Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಎಲ್ಲಾ ವಿಚಾರದಲ್ಲೂ ಅತಿಯಾಗಿ ಚಿಂತನೆ ನಡೆಸುವ ರಾಶಿಯವರು
ವ್ಯಕ್ತಿ ಯಾವುದೇ ವಿಷಯದ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಬೇಕು ಎಂದರೆ ವಿಷಯವನ್ನು ಅರ್ಥಮಾಡಿಕೊಳ್ಳುವ ಅಥವಾ ಗ್ರಹಿಸುವ ಶಕ್ತಿಯನ್ನು ಹೊಂದಿರಬೇಕು. ಜೊತೆಗೆ ಆ ವಿಷಯದ ಬಗ್ಗೆ ಸೂಕ್ತ ಚಿಂತನೆ ನಡೆಸುವ ಸಾಮಥ್ರ್ಯವನ್ನು ಹೊಂದಿರಬೇಕು. ಇಲ್ಲವಾದರೆ ವಿಷಯದ ಆಳವನ್ನು ವ್ಯಕ್ತಿ ಅರಿಯಲು ಸಾಧ್ಯವಿಲ್ಲ. ಅಲ್ಲದೆ ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗದು. ಇತರ ಪ್ರಾಣಿಗಳಿಗಿಂತ ವಿಶೇಷ ಶಕ್ತಿಯನ್ನು ಹೊಂದಿರುವ ಮನುಷ್ಯನಿಗೆ ಚಿಂತನೆ ನಡೆಸುವ ಸಾಮರ್ಥ್ಯ ಇರುವುದು ಒಂದು ವರ ಎನ್ನಬಹುದು.
ಜೀವನದಲ್ಲಿ ವ್ಯಕ್ತಿ ತೆಗೆದುಕೊಳ್ಳುವ ಉತ್ತಮ ನಿರ್ಧಾರ ಹಾಗೂ ನಿರ್ಣಯಗಳಿಂದ ಬಾಳು ಬೆಳಗಬಹುದು. ಅದೇ ನಿರ್ಧಾರಗಳು ತಪ್ಪಾಗಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು. ಜೀವನದ ಪ್ರತಿಯೊಂದು ಹೆಜ್ಜೆಯೂ ಒಂದೊಂದು ಪರೀಕ್ಷೆ ಇದ್ದಂತೆ. ಆ ಪರೀಕೆಯಲ್ಲಿ ಪಾಸಗಬೇಕೆಂದರೆ ನಮ್ಮಲ್ಲಿ ಉತ್ತಮ ರೀತಿಯ ಚಿಂತನಾ ಸಾಮಥ್ರ್ಯ ಇರಬೇಕು. ಉತ್ತಮ ಚಿಂತನಾ ಶಕ್ತಿ ಇದ್ದಾಗ ಬದುಕಿನ ನಿರ್ಣಯವನ್ನು ಸುಲಭವಾಗಿ ಕೈಗೊಳ್ಳಲು ಸಾಧ್ಯವಾಗುವುದು.
ಚಿಂತನಾ ಸಾಮರ್ಥ್ಯದ ಆಧಾರದ ಮೇಲೆಯೇ ವ್ಯಕ್ತಿ ಬುದ್ಧಿವಂತಿಕೆಯು ನಿರ್ಧಾರವಾಗುವುದು. ಯಾವ ಬಗೆಯಲ್ಲಿ ಯೋಚಿಸುತ್ತಾನೆ. ಅದು ಋಣಾತ್ಮಕ ರೀತಿಯಲ್ಲಿ ಇರುತ್ತದೆಯೇ ಅಥವಾ ಧನಾತ್ಮಕವಾಗಿರುತ್ತದೆಯೇ ಎನ್ನುವುದನ್ನು ಸೂಚಿಸುತ್ತದೆ. ಒಂದು ವಿಷಯದ ಕುರಿತು ಚಿಂತನೆ ನಡೆಸುವುದು ಎಂದರೆ ಅದು ಮನುಷ್ಯ ಕುಲದ ಒಂದು ವಿಶೇಷ ಶಕ್ತಿ. ಪ್ರತಿಯೊಂದು ವಿಷಯದ ಕುರಿತು ಸೂಕ್ತ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳುವುದು ಸಾಮಾನ್ಯವಾದ ಪ್ರಕ್ರಿಯೆ. ಆದರೆ ಕೆಲವರು ವಿಷಯವನ್ನು ಅತಿಯಾಗಿ ಚಿಂತನೆ ನಡೆಸುವುದರ ಮೂಲಕ ಅತಿರೇಖಕ್ಕೆ ತಲುಪುವ ಸಾಧ್ಯತೆಗಳಿರುತ್ತವೆ.
ಹೌದು, ಕೆಲವರು ವಿಷಯವನ್ನು ಸ್ವೀಕರಿಸುವುದು ಅಥವಾ ಅದರ ಬಗ್ಗೆ ಚಿಂತನೆ ನಡೆಸುವುದು ಎಂದರೆ ಸಾಮಾನ್ಯವಾಗಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಅತಿಯಾದ ಚಿಂತನೆ ನಡೆಸುತ್ತಾರೆ. ಇದರಿಂದ ವ್ಯಕ್ತಿಯಲ್ಲಿ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ಮೂಡಬಹುದು ಅಥವಾ ಮಾನಸಿಕ ಒತ್ತಡ ಹಾಗೂ ಆತಂಕವನ್ನು ಸೃಷ್ಟಿಸಬಹುದು. ಹಾಗಾಗಿ ಯಾವುದೇ ವಿಚಾರದ ಕುರಿತಾಗಿಯೂ ಅತಿಯಾದ ಚಿಂತನೆ ನಡೆಸಬಾರದು ಎಂದು ಹೇಳಲಾಗುವುದು.
ಚಿಂತನೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಏಕೆಂದರೆ ಯಾವ ವ್ಯಕ್ತಿ ಯಾವ ವಿಷಯದ ಬಗ್ಗೆ ಹೆಚ್ಚು ಚಿಂತಿಸುತ್ತಾನೆ ಎನ್ನುವುದು ಸಹ ಒಂದು ಪ್ರಮುಖ ವಿಷಯವಾಗಿರುತ್ತದೆ. ವ್ಯಕ್ತಿ ನಡೆಸುವ ಚಿಂತನೆಗಳು ಅವನ ರಾಶಿಚಕ್ರದ ಪ್ರಭಾವದಿಂದ ನಡೆಯುವುದು. ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವರು ನೈಸರ್ಗಿಕವಾಗಿಯೇ ಅತಿಯಾದ ಚಿಂತನೆ ನಡೆಸುತ್ತಾರೆ ಎನ್ನಲಾಗುವುದು. ಹಾಗಾದರೆ ನಿಮ್ಮ ರಾಶಿಚಕ್ರದ ಅನುಸಾರ ಹೇಗೆ ಚಿಂತನೆ ನಡೆಸುತ್ತೀರಿ? ನಿಮ್ಮವರು ಹೇಗೆ ಚಿಂತನೆ ನಡೆಸುವರು? ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಈ ರಾಶಿಯ ವ್ಯಕ್ತಿಗಳು ಯಾವುದೇ ವಿಷಯಗಳ ಪೂರ್ವದಲ್ಲಿ ಅತಿಯಾದ ಚಿಂತನೆ ನಡೆಸುವುದಿಲ್ಲ. ಕಾರ್ಯ ಅಥವಾ ಕೆಲಸವನ್ನು ಕೈಗೊಂಡ ಬಳಿಕ ವಿಷಯಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ತಾವು ಮಾತನಾಡುವ ಸಮಯದಲ್ಲೂ ಯಾವುದೇ ಚಿಂತನೆ ನಡೆಸುವುದಿಲ್ಲ. ವಿಷಯಗಳನ್ನು ಮಾತನಾಡಿ ಮುಗಿಸಿದ ಮೇಲೆ ಚಿಂತಿಸುವರು. ಹಾಗಾಗಿ ಇವರು ಮಾತನಾಡುವ ಮುನ್ನ ಅಥವಾ ಯಾವುದೇ ಯೋಜನೆಯನ್ನು ಕೈಗೊಳ್ಳುವ ಮೊದಲು ಕೊಂಚ ಚಿಂತನೆ ನಡೆಸಬೇಕು ಎಂದು ಇವರಿಗೆ ಸಲಹೆ ನೀಡಲಾಗುವುದು.

ವೃಷಭ
ಇವರು ತಮ್ಮ ಯೋಚನೆ ಹಾಗೂ ಯೋಜನೆಯ ಬಗ್ಗೆ ಸಾಕಷ್ಟು ಮಹತ್ವವನ್ನು ನೀಡುತ್ತಾರೆ. ಯಾವುದೇ ವಿಷಯದ ಬಗ್ಗೆ ನಿರ್ಣಯ ಕೈಗೊಳ್ಳುವ ಮೊದಲು ಸಾಕಷ್ಟು ಚಿಂತನೆ ನಡೆಸುವರು. ಆಯ್ಕೆ ಮತ್ತು ವಿಷಯಗಳನ್ನು ಪರಿಗಣಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದವರಾಗಿರುತ್ತಾರೆ. ಸಾಕಷ್ಟು ಸ್ಥಿರತೆಯ ಮನೋಭಾವ ಹೊಂದಿರುತ್ತಾರೆ ಎನ್ನಲಾಗುವುದು.

ಮಿಥುನ
ಇವರು ವಿರೋಧಾತ್ಮಕ ವಿಷಯಗಳ ಬಗ್ಗೆ ಸಾಕಷ್ಟು ಚಿಂತನೆಯನ್ನು ನಡೆಸುವರು. ಅಸಾಧ್ಯ ಎನ್ನುವ ವಿಷಯದ ಬಗ್ಗೆ ಹೆಚ್ಚಿನ ಚಿಂತನೆ ಹಾಗೂ ಉತ್ಸುಕತೆಯನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲಾ ಆಯ್ಕೆ ಹಾಗೂ ವಿಷಯಗಳ ಬಗ್ಗೆ ಸಾಕಷ್ಟು ಸಮಯವನ್ನು ತೆಗೆದುಕೊಂಡು ಚಿಂತನೆ ನಡೆಸುವ ವ್ಯಕ್ತಿಗಳು.

ಕರ್ಕ
ಇವರು ಭಾವನಾತ್ಮಕವಾಗಿ ಅಧಿಕ ಚಿಂತನಾಶೀಲರು ಎನ್ನಲಾಗುವುದು. ಇವರು ಜೀವನದ ಹಿಂದಿನ ಸಮಯವನ್ನು ನೆನೆಯುವುದರ ಮೂಲಕ ಭವಿಷ್ಯದ ನಿರ್ಣಯ ತೆಗೆದುಕೊಳ್ಳುವರು. ವಿಷಯವು ಎಷ್ಟು ಭಯಾನಕವಾಗಿದೆ? ತಮ್ಮ ಪ್ರಗತಿಗೆ ಯಾವ ಕ್ರಮವನ್ನು ಕೈಗೊಳ್ಳಬೇಕು? ಎನ್ನುವುದರ ಬಗ್ಗೆ ಸಾಕಷ್ಟು ಚಿಂತನೆ ನಡೆಸುತ್ತಾರೆ. ಅಲ್ಲದೆ ತಾವು ಕೈಗೊಳ್ಳುವ ನಿರ್ಣಯದಿಂದ ಹಿಂದೆ ಉಂಟಾದಂತಹ ತೊಂದರೆ ಪುನಃ ಒದಗಿ ಬರಬಾರದು ಎಂದು ಭಾವಿಸುತ್ತಾರೆ. ಹಾಗಾಗಿಯೇ ಸಾಕಷ್ಟು ಚಿಂತನೆ ನಡೆಸುವರು.

ಸಿಂಹ
ಇವರು ತರ್ಕಬದ್ಧ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಹಿಂದೆ ಆಗಿರುವಂತಹ ತಪ್ಪು ಮುಂದೆ ಆಗಬಾರದು ಎಂದು ಬಯಸುವರು. ಅಲ್ಲದೆ ತಮ್ಮ ಮುಂದಿನ ಗುರಿ ಸಾಧನೆಗೆ ಯಾವೆಲ್ಲಾ ತಯಾರಿ ಹಾಗೂ ಕ್ರಮವನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಸಾಕಷ್ಟು ಚಿಂತನೆ ನಡೆಸುತ್ತಾರೆ. ಹಿಂದೆ ನಡೆದ ಸಂಗತಿಗಳಿಂದ ಸಾಕಷ್ಟು ತಿಳಿದುಕೊಂಡು ಮುಂದೆ ಆ ಸಮಸ್ಯೆ ಮರುಕಳಿಸಬಾರದು ಎಂದು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಇವರು ಕೆಲವು ವಿಚಾರಗಳ ಕುರಿತು ಸಾಕಷ್ಟು ಚಿಂತನೆ ನಡೆಸುವ ವ್ಯಕ್ತಿಗಳು ಎನ್ನಲಾಗುವುದು.

ಕನ್ಯಾ
ಅತಿಯಾದ ಚಿಂತನೆ ನಡೆಸುವ ರಾಶಿಚಕ್ರದವರಲ್ಲಿ ಇವರು ಒಂದು ಹೇಳಬಹುದು. ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಚಿಂತನೆ ನಡೆಸುವರು. ಪ್ರತಿಯೊಂದು ದೃಷ್ಟಿ ಕೋನದಲ್ಲೂ ಯಾವೆಲ್ಲಾ ಸಂಭವನೀಯತೆ ಇದೆ ಎನ್ನುವುದರ ಬಗ್ಗೆ ಚಿಂತನೆ ನಡೆಸುತ್ತಾರೆ. ಪ್ರತಿಯೊಂದು ವಿಚಾರಕ್ಕೂ ಸಂಶೋಧನಾತ್ಮಕ ರೂಪದಲ್ಲಿ ಚಿಂತನೆ ನಡೆಸುತ್ತಾರೆ. ಇವರು ಸ್ವಯಂ ವಿಮರ್ಶಾತ್ಮಕ ವ್ಯಕ್ತಿತ್ವ ಹೊಂದಿರುವುದರಿಂದ ವಿಷಯದ ಆಗುಹೋಗುಗಳ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ನಿರ್ಧಾರ ಅಥವಾ ತೀರ್ಮಾನ ಕೈಗೊಳ್ಳುವರು.

ತುಲಾ
ಇವರು ಅತಿಯಾಗಿ ಚಿಂತನೆ ನಡೆಸುವುದನ್ನು ದ್ವೇಷಿಸುತ್ತಾರೆ. ಅತಿಯಾದ ಚಿಂತನೆಯು ಇವರಿಗೆ ಅಸಮರ್ಥತೆ ಹಾಗೂ ಮೂರ್ಖತನ ಎಂದು ಭಾವಿಸುವರು. ಇತರರಿಗೆ ಮೋಸ ಮಾಡುವುದು ಹಾಗೂ ಅಸತ್ಯದ ರೂಪದಲ್ಲಿ ನಾವಿದ್ದಾಗ ಅತಿಯಾದ ಚಿಂತನೆ ನಡೆಸಬೇಕಾಗುವುದು. ನೇರ ನಡೆ-ನುಡಿ ಹಾಗೂ ವರ್ತನೆಗಳಿದ್ದರೆ ಚಿಂತನೆ ನಡೆಸುವ ಅಗತ್ಯ ಇರುವುದಿಲ್ಲ ಎಂದು ಭಾವಿಸುತ್ತಾರೆ. ಎಲ್ಲಾ ವಿಷಯದಲ್ಲಿ ಸಮಾನತೆಯನ್ನು ಕೈಗೊಳ್ಳುವ ಇವರು ಅತಿಯಾದ ಚಿಂತನೆಯನ್ನು ಎಂದಿಗೂ ನಡೆಸುವುದಿಲ್ಲ.

ವೃಶ್ಚಿಕ
ಇವರು ಎಲ್ಲಾ ವಿಷಯಗಳಿಗೂ ಅತಿಯಾದ ಚಿಂತನೆ ನಡೆಸಬೇಕಾಗಿಲ್ಲ ಎಂದು ಪರಿಗಣಿಸುವ ವ್ಯಕ್ತಿಗಳು. ಕೆಟ್ಟ ವಿಷಯಗಳು ಸಂಭವಿಸಿದಾಗ ಅದರ ಕುರಿತು ಸಾಕಷ್ಟು ಚಿಂತನೆ ನಡೆಸುತ್ತಾರೆ. ಇವರು ಪರಿಸರ, ಪ್ರಪಂಚ ಮತ್ತು ಜನರೊಂದಿಗೆ ಕೆಲವು ಬಗೆಯ ಗೀಳನ್ನು ಹೊಂದಿರುತ್ತಾರೆ. ತಪ್ಪು ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದರ ಬಗ್ಗೆಯೂ ಚಿಂತನೆ ನಡೆಸದೆಯೇ ಕಾರ್ಯ ಕೈಗೊಳ್ಳುತ್ತಾರೆ. ಕೆಲವು ವಿಷಯಗಳ ಬಗ್ಗೆ ಸಾವಿರ ಬಾರಿ ಚಿಂತನೆ ನಡೆಸಿಯೇ ನಿರ್ಧಾರ ಕೈಗೊಳ್ಳುವರು ಎನ್ನಲಾಗುವುದು.

ಧನು
ಇವರು ಅತಿಯಾದ ಚಿಂತನೆ ನಡೆಸುವುದರಲ್ಲಿ ವಿಫಲರಾಗಿರುತ್ತಾರೆ. ಏಕೆಂದರೆ ಇವರು ಯಾವಾಗ ಹೆಚ್ಚು ಚಿಂತನೆ ನಡೆಸುತ್ತಾರೋ ಅವರಲ್ಲಿ ಒಂದು ಬಗೆಯ ಗೊಂದಲ ಕಾಡುವುದು. ಇವರು ಯಾವುದೇ ವಿಷಯವನ್ನು ಅಥವಾ ಕೆಲಸವನ್ನು ಕೈಗೊಳ್ಳುವಾಗ ಅದರ ಬಗ್ಗೆ ಅತಿಯಾದ ಚಿಂತನೆ ನಡೆಸುವುದಿಲ್ಲ. ಮೇಲ್ನೋಟಕ್ಕೆ ಅಥವಾ ಪ್ರಾಥಮಿಕ ಹಂತದ ಅಗತ್ಯತೆ ಏನು ಎನ್ನುವುದರ ಬಗ್ಗೆ ಮಾತ್ರ ಅತಿಯಾದ ಚಿಂತನೆ ನಡೆಸುತ್ತಾರೆ. ಅತಿಯಾದ ಚಿಂತನೆ ನಡೆಸದೆಯೇ ಇವರು ಮೊದಲ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಮಕರ
ಇವರು ಕೆಲಸದ ವಿಚಾರಕ್ಕೆ ಬಂದಾಗ ಮೇಲ್ವಿಚಾರಕರಾಗಿ ಅತಿಯಾದ ಚಿಂತನೆ ನಡೆಸುವರು. ಯಾವುದೇ ವಿಷಯದಲ್ಲಿ ತಪ್ಪು ಸಂಭವಿಸುವುದನ್ನು ಸಹಿಸದ ವ್ಯಕ್ತಿಗಳಾಗಿರುತ್ತಾರೆ. ಇವರು ಕೆಲವೊಮ್ಮೆ ಸಾಕಷ್ಟು ಪೂರ್ವತಯಾರಿಯ ಯೋಜನೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಪರಿಸ್ಥಿತಿಯು ದೊಡ್ಡ ಚಿತ್ರಣವನ್ನು ಪಡೆದುಕೊಂಡರೆ ಅವುಗಳನ್ನು ಸೂಕ್ತ ರೀತಿಯಲ್ಲಿ ಚಿಂತನೆ ನಡೆಸಿ ನಿರ್ಣಯ ಕೈಗೊಳ್ಳುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸುವರು. ಇವರು ಬೇಕೆಂದು ಬಯಸಿದ ವಿಷಯಗಳಲ್ಲಿ ಸಾಕಷ್ಟು ನಿರ್ಣಯ ಕೈಗೊಳ್ಳುವುದರ ಮೂಲಕ ಯಶಸ್ಸನ್ನು ಪಡೆಯುವರು.

ಕುಂಭ
ಇವರು ಸೃಜನಾತ್ಮಕವಾದ ಚಿಂತಕರು ಎನ್ನಲಾಗುವುದು. ಇವರು ವಿಷಯಗಳ ಬಗ್ಗೆ ಚಿಂತನೆ ನಡೆಸುವುದರ ಜೊತೆಗೆ ಅದರ ಸುಧಾರಣೆ ಅಥವಾ ವಿಶೇಷತೆಯನ್ನು ಹೇಗೆ ಪಡೆದುಕೊಳ್ಳುವುದು ಎನ್ನುವುದರ ಕುರಿತೂ ಸಹ ಚಿಂತಿಸುತ್ತಾರೆ. ಸೂಕ್ತ ಲೆಕ್ಕಾಚಾರದ ಮೂಲಕ ಸೃಜನಾತ್ಮಕ ಚಿಂತನೆಯನ್ನು ನಡೆಸುತ್ತಾರೆ ಎನ್ನಲಾಗುವುದು. ಇವರು ಎಲ್ಲಾ ವಿಷಯಗಳ ಕುರಿತಾಗಿಯೂ ಸೂಕ್ತ ಚಿಂತನೆ ನಡೆಸುವರು. ಜೊತೆಗೆ ಪ್ರಯೋಜನಕಾರಿ ಬದಲಾವಣೆಯನ್ನು ಕಂಡುಕೊಳ್ಳುವರು.

ಮೀನ
ಇವರು ಅತಿ ಸೂಕ್ಷ್ಮ ಹಾಗೂ ಭಾವನಾತ್ಮಕ ಸಹಾನುಭೂತಿ ವ್ಯಕ್ತಿಗಳು ಎನ್ನಲಾಗುವದು. ಇವರು ತಮ್ಮ ಬಗ್ಗೆ ಯಾರು ಹೇಗೆ ಚಿಂತಿಸುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಚಿಂತನೆ ನಡೆಸುತ್ತಾರೆ. ಇತರರ ಬಗ್ಗೆ ಟೀಕಿಸುವುದರ ಕುರಿತಾಗಿಯೂ ಸಾಕಷ್ಟು ಚಿಂತನೆ ನಡೆಸಿರುತ್ತಾರೆ. ಪ್ರತಿಯೊಂದು ವಿಷಯ ಹಾಗೂ ಯೋಜನೆಗಳನ್ನು ಕೈಗೊಳ್ಳುವ ಪೂರ್ವದಲ್ಲೂ ಸಾಕಷ್ಟು ಚಿಂತನೆಯನ್ನು ನಡೆಸಿರುತ್ತಾರೆ ಎಂದು ಹೇಳಲಾಗುವುದು.



Click it and Unblock the Notifications











