Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ವರ್ಷದ ಕೊನೆಯ ಅಮವಾಸ್ಯೆಯು ಈ 6 ರಾಶಿಚಕ್ರದವರಿಗೆ ಹೆಚ್ಚು ಲಾಭವನ್ನು ತಂದುಕೊಡುವುದು
ಅಮವಾಸ್ಯೆ ಎಂದರೆ ಸಾಮಾನ್ಯವಾಗಿ ದುಃಖದ ಸಂಗತಿ ಅಥವಾ ಬೇಸರದ ವಿಚಾರ ಎಂದು ಪರಿಗಣಿಸುತ್ತಾರೆ. ಋಣಾತ್ಮಕ ಶಕ್ತಿಗಳು ಹೆಚ್ಚು ಪ್ರಾಬಲ್ಯ ಪಡೆದುಕೊಳ್ಳುವ ಸಮಯವಾಗಿರುತ್ತದೆ ಎನ್ನಲಾಗುವುದು. ಅಮವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಹಿಂದೂ ಪಂಚಾಂಗದ ಪ್ರಕಾರ ಅಮವಾಸ್ಯೆಯು ಹುಣ್ಣಿಮೆಯ ದಿನದಷ್ಟು ಪವಿತ್ರ ಎಂದು ಪರಿಗಣಿಸುವುದಿಲ್ಲ. ಆದರೆ ಅತ್ಯಂತ ಕೆಟ್ಟದ್ದು ಎಂದು ಸಹ ಹೇಳುವಂತಿಲ್ಲ. ಅಮವಾಸ್ಯೆಯ ಪ್ರಭಾವದಲ್ಲಿ ಗ್ರಹಗಳ ಚಲನ ವಲನ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ಸಾಕಷ್ಟು ವಿಚಾರಗಳು ನಿಂತಿರುತ್ತವೆ.
ಪ್ರತಿಯೊಂದು ಸಮಯದಲ್ಲೂ ಗ್ರಹಗಳ ಚಲನೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅವುಗಳ ಬದಲಾವಣೆ ರಾಶಿಚಕ್ರಗಳ ಮೇಲೆ ಮಹತ್ತರವಾದ ಪ್ರಭಾವ ಬೀರುವುದು. ಅವು ಧನಾತ್ಮಕ ಪರಿಣಾಮವೇ ಆಗಿರಬಹುದು ಅಥವಾ ಋಣಾತ್ಮಕ ಪರಿಣಾಮವೇ ಆಗಿರಬಹುದು. ನಕ್ಷತ್ರಗಳಿಗೆ ಹಾಗೂ ಗ್ರಹಗಳ ಸ್ಥಾನಗಳಿಗೆ ಅನುಗುಣವಾಗಿ ವ್ಯಕ್ತಿ ಫಲಾ-ಫಲಗಳನ್ನು ಅನುಭವಿಸಬೇಕಾಗುವುದು. ಹಾಗಾಗಿ ಅಮವಾಸ್ಯೆ ಎಂದ ಮಾತ್ರಕ್ಕೆ ಕೇವಲ ಕೆಟ್ಟ ಸಂಗತಿಗಳು ಅಥವಾ ನೋವಿನ ಸಂಗತಿಗಳೇ ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಟ್ಟದ್ದು ಹಾಗೂ ಒಳ್ಳೆಯದು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕೆಲವೊಂದು ಕೆಟ್ಟ ಸಂಗತಿಗಳು ಸಂಭವಿಸಿದರೆ ಕೆಲವೊಂದಿಷ್ಟು ಒಳ್ಳೆಯ ಸಂಗತಿಗಳೂ ಜರುಗುತ್ತವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಡಿಸೆಂಬರ್ 7 ರಿಂದ ಆರಂಭವಾಗುವ ಅಮವಾಸ್ಯೆಯು ಇಂಗ್ಲಿಷ್ ಪಂಚಾಂಗದ ಪ್ರಕಾರ ಕೊನೆಯ ಅಮವಾಸ್ಯೆ. ಈ ಅಮವಾಸ್ಯೆಯ ಪ್ರಭಾವವು ಕೆಲವು ರಾಶಿಚಕ್ರದವರಿಗೆ ಸಾಕಷ್ಟು ಒಳ್ಳೆಯ ತಿರುವು ಅಥವಾ ಪ್ರಭಾವವನ್ನು ನೀಡಲಿದೆ. ಅವರು ವರ್ಷದ ಅಂತ್ಯದಲ್ಲಿ ಕೈಗೊಳ್ಳುವ ಯೋಜನೆ ಅಥವಾ ಕೆಲಸಗಳು ಸುಲಲಿತವಾಗಿ ನೆರವೇರುವುದು ಎಂದು ಹೇಳಲಾಗುವುದು. ಹಾಗಾದರೆ ಆ ಆರು ರಾಶಿಚಕ್ರಗಳು ಯಾವುವು? ಅವುಗಳ ಮೇಲೆ ಯಾವ ರೀತಿಯ ಪ್ರಭಾವ ಬೀರುವುದು? ಎಂತಹ ಅನುಕೂಲ ಪರಿಸ್ಥಿತಿಯನ್ನು ಎದುರಿಸುವರು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದಿನ ವಿವರಣೆಯಲ್ಲಿ ವಿವರಿಸಿದೆ.

ಮಿಥುನ:
ಮಿಥುನ ರಾಶಿಯವರಿಗೆ ಈ ತಿಂಗಳ ಅಮವಾಸ್ಯೆಯು ಅದೃಷ್ಟವನ್ನು ತಂದುಕೊಡುವುದು ಎಂದು ಹೇಳಲಾಗುವುದು. ವೃತ್ತಿ ಕ್ಷೇತ್ರದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಅನುಕೂಲಕರ ವಾತಾವರಣ ಎದುರಾಗುವುದು. ಅಲ್ಲದೆ ಯಶಸ್ಸಿನ ಹಾದಿಗೆ ಅವಕಾಶವನ್ನು ನೀಡುವುದು. ನೀವು ಅಂದುಕೊಂಡ ಕೆಲಸ ಕಾರ್ಯಗಳು ಸುಲಲಿತವಾಗಿ ನೆರವೇರುವುದು. ಆರೋಗ್ಯದಲ್ಲಿ ಸುಧಾರಣೆ ಹಾಗೂ ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಯಶಸ್ಸು ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಯಾವುದೇ ಯೋಜನೆಯನ್ನು ಕೈಗೊಳ್ಳುವುದಕ್ಕೂ ಮುಂಚೆ ಒಂದಿಷ್ಟು ಚಿಂತನೆ ಹಾಗೂ ಸೂಕ್ತ ನಿಲುವು ಹೊಂದುವುದು ಉತ್ತಮ.

ತುಲಾ:
ಈ ರಾಶಿಯವರಿಗೆ ಇದೀಗ ಸ್ವಲ್ಪ ವಿಶ್ರಾಂತಿ ಹೊಂದಲು ಉತ್ತಮ ಸಮಯ ಎಂದು ಹೇಳಲಾಗುವುದು. ಡಿಸೆಂಬರ್ ತಿಂಗಳ ಈ ಅಮವಾಸ್ಯೆಯ ಪ್ರಭಾವದಿಂದ ನಿಮ್ಮ ಪ್ರಮುಖ ಕಾರ್ಯಗಳು ಉತ್ತಮ ಮುಕ್ತಾಯವನ್ನು ಕಾಣುವುದು. ಜೊತೆಗೆ ಒಂದಿಷ್ಟು ಮಾನಸಿಕ ವಿರಾಮವನ್ನು ಹೊಂದಲು ಅವಕಾಶವನ್ನು ಕಲ್ಪಿಸಿಕೊಡುವುದು. ಕೆಲವು ದಿನಗಳಿಂದ ನೀವು ಸಾಕಷ್ಟು ಸಮಸ್ಯೆ ಹಾಗೂ ಆಯಾಸದಿಂದ ಬಳಲುತ್ತಿದ್ದಿರಿ. ಅದೆಲ್ಲವೂ ಈಗ ಪರಿಹಾರ ಕಾಣುವುದರ ಜೊತೆಗೆ ಹಠಾತ್ ಉಪಶಮನವನ್ನು ಕಂಡುಕೊಳ್ಳುವಿರಿ. ಜೊತೆಗೆ ಶಾಂತಿಯುತವಾದ ಆರಾಮದಾಯಕ ಸಮಯವನ್ನು ಹೊಂದುವಿರಿ. ಒಟ್ಟಿನಲ್ಲಿ ಒಂದಷ್ಟು ಮಾನಸಿಕ ಹಾಗೂ ದೈಹಿಕ ವಿಶ್ರಾಂತಿಯನ್ನು ಪಡೆದುಕೊಳ್ಳುವಿರಿ.

ಸಿಂಹ:
ಈ ರಾಶಿಯವರಿಗೂ ಡಿಸೆಂಬರ್ ತಿಂಗಳ ಅಮವಾಸ್ಯೆಯು ಉತ್ತಮ ಅವಕಾಶ ಹಾಗೂ ಸಮಯವನ್ನು ತಂದುಕೊಡುವುದು. ಇಂತಹ ಸಮಯದಲ್ಲಿ ನೀವು ಆದಷ್ಟು ತಾಳ್ಮೆಯನ್ನು ಹೊಂದಬೇಕು ಎಂದು ಹೇಳಲಾಗುವುದು. ಎಲ್ಲರ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಹೆಚ್ಚಿನ ಪ್ರೀತಿ ಹಾಗೂ ಆರೈಕೆ ಮಾಡುವುದರಲ್ಲಿ ಹೆಚ್ಚು ಸಮಯವನ್ನು ವ್ಯಯಿಸುವಿರಿ. ನಿಮ್ಮ ಪ್ರೀತಿ ಮತ್ತು ಆರೈಕೆಯನ್ನು ಹಂಬಲಿಸುವವರಿಗೆ ನಿಮ್ಮ ಸಮಯವನ್ನು ವಿಸ್ತರಿಸುವಿರಿ. ಅಲೆದಾಡುವ ಆಲೋಚನೆಗಳನ್ನು ವಿಚಾರಮಾಡುವುದು ಹಾಗೂ ಉತ್ತಮ ಯೋಜನೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಿರಿ ಎಂದು ಹೇಳಲಾಗುವುದು. ವೈಯಕ್ತಿಕವಾಗಿ ಸಾಕಷ್ಟು ಸಂತೋಷವನ್ನು ಪಡೆದುಕೊಳ್ಳುವುದರ ಮೂಲಕ ವರ್ಷದ ಅಂತ್ಯದ ಸಮಯವನ್ನು ಕಳೆಯುವಿರಿ.

ವೃಶ್ಚಿಕ:
ಈ ತಿಂಗಳ ಅಮವಾಸ್ಯೆಯು ವೃಶ್ಚಿಕ ರಾಶಿಯವರಿಗೆ ಕೆಲಸದ ಹೊರೆ ಮತ್ತು ಭಾವನೆಗಳೆರಡಕ್ಕೂ ವಿಶ್ರಾಂತಿ ನೀಡುವುದು. ನೀವು ಈ ಸಮಯದಲ್ಲಿ ಒಂದಿಷ್ಟು ಅಹಂನ ಮಟ್ಟವನ್ನು ಇಳಿಸಿಕೊಂಡರೆ ವಿಶ್ವಾಸದ ಮಟ್ಟವು ಹೆಚ್ಚುವುದು. ಹೊಸ ಕೆಲಸಗಳ ಬಗ್ಗೆ ಸಾಕಷ್ಟು ಆಸಕ್ತಿ ಹಾಗೂ ಭರವಸೆ ನಿಮಗೆ ದೊರೆಯುವುದು. ವಿಶ್ವಾಸ ಹಾಗೂ ಅಹಂನ ನಿಯಂತ್ರಣದಲ್ಲಿ ಸಮತೋಲನವನ್ನು ಕಾಯ್ದುಕೊಂಡರೆ ಮುಂದಿನ ದಿನಗಳಲ್ಲಿ ನೀವು ಸಾಕಷ್ಟು ಉತ್ತಮ ಅದೃಷ್ಟ ಹಾಗೂ ಯಶಸ್ಸನ್ನು ಹೊಂದುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಇದೀಗ ನಿಮಗಾಗಿ ಒಂದಿಷ್ಟು ಸಮಯ ಹಾಗೂ ಸೂಕ್ತ ಚಿಂತನೆ ನಡೆಸಲು ಇಳ್ಳೆಯ ಸಮಯವಾಗಿದೆ.

ಧನು:
ಈ ಅಮವಾಸ್ಯೆಯು ಧನು ರಾಶಿಯವರಿಗೆ ಸಾಕಷ್ಟು ಬದಲಾವಣೆಯನ್ನು ತಂದುಕೊಡುವುದು. ಇದೀಗ ಹೊಂದಿರುವ ಒತ್ತಡಗಳೆಲ್ಲವೂ ನಿಧಾನವಾಗಿ ಕಡಿಮೆಯಾಗುವುದು. ಸಕಾರಾತ್ಮಕ ಪ್ರಭಾವದಿಂದ ನೀವು ಉತ್ತಮ ಚಿಂತನೆಗಳನ್ನು ಪಡೆದುಕೊಳ್ಳುವಿರಿ. ಅವುಗಳನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವುದರ ಮೂಲಕ ಲಾಭ ಹಾಗೂ ಯಶಸ್ಸನ್ನು ಪಡೆದುಕೊಳ್ಳಬಹುದು. ನೀವು ಒಂದು ಪ್ರಣಯ ಪೂರ್ಣವಾದ ಸಂಬಂಧವನ್ನು ಹೊಂದಲು ಇದು ನಿಮಗೆ ಉತ್ತಮ ಸಮಯವಾಗಿರುತ್ತದೆ. ವರ್ಷಾಂತ್ಯದ ಈ ಸಮಯವು ನಿಮಗೆ ಸಾಕಷ್ಟು ಭರವಸೆ ಹಾಗೂ ಖುಷಿಯನ್ನು ನೀಡುವುದು. ಮುಂದಿನ ಉತ್ತಮ ಯೋಜನೆ ಕೈಗೊಳ್ಳಲು ನಿಮಗಿದೊಂದು ಉತ್ತಮ ಸಮಯವು ಹೌದು.

ಕುಂಭ:
ಅಮವಾಸ್ಯೆಯು ನಿಮಗೆ ಅತ್ಯುತ್ತಮವಾದ ಸಮಯ ಅಥವಾ ಸುಲಭವಾದ ಸಮಯ ಎಂದು ಹೇಳಬಹುದು. ಈ ಹಿಂದೆ ಅನುಭವಿಸುತ್ತಿದ್ದ ಒತ್ತಡ ಹಾಗೂ ದಣಿವುಗಳೆಲ್ಲವೂ ಕಳೆದುಹೋಗುತ್ತವೆ. ಪರಿಪೂರ್ಣತೆಗಾಗಿ ಅಥವಾ ನಿಮ್ಮ ಯಾವುದೋ ಗುರಿಯ ಸಾಧನೆಯ ಹಾದಿಯಲ್ಲಿದ್ದರೆ ಇದೀಗ ನಿಮಗೆ ಒಳ್ಳೆಯ ಸಮಯ. ನೀವು ಬಯಸಿದ ಫಲಿತಾಂಶಗಳನ್ನು ಬಲು ಸುಲಭವಾಗಿ ಕಂಡುಕೊಳ್ಳುವಿರಿ. ನಿಮ್ಮ ನಿರಂತರವಾದ ಶ್ರಮಕ್ಕೆ ಸೂಕ್ತ ಪ್ರತಿಫಲದೊರೆಯುವುದು. ಉತ್ತಮ ಹಾದಿಯಲ್ಲಿ ಸಾಗುವುದು ಹಾಗೂ ಸಕಾರಾತ್ಮಕ ಕೆಲಸವನ್ನು ಕೈಗೊಳ್ಳುವುದು ನಿಮ್ಮ ಗುರಿ ಅಥವಾ ಧ್ಯೇಯವಾಗಿದ್ದರೆ ಫಲಿತಾಂಶವು ಶುಭಕರವಾಗಿರುತ್ತವೆ. ಯಾವುದೇ ವಿಷಯದಲ್ಲಿ ಅವಸರ ಅಥವಾ ದುಡುಕುವ ನಿಲುವನ್ನು ಹೊಂದದೆ ಇರುವುದು ಉತ್ತಮ.



Click it and Unblock the Notifications











