Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಈ ನಾಲ್ಕು ರಾಶಿಚಕ್ರದವರು ಲೈಫ್‌ನಲ್ಲಿ ಎಂದಿಗೂ ಬದಲಾಗುವುದಿಲ್ಲ!
ಬದಲಾವಣೆ ಎನ್ನುವುದು ಸನ್ನಿವೇಶಗಳಿಗೆ ಅನುಗುಣವಾಗಿ ನಡೆಯುತ್ತಲೇ ಹೋಗುತ್ತವೆ. ವ್ಯಕ್ತಿ ಯಾವಾಗ ತನ್ನ ಸುತ್ತಲಿನ ಪರಿಸರಕ್ಕೆ ಅನುಗುಣವಾಗಿ ಹಾಗೂ ತಮ್ಮವರಿಗಾಗಿ ಬದಲಾವಣೆಯನ್ನು ತಂದು ಕೊಳ್ಳುತ್ತಾನೋ ಆಗ ಹೊಂದಾಣಿಕೆ ಎನ್ನುವುದು ಬಹಳ ಸುಲಭವಾಗುತ್ತದೆ. ಅದೇ ವ್ಯಕ್ತಿ ತನ್ನ ಸ್ವಾರ್ಥ ಅಥವಾ ಮೊಂಡುತನಕ್ಕೆ ಬಲಿಯಾಗಿ ಯಾವುದೇ ಹೊಂದಾಣಿಕೆ ಅಥವಾ ಬದಲಾವಣೆಗೆ ಒಳಗಾಗದೆ ಇದ್ದರೆ ಸಾಕಷ್ಟು ನೋವು ಹಾಗೂ ಅಹಿತಕರ ಘಟನೆಗಳನ್ನು ಅನುಭವಿಸಬೇಕಾಗುವುದು.
ವ್ಯಕ್ತಿಯ ಸ್ವಭಾವದಲ್ಲಿ ಇರುವ ಗುಣಗಳು ಕೇವಲ ವ್ಯಕ್ತಿಯ ಸ್ವಂತದ್ದಾಗಿರುವುದಿಲ್ಲ. ಬದಲಿಗೆ ಅದು ಗ್ರಹಗತಿಗಳ ಪ್ರಭಾವ ಹಾಗೂ ರಾಶಿಚಕ್ರಗಳ ಪರಿಣಾಮವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಚಕ್ರದ ವ್ಯಕ್ತಿಗಳು ಯಾವುದೇ ಕಾರಣಕ್ಕೂ ತಮ್ಮ ಸ್ವಭಾವದಲ್ಲಿ ಯಾವುದೇ ಬದಲಾವಣೆಯನ್ನು ತಂದುಕೊಳ್ಳುವುದಿಲ್ಲ. ಅದು ಸಂಬಂಧಗಳ ವಿಚಾರವಾಗಿದ್ದರೂ ಸರಿ ಎಂದು ಹೇಳಲಾಗುವುದು. ಈ ವಿಚಾರದ ಕುರಿತು ಇನ್ನಷ್ಟು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ...

ವೃಷಭ
ಭೂಮಿಯ ಚಿಹ್ನೆಯನ್ನು ಹೊಂದಿರುವ ರಾಶಿ ಚಕ್ರ ಇದು. ಇವರಲ್ಲಿ ನಿಶ್ಚಿತತೆ, ಮೊಂಡುತನ ಹಾಗೂ ಕಠಿನ ನಿರ್ಧಾರಗಳಿರುತ್ತವೆ. ಇವರು ತಮ್ಮ ಪಾಲುದಾರರ ಜೊತೆ ಹೇಗಿರಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಆದರೆ ಸಂಗಾತಿಗೆ ಅನುಗುಣವಾಗಿ ತಮ್ಮಲ್ಲಿ ಬದಲಾವಣೆಯನ್ನು ತಂದು ಕೊಳ್ಳುವುದಿಲ್ಲ. ಚಿಕ್ಕವರಿರುವಾಗ ಬಹಳ ಪ್ರೀತಿ ಹಾಗೂ ಸಹಾನುಭೂತಿಯಿಂದ ಬೆಳೆದುಬಂದಿದ್ದರೆ ಗಮನಾರ್ಹ ಬದಲಾವಣೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ತಮ್ಮದೇ ರೀತಿಯ ಚಿಂತನೆ ಹಾಗೂ ಸ್ಥಿರತೆಯನ್ನು ಹೊಂದಿರುತ್ತಾರೆ. ಇವರ ಸ್ಥಿರ ಚಿಂತನೆ ಅಥವಾ ಸ್ವಭಾವಗಳನ್ನು ಯಾವುದೇ ಸಂಬಂಧಗಳಿಗಾಗಿಯೂ ಬದಲಾಯಿಸಿ ಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ನೈಸರ್ಗಿಕವಾಗಿಯೇ ಪ್ರಣಯ ಭಾವ ಹೊಂದಿರುವ ಇವರು ತಮ್ಮ ಕೊನೆಯುಸಿರು ಇರುವವರೆಗೂ ಪಾಲುದಾರರಿಗೆ ಬದ್ಧರಾಗಿರುತ್ತಾರೆ.

ಸಿಂಹ
ಸ್ಥಿರ ಮನಸ್ಸಿನ ವ್ಯಕ್ತಿಗಳಲ್ಲಿ ಈ ರಾಶಿಯವರು ಸಹ ಬರುತ್ತಾರೆ. ಇವರು ಹೆಚ್ಚು ಆಕರ್ಷಕ ವ್ಯಕ್ತಿಯಾಗಿರಬೇಕೆಂದು ಬಯಸುತ್ತಾರೆ. ಜೀವನದಲ್ಲಿ ಪ್ರೀತಿಯಿಲ್ಲದಿದ್ದರೆ ಬದುಕು ಕತ್ತಲು ಎಂದು ಭಾವಿಸುವ ವ್ಯಕ್ತಿಗಳು ಇವರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಸದಾ ಉತ್ಸಾಹ, ಹುರುಪು ಹಾಗೂ ಶಕ್ತಿಯುತವಾದ ವ್ಯಕ್ತಿಗಳು. ಜೀವನದಲ್ಲಿ ಎಷ್ಟೇ ಹೊಸತನವನ್ನು ಕಂಡುಕೊಂಡರು ಸಹ ಇವರು ತಮ್ಮದೇ ಆದ ಸ್ವಭಾವದಲ್ಲಿ ಯಾವುದೇ ಬದಲಾವಣೆ ಕಂಡುಕೊಳ್ಳುವುದಿಲ್ಲ. ತಮ್ಮ ಪಾಲುದಾರರನ್ನು ಹೆಚ್ಚು ಖುಷಿಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಅವರಿಗಾಗಿ ತಮ್ಮಲ್ಲಿರುವ ಯಾವುದೇ ಸ್ವಭಾವವನ್ನು ಬದಲಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುವುದು.

ವೃಶ್ಚಿಕ
ನೀರಿನ ಚಿಹ್ನೆಯನ್ನು ಹೊಂದಿರುವ ಇವರು ಸ್ಥಿರವಾದ ಸ್ವಭಾವವನ್ನು ಹೊಂದಿರುತ್ತಾರೆ. ಸೂಕ್ಷ್ಮ ಗ್ರಹಿಗಳು ಇವರಾಗಿದ್ದರೂ ಅಷ್ಟು ಸುಲಭವಾಗಿ ಬದಲಾವಣೆಗೆ ಒಗ್ಗದವರು ಎಂದು ಹೇಳಬಹುದು. ವಿಶ್ವಾಸಾರ್ಹ ವ್ಯಕ್ತಿಗಳು ಆದ ಇವರು ಸಂಬಂಧಗಳಿಗಾಗಿ ತಮ್ಮ ಗುಣದಲ್ಲಿ ಯಾವುದೇ ಬದಲಾವಣೆಯನ್ನು ತಂದುಕೊಳ್ಳುವುದಿಲ್ಲ. ತಮ್ಮ ಮಾತುಗಳು ಹಾಗೂ ವರ್ತನೆಗಳು ತಾವು ಅಂದುಕೊಂಡ ರೀತಿಯಲ್ಲಿಯೇ ಇರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಪಾಲುದಾರರ ವಿಚಾರದಲ್ಲಿ ನಿಷ್ಠಾವಂತರು ಹಾಗೂ ನಂಬಿಗಸ್ತ ವ್ಯಕ್ತಿಗಳಾಗಿರುತ್ತಾರೆ. ಆದರೆ ತಮ್ಮ ಭಾವನೆ ಹಾಗೂ ಆದ್ಯತೆಗಳಲ್ಲಿ ಪಾಲುದಾರರಿಗಾಗಿ ಯಾವುದೇ ಬದಲಾವಣೆಯನ್ನು ಕಂಡುಕೊಳ್ಳುವುದಿಲ್ಲ.

ಕುಂಭ
ಈ ರಾಶಿಯವರು ಅನನ್ಯವಾದ, ಉದಾರವಾದ, ತೆರೆದ ಮನಸ್ಸಿನವರು ಹಾಗೂ ಭವಿಷ್ಯದ ನಂಬಿಕೆಯಲ್ಲಿ ಜೀವಿಸುವ ವ್ಯಕ್ತಿಗಳು. ಇವರು ಯಾವುದೇ ಊಹೆಯನ್ನು ಹೊಂದಿದ್ದರು ಅದು ಸರಿಯಾಗಿರುತ್ತದೆ. ಕ್ರಿಯಾತ್ಮಕ ಹಾಗೂ ಸೂಕ್ಷ್ಮ ಸ್ವಭಾವದವರು ಎಂದು ಹೇಳಬಹುದು. ಇವರು ಯಾವುದೇ ಸಂಬಂಧಗಳಿಗಾಗಿ ಅಥವಾ ಸಂಬಂಧಿಗಳು ಹೇಳಿರುವ ಕಾರಣಕ್ಕಾಗಿ ತಮ್ಮ ಭಾವನೆ ಹಾಗೂ ಸ್ವಭಾವಗಳನ್ನು ಬದಲಿಸಿಕೊಳ್ಳುವುದಿಲ್ಲ. ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವ ಇವರು ತಮ್ಮ ಪಾಲುದಾರರನ್ನು ಸಮಾನತೆ ಹಾಗೂ ಬಹಳ ಪ್ರೀತಿಯಿಂದ ಕಾಣುತ್ತಾರೆ. ಅಂತೆಯೇ ತಮ್ಮದೇ ಆದ ಅನನ್ಯತೆಯನ್ನು ಗೌರವಿಸುತ್ತಾರೆ ಮತ್ತು ಉತ್ತೇಜಿಸುತ್ತಾರೆ ಎಂದು ಹೇಳಲಾಗುವುದು.



Click it and Unblock the Notifications