Latest Updates
-
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ
ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!
ಈ ಐದು ರಾಶಿಚಕ್ರದ ಜನರು ಎಂದಿಗೂ ಎಲ್ಲಾ ವಿಚಾರದಲ್ಲೂ ಭಾಗಿಯಾಗಿರಬೇಕು ಎಂದು ಭಾವಿಸುವುದಿಲ್ಲ. ವಿಶ್ರಾಂತಿಯನ್ನು ಬಯಸುವ ರಾಶಿಚಕ್ರದವರು ಇವರು... ಇವರು ಎಂದಿಗೂ ಎಲ್ಲದರಲ್ಲೂ ಭಾಗಿಯಾಗ ಬೇಕೆಂದು ಭಾವಿಸುವುದಿಲ್ಲ. ಸಾಮಾನ್ಯವಾಗಿ ಮನುಷ್ಯ ಇತರರನ್ನು ಅನುಕರಣೆ ಮಾಡುವುದು ಸಹಜ. ಅಂತೆಯೇ ಬೇರೆಯವರ ಬಳಿ ಇರುವಂತಹ ವಸ್ತುಗಳನ್ನು ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ಇತರರಂತೆ ತಾನೂ ಸಹ ಯಶಸ್ಸು ಹಾಗೂ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಾನೆ. ಎಲ್ಲಾ ವಿಚಾರದಲ್ಲೂ ತಾನೂ ಪರಿಪೂರ್ಣತೆಯನ್ನು ಹೊಂದಿರಬೇಕು.
ಇತರರಿಗಿಂತ ಮೇಲ್ಮಟ್ಟದಲ್ಲಿ ಇರಬೇಕು. ಎಲ್ಲರೂ ನನ್ನನ್ನು ಹೆಚ್ಚು ಶ್ರೇಷ್ಠ ಎಂದು ತಿಳಿಯಬೇಕು ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಆ ಕಲ್ಪನೆಯಂತೆ ಎಲ್ಲರೂ ಮೇಲೆ ಹೋಗಲು ಸಾಧ್ಯವಿಲ್ಲ. ಕೇವಲ ಬೆರಳೆಣಿಕಯಷ್ಟು ಮಂದಿ ಸಾಧಿಸುತ್ತಾರೆ ಎಂದು ಹೇಳಬಹುದು. ಇನ್ನುಳಿದವರು ನಿರಂತರ ಪ್ರಯತ್ನಗಳಲ್ಲಿ ತೊಡಗಿರುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಈ ವಿಚಾರಳಿಗೆ ಅಪವಾದ ಎನ್ನುವ ರೀತಿಯಲ್ಲಿ ಇರುತ್ತಾರೆ. ಅವರು ಜೀವನದಲ್ಲಿ ಹೆಚ್ಚು ವಿಶ್ರಾಂತಿ ಹಾಗೂ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ. ಅದು ಅವರಿಗೆ ಶ್ರಮವಿಲ್ಲದೆಯೇ ದೊರೆಯಬೇಕು. ಬೇರೆಯವರನ್ನು ನೋಡಿ ತಾವೂ ಶ್ರಮದಲ್ಲಿ ತೊಡಗಿಕೊಳ್ಳುವುದಿಲ್ಲ. ಅಲ್ಲದೆ ಬೇರೆಯವರಂತೆ ತಾನು ಎಲ್ಲಾ ವಿಚಾರದಲ್ಲೂ ಪರಿಪೂರ್ಣನಾಗಿರಬೇಕು ಅಥವಾ ಎಲ್ಲಾ ವಿಚಾರದಲ್ಲೂ ತನ್ನ ಸಹ ಭಾಗಿತ್ವ ಇರಬೇಕು ಎಂದು ಬಯಸುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಒಂದು ವಿಶಾಲವಾದ ವಿಚಾರ. ಈ ಒಂದು ವಿಧಾನದಿಂದ ವ್ಯಕ್ತಿಯ ವಿವಿಧ ವಿಚಾರಗಳನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಕ್ಲಿಷ್ಟವಾದ ವಿಧಾನ ಇರುವುದರಿಂದ ಅರ್ಥೈಸಿಕೊಳ್ಳುವುದು ಸ್ವಲ್ಪ ಕಠಿಣ ಅನಿಸಬಹುದು. ಆದರೆ ಇದರಿಂದ ತಿಳಿದುಕೊಳ್ಳುವ ವಿಚಾರಗಳು ಸಾಮಾನ್ಯ ಜೀವನಕ್ಕೆ ಸಾಕಷ್ಟು ಹತ್ತಿರವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಹೆಚ್ಚು ವಿಶ್ರಾಂತಿಯನ್ನು ಪಡೆಯಲು ಬಯಸುತ್ತಾರೆ. ಇವರು ಇತರರಂತೆ ತಾವು ಎಲ್ಲಾ ವಿಚಾರದಲ್ಲೂ ಇರಬೇಕೆಂದು ಬಯಸುವುದಿಲ್ಲ. ಇವರ ಗುಣ ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ ಎಂದು ಹೇಳಬಹುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಗುಣಗಳು ಏನು ಎನ್ನುವುದನ್ನು ತಿಳಿಯೋಣ ಬನ್ನಿ...

1. ತುಲಾ
ಈ ರಾಶಿಯ ವ್ಯಕ್ತಿಗಳು ಯಾವುದೇ ವಿಚಾರಗಳ ಕುರಿತಾಗಿಯೂ ಒಮ್ಮೆಲೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಇವರು ವಿಷಯಗಳನ್ನು ಅಥವಾ ಸನ್ನಿವೇಶಗಳನ್ನು ಕೆಟ್ಟದಾಗಿಸಲು ಬಯಸುವುದಿಲ್ಲ. ಇವರು ಸಾಮಾನ್ಯವಾಗಿ ಸಂಘರ್ಷಗಳನ್ನು ದ್ವೇಷಿಸುತ್ತಾರೆ. ಕೆಟ್ಟ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಅನುಚಿತವಾಗಿರುತ್ತವೆ. ಅವುಗಳಿಂದ ಯಾವುದೇ ರೀತಿಯ ಉತ್ತಮ ಫಲಿತಾಂಶ ದೊರೆಯದು ಎಂದು ಭಾವಿಸುತ್ತಾರೆ.

ಪ್ರತಿಯೊಂದು ಸ್ಥಿತಿಯಲ್ಲೂ ಒಳ್ಳೆಯದನ್ನು ನೋಡಲು ಪ್ರಯತ್ನಿಸುತ್ತಾರೆ
ಸರಳ ಚಿಂತನೆ ಹಾಗೂ ಜೀವನ ಶೈಲಿಯು ಹೆಚ್ಚಿನ ಸಂತೋಷ ನೀಡುವುದು ಎಂದು ಭಾವಿಸುತ್ತಾರೆ. ಹಾಗೆಯೇ ಬದುಕಲು ಇಷ್ಟಪಡುತ್ತಾರೆ. ಪ್ರತಿಯೊಂದು ಸ್ಥಿತಿಯಲ್ಲೂ ಒಳ್ಳೆಯದನ್ನು ನೋಡಲು ಪ್ರಯತ್ನಿಸುತ್ತಾರೆ. ಸುಲಭವಾಗಿ ಸಂತೋಷವು ದೊರೆಯುವಾಗ ಅದಕ್ಕಾಗಿ ಭಾರೀ ಪ್ರತಿಕ್ರಿಯೆ ಅಥವಾ ಕೆಲಸವನ್ನು ಕೈಗೊಳ್ಳುವ ಅಗತ್ಯವಿಲ್ಲ. ಅತಿಯಾದ ಚಿಂತನೆ ಹಾಗೂ ಬಯಕೆ ಹೊಂದಿದಾಗ ಮಾತ್ರ ಜೀವನ ಕಷ್ಟ ಹಾಗೂ ದುಃಖವನ್ನು ತಂದೊಡ್ಡುವುದು ಎನ್ನುವುದು ಇವರ ಭಾವನೆಯಾಗಿರುತ್ತದೆ.

2. ಮೀನ
ಈ ರಾಶಿಯವರು ಅತಿಯಾದ ಗುಟ್ಟು ಹಾಗೂ ಸೋಲಿಸುವ ಗುಣವನ್ನು ಇಷ್ಟಪಡರು. ಈ ವಿಚಾರಗಳು ಹೆಚ್ಚು ಒತ್ತಡವನ್ನುಂಟುಮಾಡುತ್ತವೆ. ಇವರು ಹೆಚ್ಚು ಒತ್ತಡವನ್ನು ಇಷ್ಟಪಡದ ಜನರು ಎಂದು ಹೇಳಲಾಗುವುದು. ಇತರರ ಎದುರು ಅತಿಯಾದ ವರ್ತನೆ ಹಾಗೂ ಮೇಲುಗೈ ಸಾಧಿಸಲು ಇಷ್ಟಪಡರು. ಈ ರೀತಿಯ ವರ್ತನೆಗಳನ್ನು ಹೊಂದಿದ್ದರೆ ಅತಿಯಾದ ದಣಿವು ಹಾಗೂ ಅತಿಯಾದ ಸಂವೇದನಾಶೀಲರಾಗಿ ಇರಬೇಕಾಗುವುದು ಎಂದು ಭಾವಿಸುತ್ತಾರೆ.

ಯಾವುದೇ ಸಂಗತಿಗಳ ಕುರಿತು ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ
ಏನನ್ನು ಪಡೆಯಬೇಕು ಎನ್ನುವುದು ಅಂತರ್ಬೋಧನೆಯಿಂದ ತಿಳಿಯಬಹುದು. ನಿಸ್ವಾರ್ಥ ಗುಣಗಳನ್ನು ಹೊಂದಿರುವ ಇವರು ಯಾವುದೇ ಸಂಗತಿಗಳ ಕುರಿತು ಅತಿಯಾದ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ. ಅತಿಯಾದ ಬಯಕೆ ಹಾಗೂ ಆಲೋಚನೆಯಿಂದ ನೆಮ್ಮದಿ ಹಾಳಾಗುವುದು ಎನ್ನುವ ಸತ್ಯವನ್ನು ಅರಿತಿರುತ್ತಾರೆ.

3. ವೃಷಭ
ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಒಂದೇ ಸಮನೆ ವರ್ತನೆ ಅಥವಾ ಪ್ರತಿಕ್ರಿಯೆ ತೋರುವ ವ್ಯಕ್ತಿಗಳಲ್ಲ. ಏನಾದರೂ ಸಂಭಿವಿಸಿದಾಗ ಇವರು ಮೊದಲು ವಿಚಾರಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವರು. ತಮ್ಮನ್ನು ತಾವು ಹೇಗೆ ನಿಯಂತ್ರಿಸಿಕೊಳ್ಳಬಹುದು ಎನ್ನುವುದು ತಿಳಿದಿರುತ್ತಾರೆ.

ಇವರಿಗೆ ಸ್ವಲ್ಪ ಕೋಪ ಜಾಸ್ತಿ!
ಬಹಳ ಕೋಪವನ್ನು ಹೊಂದಿರುವ ಇವರು ಮುಂದಾಲೋಚನೆ ಇಲ್ಲದೆ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ಮಾಣ ಮಾಡುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಇವರು ಅರಿತಿರುತ್ತಾರೆ. ಎಲ್ಲಾ ಸಮಸ್ಯೆಗಳು ಅಥವಾ ಸನ್ನಿವೇಶಗಳ ಸೃಷ್ಟಿಯು ತಕ್ಷಣದ ಭಾವನಾತ್ಮಕ ಪ್ರತಿಕ್ರಿಯೆಯಿಂದ ಉಂಟಾಗುವುದು ಎನ್ನುವುದನ್ನು ಇವರು ಅರಿತಿರುವುದರಿಂದ ಸನ್ನಿವೇಶಗಳನ್ನು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವರು. ಜೊತೆಗೆ ಇತರರಂತೆ ತಾವು ಎಲ್ಲಾ ವಿಚಾರದಲ್ಲೂ ಮುಂದಿರಬೇಕು ಎಂದು ಯೋಚಿಸರು.

4. ಕುಂಭ
ಇವರಿಗೆ ತಾವು ಏನು? ಹೇಗಿರಬೇಕು? ಎನ್ನುವುದನ್ನು ಚೆನ್ನಾಗಿ ತಿಳಿದಿದ್ದಾರೆ. ಇವರು ಇತರಿಗೆ ತಾವು ಏನೆಂದು ತೋರಿಸಿಕೊಡುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇವರ ಬಗ್ಗೆ ಯಾರಾದರೂ ಮಾತನಾಡಿದರೂ ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೆ ಅವರಿಗೆ ಬುದ್ಧಿ ಕಲಿಸಬೇಕೆಂದು ಮುಂದಾಗುವುದಿಲ್ಲ. ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದಿದ್ದಾರೆ.

ಭಾವನೆಗಳ ವಿಚಾರದಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ಚೆನ್ನಾಗಿ ತಿಳಿದಿದ್ದಾರೆ
ತಮ್ಮ ಭಾವನೆಗಳ ವಿಚಾರದಲ್ಲಿ ಇವರು ಹೇಗೆ ವರ್ತಿಸಬೇಕು ಎನ್ನುವುದನ್ನು ಚೆನ್ನಾಗಿ ತಿಳಿದಿದ್ದಾರೆ. ಭಾವನೆಗಳ ವಿಚಾರದಲ್ಲಿ ಇವರು ಸಾಕಷ್ಟು ಆರಾಮದಾಯಕ ಪ್ರತಿಕ್ರಿಯೆಯನ್ನು ನೀಡುವರು. ಸೂಕ್ತ ಸಮಯಕ್ಕಾಗಿ ಇವರು ಕಾಯುತ್ತಾರೆ. ಇವರು ಪರಿಸ್ಥಿತಿಯನ್ನು ಕೆಟ್ಟದಾಗಿಸುವ ಬದಲು ಅದನ್ನು ಶಾಂತಗೊಳಿಸಲು ಹೆಚ್ಚು ಪ್ರಯತ್ನಿಸುತ್ತಾರೆ. ಎಲ್ಲದರಲ್ಲೂ ಮುಂದಿರಬೇಕು ಎಂದು ಬಯಸಿದರೆ ಅಥವಾ ಅಕ್ಕಾಗಿ ಪ್ರಯತ್ನಗಳನ್ನು ಮಾಡಿದರೆ ಚಿಂತೆ ಕಾಡುವುದು. ಅಲ್ಲದೆ ಒಂದಿಷ್ಟು ಚಿಂತೆಗೆ ಒಳಗಾಗ ಬೇಕಾಗುವುದು ಎಂದು ಇವರು ತಿಳಿದಿದ್ದಾರೆ.

5. ವೃಶ್ಚಿಕ
ವೃಶ್ಚಿಕ ರಾಶಿಯವರು ಬಹಳ ನಿರ್ಣಾಯಕ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮದೇ ಆದ ಕೆಲವು ಆದ್ಯತೆಗಳನ್ನು ಹೊಂದಿರುತ್ತಾರೆ. ಇವರು ತೀಕ್ಷ್ಣವಾದ, ಭಾವೋದ್ರಿಕ್ತ ಹಾಗೂ ಪರಿಶ್ರಮದಿಂದ ಕೆಲಸಮಾಡುವ ವ್ಯಕ್ತಿಗಳು. ಕ್ರೋಧದಿಂದ ಪ್ರತಿಕ್ರಿಯಿಸಿದರೆ ವಿಪತ್ತು ಉಂಟಾಗುವುದು. ಅಲ್ಲದೆ ಅದರಿಂದ ಎಂದಿಗೂ ಉತ್ತಮ ಫಲಿತಾಂಶ ದೊರೆಯದು ಎಂದು ಅವರು ತಿಳಿದಿದ್ದಾರೆ. ಯಾವುದೇ ಸನ್ನಿವೇಶಗಳು ಎದುರಾದರೂ ಅದರ ಪರಿಣಾಮ ಏನಿರಬಹುದು? ಎನ್ನುವುದನ್ನು ಮೊದಲು ಚಿಂತನೆ ನಡೆಸುವ ವ್ಯಕ್ತಿ ಇವರು.

ಯಾವುದೇ ಸಂಗತಿಗಳನ್ನು ಇವರು ಅಷ್ಟುಬೇಹ ಮರೆಯುವುದಿಲ್ಲ!
ಯಾವುದೇ ಸಂಗತಿ ಇವರನ್ನು ಆಕರ್ಷಿಸುತ್ತದೆ ಅಥವಾ ಗಮನ ಸೆಳೆಯುವುದು ಎಂದಾದರೆ ಮೊದಲು ಅವರು ಅದರ ಕುರಿತು ಸೂಕ್ತ ಚಿಂತನೆ ಹಾಗೂ ಪರಿಣಾಮ ಏನು ಎನ್ನುವುದನ್ನು ತಿಳಿದುಕೊಳ್ಳುವರು. ಇವರು ಯಾವುದೇ ಸಂಗತಿಗಳ ಬಗ್ಗೆ ತಕ್ಷಣ ಪ್ರತಿಕ್ರಿಯಿಸದೆ ಇರಬಹುದು. ಆದರೆ ಅದನ್ನು ಮರೆಯುವುದಿಲ್ಲ. ಕೆಟ್ಟ ಸಂಗತಿಗಳಾಗಿದ್ದರೆ ಅದಕ್ಕೆ ಪ್ರತಿಕಾರವನ್ನು ಹೊಂದಲು ಚಿಂತನೆ ನಡೆಸುವರು. ಇತರರಂತೆ ತಾವು ಇರಬೇಕು ಅಥವಾ ಎಲ್ಲಾ ಸಂಗತಿಗಳಲ್ಲೂ ಭಾಗಿಯಾಗಿರಬೇಕು ಎಂದು ಭಾವಿಸದ ವ್ಯಕ್ತಿಗಳಾಗಿರುತ್ತಾರೆ.



Click it and Unblock the Notifications











