Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಈ 4 ರಾಶಿಚಕ್ರದವರನ್ನು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕಂತೆ, ಯಾಕೆಂದರೆ ಇವರು ನಂಬಿಕೆ ದ್ರೋಹ ಮಾಡುತ್ತಾರಂತೆ!
ನಂಬಿಕೆ ಮೇಲೆ ಜಗತ್ತು ನಿಂತಿದೆ ಎನ್ನುವ ಮಾತಿದೆ. ಇದು ನಿಜ, ಯಾಕೆಂದರೆ ನಂಬಿಕೆ ಇಲ್ಲವಾದರೆ ಜಗತ್ತಿನಲ್ಲಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರ, ಸಂಬಂಧಗಳು ಇರುತ್ತಲೇ ಇರಲಿಲ್ಲ. ಆದರೆ ಕೆಲವೊಂದು ಸಲ ನಂಬಿಕೆಯಲ್ಲೂ ದ್ರೋಹವಾಗುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದಿನಿಂದಲೂ ನಮ್ಮ ಹಿರಿಯರು ಅಪರಿಚಿತರನ್ನು ನಂಬಬೇಡಿ ಎನ್ನುವ ಮಾತನ್ನು ಹೇಳಿಕೊಂಡು ಬರುತ್ತಲಿದ್ದಾರೆ. ಆದರೆ ನಮ್ಮ ಪಕ್ಕದಲ್ಲೇ ಆಪ್ತಸ್ನೇಹಿತರಂತೆ ನಟಿಸಿ, ನಂಬಿಕೆ ದ್ರೋಹ ಮಾಡಿದರೆ ಆಗ ದೊಡ್ಡ ಮಟ್ಟದ ಆಘಾತವಾಗುವುದು.

ಇದಕ್ಕೆ ಅವರು ಖಂಡಿತವಾಗಿಯೂ ಕಾರಣವಲ್ಲ. ಅವರ ರಾಶಿಚಕ್ರವು ಹೀಗೆ ಮಾಡುತ್ತದೆ. ನೀವು ಸ್ನೇಹಿತನೆಂದುಕೊಂಡು ಎಲ್ಲಾ ರೀತಿಯ ರಹಸ್ಯಗಳನ್ನು ಹಂಚಿಕೊಂಡಿರುವಿರಿ. ಆದರೆ ಅವರು ಹೇಳಿರುವ ಹೆಚ್ಚಿನ ವಿಚಾರಗಳು ಸುಳ್ಳಾಗಿರುವುದು. ಹೆಚ್ಚಿನವರಿಗೆ ಇಂತಹ ರಾಶಿಯವರನ್ನು ಅರ್ಥ ಮಾಡಿಕೊಳ್ಳಲು ಆಗಲ್ಲ ಮತ್ತು ತಮ್ಮೆಲ್ಲಾ ರಹಸ್ಯಗಳನ್ನು ಇವರೊಂದಿಗೆ ಹಂಚಿಕೊಳ್ಳುವರು. ಇನ್ನೊಂದೆಡೆಯಲ್ಲಿ ನೀವು ಒಳ್ಳೆಯ ಗೆಳೆಯರಾಗಿದ್ದರೂ ಸಹಿತ ಅವರು ತಮ್ಮ ಬಗ್ಗೆ ರಹಸ್ಯಗಳನ್ನು ಹಂಚಿಕೊಳ್ಳಲು ತುಂಬಾ ಹಿಂಜರಿಯುವರು. ಈ ಲೇಖನದಲ್ಲಿ ನೀವು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕಾದ ಕೆಲವು ರಾಶಿಚಕ್ರಗಳ ಬಗ್ಗೆ ತಿಳಿಸಲಿದ್ದೇವೆ. ಇದನ್ನು ನೀವು ತಿಳಿಯಿರಿ.

ವೃಷಭ
ವೃಷಭ ರಾಶಿಯವರು ಯಾವಾಗಲೂ ತಮ್ಮ ಗುರಿ ಸಾಧಿಸಲು ಪ್ರಯತ್ನಿಸುತ್ತಿರುವರು. ಒಂದು ಕಡೆಯಲ್ಲಿ ಅವರು ನಿಮ್ಮೊಂದಿಗೆ ದೊಡ್ಡ ನಂಬಿಕಸ್ಥ ಸ್ನೇಹಿತನೆಂದು ತೋರಿಸಿಕೊಡಬಹುದು. ಆದರೆ ಇದು ಅವರ ವೈಯಕ್ತಿಕ ಸಾಧನೆಗೆ ಎನ್ನುವುದನ್ನು ನೀವು ತಿಳಿಯಬೇಕು. ವೈಯಕ್ತಿಕ ಗುರಿ ಸಾಧನೆ ಮಾಡುವುದು ಅವರ ಮೊದಲ ಧ್ಯೇಯವಾಗಿದೆ. ಇದರಿಂದಾಗಿ ಅವರು ಸಮಯಬಂದಾಗ ನಿಮಗೆ ನಂಬಿಕೆದ್ರೋಹ ಮಾಡಬಹುದು.

ವೃಷಭ
ಅವರು ಒಳ್ಳೆಯ ಸ್ನೇಹಿತನೆಂದು ತೋರಿಸಿಕೊಡುವ ಕಾರಣದಿಂದಾಗಿ, ನೀವು ಎಲ್ಲಾ ರೀತಿಯ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳುವರು. ಆದರೆ ಅವರಿಗೆ ತಮ್ಮ ವೈಯಕ್ತಿಕ ಗುರಿಗೆ ನಿಮ್ಮ ನಂಬಿಕೆಯು ಅಡ್ಡಿಯಾಗುವುದು ಎಂದು ಅರ್ಥ ಮಾಡಿಕೊಳ್ಳುವರು. ಒಂದು ಸಲ ನೀವು ಅವರನ್ನು ಅರ್ಥ ಮಾಡಿಕೊಂಡ ಬಳಿಕ ಏನು ಹೇಳಬೇಕು ಮತ್ತು ಹೇಳಬಾರದು ಎಂದು ತಿಳಿಯಬಹುದು.

ತುಲಾ
ತುಲಾ ರಾಶಿಯ ಹೆಚ್ಚಿನ ಜನರು ತುಂಬಾ ಭಾವುಕ ವ್ಯಕ್ತಿಗಳಾಗಿರುವರು. ಇದರಿಂದಾಗಿ ಅವರು ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಲು ಬಯಸದೆ ಇರುವ ಕಾರಣದಿಂದಾಗಿ ಬೇರೆಯವರಿಗೆ ಸುಳ್ಳು ಹೇಳುವರು. ಸಂಬಂಧವು ಇವರಿಗೆ ತುಂಬಾ ಪ್ರಾಮುಖ್ಯತೆ ಪಡೆದಿರುವುದು. ಆದರೆ ಇವರು ಒಬ್ಬರಿಗಿಂತ ಹೆಚ್ಚಿನ ಜನರೊಂದಿಗೆ(ಕೆಲವರು ಮಾತ್ರ) ಸಂಬಂಧ ಬೆಳೆಸಿರುವುದು ದೊಡ್ಡ ಸಮಸ್ಯೆಯಾಗಿರುವುದು.

ತುಲಾ
ಇವರ ಇಬ್ಬರು ಗೆಳೆಯರು ತಮ್ಮೊಳಗೆ ಜಗಳ ಮಾಡಿಕೊಂಡ ವೇಳೆ ಅವರ ಮಧ್ಯೆ ಈ ರಾಶಿಯವರು ಸಿಲುಕಿಕೊಳ್ಳುವರು. ಒಬ್ಬ ವ್ಯಕ್ತಿಯ ಭಾವನೆಗಳಿಗೆ ನೋವುಂಟು ಮಾಡಲು ಬಯಸದೆ ಇರುವ ಕಾರಣ, ಮತ್ತೊಮ್ಮೆ ಜಗಳವಾಗುವುದನ್ನು ತಡೆಯಲು ಅಥವಾ ಮತ್ತೊಬ್ಬರ ಭಾವನೆಗಳಿಗೆ ನೋವುಂಟು ಮಾಡದೆ ಇರಲು ಸುಳ್ಳು ಹೇಳುವರು.

ಮಿಥುನ
ಮಿಥುನ ರಾಶಿಯವರಿಗೆ ಯಾವಾಗಲೂ ಹರಟೆ ಹೊಡೆಯುವುದು ತುಂಬಾ ಇಷ್ಟ. ಎಲ್ಲರೂ ತನ್ನನ್ನು ಇಷ್ಟಪಡಬೇಕೆಂದು ಇವರು ಬಯಸುವರು. ನೀವು ಅವರೊಂದಿಗೆ ಕುಳಿತುಕೊಂಡು ಏನಾದರೂ ಅನುಭವವನ್ನು ಹೇಳಲು ಆರಂಭಿಸಿದರೆ, ಆಗ ಅವರು ತುಂಬಾ ಕುತೂಹಲದಿಂದ ಅದನ್ನು ಕೇಳುವರು ಹಾಗೂ ನಿಮಗೆ ನಿಲ್ಲಿಸಲು ಅವಕಾಶ ನೀಡಲ್ಲ. ಈ ರೀತಿಯ ಅವರ ವರ್ತನೆಯಿಂದಾಗಿ ನೀವು ಎಲ್ಲಾ ರಹಸ್ಯವನ್ನು ಹಂಚಿಕೊಳ್ಳುವಿರಿ. ಮುಂದಿನ ಸಲ ಅವರು ನಿಮ್ಮೊಂದಿಗೆ ಹರಟೆಗೆ ಕುಳಿತುಕೊಂಡಾಗ ಅದರ ಬಗ್ಗೆ ಎಚ್ಚರ ವಹಿಸಿ. ಈ ವಿಚಾರದಲ್ಲಿ ಮಿಥುನ ರಾಶಿಯವರು ತುಂಬಾ ಮುಗ್ಧರಂತೆ ವರ್ತಿಸುವರು. ಮುಂದಿನ ಸಲ ನಿಮ್ಮ ಮಿಥುನ ರಾಶಿಯ ಸ್ನೇಹಿತ/ತೆಯೊಂದಿಗೆ ಏನೇ ಹಂಚಿಕೊಳ್ಳುವುದಿದ್ದರೂ ಆಗ ಎಚ್ಚರ ವಹಿಸಿ.

ಧನು
ಈ ರಾಶಿಯವರು ತುಂಬಾ ಸಾಹಸಪ್ರವೃತ್ತಿಯನ್ನು ಇಷ್ಟಪಡುವವರು ಎಂದು ನಮಗೆ ಈಗಾಗಲೇ ತಿಳಿದಿರುವ ವಿಚಾರ. ಈ ರಾಶಿಯವರು ನಿಮ್ಮ ಎಲ್ಲಾ ರೀತಿಯ ರಹಸ್ಯಗಳನ್ನು ತುಂಬಾ ಸಾಹಸಮಯವಾಗಿ ತಿಳಿದುಕೊಂಡು, ನಿಮ್ಮನ್ನು ಅವರ ಶತ್ರುವಿನಂತೆ ಮಾಡಬಹುದು. ಇವರು ಸರಿ ಅಥವಾ ತಪ್ಪಿನ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ತಮ್ಮ ವೈಯಕ್ತಿಕ ಗುರಿ ಸಾಧಿಸುವುದೇ ಸರಿ ಎಂದು ಭಾವಿಸಿರುವರು. ನೀವು ಸ್ನೇಹವನ್ನು ಬಿಟ್ಟ ಕೂಡಲೇ ಅವರು ನಿಮ್ಮನ್ನು ಮರೆತು ಬಿಡಬಹುದು. ಇದರಲ್ಲಿ ತಪ್ಪೇನಿಲ್ಲ, ಯಾಕೆಂದರೆ ಅವರು ತಮ್ಮ ಸ್ನೇಹಿತರ ಆರೈಕೆ ಮಾಡುವರು. ಅವರನ್ನು ಗುರಿಯಾಗಿಸಲ್ಲ.



Click it and Unblock the Notifications











