿಗಳ ಚಲನೆಯು ಅದೃಷ್ಟದ ಮನೆಯಲ್ಲಿ ನಿಂತಾಗ ಬಯಸಿದ ಎಲ್ಲಾ ಸಂಗತಿಗಳು ಕೈಗೂಡಿ ಬರುವುದು. 2019ರ ವರ್ಷದಲ್ಲಿ ಗ್ರಹಗಳ ಚಲನೆ ಹಾಗೂ ಹಿಮ್ಮುಖ ಚಲನೆಗಳು ಸಾಕಷ್ಟು ಬದಲಾವಣೆಯನ್ನು ಕಲ್ಪಿಸುವುದು. ಅದು ಕೆಲವು ಬಾರಿ ಅದೃಷ್ಟವಾಗಬಹುದು. ಇನ್ನೂ ಕೆಲವೊಮ್ಮೆ ದುರಾದೃಷ್ಟದ ಸಂಗತಿಯಾಗಿ ತಿರುಗ ಬಹುದು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಅಥವಾ ಸನ್ನಿವೇಶಗಳನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಇರಬೇಕು.

ಕೆಲವೊಂದು ತಿಂಗಳುಗಳು ಅತ್ಯಂತ ಅದೃಷ್ಟವನ್ನು ತಂದುಕೊಡುವುದು

ಕೆಲವೊಂದು ತಿಂಗಳುಗಳು ಅತ್ಯಂತ ಅದೃಷ್ಟವನ್ನು ತಂದುಕೊಡುವುದು

ಪ್ರತಿಯೊಂದು ರಾಶಿಚಕ್ರದವರಿಗೂ ಕೆಲವೊಂದು ತಿಂಗಳುಗಳು ಅತ್ಯಂತ ಅದೃಷ್ಟವನ್ನು ತಂದುಕೊಡುವುದು. ಅಂತಹ ಸಮಯವನ್ನು ನೋಡಿ ವ್ಯಕ್ತಿ ಕಾರ್ಯಗತನಾಗಿರಬೇಕು. ಅದೊಂದು ಅವರನಿಗೆ ಸುವರ್ಣ ಅವಕಾಶ ಎನಿಸಿಕೊಂಡಿರುತ್ತದೆ. ಅದರ ಉಪಯೋಗವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಅತ್ಯಂತ ಅದೃಷ್ಟವಂತರಾಗುವ ಅವಕಾಶವನ್ನು ಪಡೆದುಕೊಳ್ಳಬಹುದು. 2019ರಲ್ಲಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ತಿಂಗಳು ವಿಶೇಷ ಅದೃಷ್ಟವನ್ನು ನೀಡುವುದು ಎಂದು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ. ನಿಮಗೆ ನಿಮ್ಮ ರಾಶಿ ಚಕ್ರದ ಅನುಸಾರ ಯಾವ ತಿಂಗಳು ಅದೃಷ್ಟ ನೀಡುವುದು? ಆ ಅದೃಷ್ಟಗಳ ಪರಿ ಹೇಗಿರುತ್ತವೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ.

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಎಂತಹ ಕೆಲಸವನ್ನಾದರೂ ಬಹಳ ಸುಲಭವಾಗಿ ಕೈಗೊಳ್ಳುವುದರ ಮೂಲಕ ಮುಕ್ತಾಯಗೊಳಿಸುತ್ತಾರೆ. ಇದಕ್ಕೆ ಅವರಲ್ಲಿರುವ ಅದ್ಭುತವಾದ ವಿಶ್ವಾಸದ ಮಟ್ಟ ಎಂದು ಹೇಳಬಹುದು. ಇವರು ಅಂದುಕೊಂಡಿದ್ದನ್ನು ಸಾಧಿಸಲು ಸಾಕಷ್ಟು ಶ್ರಮ ಹಾಗೂ ಏಕಾಗ್ರತೆಯನ್ನು ವಿನಿಯೋಗಿಸುತ್ತಾರೆ. ಆದರೆ ಕೆಲವೊಮ್ಮೆ ಚಿತ್ತ ಚಂಚಲದಿಂದ ಕೆಲಸದ ವೇಗದ ಮಿತಿಯು ನಿಧಾನವಾಗಬಹುದು. ಇವರಿಗೆ ಈ ಒಂದು ರೀತಿಯ ಪರಿಶ್ರಮಕ್ಕೆ 2019ರ ಅದ್ಭುತ ಸಮಯ ಎಂದರೆ ವಸಂತಕಾಲ ಎನ್ನಬಹುದು. ಅದಕ್ಕಾಗಿ ಅವರು ಕೊಂಚ ಕಾಲ ಕಾಯಬೇಕು ಎನ್ನಬೇಕಾಗುವುದು. ಏಪ್ರಿಲ್ ತಿಂಗಳಲ್ಲಿ ತಮ್ಮ ಆತ್ಮವಿಶ್ವಾಸದಿಂದ ಸಾಕಷ್ಟು ಮುನ್ನುಗ್ಗುತ್ತಾರೆ. ಇವರ ಪರಿಶ್ರಮಕ್ಕೆ ಅತ್ಯುತ್ತಮ ಪ್ರತಿಫಲ ದೊರೆಯುವುದು. ಕೈಗೊಂಡ ಕೆಲಸಗಳೆಲ್ಲವೂ ಅದ್ಭುತ ಫಲಿತಾಂಶವನ್ನು ನೀಡುವುದು. ಇದರಿಂದ ಮೇಷ ರಾಶಿಯವರಲ್ಲಿ ಸ್ವಾಭಿಮಾನವೂ ಹೆಚ್ಚುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Most Read: 2019 ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ತರಲಿದೆ?

ವೃಷಭ

ವೃಷಭ

ಸ್ಥಿರ ಹಾಗೂ ಮೃದು ಸ್ವಭಾವದವರಾದ ವೃಷಭ ರಾಶಿಯವರಲ್ಲಿ ಸಹನಾ ಶಕ್ತಿಯು ಅತ್ಯುತ್ತಮವಾಗಿ ಇರುತ್ತದೆ. ಸೃಜನಾತ್ಮಕ ಕೌಶಲ್ಯವನ್ನು ಹೊಂದಿರುವ ಇವರು 2019ರ ಸಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಅದೃಷ್ಟವನ್ನು ಪಡೆದುಕೊಳ್ಳುವರು. ಇವರ ಗ್ರಹಗತಿಗಳು ಹಾಗೂ ನಕ್ಷತ್ರಗಳು ಸಪ್ಟೆಂಬರ್ ಮಾಸದ ಸಮಯದಲ್ಲಿ ಸಾಕಷ್ಟು ಅನುಕೂಲಕರ ಫಲಿತಾಂಶವನ್ನು ತಂದುಕೊಡುವರು. ಇದು ಅವರಿಗೆ ಹೆಚ್ಚಿನ ಸಂತೋಷ ಹಾಗೂ ಯಶಸ್ಸನ್ನು ಪಡೆದುಕೊಳ್ಳುವ ಸಮಯವಾಗಿರುತ್ತದೆ. ವರ್ಷದಲ್ಲಿಯೇ ಅತ್ಯಂತ ಉತ್ತಮ ಸಮಯವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಿಥುನ

ಮಿಥುನ

ಅತ್ಯಂತ ಬುದ್ಧಿವಂತರು ಹಾಗೂ ಶ್ರಮ ಜೀವಿಗಳು ಎನಿಸಿಕೊಳ್ಳುತ್ತಾರೆ ಇವರು. ಆದರೂ ಗ್ರಹಗತಿಗಳ ಸಹಕಾರ ಇಲ್ಲದೆ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದ ನಿಮಗೆ 2019ರ ಮೇ ತಿಂಗಳು ಅತ್ಯಂತ ಅದೃಷ್ಟದ ತಿಂಗಳಾಗಿ ಪರಿವರ್ತನೆ ಆಗುವುದು. ನಿಮ್ಮ ಪ್ರೀತಿ ಪಾತ್ರರಲ್ಲಿ ಅಥವಾ ಸಂಗಾತಿಯೊಂದಿಗೆ ಕಳೆದು ಹೋಗಬೇಕು ಎನ್ನುವ ಭಾವನೆಯನ್ನು ಹೊಂದಿದ್ದರೆ ಮೇ ತಿಂಗಳು ಅದಕ್ಕೆ ಅವಕಾಶವನ್ನು ಕಲ್ಪಿಸಿಕೊಡುವುದು. ಜೀವನದಲ್ಲಿ ಅತ್ಯುತ್ತಮವಾದಂತಹ ಆನಂದ ಪಡೆಯುವಿರಿ. ಪ್ರೀತಿಯು ಜೀವನದ ಮುಂಚೂಣಿಯ ವಿಷಯವಾಗುವುದು. ಪ್ರೀತಿಯ ವಿಷಯದಲ್ಲಿ ಸಾಕಷ್ಟು ಅವಕಾಶಗಳನ್ನು ಹಾಗೂ ಅನುಭವವನ್ನು ಪಡೆದುಕೊಲ್ಳುವಿರಿ. ಅದರಲ್ಲಿ ಸಾಕಷ್ಟು ಸಹಭಾಗಿತ್ವವನ್ನು ಕಂಡುಕೊಳ್ಳುವಿರಿ. ಜೀವನದ ಇತರ ಸಂಗತಿಗಳಲ್ಲೂ ಸಾಕಷ್ಟು ಧನಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

ಕರ್ಕ

ಕರ್ಕ

ಶ್ರಮ ಜೀವಿಗಳು ಹಾಗೂ ಭಾವನಾತ್ಮಕ ಜೀವಿಗಳು ಎಂದು ಕರ್ಕ ರಾಶಿಯವರು ಕರೆಸಿಕೊಳ್ಳುತ್ತಾರೆ. ವರ್ಷದ ಆರಂಭದಲ್ಲಿಯೇ ನೀವು ಬಯಸಿದ ಫಲಿತಾಂಶ ಅಥವಾ ಅವಕಾಶಗಳು ದೊರೆಯದೆ ಇರಬಹುದು. ಆದರೆ ಈ ವರ್ಷದ ಎರಡು ತಿಂಗಳಲ್ಲಿ ಸಾಕಷ್ಟು ಅದೃಷ್ಟ ಹಾಗೂ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಅದು ನಿಮ್ಮ ಭಾವನೆಗೆ ಹಾಗೂ ಕುಟುಂಬಕ್ಕೆ ಹೆಚ್ಚಿನ ಹಿತವನ್ನು ತಂದುಕೊಡುವುದು. ಜೀವನದಲ್ಲಿ ಸಾಕಷ್ಟು ನೆಮ್ಮದಿಯನ್ನು ಕಂಡುಕೊಳ್ಳಲು ಅನುಕೂಲವಾಗುವುದು. 2019ರ ಜುಲೈ ತಿಂಗಳಲ್ಲಿ ಸಾಕಷ್ಟು ವಿಷಯದಲ್ಲಿ ಅತ್ಯುತ್ತಮ ಬೆಳಕನನ್ನು ನೀವು ಕಂಡುಕೊಳ್ಳುವಿರಿ. ಅಂತೆಯೇ ಸಪ್ಟೆಂಬರ್ ತಿಂಗಳಲ್ಲಿ ನಿಮ್ಮ ಶಕ್ತಿಗೆ ಹೆಚ್ಚಿನ ಪ್ರವೇಶ ಅಥವಾ ಅವಕಾಶ ದೊರೆಯುವುದು. ನಿಮ್ಮ ಗುರಿ ಅಥವಾ ಕೆಲಸಗಳಿಗೆ ಅನುವು ಮಾಡಿಕೊಡುವುದರ ಮೂಲಕ ಅತ್ಯಾಕರ್ಷಕ ಸಂಗತಿಯಾಗಿ ನಿಮಗೆ ಲಭಿಸುವುದು.

ಸಿಂಹ

ಸಿಂಹ

ಸಮಾಜದಲ್ಲಿ ಕೇಂದ್ರ ಬಿಂದುವಾಗಿ ಹೊಳೆಯಲ್ಲಿ ಬಯಸುವವರು ಇವರು. ಶ್ರಮ ಜೀವಿಗಳು ಹಾಗೂ ಏಕಾಗ್ರ ಜಿತ್ತರೂ ಹೌದು. ಅಂದುಕೊಂಡ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಾಕಷ್ಟು ಶ್ರಮವನ್ನು ವಹಿಸುತ್ತಾ ಇರುತ್ತಾರೆ. ಇವರಿಗೆ ಹೊಸ ವರ್ಷದ ಆರಂಭದ ಪೂರ್ವದಿಂದಲೂ ಒಂದು ಬಗೆಯ ಸಮಸ್ಯೆ ಅಥವಾ ಬೇಸರದ ಸಂಗತಿಯಲ್ಲಿ ಇದ್ದವರಾಗಿರುತ್ತಾರೆ. 2019ರ ವರ್ಷದ ಆರಂಭವು ಇವರಿಗೆ ಅದೃಷ್ಟವನ್ನು ತಂದುಕೊಡುವುದು. ಹಾಗಾಗಿ ವರ್ಷದ ಆರಂಭದಿಂದಲೇ ಹೊಳೆಯುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಇವರಿಗೆ 2019ರ ಫೆಬ್ರುವರಿ ತಿಂಗಳು ಸೃಜನ ಶೀಲ ಶಕ್ತಿಯನ್ನುಂಟುಮಾಡುವುದು. ನೀವು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಪ್ರಕಾಶಮಾನವಾಗಿ ಹೊಳೆಯಲು ಇದೊಂದು ಅತ್ಯುತ್ತಮವಾದ ಸಮಯವಾಗಿರುತ್ತದೆ ಎಂದು ಸಲಹೆ ನೀಡಲಾಗುವುದು.

ಕನ್ಯಾ

ಕನ್ಯಾ

ಹೆಚ್ಚು ವಿಮರ್ಶೆಯನ್ನು ಮಾಡುವವರು ಹಾಗೂ ಸಹಾನೂ ಭೂತಿ ವ್ಯಕ್ತಿಗಳು ಎಂದು ಕನ್ಯಾ ರಾಶಿಯವರನ್ನು ಗುರುತಿಸಲಾಗುತ್ತದೆ. ಪ್ರತಿಯೊಂದು ಕೆಲಸ ಅಥವಾ ಸಂಗತಿಗಳಲ್ಲೂ ಹೆಚ್ಚಿನ ಆಸಕ್ತಿ ಹಾಗೂ ಶ್ರದ್ಧೆಯನ್ನು ವಹಿಸುವುದರ ಮೂಲಕ ಸಾಕಷ್ಟು ಸಾಧನೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರಿಗೆ 2019ರ ಅದೃಷ್ಟದ ತಿಂಗಳು ಎಂದರೆ ಸಪ್ಟೆಂಬರ್. ಇವರು ಯಾವುದೇ ಹೊಸ ಯೋಜನೆ ಕೈಗೊಳ್ಳಲು ಅಥವಾ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಅದ್ಭುತವಾದ ತಿಂಗಳಾಗಿರುತ್ತದೆ. ಈ ತಿಂಗಳಲ್ಲಿ ನಿಮ್ಮ ಆಶಯಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುವುದು.

Most Read: 2019ರಲ್ಲಿ ಈ ಐದು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಕಾಣಲಿದೆಯಂತೆ!

ತುಲಾ

ತುಲಾ

ಸಮತೋಲನವನ್ನು ಕಾಯ್ದುಕೊಳ್ಳುವವರು ಹಾಗೂ ಭಾವನಾತ್ಮಕ ವ್ಯಕ್ತಿಗಳು ತುಲಾ ರಾಶಿಯವರು. ಇವರು 2019ರಲ್ಲಿ ಸಾಕಷ್ಟು ಉತ್ತೇಜಕ ಹಾಗೂ ನವೀಕೃತ ಜೀವನವನ್ನು ಕಂಡುಕೊಳ್ಳುವರು. ಅದಕ್ಕಾಗಿ ಇವರು ವಸಂತ ಕಾಲದ ವರೆಗೂ ಕಾಯಬೇಕಾಗುವುದು. ಏಪ್ರಿಲ್ ತಿಂಗಳು ಇವರಿಗೆ 2019ರ ಅದೃಷ್ಟ ತಿಂಗಳಾಗುವುದು. ಇವರು ಬಯಸುವ ಪ್ರೀತಿಯು ಇವರಿಗೆ ದೊರೆಯುವುದು. ಅಂದುಕೊಂಡ ಕೆಲಸ ಕಾರ್ಯಗಳು ಬಹು ಸುಲಭವಾಗಿ ದೊರೆಯುವುದು. ನೀವು ನಿಮ್ಮ ಸಂಸಾರ ಹಾಗೂ ಸಂಗಾತಿಗೆ ಸಾಕಷ್ಟು ಸಮಯ ಅಥವಾ ನ್ಯಾಯವನ್ನು ಒದಗಿಸಲು ಆಗದೆ ಇದ್ದಿದ್ದರೆ ಈ ತಿಂಗಳಲ್ಲಿ ಎಲ್ಲವೂ ಸರಿಯಾಗಿ ನಡೆಯುವುದು. ನಿಮ್ಮ ಮನಸ್ಸಿಗೂ ಒಂದು ಬಗೆಯ ನಿರಾಳತೆ ದೊರೆಯುವುದು.

ವೃಶ್ಚಿಕ

ವೃಶ್ಚಿಕ

ಶ್ರಮ ಜೀವಿಗಳು ಹಾಗೂ ಸೃಜನಾತ್ಮಕ ಯೋಜನೆಯನ್ನು ಹೊಂದುವ ವ್ಯಕ್ತಿಗಳು ಎಂದರೆ ವೃಶ್ಚಿಕ ರಾಶಿಯವರು. ಇವರು ತಮ್ಮ ಅದೃಷ್ಟವನ್ನು 2019ರ ವರ್ಷದಲ್ಲಿ ಎರಡು ಬಾರಿ ಕಾಣುವರು. ಅದು ಅವರಿಗೆ ಸಾಕಷ್ಟು ಸಂತೃಪ್ತಿಯನ್ನು ತಂದುಕೊಡುವುದು. ಬೇಸಿಗೆಯ ಅಂತ್ಯದ ಸಮಯದಲ್ಲಿ ಕೈಗೊಂಡ ಯೋಜನೆಗಳು ಹಾಗೂ ಗುರಿಗಳಿಗೆ ಅತ್ಯುತ್ತಮ ಫಲಿತಾಂಶ ದೊರೆಯುವುದು. ಆಗಸ್ಟ್ ತಿಂಗಳ ಅಂತಿಮ ಸಮಯವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ನೀವು ಬಯಸುವಂತಹ ವ್ಯಕ್ತಿಗಳೊಂದಿಗೆ ಉತ್ತಮ ಸಂಪರ್ಕವನ್ನು ಪಡೆದುಕೊಳ್ಳುವಿರಿ.

ಧನು

ಧನು

ಧೈರ್ಯವಂತರು ಹಾಗೂ ಸಾಹಸಿಗಳು ಎನಿಸಿಕೊಳ್ಳುವವರು ಧನು ರಾಶಿಯ ವ್ಯಕ್ತಿಗಳು. ಇವರ ಗ್ರಹಗತಿಗಳು ಅತ್ಯುತ್ತಮ ಪ್ರಭಾವವನ್ನು ಬೀರುವರು. ಗುರು ಮತ್ತು ಶುಕ್ರ ಗ್ರಹದ ಕೃಪೆಯು ಅತ್ಯುತ್ತಮ ರೀತಿಯಲ್ಲಿ ಇರುವುದರಿಂದ ಇವರು 2019ರ ಆರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಹೆಚ್ಚಿನ ಧೈರ್ಯ ಹಾಗೂ ಶೌರ್ಯವನ್ನು ಪ್ರದರ್ಶಿಸುವ ಅವಕಾಶ ಹಾಗೂ ಬಯಕೆಯನ್ನು ಹೊಂದಿರುತ್ತಾರೆ. ಅದ್ಭುತ ಪ್ರಯತ್ನ ಹಾಗೂ ಶ್ರಮವು ಉತ್ತಮ ಫಲವನ್ನು ನೀಡುವುದು.

ಮಕರ

ಮಕರ

ಹೊಸತನ್ನು ಪ್ರಯತ್ನಿಸುವ ಹುಮ್ಮಸ್ಸು ಹಾಗೂ ಹಳೆಯ ಸಂಗತಿಯಿಂದ ಉತ್ತಮ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳು ಮಕರ ರಾಶಿಯವರಾಗಿರುತ್ತಾರೆ. ಇವರು ಹೊಸ ವರ್ಷದ ಆರಂಭದಲ್ಲಿಯೇ ಸಾಕಷ್ಟು ನಿರೀಕ್ಷೆ ಹಾಗೂ ಪ್ರತಿಫಲವನ್ನು ಪಡೆದುಕೊಳ್ಳುವರು. ವರ್ಷದ ಉಳಿದ ತಿಂಗಳಲ್ಲಿ ಸಾಕಷ್ಟು ಧನಾತ್ಮಕವಾದ ಕಂಪನಗಳನ್ನು ಪಡೆದುಕೊಳ್ಳುವರು. ಜನವರಿ ತಿಂಗಳಲ್ಲಿಯೇ ಹೆಚ್ಚು ಪ್ರಯತ್ನ ಹಾಗೂ ಪ್ರಶಂಸೆಯನ್ನು ಪಡೆದುಕೊಳ್ಳುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕುಂಭ

ಕುಂಭ

ಸ್ವತಂತ್ರ ಪ್ರಿಯರು ಹಾಗೂ ಮೌನಿಗಳು ಎಂದು ಕುಂಭರಾಶಿಯವರನ್ನು ಗುರುತಿಸಬಹುದು. ಇವರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಲು 2019ರ ಫೆಬ್ರವರಿ ತಿಂಗಳು ಸೂಕ್ತವಾದದ್ದು. ಅಲ್ಲದೆ ಈ ವರ್ಷದ ಅದೃಷ್ಟದ ತಿಂಗಳು ನಿಮಗೆ ಫೆಬ್ರವರಿ ಮಾಸವೇ ಆಗಿರುತ್ತದೆ. ಆ ಸಮಯದಲ್ಲಿ ನೀವು ಉತ್ತಮ ಮನೋಭಾವ, ಅದೃಷ್ಟ ಹಾಗೂ ಅವಕಾಶಗಳನ್ನು ಪಡೆದುಕೊಳ್ಳುವುದರ ಮೂಲಕ ಹೆಚ್ಚಿನ ಸಂತೋಷವನ್ನು ಪಡೆದುಕೊಳ್ಳುವಿರಿ.

ಮೀನ

ಮೀನ

ಕನಸುಗಾರರು ಹಾಗೂ ಮೃದು ಮನಸ್ಸಿನವರು ಎಂದು ಮೀನರಾಶಿಯವರನ್ನು ಗುರುತಿಸಬಹುದು. ಇವರು ತಮ್ಮ ಅದೃಷ್ಟವನ್ನು 2019ರ ವರ್ಷದ ಎರಡು ತಿಂಗಳಲ್ಲಿ ಕಾಣಬಹುದು. ಫೆಬ್ರವರಿ ತಿಂಗಳಲ್ಲಿ ಹೆಚ್ಚಿನ ಕನಸುಗಳಿಗೆ ವಾಸ್ತವ ರೂಪ ನೀಡಲು ಸುಂದರವಾದ ಸಮಯವಾಗಿರುತ್ತದೆ. ಅಂತೆಯೇ ಜುಲೈ ತಿಂಗಳಲ್ಲಿ ತಮ್ಮ ಸೃಜನಾತ್ಮಕ ಕೆಲಸಗಳಿಗೆ ಅಥವಾ ಚಿಂತನೆಗಳಿಗೆ ಹೆಚ್ಚಿನ ಅವಕಾಶ ನೀಡಲು ಅನುವಾಗುವುದು. ಒಟ್ಟಿನಲ್ಲಿ ವರ್ಷ ಪೂರ್ತಿ ಸಾಕಷ್ಟು ಧನಾತ್ಮಕ ಫಲವನ್ನು ಪಡೆದುಕೊಳ್ಳುವ ಅದೃಷ್ಟವನ್ನು ಹೊಂದಿರುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

Read more about: life facts ಜೀವನ
English summary

Luckiest Months In 2019, Based On Your Zodiac Sign

It's safe to say that everyone is looking forward to the fresh start of a new year. It's exciting to think about all of the possibilities that are out there for the next few months, and to plan ways you can change little things about your life for the better. Still, it's also a little nerve-wracking to think about all of the things life could throw your way in 2019.
X
Desktop Bottom Promotion