ಈ ಐದು ರಾಶಿಯವರು ತಮ್ಮ ಸಂಗಾತಿಗೆ ಎಂದೂ ಮಾಡುವುದಿಲ್ಲ!

Posted By: Deepu
Subscribe to Boldsky

ಕೆಲವು ರಾಶಿಯಲ್ಲಿ ಜನಿಸಿರುವವರು ಯಾವುದೇ ಸಂಬಂಧದಲ್ಲಿ ಬದ್ಧತೆಯಿಂದ ಇರಲು ಬಯಸುವುದಿಲ್ಲ. ಇನ್ನು ಕೆಲವು ರಾಶಿಯವರು ತಮ್ಮ ಸಂಗಾತಿಗೆ ತುಂಬಾ ಮೋಸ ಮಾಡುವವರಾಗಿರುವರು. ಇಂತಹ ಹಲವಾರು ವಿಷಯಗಳನ್ನು ನೀವು ಬೋಲ್ಡ್ ಸ್ಕೈಯಲ್ಲಿ ಓದಿಕೊಂಡಿರಬಹುದು.

ಈ ಲೇಖನದಲ್ಲಿ ಸಂಗಾತಿಗೆ ತುಂಬಾ ನಿಷ್ಠರಾಗಿರುವ ರಾಶಿಚಕ್ರದವರ ಬಗ್ಗೆ ತಿಳಿಸಲಿದ್ದೇವೆ. ಐದು ರಾಶಿಚಕ್ರದವರು ತಮ್ಮ ಸಂಗಾತಿಗೆ ತುಂಬಾ ನಿಷ್ಠರಾಗಿರುವರು. ಈ ರಾಶಿಯವರು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಕರ್ಕಾಟಕ: ಜೂನ್ 21-ಜುಲೈ22

ಕರ್ಕಾಟಕ: ಜೂನ್ 21-ಜುಲೈ22

ಈ ರಾಶಿಚಕ್ರದವರು ಬೇರೆಲ್ಲಾ ರಾಶಿಗಳಿಗಿಂತ ತುಂಬಾ ಸೂಕ್ಷ್ಮ ಮನಸ್ಸಿನವರು ಎಂದು ಪರಿಗಣಿಸಲಾಗಿದೆ. ಇವರು ಬೇರೆಯವರ ಭಾವನೆಗಳ ಬಗ್ಗೆ ಚಿಂತೆ ಮಾಡುವ ಕಾರಣ ಸಂಗಾತಿಗೆ ಮೋಸ ಮಾಡುವುದರಿಂದ ದೂರ ಉಳಿಯುವರು. ಇವರು ತಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವರು ಮತ್ತು ಸಂಗಾತಿಗೆ ನಿಷ್ಠರಾಗಿರುವರು. ಈ ರಾಶಿಯವರಿಗೆ ಸಂಗಾತಿಯನ್ನು ಮೋಸ ಮಾಡಲು ಸಾಧ್ಯವಾಗುವುದಿಲ್ಲ.

ವೃಷಭ: ಎ.20- ಮೇ20

ವೃಷಭ: ಎ.20- ಮೇ20

ಮೋಸದ ವಿಚಾರಕ್ಕೆ ಬಂದರೆ ಈ ರಾಶಿಯವರು ಕೊನೆಯ ಸ್ಥಾನ ಪಡೆಯುವರು. ಇವರು ಯಾವತ್ತಿಗೂ ತಮ್ಮ ಸಂಗಾತಿಯಿಂದ ದೂರ ಉಳಿಯಲು ಸಾಧ್ಯವಿಲ್ಲ. ಇವರು ಬದಲಾವಣೆಗೆ ಸ್ಥಿರತೆ ಮತ್ತು ಭದ್ರತೆ ಒದಗಿಸುವರು. ಇದರಿಂದಾಗಿ ಅವರು ತಮ್ಮ ಸಂಗಾತಿ ಜತೆಗಿನ ಕಠಿಣ ಪರಿಸ್ಥಿತಿಯನ್ನು ಒಳ್ಳೆಯ ರೀತಿ ಎದುರಿಸಿ ಸಂಬಂಧ ಬಲಪಡಿಸುವರು. ಇನ್ನೊಂದು ಬದಿಯಲ್ಲಿ ಇವರು ಸಂಬಂಧದಲ್ಲಿ ಸಿಲುಕಲು ಹೆಚ್ಚು ಸಮಯ ತೆಗೆದುಕೊಳ್ಳುವರು. ಒಮ್ಮೆ ಸಂಬಂಧದಲ್ಲಿ ಬಿದ್ದ ಬಳಿಕ ಅವರು ಬಲ, ಸುರಕ್ಷಿತ ಮತ್ತು ದೀರ್ಘ ಕಾಲದ ಬೆಸುಗೆ ಬಯಸುವರು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಈ ರಾಶಿಯವರು ಮೋಸದ ಪರಿಣಾಮವನ್ನು ಮೊದಲೇ ಅರಿತುಕೊಳ್ಳುವ ಗುಣ ಹೊಂದಿರುವವರು. ಸಂಬಂಧದ ಸ್ಥಿರತೆಗೆ ಅಪಾಯವನ್ನೊಡ್ಡುವ ಕೆಲಸ ಮಾಡುವುದರಿಂದ ಅವರು ದೂರ ಉಳಿಯುವರು. ಮೋಸ ಮಾಡುವುದು ತುಂಬಾ ಅಪಾಯಕಾರಿ ಮತ್ತು ಸಿಕ್ಕಿಬಿದ್ದರೆ ಅದರಿಂದ ದೊಡ್ಡ ಮಟ್ಟದ ನೋವು ಅನುಭವಿಸಬೇಕಾಗುತ್ತದೆ ಎಂದು ಅವರಿಗೆ ತಿಳಿದಿರುವುದು.

ಕನ್ಯಾ: ಆ.24-ಸ.25

ಕನ್ಯಾ: ಆ.24-ಸ.25

ಇವರು ಯಾವುದೇ ವ್ಯಕ್ತಿಗೆ ಬದ್ಧರಾದರೆ ಆಗ ಅವರು ತುಂಬಾ ನಿಷ್ಠ ಹಾಗೂ ಪ್ರಾಮಾಣಿಕವಾಗಿ ತಮ್ಮ ಸಂಬಂಧದಲ್ಲಿ ಗಂಭೀರವಾಗಿರುವರು. ಯಾಕೆಂದರೆ ಇವರಿಗೆ ಪ್ರಮಾಣಕ್ಕಿಂತ ಗುಣಮಟ್ಟ ಬೇಕಿರುವುದು. ಇವರು ತಮ್ಮ ಸಂಗಾತಿ ಜತೆಗೆ ರೋಮ್ಯಾಂಟಿಕ ಆಗಿರಲು ಬಯಸುವರು. ಆದರೆ ಇದೇ ವೇಳೆ ದೈಹಿಕ ಸಂಬಂಧವು ಇವರಿಗೆ ಅಷ್ಟು ಕೆಲಸ ಮಾಡಲ್ಲ.

ಮೀನ: ಫೆ.19 ಮಾ.20

ಮೀನ: ಫೆ.19 ಮಾ.20

ಈ ರಾಶಿಯವರು ಯಾವತ್ತಿದ್ದರೂ ಮೋಸ ಮಾಡುವ ಜಾಯಮಾನದವರಲ್ಲ. ಇವರು ತುಂಬಾ ಸೂಕ್ಷ್ಮ ಮತ್ತು ಅರ್ಥಗರ್ಭಿತರಾಗಿರುವವರು. ಇವರ ಅಂತಪ್ರಜ್ಞೆಯು ಸಂಬಂಧದ ಮೇಲೆ ಪರಿಣಾಮ ಬೀರುವುದು. ಆದರೆ ಕೇವಲ ಇದರಿಂದಾಗಿ ಇವರನ್ನು ತುಂಬಾ ನಂಬಿಕಸ್ಥ ರಾಶಿಗಳ ಪಟ್ಟಿಯಿಂದ ಹೊರಗಿಡುವಂತಿಲ್ಲ.

English summary

Zodiacs That Will Remain Faithful To The Partners

There are those zodiac signs the individuals of which are scared to get committed while there are those that tend to be the most unfaithful zodiac signs, and here in this article we list 5 such zodiac signs that are known to be the most faithful ones. Check out on the zodiac signs that are ranked as the most faithful and honest ones. These signs would never cheat on their partners. Find out if your zodiac sign is also listed here...