Latest Updates
-
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ!
ಹುಟ್ಟಿದ ದಿನಾಂಕ ಗೊತ್ತಿದ್ದರೆ ಸಾಕು, ವೈವಾಹಿಕ ಜೀವನದ ಬಗ್ಗೆ ತಿಳಿಯಬಹುದು!
ಪ್ರತಿಯೊಬ್ಬರು ಜೀವನದಲ್ಲಿ ತಾವು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸಬೇಕೆಂದು ಬಯಸುವುದು ಸಹಜ. ಕೆಲವರ ಯೋಗದಲ್ಲಿ ಮದುವೆ ಎನ್ನುವುದು ಇದ್ದರೆ, ಇನ್ನು ಕೆಲವರಿಗೆ ವಿಳಂಬ ಹಾಗೂ ಕೆಲವರಿಗೆ ಈ ಯೋಗವೇ ಇರುವುದಿಲ್ಲ. ಮದುವೆ ಆಗದೆ ಇರುವವರಿಗೆ ಹೇಗೆ ಮದುವೆಯಾಗುತ್ತದೆಯಾ ಎನ್ನುವ ಚಿಂತೆ ಕಾಡುತ್ತಲಿರುವುದು. ಇದು ಪ್ರೇಮ ವಿವಾಹವೇ ಅಥವಾ ಹಿರಿಯರು ನಿಶ್ಚಿಯಿಸಿರುವಂತಹ ಮದುವೆಯೇ ಎನ್ನುವ ಚಿಂತೆ ಇರುವುದು. ಇದೆಲ್ಲವನ್ನೂ ನಾವು ಹುಟ್ಟಿದ ದಿನಾಂಕವನ್ನು ನೋಡಿ ಕೂಡ ಹೇಳಬಹುದಾಗಿದೆ.

ಹೌದು, ಹುಟ್ಟಿದ ದಿನಾಂಕವನ್ನು ನೋಡಿಕೊಂಡು ವ್ಯಕ್ತಿತ್ವ ಹೇಳುವಂತೆ ನಿಮ್ಮ ಮದುವೆ ಹೇಗೆ ಆಗಲಿದೆ? ಅದು ಪ್ರೇಮ ವಿವಾಹವೇ ಅಥವಾ ಹಿರಿಯರು ನಿಶ್ಚಯಿಸಿದ ಮದುವೆ ಎಂದು ತಿಳಿಯಬಹುದು. ಅದಕ್ಕಾಗಿ ನಿಮ್ಮ ಹುಟ್ಟಿದ ದಿನಾಂಕವು ಇದ್ದರೆ ಸಾಕು. ಹುಟ್ಟಿದ ದಿನಾಂಕದಿಂದ ಮದುವೆ ಬಗ್ಗೆ ಹೇಗೆ ತಿಳಿಯುವುದು ಎಂದು ನೀವು ಇಲ್ಲಿ ತಿಳಿಯಿರಿ. ಉದಾಹರಣೆಗೆ: ಒಂದು ವೇಳೆ ನೀವು 16ನೇ ತಾರೀಕಿಗೆ ಹುಟ್ಟಿದ್ದರೆ ಆಗ ನಿಮ್ಮ ಸಂಖೆಯು 1+6=7 ಆಗುವುದು. ಈಗ ನಿಮ್ಮ ಹುಟ್ಟಿದ ದಿನಾಂಕವನ್ನು ಲೆಕ್ಕ ಹಾಕಿಕೊಂಡು ಮದುವೆ ಬಗ್ಗೆ ಊಹೆ ಮಾಡಿ...

ಸಂಖ್ಯೆ 1- ಹುಟ್ಟಿದ ದಿನಾಂಕ 1, 10, 19 ಮತ್ತು 28
ಹುಟ್ಟಿದ ದಿನಾಂಕದಿಂದ ಸಂಖ್ಯೆಯು ಒಂದು ಬಂದರೆ ಆಗ ಆ ವ್ಯಕ್ತಿಗಳು ಜನ್ಮತಃ ನಾಯಕರು ಎಂದು ಹೇಳಲಾಗುತ್ತದೆ. ಇವರು ತಮ್ಮ ಕೈಯಲ್ಲಿ ಇರುವಂತಹ ಪ್ರತಿಯೊಂದು ಕೆಲಸವನ್ನು ಮುನ್ನಡೆಸಲು ಯೋಗ್ಯವಾಗಿರುವರು. ಈ ವ್ಯಕ್ತಿಗಳು ಸಂಬಂಧದಲ್ಲಿ ತುಂಬಾ ಅಧಿಕಾರ ಸ್ಥಾಪಿಸುವವರು. ಸಂಬಂಧದಲ್ಲಿ ಇವರು ತಮ್ಮದೇ ಮಾತು ನಡೆಯಬೇಕೆಂದು ಬಯಸುವರು. ಈ ಸಂಖ್ಯೆಯ ವ್ಯಕ್ತಿಗಳಿಗೆ ತಾವು ಬಯಸದೆ ಇರುವಂತಹ ಕೆಲಸವನ್ನು ಮಾಡಲು ಹೇಳಬಾರದು. ಇನ್ನೊಂದು ಕಡೆಯಲ್ಲಿ ಇವರು ಪ್ರೀತಿಗೆ ಬಿದ್ದರೆ ಆಗ ಇವರು ನಿಮ್ಮನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಸಂಬಂಧದಲ್ಲಿ ಯಾವಾಗಲೂ ಇವರು ತುಂಬಾ ನಿಷ್ಠರಾಗಿರುವರು.

ಸಂಖ್ಯೆ 2- ಹುಟ್ಟಿದ ದಿನಾಂಕ 2, 11 20 ಮತ್ತು 29
ಹುಟ್ಟಿದ ದಿನಾಂಕವು ಕೂಡಿಸಿದಾಗ 2 ಸಂಖ್ಯೆ ಬರುವಂತಹ ವ್ಯಕ್ತಿಗಳು ತುಂಬಾ ಚಂಚಲ, ಸೂಕ್ಷ್ಮ ಹಾಗೂ ಭೋಗಾಸಕ್ತ ವ್ಯಕ್ತಿಗಳಾಗಿರುವರು. ಸಂಬಂಧದಲ್ಲಿ ಇರುವುದು ಈ ವ್ಯಕ್ತಿಗಳಿಗೆ ಯಾವಾಗಲೂ ಮಾನಸಿಕ ಸಂಪರ್ಕದ ವಿಷಯವಾಗಿರುವುದು. ಇವರು ಯಾವಾಗಲೂ ದೈಹಿಕ ಸಂಪರ್ಕ ಹೊಂದುವ ಬಗ್ಗೆ ತುಂಬಾ ಕಡಿಮೆ ಪರಿಗಣಿಸುವರು ಮತ್ತು ಹೆಚ್ಚಾಗಿ ಇವರು ಭಾವನಾತ್ಮಕವಾದ ಸಂಪರ್ಕವನ್ನು ಇಟ್ಟುಕೊಳ್ಳಲು ಬಯಸುವರು. ಈ ವ್ಯಕ್ತಿಗಳು ತಮ್ಮ ಪ್ರೀತಿ ಅಥವಾ ಮದುವೆಯಲ್ಲಿ ಹೆಚ್ಚಿನ ತೃಪ್ತಿಯನ್ನು ಹೊಂದುವರು.

3 ಸಂಖ್ಯೆ-ಹುಟ್ಟಿದ ದಿನಾಂಕ 3, 12, 21 ಅಥವಾ 30
ಮೂರನೇ ಸಂಖ್ಯೆಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳ ಮದುವೆ ಹಾಗೂ ಪ್ರೀತಿಯ ವಿಚಾರವು ಹೆಚ್ಚಾಗಿ ಒಂದು ಸಂಖ್ಯೆಯಲ್ಲಿ ಹುಟ್ಟಿದ ಜನರ ವ್ಯಕ್ತಿತ್ವಕ್ಕೆ ಸಮಾನವಾಗಿರುವುದು. ಈ ವ್ಯಕ್ತಿಗಳು ತಮ್ಮ ಸಂಬಂಧದ ವಿಚಾರದಲ್ಲಿ ತುಂಬಾ ಪ್ರಾಯೋಗಿಕವಾಗಿರುವರು. ಇವರು ತಮ್ಮ ಹೃದಯಕ್ಕಿಂತ ಹೆಚ್ಚಾಗಿ ಮೆದುಳಿನ ಮಾತು ಕೇಳುವರು. ಹೆಚ್ಚು ಮಹತ್ವಾಕಾಂಕ್ಷಿಗಳಲ್ಲದ ಮತ್ತು ತುಂಬಾ ಭೀತಿಯಿಲ್ಲದೆ ಇರುವಂತಹ ಜೀವನ ಸಾಗಿಸಲು ಇವರು ಬಯಸುವರು. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳು ಸ್ವಯಂ ಭ್ರಾಂತಿ ಹೊಂದಿರುವರು ಮತ್ತು ತಮ್ಮದೇ ಆಗಿರುವಂತಹ ನಿಯಮಗಳನ್ನು ರೂಪಿಸಿಕೊಳ್ಳುವರು. ಇದರ ಹೊರತಾಗಿ ತುಂಬಾ ರೋಮ್ಯಾಂಟಿಕ್ ಆಗಿರುವರು. ಈ ವ್ಯಕ್ತಿಗಳ ಜತೆಗೆ ಸಂಬಂಧ ಸಾಧಿಸಲು ಬಯಸುವಂತಹ ವ್ಯಕ್ತಿಗಳು ಯಾವಾಗಲೂ ಒಂದು ರೀತಿಯ ಸಮತೋಲನ ಕಾಪಾಡಲು ಪ್ರಯತ್ನಿಸಬೇಕು.

ಸಂಖ್ಯೆ 4- ಹುಟ್ಟಿದ ದಿನಾಂಕ 4, 13, 22 ಮತ್ತು 31
ಈ ಸಂಖ್ಯೆಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಯಾವಾಗಲೂ ಅಸಂಪ್ರದಾಯಿಕವಾಗಿರುವರು. ಇವರಲ್ಲಿ ಸಾಮಾನ್ಯವಾಗಿ ಒಂದು ಅನನ್ಯತೆಯು ಇರುವುದು. ಹೆಚ್ಚಿನ ವ್ಯಕ್ತಿಗಳು ತುಂಬಾ ರೋಮ್ಯಾಂಟಿಕ್ ಆಗಿರುವುದಿಲ್ಲ ಮತ್ತು ಹೆಚ್ಚಾಗಿ ಈ ವ್ಯಕ್ತಿಗಳು ಮದುವೆ ಅಥವಾ ಸಂಬಂಧದಿಂದ ಹೊರಗಡೆ ಬೇರೆ ಸಂಬಂಧ ಹೊಂದಿರಬಹುದು. ಕೇವಲ ಸೆಕ್ಸ್ ನ ಕಾರಣಕ್ಕಾಗಿ ಹೀಗೆ ಮಾಡಿದ್ದೇವೆ ಎಂದು ಅವರು ನಿಮಗೆ ಹೇಳುವರು. ಸಂಬಂಧದ ಹೊರಗಡೆ ಇವರು ಯಾವುದೇ ರೀತಿಯಿಂದಲೂ ಭಾವನಾತ್ಮಕವಾಗಿರುವ ಸಂಪರ್ಕವನ್ನು ಹೊಂದಿರುವುದಿಲ್ಲ. ಇವರು ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಕೋಪದ ಕಡೆ ಗಮನಹರಿಸಬೇಕು ಎಂದು ಹೇಳಲಾಗುತ್ತದೆ.

ಸಂಖ್ಯೆ 5-ಹುಟ್ಟಿದ ದಿನಾಂಕ 5, 14 ಅಥವಾ 23
ಈ ಸಂಖ್ಯೆಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ತಮ್ಮ ಮದುವೆಗೆ ಮೊದಲು ಹಲವು ಸಂಬಂಧದಲ್ಲಿ ಸಿಲುಕುವರು. ಪರಿಪೂರ್ಣವಾಗಿರುವ ಸಂಗಾತಿಯನ್ನು ಪಡೆಯಬೇಕು ಎನ್ನುವ ಕಾರಣಕ್ಕಾಗಿ ತಮ್ಮ ಸಂಗಾತಿಯನ್ನು ಬದಲಾಯಿಸುತ್ತಾ ಇರುವರು. ಸ್ವಲ್ಪ ಸಮಯದ ಬಳಿಕ ಇವರಿಗೆ ತಮ್ಮ ಸಂಬಂಧದಲ್ಲಿ ಬೇಗನೆ ಬೇಸರ ಮೂಡುವುದು. ಹೊಸ ಸಂಗಾತಿ ಜತೆಗೆ ಪ್ರಯೋಗ ಮಾಡಲು ಇವರು ಬಯಸುವರು. ಈ ವ್ಯಕ್ತಿಗಳಿಗೆ ಸೆಕ್ಸ್ ಎನ್ನುವುದು ಅತೀ ಪ್ರಾಮುಖ್ಯವಾಗಿರುವುದು.

ಸಂಖ್ಯೆ6- ಹುಟ್ಟಿದ ದಿನಾಂಕ 6, 15 ಮತ್ತು 24
ಈ ವ್ಯಕ್ತಿಗಳು ಹೆಚ್ಚಾಗಿ ಪ್ರೀತಿ ಹಾಗು ಸೌಹಾರ್ದತೆ ಬಯಸುವರು. ಇವು ತುಂಬಾ ರೋಮ್ಯಾಂಟಿಕ್ ಹಾಗೂ ಆಕರ್ಷಕವಾಗಿರುವರು. ಇವರು ತುಂಬಾ ಭಾವನಾತ್ಮಕವಾಗಿರುವಂತಹ ವ್ಯಕ್ತಿಗಳಾಗಿರುವರು. ಇನ್ನೊಂದು ಕಡೆಯಲ್ಲಿ ಇವರು ತುಂಬಾ ಯುಕ್ತಿಯ ವ್ಯಕ್ತಿಗಳು ಮತ್ತು ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಲು ಇಷ್ಟಪಡುವರು. ಇವರು ತಮ್ಮ ಸಂಗಾತಿಗೆ ಮಾನಸಿಕ ಹಾಗೂ ಭಾವನಾತ್ಮಕವಾಗಿ ಸಿಗುವಾಗ ಮಾತ್ರ ಬದ್ಧತೆಯಿಂದ ಇರುವರು. ಈ ವ್ಯಕ್ತಿಗಳಿಗೆ ಸೆಕ್ಸ್ ಎನ್ನುವುದು ಮುಖ್ಯವಾಗಿರುವುದಿಲ್ಲ. ಇವರು ಹೆಚ್ಚಿನ ಸಂಪರ್ಕವನ್ನು ಬಯಸುವರು.

ಸಂಖ್ಯೆ 7-ಹುಟ್ಟಿದ ದಿನಾಂಕ 7, 16 ಮತ್ತು 25
ಈ ಸಂಖ್ಯೆಯ ವ್ಯಕ್ತಿಗಳು ಮಾತನಾಡುವುದು ತುಂಬಾ ಕಡಿಮೆ. ಇವರು ಜೀವನದಲ್ಲಿ ಪ್ರತಿಯೊಂದರ ಬಗ್ಗೆಯೂ ತುಂಬಾ ಯೋಜನೆ ಹಾಗೂ ಕನಸನ್ನು ಹೊಂದಿರುವರು. ಆದರೆ ಇದರರ್ಥ ಇವರು ತುಂಬಾ ಶಾಂತ ಮತ್ತು ರೋಮ್ಯಾಂಟಿಕ್ ಆಗಿಲ್ಲವೆಂದು ಹೇಳಲಾಗದು. ವೈವಾಹಿಕ ಜೀವನದಲ್ಲಿ ತುಂಬಾ ಯಶಸ್ಸನ್ನು ಪಡೆಬೇಕಾದರೆ ಆಗ ಈ ವ್ಯಕ್ತಿಗಳು ಭಾವನಾತ್ಮಕವಾಗಿ ಸಂಪರ್ಕವನ್ನು ಸಾಧಿಸುವುದು ಅತೀ ಅಗತ್ಯವಾಗಿರುವುದು. ಸಂಬಂಧದಲ್ಲಿ ಇವರು ತುಂಬಾ ಪ್ರಾಮಾನಿಕ ವ್ಯಕ್ತಿಗಳಾಗಿರುವರು. ಇವರು ಪ್ರತಿಯೊಂದು ವಿಚಾರವನ್ನು ತುಂಬಾ ವಿಶ್ಲೇಷಣೆ ಮಾಡುವರು ಮತ್ತು ಸಣ್ಣ ವಿಚಾರದ ಬಗ್ಗೆ ಕೂಡ ದೊಡ್ಡದಾಗಿ ಆಲೋಚನೆ ಮಾಡುವರು. ಇದರಿಂದಾಗಿ ಇವರೊಂದಿಗೆ ಸಣ್ಣ ಮಟ್ಟದ ಜಗಳವು ದೊಡ್ಡ ವಾಗ್ವಾದವಾಗಿ ಪರಿವರ್ತನೆಯಾಗುವುದು.

ಸಂಖ್ಯೆ 8-ಹುಟ್ಟಿದ ದಿನಾಂಕ 8, 17 ಅಥವಾ 26
ಈ ವ್ಯಕ್ತಿಗಳು ತುಂಬಾ ಪ್ರಭಾವಶಾಲಿಗಳು. ಇದೇ ವೇಳೆ ಇವರು ತುಂಬಾ ಭಾವನಾತ್ಮಕವಾಗಿ ಇರುವವರು. ಸಂಬಂಧದಲ್ಲಿ ಈ ವ್ಯಕ್ತಿಗಳು ತುಂಬಾ ಪ್ರಾಮಾಣಿಕವಾಗಿರುವರು. ಆದರೆ ದುರಾದೃಷ್ಟಶಾಲಿಗಳು. ಇವರನ್ನು ಪ್ರತಿಯೊಬ್ಬರು ತಪ್ಪಾಗಿ ಅರ್ಥೈಸಿಕೊಳ್ಳುವರು. ಇವರು ತಮ್ಮ ಹೃದಯದ ಮಾತನ್ನು ಕೇಳುವರು. ತಮ್ಮ ಸಂಗಾತಿ ಜತೆಗೆ ಸಂಪರ್ಕ ಸಾಧಿಸಲು ಇವರು ಹೆಚ್ಚಿನ ಸಮಯ ತೆಗೆದುಕೊಳ್ಳುವರು.

ಸಂಖ್ಯೆ 9-ಹುಟ್ಟಿದ ದಿನಾಂಕ 9, 18 ಅಥವಾ 27
ಈ ವ್ಯಕ್ತಿಗಳಲ್ಲಿ ಹೆಚ್ಚಿನ ಶಕ್ತಿ ಹಾಗೂ ಆಕ್ರಮಣಶೀಲತೆ ತುಂಬಿರುವುದು. ಇವರು ತೀವ್ರ ಭಾವನಾತ್ಮಕವಾಗಿ ಇರುವರು. ಆದರೆ ಇವರು ತಮ್ಮ ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸಿಕೊಡುವುದಿಲ್ಲ. ಈ ವ್ಯಕ್ತಿಗಳಿಗೆ ಲೈಂಗಿಕ ಬೇಡಿಕೆಯು ಅತಿಯಾಗಿರುವುದು ಮತ್ತು ಲೈಂಗಿಕವಾಗಿ ಸರಿಯಾಗಿ ಹೊಂದಿಕೊಳ್ಳುವ ವ್ಯಕ್ತಿಗಳ ಜತೆಗೆ ಇವರು ಜೀವನ ಸಾಗಿಸಲು ಬಯಸುವರು. ಇವರು ಕೇವಲ ತಮ್ಮ ಸಂಗಾತಿ ಜತೆಗೆ ಮಾತ್ರವಲ್ಲದೆ, ಕುಟುಂಬದವರೊಂದಿಗೆ ಕೂಡ ಭಾವನಾತ್ಮಕವಾಗಿ ಬೆರೆತಿರುವರು. ಇವರು ತುಂಬಾ ರೋಮ್ಯಾಂಟಿಕ್ ಹಾಗೂ ಅತ್ಯುತ್ಸಾಹಿಗಳು ಆಗಿರುವರು.



Click it and Unblock the Notifications











