ಮತ್ತೊಂದು ರಾಶಿಗಾಗಿ ನಿಮ್ಮನ್ನು ತ್ಯಜಿಸುವ ರಾಶಿಗಳು!

Posted By: Hemanth
Subscribe to Boldsky

ನೀವು ಯಾರನ್ನಾದರೂ ಪ್ರೀತಿಸುತ್ತಾ ಇರುತ್ತೀರಿ. ಆದರೆ ಇದು ಮುಂದೆ ದೀರ್ಘಕಾಲದ ಸಂಬಂಧದಲ್ಲಿ ಬದಲಾಗುತ್ತದೆಯಾ, ಇಲ್ಲವಾ ಎನ್ನುವ ಗ್ಯಾರಂಟಿ ನಿಮಗೆ ಇರುವುದಿಲ್ಲ. ಇಂತಹ ಸಮಯದಲ್ಲಿ ನೀವು ಇಬ್ಬರ ರಾಶಿಚಕ್ರ ಹೊಂದಾಣಿಕೆ ಮಾಡಿಕೊಂಡು ನೋಡಬೇಕಾಗುತ್ತದೆ.

ಕೆಲವೊಂದು ರಾಶಿಯವರು ಯಾವುದೇ ಕಾರಣವಿಲ್ಲದೆ ನಿಮ್ಮಿಂದ ದೂರವಾಗಿ, ಮತ್ತೊಂದು ರಾಶಿಯವರ ಜತೆಗೆ ಸಂಬಂಧ ಬೆಳೆಸಬಹುದು. ಈ ಲೇಖನದಲ್ಲಿ ಇಂತಹ ರಾಶಿಗಳ ಬಗ್ಗೆ ನಿಮಗೆ ಸವಿವರವಾಗಿ ತಿಳಿಸಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಜತೆಗಾರ ಕೈಬಿಡುವ ಮೊದಲೇ ಕ್ರಮ ತೆಗೆದುಕೊಳ್ಳಿ....

ಮೇಷ: ಮಾ.21-ಎ.19

ಮೇಷ: ಮಾ.21-ಎ.19

ಈ ರಾಶಿಯವರು ನಿಮ್ಮನ್ನು ಬಿಟ್ಟು ಮಿಥುನ ರಾಶಿಯವರ ಕೈ ಹಿಡಿಯಬಹುದು. ಈ ರಾಶಿಯ ಚಿಹ್ನೆಯವರು ಸ್ವಭಾವಿಕವಾಗಿ ಹಠಾತ್ ಪ್ರಕೋಪಕ್ಕೆ ಒಳಗಾಗುವವರು. ಇದರಿಂದಾಗಿಯೇ ಇವರು ತುಂಬಾ ಅಭಿವ್ಯಕ್ತಿಶೀಲ ಮತ್ತು ಕ್ರಿಯಾತ್ಮಕವಾಗಿರುವ ಮಿಥುನ ರಾಶಿಯವರ ಕಡೆಗೆ ಆಕರ್ಷಿತರಾಗುವರು. ಮಿಥುನ ರಾಶಿಯವರು ಪ್ರತಿನಿತ್ಯ ಇವರಿಗೆ ಹೊಸ ಹಾಗೂ ತಾಜಾ ಅನುಭವ ನೀಡುವರು. ಇದರಿಂದಾಗಿ ಇವರು ಬೇಸರಗೊಳ್ಳುವುದಿಲ್ಲ.

ವೃಷಭ: ಎಪ್ರಿಲ್ 20- ಮೇ 20

ವೃಷಭ: ಎಪ್ರಿಲ್ 20- ಮೇ 20

ಈ ರಾಶಿಯ ವ್ಯಕ್ತಿಗಳು ಸಂಬಂಧದಲ್ಲಿ ತುಂಬಾ ಪ್ರಾಮಾಣಿಕವಾಗಿ ಉಳಿದುಕೊಳ್ಳಲು ಬಯಸುವರು. ಬೇರೊಬ್ಬ ವ್ಯಕ್ತಿಗೆ ಬದ್ಧತೆಯನ್ನು ತ್ಯಜಿಸಿ ಬಿಡುವುದು ತುಂಬಾ ಅಪರೂಪ. ತುಂಬಾ ಅಪರೂಪದಲ್ಲಿ ನಿಮ್ಮನ್ನು ತ್ಯಜಿಸಿದರೆ ಆಗ ಇವರು ಧನು ರಾಶಿಯವರತ್ತ ಆಕರ್ಷಿತರಾಗುವರು. ವೃಷಭ ರಾಶಿಯವರು ತಮ್ಮದೇ ಹಾದಿ ಸೃಷ್ಟಿಸಿಕೊಳ್ಳುವರು. ಆದರೆ ದೈನಂದಿನ ಕಾರ್ಯಚಟುವಟಿಕೆಗಳಿಂದ ತುಂಬಾ ಬೇಸರಗೊಂಡರೆ ಆಗ ಇವರು ಸಾಹಸಪ್ರವೃತ್ತಿ ಹುಡುಕಿಕೊಂಡು ಧನು ರಾಶಿಯ ಕಡೆ ಆಕರ್ಷಿತರಾಗುವರು. ಧನು ರಾಶಿಯವರು ಇವರನ್ನು ವಿಶ್ವದತ್ತರಕ್ಕೆ ಕೊಂಡೊಯ್ಯಬಲ್ಲರು.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಇವರು ತಮ್ಮ ಸಾಮಾಜಿಕ ಜೀವನಕ್ಕೆ ತುಂಬಾ ಹೆಸರುವಾಸಿಯಾಗಿರುವವರು. ಇದರಿಂದಾಗಿ ಇವರು ಒಂದು ಬದ್ಧ ಜೀವನಶೈಲಿಯಲ್ಲಿರುವರು. ಇವರು ಪ್ರತಿಯೊಂದು ಕಡೆಯಲ್ಲೂ ಇರುವರು. ಆದರೆ ಇವರ ಕ್ರಿಯಾತ್ಮಕ ವ್ಯಕ್ತಿತ್ವವನ್ನು ನೀವು ಇಷ್ಟಪಡುವಿರಿ. ಆದರೆ ಇವರು ನಿಮ್ಮನ್ನು ಕನ್ಯಾ ರಾಶಿಯ ಪುರುಷ/ಮಹಿಳೆಗಾಗಿ ತ್ಯಜಿಸುವರು. ಈ ರಾಶಿಗಳೆರಡು ಹೆಚ್ಚು ಹೊಂದಾಣಿಕೆಯಾಗುವುದು.

ಕರ್ನಾಟಕ: ಜೂನ್ 21-ಜುಲೈ 22

ಕರ್ನಾಟಕ: ಜೂನ್ 21-ಜುಲೈ 22

ಇವರು ವೃಶ್ಚಿಕ ರಾಶಿಯವರಿಗೆ ತಮ್ಮ ಹೃದಯ ಕಳಕೊಳ್ಳುವರು. ಇವೆರಡು ಜಲರಾಶಿಗಳು ಮತ್ತು ಇಬ್ಬರು ತುಂಬಾ ಭಾವನಾತ್ಮಕವಾಗಿ ಹೊಮದಿಕೊಳ್ಳುವರು. ಇವರ ಸಂಬಂಧವು ಉತ್ತಮವಾಗಿರುವುದು. ಈ ರಾಶಿಯವರು ತುಂಬಾ ಭಾವನಾತ್ಮಕವಾಗಿರುವ ವ್ಯಕ್ತಿಗಳು.

ಸಿಂಹ: ಜುಲೈ 23- ಆ. 23

ಸಿಂಹ: ಜುಲೈ 23- ಆ. 23

ಈ ರಾಶಿಯವರಿಗೆ ಯಾವಾಗಲೂ ತಮ್ಮ ಆರೈಕೆ ಮಾಡುತ್ತಿರಬೇಕು ಮತ್ತು ತಮ್ಮ ಕಡೆ ಗಮನಹರಿಸುತ್ತಿರಬೇಕೆಂದು ಬಯಸುವರು. ಈ ರಾಶಿಯವರಿಗೆ ಕರ್ಕಾಟಕ ರಾಶಿಯವರು ಇಷ್ಟವಾಗುವರು. ಕರ್ಕಾಟಕ ರಾಶಿಯವರು ತುಂಬಾ ಆರೈಕೆ ಮಾಡುವ ಮತ್ತು ಹೆಚ್ಚು ಪ್ರೀತಿ ತೋರಿಸುವ ಸ್ವಭಾವದವರಾಗಿರುವ ಕಾರಣದಿಂದಾಗಿ ಇವರಿಗೆ ಕರ್ಕಾಟಕ ರಾಶಿಯವರು ಹೊಂದಿಕೊಳ್ಲೂವರು. ಇದರಿಂದ ನಿಮ್ಮನ್ನು ಕರ್ಕಾಟಕ ರಾಶಿಯವರಿಗಾಗಿ ತ್ಯಜಿಸಿದರೆ ಅಚ್ಚರಿ ಪಡಬೇಡಿ.

ಕನ್ಯಾ: ಆ. 24-ಸ.23

ಕನ್ಯಾ: ಆ. 24-ಸ.23

ಈ ರಾಶಿಯವರಿಗೆ ಕನ್ಯಾ ರಾಶಿಯವರು ಅಥವಾ ಮಕರ ರಾಶಿಯವರು ಪ್ರಿಯವಾಗುವರು. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಈ ರಾಶಿಯವರು ತುಂಬಾ ದೃಢವಾದ ವಿಶ್ವಾಸ ಹೊಂದಿರುವರು. ಇವರು ತಮ್ಮದೇ ರೀತಿಯಲ್ಲಿ ಕೆಲಸ ಮಾಡುವರು ಮತ್ತು ಜೀವನದಲ್ಲಿ ಹೇಗೆ ಮುಂದೆ ಸಾಗಬೇಕು ಎನ್ನುವ ಬಗ್ಗೆ ಉನ್ನತ ಗುಣಮಟ್ಟ ಹೊಂದಿರುವರು. ಮಕರ ರಾಶಿಯವರು ಇವರಿಗೆ ಸರಿಯಾದ ಆಯ್ಕೆ.

ತುಲಾ: ಸ.24-ಅ.23

ತುಲಾ: ಸ.24-ಅ.23

ತುಲಾ ರಾಶಿಯವರು ನಿಮ್ಮನ್ನು ತ್ಯಜಿಸಬೇಕಿದ್ದರೆ ಅವರು ಮತ್ತೊಂದು ತುಲಾ ರಾಶಿಯವರೆಡೆಗೆ ಆಕರ್ಷಿತರಾಗಿದ್ದಾರೆ ಎಂದು ತಿಳಿದುಕೊಳ್ಳಬೇಕು. ಈ ರಾಶಿಯವರು ತುಂಬಾ ಸ್ನೇಹಪರರು. ಇದರಿಂದಾಗಿ ಈ ರಾಶಿಯವರು ಪರಸ್ಪರ ಇಷ್ಟಪಡುವರು. ಇವರು ನಿಮ್ಮನ್ನು ತ್ಯಜಿಸಿದರೆ ಆಗ ಇನ್ನೊಂದು ತುಲಾ ರಾಶಿಯವರು ಆಕರ್ಷಿಸಿದ್ದಾರೆ ಎಂದು ತಿಳಿಯಿರಿ.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ಈ ರಾಶಿಯವರು ನಿಮ್ಮನ್ನು ಮೇಷ ರಾಶಿಯವರಿಗಾಗಿ ತ್ಯಜಿಸಬಹುದು. ಇವರಿಬ್ಬರದ್ದು ತುಂಬಾ ತೀವ್ರ ಮತ್ತು ಬಾವೋದ್ರೀಕ್ತ ವ್ಯಕ್ತಿತ್ವ. ಮೇಷ ರಾಶಿಗಿಂತ ವೃಶ್ಚಿಕ ರಾಶಿಯವರು ಹೆಚ್ಚು ವಿವೇಚನೆಯುಳ್ಳವರು ಎಂದು ನಂಬಲಾಗಿದೆ. ಇವರ ತೀವ್ರತೆ ಮತ್ತು ಭಾವೋದ್ರಿಕತೆ ಪರಸ್ಪರರನ್ನು ಆಕರ್ಷಿಸುವುದು.

ಧನು: ನ.23-ಡಿ.22

ಧನು: ನ.23-ಡಿ.22

ಧನು ರಾಶಿಯವರು ಯಾವಾಗಲೂ ವೃಷಭ ರಾಶಿಯವರತ್ತ ಆಕರ್ಷಣೆಗೆ ಒಳಗಾಗುವರು. ವೃಷಭ ರಾಶಿಯವರು ಕೂಡ ಧನು ರಾಶಿಯವರತ್ತ ಆಕರ್ಷಿತರಾಗುವರು. ಸಾಹಸ ಪ್ರವೃತ್ತಿಯವರಾಗಿರುವ ಕಾರಣದಿಂದ ಇವರು ಯಾರೊಂದಿಗೂ ಸಂಬಂಧ ಬೆಳೆಸುವುದಿಲ್ಲವೆಂದಲ್ಲ. ಸಂಬಂಧದಲ್ಲಿ ಬೇಕಿರುವಂತಹ ಎಲ್ಲಾ ರೀತಿಯ ಸ್ಥಿರತೆ ಇವರು ನೀಡುವರು. ಆದರೆ ಇವರು ವೃಷಭ ರಾಶಿಯವರತ್ತ ಆಕರ್ಷಿತರಾದರೆ ಆಗ ನೀವು ಅವರನ್ನು ದೂರಬೇಡಿ.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಈ ರಾಶಿಯವರು ತುಂಬಾ ಮಹತ್ವಾಕಾಂಕ್ಷಿಗಳು ಇವರಿಗೆ ಜೀವನದಲ್ಲಿ ಒಂದು ಗುರಿ ಇರುವುದು ಮತ್ತು ಅದರತ್ತ ದೃಷ್ಟಿ ನೆಟ್ಟಿರುವರು. ಇವರ ಕಠಿಣ ಪರಿಶ್ರಮ ಮತ್ತು ಕೆಲಸದಿಂದಾಗಿ ತಮ್ಮ ಬಗ್ಗೆ ಕಾಳಜಿ ವಹಿಸಲು ಮರೆತಿರುವರು. ಇವರ ಸಮೂಹದಲ್ಲಿ ಯಾರಾದರೂ ಕರ್ಕಾಟಕ ರಾಶಿಯವರು ಇದ್ದರೆ ಆಗ ಅವರತ್ತ ಆಕರ್ಷಿತರಾದರೆ ಅಚ್ಚರಿ ಪಡಬೇಕಾಗಿಲ್ಲ. ಕರ್ಕಾಟಕ ರಾಶಿಯವರ ಆರೈಕೆಯ ಸ್ವಭಾವದಿಂದ ಅವರು ನಿಮ್ಮನ್ನು ತ್ಯಜಿಸುವರು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಇವರು ಮೀನ ರಾಶಿಯವರತ್ತ ಆಕರ್ಷಣೆಗೆ ಒಳಗಾಗುವರು. ಇವರು ತುಂಬಾ ಬುದ್ಧಿವಂತರಾಗಿರುವುದರಿಂದ ತಮ್ಮ ಭಾವನೆಗಳನ್ನು ತೋರಿಸಿಕೊಡುವುದಿಲ್ಲ. ಮೀನ ರಾಶಿಯವರಿಗೆ ಬೇರೆಯವರ ಭಾವನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು ತಿಳಿದಿರುವ ಕಾರಣದಿಂದ ಅವರು ಸುಲಭವಾಗಿ ಕುಂಭ ರಾಶಿಯವರನ್ನು ಆಕರ್ಷಿಸುವರು. ಇವರು ಮೀನ ರಾಶಿಯವರಿಗಾಗಿ ನಿಮ್ಮನ್ನು ತ್ಯಜಿಸುವರು.

ಮೀನ: ಫೆ. 19-ಮಾ.20

ಮೀನ: ಫೆ. 19-ಮಾ.20

ಈ ರಾಶಿಯವರು ಕುಂಭ ರಾಶಿಯವರ ಕುತೂಹಲ ಮೂಡಿಸುವ ಪ್ರವೃತ್ತಿಯ ಕಡೆಗೆ ಆಕರ್ಷಣೆಗೆ ಒಳಗಾಗುವರು. ಇವರು ತುಂಬಾ ಭಾವನಾತ್ಮಕ ಮತ್ತು ರೋಮ್ಯಾಂಟಿಕ್ ಆಗಿರುವರು. ಆರಂಭದಲ್ಲಿ ಇವರು ಕುಂಭ ರಾಶಿಯವರ ಕಡೆಗೆ ಆಕರ್ಷಣೆಗೆ ಒಳಗಾಗುವುದಿಲ್ಲ. ಆದರೆ ಸಮಯ ಕಳೆದಂತೆ ಇವರು ಪ್ರೀತಿಯಲ್ಲಿ ಬೀಳುವರು. ಇವರಿಬ್ಬರ ವ್ಯಕ್ತಿತ್ವವು ತದ್ವಿರುದ್ಧವಾಗಿರುವುದೇ ಇವರು ಜತೆಯಾಗಿರಲು ಕಾರಣ.

English summary

zodiac-signs-will-leave-you-for-these-zodiac-signs

If you are in love and are wondering if the relationship would last for long or not, then you need to know certain things when it comes to your zodiac sign compatibility. We reveal to you the details of the zodiac signs, which will dump their partners for no reason and fall for other specific zodiac signs instead. In this article, we are revealing to you about what each person looks for in his/her love interest, based on the zodiac. Check them out and find out about which sign your partner can dump you for...