Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ನೋಡಿ ಈ ಆರು ರಾಶಿಯವರು ತುಂಬಾನೇ 'ಬುದ್ಧಿವಂತರಂತೆ'!
ಬುದ್ಧಿವಂತಿಕೆ ಎನ್ನುವುದು ಕೆಲವರಲ್ಲಿ ಮಾತ್ರ ಕಾಣಬಹುದು. ಬುದ್ಧಿ ವಂತಿಕೆ ಎನ್ನುವುದು ಕೇವಲ ಪರೀಕ್ಷೆಯಲ್ಲಿ ಶೇ.99 ರಷ್ಟು ಅಂಕ ಪಡೆಯುವುದು ಎಂದರ್ಥವಲ್ಲ. ಬದಲಿಗೆ ವ್ಯಕ್ತಿಯಲ್ಲಿ ಇರುವ ಸೃಜನಾತ್ಮಕ ಗುಣವು ಶ್ರೇಷ್ಠತೆಯನ್ನು ತಂದುಕೊಡುವುದು. ಜೊತೆಗೆ ಕೆಲಸದ ಯಶಸ್ಸಿಗೆ ಕಾರಣವಾಗುವುದು. ಕೆಲವೊಮ್ಮೆ ಅವರ ಮೆದುಳಿನಲ್ಲಿ ಸೂಚಿಸುವ ಪರಿಹಾರ ಅಥವಾ ಆಯ್ಕೆಗಳು ಮಹತ್ತರವಾದ ಬದಲಾವಣೆಯನ್ನು ತಂದೊಡ್ಡಬಹುದು.
ಅಂತಹ ಒಂದು ವಿಸ್ಮಯ ಸೃಷ್ಟಿಸುವ ಬುದ್ಧಿ ಹೊಂದುವುದು ವಿಶೇಷ. ಬುದ್ಧಿ ಜೀವಿಗಳು ಉತ್ತಮ ನಡತೆ ಹಾಗೂ ಗುರಿಗಳನ್ನು ಹೊಂದಲು ತಮ್ಮದೇ ಆದ ಚಿಂತನೆಯನ್ನು ಹೊಂದಿರುತ್ತಾರೆ. ಅಲ್ಲದೆ ಕೆಲವು ಯೋಜಿತ ಅಥವ ಸೂಕ್ತ ವ್ಯಕ್ತಿಗಳೊಂದಿಗಿನ ಸಾಂಗತ್ಯವನ್ನು ಇಷ್ಟಪಡುತ್ತಾರೆ. ವಿಶೇಷ ಯೋಜನೆ ಕೈಗೊಳ್ಳುವಲ್ಲಿ ಅಥವಾ ತಮ್ಮ ಬುದ್ಧಿ ಶಕ್ತಿಯನ್ನು ಕೇಂದ್ರೀಕರಿಸುವುದರ ಬಗ್ಗೆ ಹೆಚ್ಚಿನ ಸಂತೋಷ ವ್ಯಕ್ತಪಡಿಸುತ್ತಾರೆ.
ಅಂತಹ ಒಂದು ಪ್ರತಿಭಾವಂತ ಬುದ್ಧಿಶಕ್ತಿಯನ್ನು ಕೆಲವು ರಾಶಿಚಕ್ರದವರು ಮಾತ್ರ ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಚಕ್ರದವರ ಗ್ರಹಗತಿಗಳ ಪ್ರಭಾವದಿಂದ ವಿಶೇಷ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಅಂತಹ ರಾಶಿಚಕ್ರದವರ ಪಟ್ಟಿಯಲ್ಲಿ ನೀವಿದ್ದೀರಾ? ಅಥವಾ ನಿಮ್ಮವರು ಇದ್ದಾರೆಯೇ? ಎನ್ನುವುದನ್ನು ಪರಿಶೀಲಿಸಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

1. ಕುಂಭ
ಇವರು ತಮ್ಮ ಬುದ್ಧಿಶಕ್ತಿಯಿಂದ ಎಲ್ಲಾ ವಿಚಾರಗಳನ್ನು ವಿಶ್ಲೇಷಿಸುತ್ತಾರೆ. ಕೆಲವು ಅನಗತ್ಯ ಸನ್ನಿವೇಶಗಳಿಂದ ದೂರ ಇರಲು ಪ್ರಯತ್ನಿಸುವರು. ಇವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಸಮತೋಲನ, ಸೃಜನಶೀಲತೆ ಮತ್ತು ಶಾಂತ ರೀತಿಯಲ್ಲಿ ಚಿಂತನೆ ನಡೆಸುತ್ತಾರೆ. ವಿಶಾಲ ಮನಸ್ಸಿನವರಾದ ಇವರು ತಮ್ಮದೇ ಆದ ವಿಶೇಷ ಕಲ್ಪನೆ ಹೊಂದಿರುತ್ತಾರೆ. ಜೊತೆಗೆ ವಾಸ್ತವಿಕತೆಗೆ ಅನುಕೂಲವಾಗುವ ದೃಷ್ಟಿಕೋನವನ್ನು ಹೊಂದಿರುವರು. ಉತ್ತಮ ಬುದ್ಧಿವಂತಿಕೆಯನ್ನು ಹೊಂದಿರುವ ಇವರು ನಂಬಿಕೆಗೆ ಬದ್ಧರಾಗಿರುತ್ತಾರೆ.

2. ಕನ್ಯಾ
ಇವರು ಎಲ್ಲಾ ವಿಚಾರಗಳನ್ನು ಲಘುವಾಗಿ ಹಾಗೂ ಗುಣಾತ್ಮಕ ರೀತಿಯಲ್ಲಿ ವಿಶ್ಲೇಷಣೆ ನಡೆಸುತ್ತಾರೆ. ಎಲ್ಲಾ ವಿಷಯಗಳಲ್ಲೂ ಇವರು ತಮ್ಮದೇ ಆದ ಉತ್ತರದ ಮೂಲಕ ನಿರ್ವಹಿಸುವರು. ನಿರಂತರ ಚಿಂತನಾ ಶೀಲರಾದ ಇವರು ಉತ್ತಮ ಲೆಕ್ಕಚಾರವನ್ನು ಮಾಡುವವರು ಹೌದು. ಪ್ರತಿಭೆಯ ವಿಚಾರದಲ್ಲಿ ಈ ಚಿಹ್ನೆಯವರು ಅತ್ಯುತ್ತಮ ಸ್ಥಾನವನ್ನು ಪಡೆದುಕೊಳ್ಳುವರು ಎನ್ನಲಾಗುವುದು.

3. ಮಕರ
ಈ ರಾಶಿಯ ವ್ಯಕ್ತಿಗಳು ನಿರ್ದಿಷ್ಟ, ನಿಖರವಾದ ಮತ್ತು ಹೆಚ್ಚು ರಚನಾತ್ಮಕ ಮಾರ್ಗವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಗುರಿಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು ಹೊಂದುವುದರ ಮೂಲಕ ತಮ್ಮ ಪರ್ಯಾಯ ಕಾರ್ಯಗಳನ್ನು ಕೈಗೊಳ್ಳುವರು. ಇವರು ಎಂತಹ ಪರಿಸ್ಥಿತಿ ಎದುರಾದರೂ ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಲು ಮುಂದಾಗುವರು. ಪರಿಶ್ರಮದಿಂದ ವಿಶೇಷ ಜ್ಞಾನಗಳನ್ನು ಹಾಗೂ ವಿಷಯಗಳನ್ನು ಕಲಿತುಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದುವರು. ಇವರು ಬುದ್ಧಿವಂತರ ಸಾಲಿನಲ್ಲಿ ನಿಲ್ಲುವ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ.

4. ವೃಶ್ಚಿಕ
ವೃಶ್ಚಿಕ ರಾಶಿಯವರು ಮಾನಸಿಕವಾಗಿ ಉತ್ತಮ ಶಕ್ತಿ, ಗ್ರಹಿಸುವ ಶಕ್ತಿ ಹಾಗೂ ಪರಿಶ್ರಮವನ್ನು ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಇವರ ಈ ಮೂರುಗುಣಗಳು ಅವರ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ತಂದುಕೊಡಲು ಅನುವು ಮಾಡಿಕೊಡುವುದು. ವಿಶೇಷ ದೃಷ್ಟಿಕೊನಗಳಿಂದ ವಿಷಯಗಳನ್ನು ಆಲಿಸುವುದು ಹಾಗೂ ಅದಕ್ಕಾಗಿ ಸೂಕ್ತ ನಿರ್ವಹಣೆ ಕೈಗೊಳ್ಳುವುದರಿಂದ ಬುದ್ಧಿವಂತಿಕೆಯನ್ನು ತೋರಿಸುವರು. ಪ್ರತಿಕಾರದ ವಿಚಾರದಲ್ಲೂ ಇವರು ಸೂಕ್ತ ಬುದ್ಧಿವಂತಿಕೆಯನ್ನು ಬಳಸುವ ಚಾಣಾಕ್ಷರು ಎನ್ನಬಹುದು.

5. ಮಿಥುನ
ವೇಗದ ಚಿಂತಕರು ಹಾಗೂ ವಿಷಯಗಳನ್ನು ಗ್ರಹಿಸುವ ಸಾಮಥ್ರ್ಯ ಹೊಂದಿರುವ ವ್ಯಕ್ತಿಗಳು ಇವರು. ಹಾಸ್ಯ ಪ್ರವೃತ್ತಿಯಿಂದಲೂ ಉತ್ತಮ ವಿಚಾರವನ್ನು ಗಳಿಸುವ ಸಾಮಥ್ರ್ಯ ಹೊಂದಿರುವವರು ಇವರು. ಉತ್ತಮ ಬುದ್ಧಿಶಕ್ತಿಯೊಂದಿಗೆ ಸೃಜನ ಶೀಲತೆಯನ್ನು ಹೊಂದಿರುತ್ತಾರೆ. ಪ್ರಭಾವಶಾಲಿ ಹಾಗೂ ತಾರ್ಕಿಕ ಸ್ವಭಾವವನ್ನು ಹೊಂದಿರುವ ಇವರು ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ.

6. ಮೀನ
ಇವರು ಉನ್ನತ ಮಟ್ಟದ ಗುಪ್ತಚರರು ಹಾಗೂ ಸೃಜನಶೀಲ ವ್ಯಕ್ತಿಗಳು ಎಂದು ಹೇಳಬಹುದು. ಇವರಿಂದ ಅನೇಕ ವ್ಯಕ್ತಿಗಳು ಪ್ರಭಾವಕ್ಕೆ ಒಳಗಾಗಬಲ್ಲರು. ಬಹಳ ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುವ ಈ ವ್ಯಕ್ತಿಗಳು ಇತರರ ಸಮಸ್ಯೆಯನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲರು. ಉತ್ತಮ ನ್ಯಾಯಾಧೀಶರಾಗಬಲ್ಲ ಇವರು ಎಲ್ಲಾ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬಲ್ಲ ಬುದ್ಧಿ ಜೀವಿಗಳು ಎನ್ನಬಹುದು. ಇತರರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಇವರು ಕೆಲಸವನ್ನು ಬಲು ಶಯಸ್ವಿಯಾಗಿ ನಿರ್ವಹಿಸಬಲ್ಲರು.



Click it and Unblock the Notifications











